ಕಾಳಗಿ: ತಾಲೂಕಿನ ಲಕ್ಷ್ಮಣ ನಾಯಕ ತಾಂಡ ಕೊಡ್ಲಿ ರಸ್ತೆಯಲ್ಲಿ ಗಾಂಜ ಸುಮಾರು 40 ಕೆ ಜಿ ಗಾಂಜಾ
ಸಾಗಾಟ ಮಾಡುವ ವೇಳೆ ಕಾಳಗಿ ಪಿ ಎಸ್ ಐ ತಿಮ್ಮಯ್ಯ ಬಿ ಕೆ ಗುರುವಾರ ಪತ್ತೆ ಹಚ್ಚಿದ್ದಾರೆ ಶುಕ್ರವಾರ ಮಾದ್ಯಮ ಪ್ರತಿನಿಧಗಳನ್ನು ಉದ್ದೆಶಿಶಿ ಮಾತನಾಡಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಿವಾಸಲು 40 ಕೆ ಜಿ ಗಾಂಜಾದ ಮೌಲ್ಯ ಸುಮಾರು 40 ಲಕ್ಷ ಇದೆ ಎಂದು ತಿಳಿಸಿದರು. ಕಲಬುರಗಿ ಜಿಲ್ಲೆಯಲ್ಲಿ ಓರಿಸಾ ದಿಂದ ತಂದು ಅಕ್ರಮ ಗಾಂಜಾ ಮತ್ತು ಮಾಧಕ ವಸ್ತುಗಳನ್ನು ಮಾರಾಟ ಮತ್ತು ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಶ್ರೀ ಮಹೇಶ ಮೇಘಣ್ಣನವರ ಅಪರ ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ಶ್ರೀ ಶಂಕರಗೌಡ ಪಾಟೀಲ್ ಪೊಲೀಸ್ ಉಪಧೀಕ್ಷಕರು ಶಹಬಾದ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಜಗದೇವಪ್ಪ ಪಾಳಾ ಸಿ.ಪಿ.ಐ ಕಾಳಗಿ ಚಂದ್ರಶೇಖರ ತಿಗಡಿ ಸಿಪಿಐ ಚಿತ್ತಾಪೂರ ತಿಮ್ಮಯ್ಯ ಬಿ ಕೆ ಪಿ ಎಸ್ ಐ ಕಾಳಗಿ ನೆತೃತ್ವ ತಂಡ ರಚಿಸಿ ಕಾಳಗಿ ವ್ಯಾಪ್ತಿಯ ಕೊಡ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಲಕ್ಷ್ಮಣ ನಾಯಕ್ ತಾಂಡದ ಹತ್ತಿರ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಗಾಂಜಾ ಇಟ್ಟುಕೊಂಡು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿ ಎಸ್ ಐ ಮತ್ತು ಕೆಲವು ಸಿಬ್ಬಂದಿಗಳು ಸ್ಥಳಕ್ಕೆ ಹೋಗಿ ಅಕ್ರಮ ಗಾಂಜಾ ಸಾಗಾಟ ಮಾಡುತ್ತಿರು ವ್ಯಕ್ತಿಗಳಾದ ಚಂದ್ರಕಾಂತ ಅಲಿಯಾಸ್ ಪಪ್ಪು ತಂದೆ ಹರಿಚಂದ್ರ ಚವ್ಹಾಣ ಸಾ: ಲಕ್ಷ್ಮಣ ನಾಯಕ ತಾಂಡ ಕಾಳಗಿ ಮತ್ತು ಮಲ್ಲಯ್ಯ ತಂದೆ ಮಹಾಭಳೇಶ್ವರ ಪ್ಯಾಟಿಮನಿ ಸಾ: ಕೊಡ್ಲಿ ರವರನ್ನು ವಶಕ್ಕೆ ಪಡೆದು ಕೊಂಡಾಗ ಅವರಲ್ಲಿ 40 ಕೆ ಜಿ ಗಾಂಜಾ ಸುಮಾರು 40 ಲಕ್ಷ ರೂ ಬೆಲೆ ಬಾಳುವುದಾಗಿದ್ದು ಮೋಟಾರ ಸೈಕಲ್ ಕಾರು ಜಪ್ತಿ ಮಾಡಿದ್ದು ಸುಮಾರು ಎಲ್ಲಾ ಸೇರಿ 45,50,000 ಮುದ್ದೆ ಮಾಲು ಜಪ್ತಿ ಮಾಡಿರುತ್ತಾರೆ ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಬಸಪ್ಪ ನಾಗೂರ,ಅಂಬರಿಷ ಬಿರಾದಾರ ,ಸಂಗಮೇಶ ,ಶ್ರೀಶೈಲ್ ಇತರರೂ ಇದ್ದರು
