ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಕ್ರೀಡಾಕೂಟ ವಿಜೃಂಭಣೆಯಿಂದ ನೆರವೇರಿತು
ಹನಸೋಗೆ ಫೆಬ್ರವರಿ 20: ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆಬ್ರವರಿ 20, ಗುರುವಾರರಂದು ಪೋಷಕರಿಗಾಗಿ ವಿಶೇಷ ಕ್ರೀಡಾಕೂಟವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು. ಪೋಷಕರು ಉತ್ಸಾಹದಿಂದ ಭಾಗವಹಿಸಿ, ಕ್ರೀಡಾಸ್ಪರ್ಧೆಗಳನ್ನು ಆನಂದಿಸಿದರು.
ಕಾರ್ಯಕ್ರಮವನ್ನು ಶಾಲೆಯ ಅಧ್ಯಕ್ಷ ಹರ್ಷ H K. ಉದ್ಘಾಟಿಸಿ, “ಪೋಷಕರ ಕ್ರೀಡಾಕೂಟವು ಆರೋಗ್ಯವನ್ನು ಸುಧಾರಿಸುವುದು ಮಾತ್ರವಲ್ಲ, ಮಕ್ಕಳೊಂದಿಗೆ ಒಡನಾಟವನ್ನೂ ಹೆಚ್ಚಿಸುತ್ತದೆ,” ಎಂದು ಹೇಳಿದರು. ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪರಮೇಶ ಎಚ್.ಎನ್. ವಿಶೇಷ ಅತಿಥಿಯಾಗಿ ಪಾಲ್ಗೊಂಡು, “ಪೋಷಕರು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಅವರು ಮಕ್ಕಳಿಗೆ ಮಾದರಿಯಾಗುತ್ತಾರೆ,” ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಶಾಲೆಯ ಮುಖ್ಯೋಪಾಧ್ಯಾಯ ಶ್ರೀನಿವಾಸ ಎಚ್.ಪಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, “ಇಂತಹ ಕಾರ್ಯಕ್ರಮಗಳು ಶಾಲೆಯ ಒಗ್ಗಟ್ಟನ್ನು ಮತ್ತು ಸಂಸ್ಕೃತಿಯನ್ನು ದೃಢಗೊಳಿಸುತ್ತವೆ,” ಎಂದು ಅಭಿಪ್ರಾಯಪಟ್ಟರು.
ಈ ಬಾರಿ ಪೋಷಕರಿಗಾಗಿ ಮಡಿಕೆ ಹೊಡೆಯುವುದು, ಹಾಡುಗಾರಿಕೆ, ಲೇಮನ್ ಮತ್ತು ಸ್ಪೂನ್ ಓಟ, ಪಿಕ್ ಅಂಡ್ ಸ್ಪೀಚ್ ಮುಂತಾದ ಸ್ಪರ್ಧೆಗಳು ಆಯೋಜಿಸಲಾಗಿತ್ತು. ಪೋಷಕರು ತಮ್ಮ ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಿ, ಸ್ಫೂರ್ತಿ ತುಂಬಿದ ಸ್ಪರ್ಧೆಗಳನ್ನು ನಡೆಸಿದರು.
ಈ ಕಾರ್ಯಕ್ರಮದ ಯಶಸ್ವೀ ಆಯೋಜನೆಯಲ್ಲಿ ಶಿಕ್ಷಕರಾದ ದೇವರಾಜ ಎಚ್.ಪಿ., ಕಿರಣ್ ಟಿ., ಯೋಗೀಶ್ ಹೆಚ್.ಎಮ್., ಚಂದ್ರನಾಯಕ, ನೆಹಾ ಕೌಸರ್, ರಂಜಿತಾ, ಶುಭಾ ಹಾಗೂ ಸಿಬ್ಬಂದಿಗಳಾದ ನಾಗೇಶ, ರಾಣಿ, ಸೌಮ್ಯಾ, ಗೋಪಿನಾಯಕ ಶ್ರಮಿಸಿದರು.
ಸ್ಪರ್ಧೆಗಳ ವಿಜೇತರಿಗೆ ಶಾಲಾ ವಾರ್ಷಿಕೋತ್ಸವ ದಿನ ಬಹುಮಾನ ವಿತರಿಸಲಾಗುವುದು. ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕರು, ಆಡಳಿತ ಮಂಡಳಿ ಹಾಗೂ ಪೋಷಕರು ಪರಸ್ಪರ ಅಭಿನಂದನೆಗಳೊಂದಿಗೆ ಕ್ರೀಡಾಕೂಟವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದರು.