ಅರಸೀಕೆರೆ ನಗರದ ಎಸ್ ಎಂ ಜೆ ಸಮುದಾಯ ಭವನದಲ್ಲಿ
ದಿನಾಂಕ : 22/02/2025 ರ ಶನಿವಾರದಂದ್ದು ಮಧ್ಯಾಹ್ನ 2.30 ಘಂಟೆಗೆ ಸರಿಯಾಗಿ ಸುನ್ನಿ ಮುಸ್ಲಿಂ ಜಮಾತ್ ಕಮಿಟಿ,, ಸುಲ್ತಾನುಲ್ ಹಿಂದ್ ಎಜುಕೇಶನಲ್ & ಜಾರಿಟೇಬಲ್ ಟ್ರಸ್ಟ್,, ಶಾದಿ ಮಹಲ್ ಕಮಿಟಿ ಮತ್ತು ನೌಜವಾನ ನೇ ಅಹಲೇ ಸುನತ್,, ಇವರುಗಳ ವತಿಯಿಂದ ರಾಜ್ಯ ಸರ್ಕಾರದಿಂದ ಅಲ್ಪಾಸಂಖ್ಯಾತರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಅಲ್ಪಾಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿಗಳನ್ನು ನೀಡಲು ಇಲಾಖೆಯಾ ಅಧಿಕಾರಿಗಳು ಆಗಮಿಸುತಿದ್ದಾರೆ. ಆದ್ದರಿಂದ ತಾವುಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೆಚ್ಚಿನ ಮಾಹಿತಿ ಪಡೆದುಕೊಂಡು ಇದರ ಸದುಪಯೋಗ ಪಡೆಕೊಳ್ಳಬೇಕ್ಕಾಗಿ ಸುಲ್ತಾನುಲ್ ಹಿಂದ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಪರ್ವೀಜ್ ಅಹಮದ್ ಅವರು ಮನವಿ ಮಾಡಿಕೊಂಡರು. ವರದಿ ಪರ್ವಿಜ್ ಅಹಮದ್ ಅರಸೀಕೆರೆ
