ಸಿಎಂ ಆಗಿದ್ದಾಗ ಕುಮಾರಸ್ವಾಮಿ ಮಾಡಿದ ಅಭಿವೃದ್ದಿ ಕೆಲಸ ಮುಂಬರುವ ಸ್ಥಳೀಯ ಚುನಾವಣೆಯ ದಿಕ್ಸೂಚಿಯಾಗಲಿದೆ. ಹಾಸನದ ಅರಸೀಕೆರೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ. ಎಂಪಿ ಚುನಾವಣೆಯಲ್ಲಿ ಏನ್ ಮಾಡಿದ್ರು ಅಂತ ಎಲ್ಲರಿಗೂ ಗೊತ್ತಿದೆ. ಎಲ್ಲಾ ಚುನಾವಣೆಗಳು ಕುತಂತ್ರದಿಂದಲೇ ನಡೆಯಲು ಸಾಧ್ಯವಿಲ್ಲ. ಮೇಲ್ಸೇತುವೆಗೆ ಬಜೆಟ್ ನಲ್ಲಿ ಹಣ ಬಿಡುಗಡೆ ಮಾಡದಿರಬಹುದು. ಕುಮಾರಸ್ವಾಮಿ ಅದ್ರ ಬಗ್ಗೆ ಸಂಬಂಧಪಟ್ಟವರ ಜೊತೆ ಚರ್ಚಿಸಿದ್ದಾರೆ. ಜೆಡಿಎಸ್ ಹೊರತು ಪಡಿಸಿ ಜಿಲ್ಲೆಗೆ ಎರಡು ಪಕ್ಷಗಳ ಕೊಡುಗೆ ಏನಿದೆ ? 10 ವರ್ಷದಿಂದ ನೆನೆಗುದಿಗೆ ಬಿದ್ದ ಆಸ್ಪತ್ರೆ ಮಾಡಿದವರ್ಯಾರು ? ಅಧಿಕಾರಿಗಳಿಂದ ನಾವು ರಾಜಕೀಯ ಮಾಡುವುದಿಲ್ಲ.ಜನರ ಬೆಂಬಲ, ಆಶೀರ್ವಾದ, ಪ್ರೀತಿ ನಮ್ಮ ಮೇಲಿದೆ. ನಾವು ಯಾರ ಮನೆ ಬಾಗಿಲಿಗೆ ಹೋಗಲ್ಲ. ದೇವರ ಶಕ್ತಿಯಿದೆ ದೇವೇಗೌಡರಿಂದ ಮಾರ್ಚನಲ್ಲಿ ಬೃಹತ್ ಸಮಾವೇಶ ಆಯೋಜನೆ, ಅದು ನನಗೆ ಗೊತ್ತಿಲ್ಲ. ಜಿಲ್ಲಾ ಮಟ್ಟದಲ್ಲಿ ಶೀಘ್ರದಲ್ಲಿಯೇ ಮಾಡ್ತಿವಿ ಮುಂದಿನ ದಿನದಲ್ಲಿ ಪಕ್ಷ ಸಂಘಟನೆಯನ್ನು ಗಟ್ಟಿಯಾಗಿ ಮಾಡುತ್ತೇವೆ ಎಂದು ತಿಳಿಸಿದರು.
POST
ಕಾಳಗಿ: ಪಿ ಎಸ್ ಐ ತಿಮ್ಮಯ್ಯ ಜಾಣ್ಮೆಯ ಕಾರ್ಯಚರಣೇಗೆ 40 ಕೆಜಿ 40 ಲಕ್ಷ ಮೌಲ್ಯದ ಗಾಂಜಾ ಮಾರಾಟಗಾರರ ಬಂಧನ
ಕಾಳಗಿ: ತಾಲೂಕಿನ ಲಕ್ಷ್ಮಣ ನಾಯಕ ತಾಂಡ ಕೊಡ್ಲಿ ರಸ್ತೆಯಲ್ಲಿ ಗಾಂಜ ಸುಮಾರು 40 ಕೆ ಜಿ ಗಾಂಜಾ
ಸಾಗಾಟ ಮಾಡುವ ವೇಳೆ ಕಾಳಗಿ ಪಿ ಎಸ್ ಐ ತಿಮ್ಮಯ್ಯ ಬಿ ಕೆ ಗುರುವಾರ ಪತ್ತೆ ಹಚ್ಚಿದ್ದಾರೆ ಶುಕ್ರವಾರ ಮಾದ್ಯಮ ಪ್ರತಿನಿಧಗಳನ್ನು ಉದ್ದೆಶಿಶಿ ಮಾತನಾಡಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಿವಾಸಲು 40 ಕೆ ಜಿ ಗಾಂಜಾದ ಮೌಲ್ಯ ಸುಮಾರು 40 ಲಕ್ಷ ಇದೆ ಎಂದು ತಿಳಿಸಿದರು. ಕಲಬುರಗಿ ಜಿಲ್ಲೆಯಲ್ಲಿ ಓರಿಸಾ ದಿಂದ ತಂದು ಅಕ್ರಮ ಗಾಂಜಾ ಮತ್ತು ಮಾಧಕ ವಸ್ತುಗಳನ್ನು ಮಾರಾಟ ಮತ್ತು ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಶ್ರೀ ಮಹೇಶ ಮೇಘಣ್ಣನವರ ಅಪರ ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ಶ್ರೀ ಶಂಕರಗೌಡ ಪಾಟೀಲ್ ಪೊಲೀಸ್ ಉಪಧೀಕ್ಷಕರು ಶಹಬಾದ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಜಗದೇವಪ್ಪ ಪಾಳಾ ಸಿ.ಪಿ.