ಸಿಎಂ ಆಗಿದ್ದಾಗ ಕುಮಾರಸ್ವಾಮಿ ಮಾಡಿದ ಅಭಿವೃದ್ದಿ ಕೆಲಸ ಮುಂಬರುವ ಸ್ಥಳೀಯ ಚುನಾವಣೆಯ ದಿಕ್ಸೂಚಿಯಾಗಲಿದೆ. ಹಾಸನದ ಅರಸೀಕೆರೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ. ಎಂಪಿ ಚುನಾವಣೆಯಲ್ಲಿ ಏನ್ ಮಾಡಿದ್ರು ಅಂತ ಎಲ್ಲರಿಗೂ ಗೊತ್ತಿದೆ. ಎಲ್ಲಾ ಚುನಾವಣೆಗಳು ಕುತಂತ್ರದಿಂದಲೇ ನಡೆಯಲು ಸಾಧ್ಯವಿಲ್ಲ. ಮೇಲ್ಸೇತುವೆಗೆ ಬಜೆಟ್ ನಲ್ಲಿ ಹಣ ಬಿಡುