ದಿನಾಂಕ 19/02/2025ರ ಬುದವಾರ ಸಾಲಿಗ್ರಾಮದ ಪ್ರವಾಶಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ತಾಲ್ಲುಕು ಸಮಿತಿ ಸಭೆಯನ್ನು ಜಿಲ್ಲಾ ಪ್ರದಾನ ಸಂಚಾಲಕರಾದ ಮಲ್ಲಹಳ್ಳಿನಾರಾಯಣ್ ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಕೋಮುವಾದ ಹೆಚ್ಚುತ್ತಿದ್ದು ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿದೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಸಂವಿಧಾನ ಉಳಿಯಬೇಕು ಸಂವಿಧಾನ ಬದಲಾಯಿಸಲು ನಾವು ಬಂದಿರುವುದು ಎಂದು ಅರಚುತ್ತಿದ್ದವರನ್ನೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬದಲಾಯಿಸಿದ್ದೇವೆ ಆದರೇ ಯಾವ ಸರ್ಕಾರ ಅಧಿಕಾರಕ್ಕೆ ಬಂದರೇ ದೇಶದ ಶೋಷಿತ ಸಮುದಾಯ ನೆಮ್ಮದಿಯಿಂದ ಇರುತ್ತದೆ ಮತ್ತು ತನ್ನೆಲ್ಲ ಹಕ್ಕುಗಳನ್ನು ಪಡೆಯುತ್ತದೆ ಎಂದು ಬಿ ಜೆ ಪಿ ಯ ವಿರುದ್ಧ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ತಂದೇವೋ ಅದೇ ಸರ್ಕಾರದ ಕೆಲವು ಶಾಸಕರು ದಲಿತ ಚಳುವಳಿಯ ಶ್ರಮವನ್ನು ಮರೆತು ಅವರನ್ನೇ ಗುರಿಯಾಗಿಸಿ ಪೊಲೀಸ್ ಇಲಾಖೆನ್ನು ಬಳಸಿಕೊಂಡು ಚಳುವಳಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಖಂಡನಿಯ ಇಂತವರ ನಡೆಯನ್ನು ಮುಂದಿನ ದಿನಗಳಲ್ಲಿ ಚಳುವಳಿ ಗಂಭೀರವಾಗಿ ಪರಿಗಣಿಸುತ್ತದೆ. ತಾಲೂಕಿನಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಗುರ್ತಿಸಿ ಅವರಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಘಟನೆ ಮುಂದಾಗಬೇಕಿದೆ. ಭೂಮಿ, ಸ್ಮಶಾನ,ರೈತರ ಸಾಗುವಳಿ ಮುಂತಾದ ಸಮಸ್ಯಗಳು ಹೆಚ್ಚಾಗಿದ್ದು ಪರಿಹರಿಸುವ ನಿಟ್ಟಿನಲ್ಲಿ ಚಳುವಳಿ ಕಾರ್ಯಕ್ರಮ ರೂಪಿಸುವಂತೆ ತಿಳಿಸಿದರು. ಜಿಲ್ಲಾ ಸಂಘಟನಾ ಸಂಚಾಲಕರಾದ ಕಳ್ಳಿಮುದ್ದನಹಳ್ಳಿ ಚಂದ್ರು ಮಾತನಾಡಿ ಕೆ ಆರ್ ನಗರ ಮತ್ತು ಸಾಲಿಗ್ರಾಮ ಒಂದೇ ತಾಲೂಕು ಆಗಿದ್ದಾಗ ಎಲ್ಲರೂ ಒಟ್ಟಾಗಿ ಹೋರಾಟ ರೂಪಿಸಿ ಸಮುದಾಯಗಳ ಸಮಸ್ಯಗಳ ಬಗ್ಗೆ ನ್ಯಾಯ ಕಂದುಕೊಳ್ಳುತ್ತಿದ್ದೆವು ಈಗ ಎರಡು ಬೇರೆ ಬೇರೆಯಾದ ಮೇಲೆ ಎರಡು ತಾಲೂಕುಗಳಲ್ಲೂ ಪ್ರತ್ಯಕವಾದ ಸಂಘಟನೆಯನ್ನು ಕಟ್ಟಬೇಕಿದೆ ಎಂದರು
ನೂತನವಾಗಿ ರಚಣೆಯಾಗಿರುವ ಸಾಲಿಗ್ರಾಮ ತಾಲೂಕಿನಲ್ಲಿ ತಾಲೂಕು ಮಟ್ಟದ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಬೇಕು ಹಾಗೂ ತಾಲೂಕು ಕೇಂದ್ರ ಸ್ಥಾನದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣ ಮಾಡಬೇಕು, ಹಾಗೂ ತಾಲೂಕಿನಾದ್ಯಂತ ಹಲವು ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನವೇ ಇರುವುದಿಲ್ಲ ಇನ್ನೂ ಕೆಲವು ಕಡೆ ಇರುವ ಸ್ಮಶಾನ ಒತ್ತುವರಿಯಾಗಿವೆ, ಮತ್ತೆ ಕೆಲವು ಕಡೆ ದಲಿತರು ಮತ್ತು ಸವರ್ಣಿಯರ ನಡುವೆ ಭೂ ಸಮಸ್ಯೆಗಳು ಹೆಚ್ಚಾಗಿವೆ ಕೂಡಲೆ ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸಿ ಬಗೆಹರಿಸುವಂತೆ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಜಿಲ್ಲಾ ಪದಾಧಿಕಾರಿ ತಾಲೂಕು ಪ್ರಧಾನ ಸಂಚಾಲಕ ಸುಧಾಕರ್ ಸೀಗವಾಳು ಸಂಘಟನಾ ಸಂಚಾಲಕರುಗಳಾದ ಪ್ರಭಾಕರ ಎಲೆಮುದ್ದನಹಳ್ಳಿ, ದೇವರಾಜು ಮಲುಗನಹಳ್ಳಿ, ಸ್ವಾಮಿ ಕರ್ಪೂರವಳ್ಳಿ ,ಮಹಾಂತೇಶ ಲಕ್ಷ್ಮಿಪುರ,ಮಹೇಶ ಎಲೆಮುದ್ದನಹಳ್ಳಿ, ಕೃಷ್ಣ ಬಳ್ಳೂರು, ರಂಗಸ್ವಾಮಿ ಸಾಲಿಗ್ರಾಮ,ಮತ್ತು ಖಜಾಂಚಿ ಗುರು ಬೆಟ್ಟಹಳ್ಳಿ ಹಾಗೂ ತಾಲೂಕು ಸಮಿತಿ ಸದಸ್ಯರುಗಳಾದ ಸೀಗವಾಳು ಸುಧಾಕರ್ , ಪುಷ್ಪಾವತಿ ನಗರ,ಶಂಕರ ಗಾಯನ ಹಳ್ಳಿ,ಮನು ಸಿಗವಾಳು, ರಘು ಶೀಗವಾಳು ಮುಂತಾದವರು ಹಾಜರಿದ್ದರು