ಐ ಕಾಳಗಿ ಚಂದ್ರಶೇಖರ ತಿಗಡಿ ಸಿಪಿಐ ಚಿತ್ತಾಪೂರ ತಿಮ್ಮಯ್ಯ ಬಿ ಕೆ ಪಿ ಎಸ್ ಐ ಕಾಳಗಿ ನೆತೃತ್ವ ತಂಡ ರಚಿಸಿ ಕಾಳಗಿ ವ್ಯಾಪ್ತಿಯ ಕೊಡ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಲಕ್ಷ್ಮಣ ನಾಯಕ್ ತಾಂಡದ ಹತ್ತಿರ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಗಾಂಜಾ ಇಟ್ಟುಕೊಂಡು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿ ಎಸ್ ಐ ಮತ್ತು ಕೆಲವು ಸಿಬ್ಬಂದಿಗಳು ಸ್ಥಳಕ್ಕೆ ಹೋಗಿ ಅಕ್ರಮ ಗಾಂಜಾ ಸಾಗಾಟ ಮಾಡುತ್ತಿರು ವ್ಯಕ್ತಿಗಳಾದ ಚಂದ್ರಕಾಂತ ಅಲಿಯಾಸ್ ಪಪ್ಪು ತಂದೆ ಹರಿಚಂದ್ರ ಚವ್ಹಾಣ ಸಾ: ಲಕ್ಷ್ಮಣ ನಾಯಕ ತಾಂಡ ಕಾಳಗಿ ಮತ್ತು ಮಲ್ಲಯ್ಯ ತಂದೆ ಮಹಾಭಳೇಶ್ವರ ಪ್ಯಾಟಿಮನಿ ಸಾ: ಕೊಡ್ಲಿ ರವರನ್ನು ವಶಕ್ಕೆ ಪಡೆದು ಕೊಂಡಾಗ ಅವರಲ್ಲಿ 40 ಕೆ ಜಿ ಗಾಂಜಾ ಸುಮಾರು 40 ಲಕ್ಷ ರೂ ಬೆಲೆ ಬಾಳುವುದಾಗಿದ್ದು ಮೋಟಾರ ಸೈಕಲ್ ಕಾರು ಜಪ್ತಿ ಮಾಡಿದ್ದು ಸುಮಾರು ಎಲ್ಲಾ ಸೇರಿ 45,50,000 ಮುದ್ದೆ ಮಾಲು ಜಪ್ತಿ ಮಾಡಿರುತ್ತಾರೆ ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಬಸಪ್ಪ ನಾಗೂರ,ಅಂಬರಿಷ ಬಿರಾದಾರ ,ಸಂಗಮೇಶ ,ಶ್ರೀಶೈಲ್ ಇತರರೂ ಇದ್ದರು
ಶಾಸಕರಾದ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಜನರೊಂದಿಗೆ ಜನಸೇವಕ ಜನಸ್ಪಂದನಾ ಕಾರ್ಯಕ್ರಮ
ಬೇಸಿಗೆ ಕಾಲ, ನದಿಪಾತ್ರದಲ್ಲಿ ನೀರಿಲ್ಲ, ನೀರು ಅಮೂಲ್ಯ ಮಿತವಾಗಿ ಬಳಸಿ ಎಂದು ಎಸ್.ಸುರೇಶ್ ಕುಮಾರ್ ರವರು ಸಾರ್ವಜನಿಕರಿಗೆ ಮನವಿ
ಬೆಂಗಳೂರು:ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಜನರೊಂದಿಗೆ ಜನಸೇವಕ ಜನಸ್ಪಂದನಾ ಕಾರ್ಯಕ್ರಮ ಶಾಸಕರಾದ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ರಾಜಾಜಿನಗರ ಶಾಸಕರ ಜನಸಂಪರ್ಕ ಕಛೇರಿಯ ಅವರಣದಲ್ಲಿ ಜರುಗಿತು.
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್ ಗಳಲ್ಲಿ ವಾಸಿಸುವ ನಿವಾಸಿಗಳು ಮೂಲಭೂತ ಸಮಸ್ಯೆಗಳ ಕುರಿತು ಜನರೊಂದಿಗೆ ಜನಸೇವಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕರನ್ನು ನೇರ ಮಾಡಿ ತಮ್ಮ ಸಮಸ್ಯೆಗಳನ್ನು ನೇರವಾಗಿ ಅಹವಾಲು ಸಲ್ಲಿಸಿ, ಪರಿಹಾರಿಸಿಕೊಳ್ಳುವ ಜನಸ್ಪಂದನಾ ಕಾರ್ಯಕ್ರಮ.
ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ಜನರೊಂದಿಗೆ ಜನಸೇವಕ ಜನಸ್ಪಂದನಾ ಕಾರ್ಯಕ್ರಮ ಪ್ರತಿ ಸೋಮವಾರ ನಡೆಯುತ್ತಿದೆ. 6ನೇ ವಾರದ ಜನಸ್ಪಂದನಾ ಕಾರ್ಯಕ್ರಮ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.
ಸಾರ್ವಜನಿಕರ ಸಮಸ್ಯೆಗಳಿಗೆ ತತಕ್ಷಣ ಪರಿಹಾರ ಸಿಗಬೇಕು, ಎಂದು ಜನರನ್ನು ನೇರ ಮಾಡಿದಾಗ ಸಮಸ್ಯೆಗಳ ಕುರಿತು ಅಧಿಕಾರಿಗಳ ಸಮ್ಮುಖದಲ್ಲಿ ನಿವಾರಣೆ ಮಾಡಲಾಗುತ್ತಿದೆ.
ಕಸವಿಲೇವಾರಿ, ಇ.ಖಾತ ಮತ್ತು ನೀರಿನ ಸಮಸ್ಯೆ ಹಾಗೂ ರಸ್ತೆ ಗುಂಡಿ ಪಿಂಚಣಿ ಸೌಲಭ್ಯ ಹಾಗೂ ರಸ್ತೆ ಡಾಂಬರೀಕರಣಕ್ಕೆ ಮನವಿ ಹಾಗೂ ವೈದ್ಯಕೀಯ ನೆರವು ಸಾರ್ವಜನಿಕರಿಂದ ಈ ವಿಷಯಗಳು ಕುರಿತು ಹೆಚ್ಚಿನ ದೂರುಗಳು ಬರುತ್ತಿದೆ.
ಫೆಬ್ರವರಿ ತಿಂಗಳು ಬಿಸಿಲಿನ ತಾಪ ಹೆಚ್ಚಾಗಿದೆ ಮತ್ತು ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಬೋರ್ ವೆಲ್ ಗಳು ಒತ್ತಿಹೋಗಿದೆ ಮತ್ತು ಕೆಲವು ಬೋರ್ ವೆಲ್ ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.
ಬೇಸಿಗೆ ಕಾಲ, ಕಾವೇರಿ ನದಿ ಪಾತ್ರದಲ್ಲಿ ನೀರಿಲ್ಲ ಸಾರ್ವಜನಿಕರು ನೀರು ಅಮೂಲ್ಯ ಮಿತವಾಗಿ ಬಳಸಿ.
ಬೆಂಗಳೂರು ಬೆಳಯುತ್ತಿದೆ. ಸಮಸ್ಯೆಗಳು ನಿರಂತರ ಶಾಶ್ವತ ಪರಿಹಾರ ಸಿಗಬೇಕು ಹಾಗೂ ಮೂಲಭೂತ ಸಮಸ್ಯೆಗಳು ಬೇಗನೆ ಪರಿಹಾರ ವಾಗಬೇಕು ಎಂದು ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮಂಡಲದ ಅಧ್ಯಕ್ಷರಾದ ಸುದರ್ಶನ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ, ಮಾಜಿ ಉಪಮಹಾಪೌರರಾದ ರಂಗಣ್ಣ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಎಂ.ಮುನಿರಾಜು, ರಾಜಣ್ಣ, ಹೆಚ್.ಆರ್.ಕೃಷ್ಣಪ್ಪ, ದೀಪಾ ನಾಗೇಶ್, ಪ್ರತಿಮಾ, ಬಿಜೆಪಿ ಮುಖಂಡರುಗಳಾದ ಯಶಸ್ ನಾಯಕ್, ಅಮಿತ್ ಜೈನ್, ವಿಶ್ವನಾಥ, ಟಿ.ಎನ್.ರಮೇಶ್, ಉಮೇಶ್, ಗೌತಮ್, ಪ್ರವೀಣ್, ಮೋಹನ್ ರಾಜ್, ಕೃಷ್ಣಮೂರ್ತಿ ಮತ್ತು ಬಿಬಿಎಂಪಿ ಇಂಜನಿಯರ್ ವಿಭಾಗ, ಆರೋಗ್ಯ, ಕಂದಾಯ, ತೋಟಗಾರಿಕೆ ಅರಣ್ಯ ಘಟಕ ಮತ್ತು ಪೊಲೀಸ್ ಇಲಾಖೆ, ಬೆಸ್ಕಾಂ ಹಾಗೂ ಜಲಮಂಡಳಿ ಅಧಿಕಾರಿಗಳು ಭಾಗವಹಿಸದ್ದರು.
ಕಡಣಿಯಲ್ಲಿ ಬಿನ್ನ ಸಾಲಗಾರರ ಚುನಾವಣೆ.
ಆಲಮೇಲ ತಾಲೂಕಿನ ಕಡಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ ಕಡಣಿ ಶಾಖೆ 16.2.2025 ವರ್ಷದ ಚುನಾವಣೆಯಲ್ಲಿ ಬಿನ್ನ ಸಾಲಗಾರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ 106 ಮತಗಳಿಂದ ಮಡಿವಾಳಪ್ಪ ಶಂಕ್ರಪ್ಪ ಜೇರಟಗಿ ಜಯಭರಿಸಿದ್ದಾರೆ. ಇದೇ ವೇಳೆ ಸತ್ತುಗೌಡ ಬಿರಾದಾರ ಕೃಷಿ ಉತ್ಪನ್ನ ಸಹಕಾರಿ ಬ್ಯಾಂಕುಗಳಿಗೆ ಇದು ಹಳ್ಳಿಗಳಿಗೆ ಉತ್ತಮವಾದ ಬ್ಯಾಂಕ್ ಎಂದು ಹೇಳಿದರೆ ತಪ್ಪಾಗಲಾರದು. ಕೃಷಿ ಉತ್ಪನ್ನ ಬ್ಯಾಂಕುಗಳಿಗೆ ಸರಕಾರದಿಂದ ಸಿಗುವ ಸವಲತ್ತುಗಳು ಪಡೆದುಕೊಂಡು ಇದು ಒಂದು ಬಿಜಾಪುರ ಜಿಲ್ಲೆಯ ಮಾದರಿಯ ಬ್ಯಾಂಕವನ್ನಾಗಿ ಪರಿವರ್ತನೆ ಮಾಡುವುದು ನಮ್ಮೆಲ್ಲ ಸದಸ್ಯರ ಕರ್ತವ್ಯವೆಂದು ಹೇಳಿದರು. ಮಡಿವಾಳಪ್ಪ ಶಂಕ್ರಪ್ಪ ಜೆರಟಗಿ. ಕೇದಾರ ಕತ್ತಿ. ಸಾತುಗೌಡ ಬಿರಾದರ.ಸಂತೋಷ ಅಫ್ಜಲ್ಪುರ್.ನಾಗರಾಜ್ ಮಳ್ಳಿ ಶಿವಗೌಡಪ್ಪ ಪಾಟೀಲ್. ಶರಣಗೌಡ ಪಾಟೀಲ್. ಶಿವಣ್ಣ ಬಿರಾದರ್. ಚನ್ನಮಲಪ್ಪ ತೇಲಿ.ಪ್ರಕಾಶ್ ಕಟ್ಟಿಮನಿ.ಅಕ್ಕಮಹಾದೇವಿ ಹಿರೇಮಠ. ಮಹಾದೇವಿ ಬಿರಾದಾರ.11 ಸದಸ್ಯರ ನಾಮ ನಿರ್ದೇಶನ ಒಂದು (1)ಚುನಾವಣೆ ಸದಸ್ಯರ ಒಳಗೊಂಡು ಒಟ್ಟು 12 ಜನರ ಸದಸ್ಯರನ್ನು ಆಯ್ಕೆಯಾಗಿದ್ದಾರೆ. ಚುನಾವಣೆ ಅಧಿಕಾರಿ ದತ್ತಾತ್ರಾಯ ಮತ್ತು ಬಿ ಪಿ ನಾಯಕ್ ತಿಳಿಸಿದರು ಬಸವಕ್ರಾಂತಿ ವರದಿಗಾರರಿಗೆ ತಿಳಿಸಿದರು ಮತಗಟ್ಟೆ ಅಧಿಕಾರಿಗಳು S T ಬಾವಿಕಟ್ಟಿ ಶಿವಕುಮಾರ ಅಗಸರ ಎಂ ಎಂ ಕೆರೋಟಿಗಿ ಕೆ ಎಸ್ ನಾಯಕ್ ಅಚ್ಚುಕಟ್ಟಾಗಿ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಸಲಿಂಗಪ್ಪ ಕತ್ತಿ ಮಾಜಿ ಅಧ್ಯಕ್ಷರ ಬೋಗಣ್ಣ ಲಾಳಸಂಗಿ ಸಂತೋಷ ಕ್ಷತ್ರಿ. ಹಣಮಂತರಾಯ ಕಳಸಗೊಂಡ ಡಾಕ್ಟರ್ ಮಲ್ಲು ಪ್ಯಾಟಿ ಪ್ರಭು ಕ್ಷತ್ರಿ ಭೋಗಪ್ಪ ತಳವಾರ ಪ್ರಾಥಮಿಕ ಕೃಷಿ ಉತ್ಪನ್ನ ಬ್ಯಾಂಕಿನ ಕಾರ್ಯನಿರ್ವಾಹಕ ಅಧಿಕಾರಿ ಭೀಮರಾಯ ತಾವರಗೇರಿ ಸಂಜು ಕೆಸರಟ್ಟಿ ಸೈಬಣ್ಣ ತಾವರಗೇರಿ ಗುರುಸಂಗ ಕತ್ತಿ.ಮಲ್ಲಪ್ಪ ತಳವಾರ ಅನೇಕ ಊರಿನ ಹಿರಿಯರು ಯುವಕರು ಪಾಲ್ಗೊಂಡಿದ್ದರು
ವರದಿ. ಉಮೇಶ ಕಟಬರ
65 ಕೋಟಿ ರೂ.ಗಳ ವೆಚ್ಚದಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆ ಮಾಡಲಾಗುವುದು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು
ಸಾಲಿಗ್ರಾಮ: 65 ಕೋಟಿ ರೂ.ಗಳ ವೆಚ್ಚದಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆ ಮಾಡಲಾಗುವುದು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಡಯಾಲಿಸಿಸ್ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದು ಕೇಂದ್ರ ಬಿಂದು ಆಗಿರುವ ಕಾರಣ ಮಹಿಳೆಯರೇ ಜಾಸ್ತಿ ಆಸ್ಪತ್ರೆಗೆ ಬರುತ್ತಾರೆ, ಹಾಗಾಗಿ ಅನುಕೂಲಕ್ಕಾಗಿ ಹೆಚ್ಚಾಗಿ ವೈದ್ಯರುಗಳ ನೇಮಕ ಮಾಡಿ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ತೆರೆಯಲಾಗುವುದು, ಹಲವು ರೀತಿಯ ಸಮಸ್ಯೆಗಳು ಈ ಆಸ್ಪತ್ರೆಯಲ್ಲಿ ಇವೆ, ಆರೋಗ್ಯ ಸಚಿವರಿಗೆ ಮನವಿ ಮಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಭೆ ಕರೆದು ಈ ನೂತನ ತಾಲೂಕಿಗೆ ಬೇಕಾಗಿರುವ, ತಾಲೂಕು ಪಂಚಾಯತಿ ಕಟ್ಟಡ, ಮಿನಿ ವಿಧಾನಸೌದ ಸೇರಿದಂತೆ ಎಲ್ಲಾ ರೀತಿಯ ಕಟ್ಟಡಗಳನ್ನು ನಿರ್ಮಿಸಲು ಸೂಚನೆ ನೀಡಿದ್ದಾರೆ, ಈ ತಾಲೂಕಿನ ಸಂಪೂರ್ಣ ಜವಾಬ್ದಾರಿ ನನ್ನ ಮೇಲೆ ಇದೆ, ನಾನು ಹಂತ ಹಂತವಾಗಿ ಏನೇ ಸಮಸ್ಯೆಗಳಿದ್ದರೂ ಬಗೆಹರಿಸುತ್ತೇನೆ, ಇದು ಶತಸಿದ್ದ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಿಹೆಚ್ ಓ ಡಾ.ಕುಮಾರಸ್ವಾಮಿ, ಟಿಹೆಚ್ ಓ ಡಾ.