ಯುರೇಖಾ ಕಂಪನಿ ಅವರು ತಯಾರಿಸಿರುವ ರೋಬೋಟೆಕ್ ಮಷೀನ್ ಅಂದರೆ ಮನೆಯನ್ನು ಕಸ ಗುಡಿಸಿ ಒರೆಸಿ ಕ್ಲೀನ್ ಮಾಡುವ ಯಂತ್ರವನ್ನು ಗ್ರಾಹಕರಿಗೆ ಮಾರಾಟ ಮಾಡುವಾಗ ಒಂದು ಬಾರಿ ನೀವು ಇದನ್ನು ಸೆಟ್ ಮಾಡಿದರೆ ನಿಮ್ಮ ಮನೆಯ ಪ್ರತಿಯೊಂದು ಮೂಲೆಯನ್ನು ಕ್ಲೀನ್ ಮಾಡುತ್ತದೆ ಅಂತ ಹೇಳಿ ಮಾರಾಟ ಮಾಡುತ್ತಾರೆ. ಮತ್ತು ಮನೆಗೆ ಬಂದು ಅದನ್ನು ಮಾಡುವುದು ಹೇಗೆ ಎಂದು ತೋರಿಸಿ, ಅವರಿಗೆ ಈಗ ಆಫರ್ ಇದೆ ಹಾಗಾಗಿ 28 990 ರೂಪಾಯಿ ಆಗುತ್ತದೆ, ಇಲ್ಲವಾದರೆ 30 ರಿಂದ 35000 ರೂಪಾಯಿಗಳಾಗುತ್ತದೆ ಎಂದು ಹೇಳಿ ಗ್ರಾಹಕರು ತೆಗೆದುಕೊಳ್ಳುವಂತೆ ಮಾಡುತ್ತಾರೆ. ತೆಗೆದುಕೊಂಡ ಮೇಲೆ ಏನಾದರೂ ಸಮಸ್ಯೆ ಬಂದಾಗ ಕರೆ ಮಾಡಿದರೆ ಪ್ರತ್ಯುತ್ತರ ನೀಡದೆ ಹಾರಿಕೆ ಉತ್ತರಗಳನ್ನು ನೀಡುತ್ತಾರೆ. ಸರಿಯಾದ ಸರ್ವಿಸ್ ಕೊಡದೆ ಗ್ರಾಹಕರಿಗೆ ಬೇಸರ ಉಂಟು ಮಾಡುತ್ತಾರೆ. ಇನ್ನಾದರೂ ಇಂತಹ ಕಂಪನಿಯವರ ಆಮಿಷಗಳಿಗೆ ಗ್ರಾಹಕರು ಒಳಗಾಗದಿರಲಿ ಮತ್ತು ಎಚ್ಚರಿಕೆಯಿಂದ ಇರಲಿ ಎಂಬುದೇ ಕನಸಿನ ಭಾರತ ಪತ್ರಿಕೆಯ ಆಶಯ.

