ಕಾಳಗಿ: ತಾಲ್ಲೂಕಿನ ಮಾಡಬೂಳ ಸರಕಾರಿ ಶಾಲೆಗೆ ನೂತನ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಡಿ ಭೋಜಗೊಂಡ ಆಯ್ಕೆಯಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕಲಿತು ಈಗ ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದವರ ಸಂಖ್ಯೆ ಹೇಚ್ಚಿದೆ ಅವರು ಮರಳಿ ತಮ್ಮ ಮಕ್ಕಳಿಗೆ ಸರಕಾರಿ ಶಾಲೆಗಳಿಗೆ ಸೇರಿಸಬೇಕು ಎಂಬ ಮನಸ್ಥಿತಿ ಬದಲಾಗುವಂತೆ ಸರಕಾರಿ ಶಾಲೆಗಳು ಅಭಿವೃದ್ಧಿ ಮಾಡುವಲ್ಲಿ ಸರ್ಕಾರ ಅದು ಎಷ್ಟೋ ಅನುದಾನ ಕೊಡುತ್ತಿದೆ ಅದನ್ನು ಸಮರ್ಪಕವಾಗಿ ಬಳಸಿಕೊಂಡು ರಾಜ್ಯಕ್ಕೆ ಮಾದರಿ ಶಾಲೆಯನ್ನಾಗಿ ಮಾಡಬೇಕು ಮತ್ತು ಹಳ್ಳಿಯಲ್ಲಿ ಓದಿನ ಜೊತೆ ಮಕ್ಕಳಿಗೆ ಕ್ರೀಡೆಗಳಿಗೂ ಹೆಚ್ಚು ಮಹತ್ವ ನೀಡಿ ಎಂದು ಶಂಕರ್ ಪೂಜಾರಿ ಚಿತ್ತಾಪುರ ತಿಳಿಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪೂಜಾರಿ ಹಾಗೂ ಸಹಬಳಗ ಸೇರಿ ಸನ್ಮಾನಿಸಿ ಗೌರವಿಸಿದರು ಈ ವೇಳೆಯಲ್ಲಿ ಹಿರಿಯ ಮಾರ್ಗದರ್ಶಿ ಎಸ್ ಬಿ ಐ ಮುಖ್ಯ ವ್ಯವಸ್ಥಾಪಕ ಸದಾಶಿವ ವಿ ರಾತ್ರಿಕರ್ ,ಸಂತೋಷ ಗೂಗಲೂತ್,ವಿಲಾಸ ಬಾಬು,ಮಲ್ಲಿಕಾರ್ಜುನ ರಾಜಾಪುರ,ಸುಧಾಕರ ಪವಾರ್,ಭಾಗ್ಯವಂತ ಮಲಘಾಣ, ಶಶಿಕುಮಾರ್ ವಚ್ಚಾ,ವಿಕಾಸ ಉಪ್ಪಿನ, ಇತರರೂ ಇದ್ದರೂ