ನಟರಾಜ್, ತಹಶೀಲ್ದಾರ್ ನರಗುಂದ, ತಾಲೂಕು ಪಂಚಾಯತಿ ಇಓ ರವಿಕುಮಾರ್, ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶೋಕ್, ತಜ್ಞ ವೈದ್ಯ ಡಾ.ಮಂಜುನಾಥ್, ಡಾ.ಕೀರ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉದಯಶಂಕರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸಎಲ್.ಎಂ.ಸಣ್ಣಪ್ಪ, ಮಂಜೇಗೌಡ, ಬಸವರಾಜು, ಅಶ್ವಿನಿ, ದಿನೇಶ್, ಗೋಪಾಲ, ಗ್ರಾ.ಪಂ. ಅಧ್ಯಕ್ಷ ಸುವರ್ಣ, ಉಪಾಧ್ಯಕ್ಷ ಶಶಿಕಲಾ, ಸಿಡಿಸಿ ಅಧ್ಯಕ್ಷರಾದ ಅಪ್ಪು ಶ್ರೀನಿವಾಸ್, ಎಸ್.ಎಮ್.ಪರೀಕ್ಷಿತ್, ಸೈಯದ್ , ಬಲರಾಮ್ , ಸೌಕತ್ ಸೇರಿದಂತೆ ಹಲವರು ಇದ್ದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ
ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಸೀಗವಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ನಿವೃತ್ತ ಶಿಕ್ಷಕರಾದ ನಾರಾಯಣ್ ಅವರು ಮಾತನಾಡಿ ಖಾಸಗಿ ಶಾಲೆಗೆ ಸೇರಿಸಿದರೆ ನಿಮ್ಮ ಮಕ್ಕಳಿಗೆ ಹೆಚ್ಚು ಹೆಚ್ಚಿನ ರೀತಿಯಲ್ಲಿ ಹಣವನ್ನು ಕಟ್ಟಬೇಕಾಗುತ್ತದೆ ಅದರ ಬದಲಿಗೆ ಸರ್ಕಾರಿ ಶಾಲೆಗೆ ಸೇರಿಸುವುದರ ಮೂಲಕ ನಿಮ್ಮ ಮಕ್ಕಳಿಗೆ ಹೆಚ್ಚಿನ ರೀತಿಯಲ್ಲಿ ವಿದ್ಯಾಭ್ಯಾಸವನ್ನು ಕೊಡಿಸಿ ಎಂದು ಪೋಷಕರಿಗೆ ಕರೆ ನೀಡಿದರು ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ತುಳಸಿರಾಮ್. ಎಸ್ ಡಿ ಎಂ ಸಿ ಅಧ್ಯಕ್ಷರಾದ ನಂದಿನಿ. ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರು ಹಾಗೂ ಡಿಎಸ್ಎಸ್ ಸಂಘದ ಪ್ರಧಾನ ಸಂಚಾಲಕರಾದ ಸುಧಾಕರ್. ಶಿಕ್ಷಕರಾದ ಕುಮಾರ್. ಎಚ್ ಎಮ್ ಹರೀಶ್. ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು
ಶಿಕ್ಷಣ ಸಂಸ್ಥೆ ಕಟ್ಟಿ – ಕೈ ಕಟ್ಟಿ ನಾನು ಮನೆಯಲ್ಲಿ ಕುಳಿತಿಲ್ಲ : ಡಾ ಹಣಮಂತ ಚೆಕ್ಕೆನ್ನವರ
ಮೂಡಲಗಿ : ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟುವುದು ಮತ್ತು ಅದನ್ನು ಯಶಸ್ಸಿನ ಪಥದತ್ತ ತೆಗೆದುಕೊಂಡು ಹೊಗುವುದು ಕಠೀಣವಾದ ಕೆಲಸ. ಶಿಕ್ಷಣ ಸಂಸ್ಥೆ ಕಟ್ಟಿ- ಕೈ ಕಟ್ಟಿ ನಾನು ಮನೆಯಲ್ಲಿ ಕುಳಿತಿಲ್ಲ : ಡಾ ಹಣಮಂತ ಚೆಕ್ಕೆನ್ನವರ ಆರ್.ಸಿ.ಎಮ್. ಶಾಲೆ ಯಾದವಾಡ ಸಾಂಸ್ಕ್ರತಿಕ ಸಂಭ್ರಮದ ಅಧ್ಯಕ್ಷೀಯ ಭಾಷಣವನ್ನು ಮಾಡಿದರು ಸ್ನೇಹಾ ಶಿಕ್ಷಣ ಸಂಸ್ಥೆಯ ದೀರ್ಘಪಯಣದ ಬಗ್ಗೆ ಮಾತನಾಡಿದರು . ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟುವದು ಒಬ್ಬರಿಂದ ಸಾಧ್ಯವಾಗದ ಮಾತು ನಮ್ಮ ಶಿಕ್ಷಣ ಸಂಸ್ಥೆಯ ಹಿಂದೆ ಶ್ರೀ ಪ್ರಭುಲಿಂಗ ಮಹಾ ಸ್ವಾಮಿಗಳ ಕೃಪಾಶೀರ್ವಾದ ನಮ್ಮ ಕುಟುಂಬದವರ ತ್ಯಾಗ , ಸ್ನೇಹಿತರ ನಿಸ್ವಾರ್ಥ ಸೇವೆ , ಮತ್ತು ಎಲ್ಲದಕ್ಕೂ ಹೆಚ್ಚಾಗಿ ನಮ್ಮ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳ ಶ್ರಮ ಇದೆ ಎಂದು ಹೇಳಲು ನನಗೆ ತುಂಬ ಹೆಮ್ಮೆ ಅನಿಸುತ್ತದೆ. ಒಂದು ಶಾಲೆಗೆ ಒಳ್ಳೆಯ ಹೆಸರು ಬರಬೇಕಾದರೆ ವಿದ್ಯಾರ್ಥಿಗಳ ಮಾರ್ಕ್ಸ ಕಾರ್ಡ ಪ್ರಮುಖ ಪಾತ್ರ ವಹಿಸುತ್ತದೆ. ಈ ವಿಷಯದಲ್ಲಿ ನಾನು ತುಂಬಾ ಲಕ್ಕಿ ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೊಡ್ಡ ಶಹರಗಳಲ್ಲಿ ವೈದ್ಯಕೀಯ , ಇಂಜಿನಿಯರಿಂಗ, ಕಾನೂನು ಇನ್ನೂ ಬೇರೆ ಬೇರೆ ಕ್ಷೆತ್ರಗಳಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ ಇದು ನನಗೆ ತೃಪ್ತಿಯನ್ನು ತಂದು ಕೊಟ್ಟಿದೆ.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿದ ಶ್ರೀ ಶಿವಾನಂದ ಮಹಾಸ್ವಾಮಿಗಳು ಶ್ರೀ ಜಡಿಸಿದ್ದೇಶ್ವರ ಮಠ ಸುಣಧೋಳಿ ಆಶಿರ್ವಚನ ಮಾಡಿದರು, ಶಾಲೆಯ ವಿದ್ಯಾರ್ಥಿಗಳ ಶಿಸ್ತು ಭಾಷಾ ಜ್ಞಾನ ನಿರೂಪಣೆ ನೋಡಿ ಹರ್ಷವನ್ನು ವ್ಯಕ್ತ ಪಡಿಸಿದರ
ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದದ್ದು ಸರಿಯಾದ ಮಾರ್ಗದರ್ಶನ ಮತ್ತು ಉತ್ತಮ ಸಂಸ್ಕಾರ ಇದ್ದರೆ ಯಶಸ್ಸಿನಿಂದ ಯಾರು ತಡೆಯಲಾರರು ಅಡೆತಡೆಗಳು ಬರುವುದು ಸಹಜ ಎಲ್ಲ ಅಡೆತಡೆಗಳನ್ನು ಅವಕಾಶಗಳೆಂದು ಭಾವಿಸಿ ಮುನ್ನಡೆದರೆ ಸಮಾಜವೇ ನಿಮ್ಮನ್ನು ಕರೆದು ಗೌರವಿಸುತ್ತದೆ ಎಂದು ಮುಖ್ಯ ಅತಿಥಿಗಳಾದ ಕೆ.ಎಲ್. ಇ. ಕಾಲೇಜ ಉಪನ್ಯಾಸಕರಾದ ಶಿವಲಿಂಗ ಸಿದ್ನಾಳ ಹೇಳಿದರು.
ಬಸವರಾಜ ಭೂತಾಳಿ ಗ್ರಾಮ ಪಂಚಾಯತ ಅಧ್ಯಕ್ಷರು ಯಾದವಾಡ ಮಾತನಾಡಿ ಎಲ್ಲ ಮಕ್ಕಳಿಗೆ ಸಂಸ್ಕ್ರತಿಕ ಸಂಭ್ರಮದ ಶುಭಾಷಯ ಹೇಳಿದರು ಹತ್ತನೆಯ ತರಗತಿಯ ಮಕ್ಕಳಿಗೆ ಮುಂದಿನ ಭವಿಷ್ಯ ಒಳ್ಳೆಯದಾಗಲಿ ನಮ್ಮ ಊರಿಗೆ ಮತ್ತು ನಿಮ್ಮ ಶಿಕ್ಷಣ ಸಂಸ್ಥೆಗೆ ಒಳ್ಳೆಯ ಹೆಸರು ಬರುವ ಹಾಗೆ ಸಾಧನೆ ಮಾಡಿ ಎಂದು ಹಾರೈಸಿದರು
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಮನರಂಜನೆ ಕಾರ್ಯಕ್ರಮಗಳು, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಶಿವಾನಂದ ಮಹಾಸ್ವಾಮಿಗಳು ,ಹಣಮಂತ ಚೆಕ್ಕೆನ್ನವರ, ಶಿವಲಿಂಗ ಸಿದ್ನಾಳ , ಬಸವರಾಜ ಭೂತಾಳಿ , ಶ್ರೀಶೈಲ ಹೆಗ್ಗಳಗಿ, ವೀರಣ್ಣ ಕಂಠೀಗಾವಿ , ಬಿ.ಎಂ. ಪರಗುಣಿ, ಶ್ರೀಶೈಲ ಅಂಗಡಿ , ವಿ.ಡಿ.ಹಿರೇಮಠ ಮುಖ್ಯ ಶಿಕ್ಷಕರು ಮತ್ತು ಶ್ರೀಮತಿ ಎ.ಆರ್.ರೋಣದ ಪ್ರಧಾನ ಗುರುಮಾತೆಯರು ಇದ್ದರು. ಪೂಜಾ ಕುದರಿ ಸ್ವಾಗತಿಸಿದರು , ಇಕ್ರಾ ತಹಶೀಲ್ದಾರ ಮತ್ತು ತನವೀರ ಗಾಡಿಬಾವಲಿ ನಿರೂಪಿಸಿದರು , ಪ್ರದೀಪ ಅಂಬಲಜೇರಿ ವಂದನಾರ್ಪಣೆ ಮಾಡಿದರು.
