ಆಲಮೇಲ: ಪಟ್ಟಣದ ದೇವಿ ಮಂದಿರದಲ್ಲಿ 395ನೇಯ ಶಿವಾಜಿ ಜಯಂತಿಯನ್ನು ಯುವಕರು ಸರಳ ಮತ್ತು ಸಜ್ಜನಿಕೆಯಿಂದ ಆಚರಿಸಲಾಯಿತು
ಮುಖಂಡರಾದ ಶ್ರೀಮಂತ ದುದ್ದಗಿ ಫೋಟೋ ಪೂಜಾ ನೆರವೇರಿಸಿ ಭಾರತದ ಅತ್ಯಂತ ಗೌರವಾನ್ವಿತ ಯೋಧರು ಮತ್ತು ಆಡಳಿತಾಗಾರರಲ್ಲಿ ಒಬ್ಬರಾದ ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಪ್ರತಿ ವರ್ಷ ಫೆಬ್ರವರಿ 19 ರಂದು ಶಿವಾಜಿ ಜಯಂತಿಯನ್ನು ಆಚರಿಸಲಾಗುತ್ತಿದೆ.
1630ರಲ್ಲಿ ಜನಿಸಿದ ಶಿವಾಜಿ ಮಹಾರಾಜರ ಭಾರತೀಯ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ ಪೌರಾಣಿಕ ಮರಾಠ ರಾಜರಾಗಿದ್ದರು
ಒಂದು ವೇಳೆ ಶಿವಾಜಿ ಇರದಿದ್ದರೆ ಹಿಂದೂಗಳು ನಾಶವಾಗುತ್ತಿದ್ದರು ಅನ್ನುವ ಸಂದೇಶ ಕೂಡ ನಮ್ಮಲ್ಲಿ ಹುಟ್ಟುತ್ತದೆ.
ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸುವುದರಲ್ಲಿ ಅವರ ಕೊಡುಗೆ ಅಪಾರವಾದದ್ದು ತಮ್ಮ ಅತ್ಯುತ್ತಮ ನಾಯಕತ್ವ ಆಡಳಿತ ತಂತ್ರಗಳು ಮತ್ತು ಪ್ರಭುತ್ವ ಆಡಳಿತಕ್ಕೆ ಹೆಸರುವಾಸಿಯಾಗಿದ್ದರು ಅವರು ಆಳ್ವಿಕೆಯ ಅವಧಿಯ ಆಡಳಿತ ಮತ್ತು ನ್ಯಾಯಾಲಯ ವಲಯದಲ್ಲಿ ಪರಶಿಯನ್ ಭಾಷೆಕಿಂತ ಮರಾಠಿ ಮತ್ತು ಸಂಸ್ಕೃತಕ್ಕೆ ಆದ್ಯತೆ ನೀಡುವ ಮೂಲಕ ಗುರುತಿಸಲ್ಪಟ್ಟಿತ್ತು ಇದು ಅವರ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಸೂಚಿಸುತ್ತದೆ ಎಂದು ಹೇಳಿದರು
ಪಟ್ಟಣದ ಊರಿನ ಪ್ರಮುಖ ಬೀದಿಗಳ ಮುಖಾಂತರ ಶಿವಾಜಿ ಮೂರ್ತಿಯನ್ನು ಬೈಕ್ ರ್ಯಾಲಿ ಮುಖಾಂತರ ಮೆರವಣಿಗೆ ಮಾಡಿದರು.
ಇದೇ ಸಂದರ್ಭದಲ್ಲಿ ಗುರುರಾಜ್ ಕೋಣ ಶಿರಸಗಿ. ಹಣಮಂತ ರಜಪೂತ ಸ್ವಾಮಿ ಸೇನೆಯ ಅಧ್ಯಕ್ಷ.ರವಿ ಬಂಡಗಾರ್.ಅಲೋಕ ಬಡದಾಳ. ರಾಹುಲ್ ಕುಮಸಿಗಿ. ಕಮಲಾಕರ್ ಪತ್ತಾರ.ಅಭಿಷೇಕ್ ಅಲೋಣಿ.ಸಂಗೀತ.ರಾಹುಲ್ ಬಗಲಿ.ಸಿದ್ದರಾಮ ಕುಮಸಗಿ.ಶಿವು ರಜಪುತ.
ವರದಿ. ಉಮೇಶ ಕಟಬರ