ಶ್ರೀ ತ್ಯಾಗರಾಜ ಸ್ವಾಮಿ ಆರಾಧರ ಮಹೋತ್ಸವ ಹಾಗೂ ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆ
ಕೆ ಆರ್ ನಗರದಲ್ಲಿ ಪಟ್ಟಣದಲ್ಲಿ ಸವಿತಾ ಮಂಗಳವಾದ್ಯ ಕಲಾವಿದರ ಸಂಘ ವತಿಯಿಂದ ಶ್ರೀ ತ್ಯಾಗರಾಜ ಸ್ವಾಮಿ ಆರಾಧರ ಮಹೋತ್ಸವ ಹಾಗೂ ಶ್ರೀ ಸವಿತಾ ಮಹರ್ಷಿ ಜಯಂತಿ ಮಾಡಲಾಯಿತು. ಕೆ ಆರ್ ನಗರದಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿ ಗೆ ಶಾಸಕ ಡಿ ರವಿಶಂಕರ್ ಚಾಲನೆ ನೀಡಿ ಮಾತನಾಡಿದವರು ಅವರು ಇವತ್ತಿನ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಐಎಎಸ್ ಐಪಿಎಸ್ ಇನ್ನೂ ಮಾಡಬೇಕು ಎಂದು ಪೋಷಕರಿಗೆ ಕರೆ ನೀಡಿದರು. ಸಾಲಿಗ್ರಾಮ ಮತ್ತು ಕೆ ಆರ್ ನಗರಕ್ಕೆ ಸವಿತಾ ಸಮಾಜದ ಸಮುದಾಯ ಭವನವನ್ನು ಕಟ್ಟಿಕೊಡಲು ನಾನು ಕ್ಷಮಿಸುತ್ತೇನೆ ಎಂದು ಶಾಸಕ ಡಿ ರವಿಶಂಕರ್ ಹೇಳಿದರು. ಇದೇ ಸಮಯದಲ್ಲಿ ವಿಧಾನಪರಿಷತ್ ಸದಸ್ಯರಾದ ಎಚ್ ವಿಶ್ವನಾಥ್. ಪುರಸಭೆ ಅಧ್ಯಕ್ಷರಾದ ಶಿವು ನಾಯಕ್. ವಿನಯ್. ಅಧ್ಯಕ್ಷರು ಮೈಸೂರು ನಗರ ಕಾಂಗ್ರೆಸ್ ಸಮಿತಿಯ (ಓಬಿಸಿ) ಮೈಸೂರು ಜಿಲ್ಲಾಧ್ಯಕ್ಷರು ಸವಿತಾ ಸಮಾಜ ಎಸ್ ಆರ್ ನಾಗೇಶ್. ನವನಗರ ಬ್ಯಾಂಕ್ ಅಧ್ಯಕ್ಷರಾದ ಕೆ ಎನ್ ಬಸಂತ್ ನಂಜಪ್ಪ. ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ಕೆ ಎಸ್ ಮಹೇಶ್. ಸಮಾಜ ಸೇವಕರು ಗಂಧನಹಳ್ಳಿ ವೆಂಕಟೇಶ್. ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರು ಹಾಡ್ಯ ಮಾದೇವಸ್ವಾಮಿ. ಕೆ ಆರ್ ನಗರ ತಾಸಿಲ್ದಾರ್ ಜಿ ಸುರೇಂದ್ರ ಮೂರ್ತಿ. ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ. ಸವಿತಾ ಸಮಾಜದ ಎಲ್ಲಾ ಮುಖಂಡರು ಉಪಸ್ಥಿತರಿದ್ದರು
ಜಾನಪದ ಕೊಗಿಲೆ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಗೌಡ ನಿಧನ
ಅಂಕೋಲಾ : ಜಾನಪದ ಹಾಡುಗಳ ಮೂಲಕ ಪ್ರಸಿದ್ಧಿಯಾಗಿದ್ದ ತಾಲೂಕಿನ ಬಡಗೇರಿಯ ಸುಕ್ರಿ ಗೌಡ ವಿಧವಶರಾಗಿದ್ದಾರೆ. ಕೆಲವು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ಆರೋಗ್ಯದಲ್ಲಿ ಏರು ಪೇರಿನ ಸಮಸ್ಯೆಯಿಂದ ಬಳಲುತ್ತಿದ್ದು ಅವರನ್ನು ಜ
ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲು ಸಾಮಾಜಿಕ ಕಾರ್ಯಕರ್ತ ಮಾಧವ ನಾಯಕ ಕುಟುಂಬದವರು ಶಾಸಕ ಸತೀಶ ಸೈಲ್ ಅವರ ವಿಶೇಷ ನೆರವಿನೊಂದಿಗೆ ಪ್ರಯತ್ನಸಿದ್ದು , ಬಳಿಕ ಮನೆಗೆ ಮರಳಿ ಕರೆ ತರಲಾಗಿದ್ದ ಸುಕ್ರಜ್ಜಿ ಗುರುವಾರ ಬೆಳಗಿನ ಜಾವ 3.30 ರ ಸುಮಾರಿಗೆ ಕೊನೆಯುಸಿರೆಳೆದಿದ್ದು,
ನೂರಾರು ಹಾಡನ್ನು ಕಂಠಸ್ತ ಮಾಡಿಕೊಂಡಿದ್ದರು.ಇನ್ನೂ ಬಿಡುವಿನ ಸಮಯದಲ್ಲಿ ತಾವೇ ತಕ್ಷಣ ಕಟ್ಟಿ ಹಾಡುತ್ತಿದ್ದ ಸುಕ್ರಿ ಗೌಡ ಜಾನಪದ ಕೋಗಿಲೆ ಎಂದೇ ಗುರುತಿಸಿಕೊಂಡಿದ್ದರು.ದೇಶೀಯ ಜಾನಪದದ ದಂತ ಕಥೆಯೇ ಆಗಿದ್ದ ಸುಕ್ರಿ ತನ್ನೂರು ಬಡಗೇರಿಯ ಹಾಗೂ ತಾಲೂಕಿನ ಕೀರ್ತಿ ಬಾನೆತ್ತರಕ್ಕೆ ಕೊಂಡಯ್ದಿದ್ದರು.
ಪುಗಡಿ ತರ್ಲೆ ಮುಂತಾದ ಹಾಲಕ್ಕಿಗಳ ಮತ್ತು ಜಿಲ್ಲೆಯ ಜನಪದ ಲೋಕದ ಸಾಧಕಿ ಆಗಿದ್ದ ಇವಳ ಪ್ರತಿಭೆಗೆ ಸಾವಿರಾರು ಸನ್ಮಾನ ಗೌರವಗಳ ಜೊತೆ ರಾಷ್ಟ್ರದ ಉನ್ನತ ನಾಗರಿಕ ಗೌರವ ಪದ್ಮಶ್ರೀ ಪುರಸ್ಕಾರ ಒಲಿದು ಬಂದಿತ್ತು.ಅಲ್ಲದೇ ಈ ಭಾಗದ ಜನಪದ ಸಾಮಾಜಿಕ ಹೋರಾಟದ ಐಕಾನ್ ಆಗಿದ್ದ ಸುಕ್ರಿ ಗೌಡ, ಗಾಂಧೀಜಿ ದಾರಿಯಲ್ಲಿ ವ್ಯಸನಮುಕ್ತ ಸಮಾಜ ನಿರ್ಮಾಣದ ಕನಸಿನಿಂದ ಮದ್ಯಪಾನ ವಿರೋಧಿ ಹೋರಾಟದಲ್ಲಿ ಬಹುತೇಕ ಯಶಸ್ಸು ನೀಡಿದ್ದರು.
ಕೆಲ ತಿಂಗಳ ಹಿಂದಷ್ಟೇ ಪದ್ಮಶ್ರೀ ತುಳಸೀ ಗೌಡ ಅವರನ್ನು ಕಳೆದುಕೊಂಡಿದ್ದ ಜಿಲ್ಲೆ ಮತ್ತು ನಾಡು ಈಗ ಸುಕ್ರಿ ಗೌಡರನ್ನು ಕಳೆದುಕೊಳ್ಳುವ ಮೂಲಕ ಹೀಗೆ ಎರಡು ಪದ್ಮಶ್ರೀ ಪುರಸ್ಕೃತರನ್ನು ಕಳೆದ ಕೊಂಡು ವಾಸ್ತವದಲ್ಲಿ ಬಡವಾಗಿದೆ .
ಅಗಲಿದ ಹಿರಿಯ ಚೇತನಕ್ಕೆ ದೇವರು ಚಿರಶಾಂತಿ ನೀಡಲಿ ಎನ್ನುವುದು ಹಲವರ ಪ್ರಾರ್ಥನೆಯಾಗಿದ್ದು, ಫೆ 13 ರ ಗುರುವಾರ ಮಧ್ಯಾಹ್ನ 12.30 ರ ನಂತರ ಅಂಕೋಲಾದ ಬಡಗೇರಿಯಲ್ಲಿ ಮೃತರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು ರಾಜಕಾರಣಿಗಳು ಹಾಗೂ ಸಾಮಾಜಿಕ ಹೋರಾಟಗಾರರು ಸಂತಾಪ ಸೂಚಿಸಿದ್ದಾರೆ
ಗ್ಯಾಸ್ ಟ್ಯಾಂಕರ್ ಪಲ್ಟಿ ಸ್ಥಳೀಯರಲ್ಲಿ ಆತಂಕ
ಹೊನ್ನಾವರ: ಕಾಸರಕೋಡಿನ ರೋಷನ್ ಮೊಹಲ್ಲಾ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಘಟನೆ ನಡೆದಿದೆ. ಹೆಚ್. ಪಿ. ಕಂಪನಿಯ ಎಲ್. ಪಿ. ಜಿ ಗ್ಯಾಸ್ ತುಂಬಿಕೊoಡು ಮಂಗಳೂರಿನಿoದ ಗೋವಾಕ್ಕೆ ತೆರಳುತ್ತಿರುವ ಟ್ಯಾಂಕರ್ , ರಾಷ್ಟೀಯ ಹೆದ್ದಾರಿ 66ರ ಕಾಸರಕೋಡನಲ್ಲಿ ಡಿವೈಡರ್ ಗೆ ಹೊಡೆದು, ಡಿವೈಡರ್ ಮೇಲೆ ಪಲ್ಟಿಯಾಗಿದೆ. ಪಲ್ಟಿಯಾದ ಸಂದರ್ಭದಲ್ಲಿ ಚಾಲಕ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.
ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಹಿನ್ನಲೆಯಲ್ಲಿ ಸ್ಥಳೀಯರು ಕೆಲಕಾಲ ಆತಂಕಗೊoಡಿದ್ದು ಗ್ಯಾಸ್ ಸೋರಿಕೆಯಾಗಿಲ್ಲ ಎಂಬ ಪ್ರಾರಂಭಿಕ ತನಿಖೆಯಿಂದ ನಿಟ್ಟುಸಿರುಬಿಟ್ಟರು. ಅಗ್ನಿಶಾಮಕದಳದಿಂದ ರಕ್ಷಣಾ ಕಾರ್ಯ ನಡೆದಿದ್ದು, ಠಾಣೆಯ ಅಧಿಕಾರಿ, ಸಿಬ್ಬಂದಿಯವರು ಸ್ಥಳದಲ್ಲಿದ್ದು, ಮುಂಜಾಗೃತೆಗಾಗಿ ಭಟ್ಕಳ ಠಾಣೆಯ ಜಲವಾಹನವನ್ನು ತರಿಸಿಕೊಳ್ಳಲಾಗಿದೆ. ಪೊಲೀಸರು ಸ್ಥಳದಲ್ಲಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.
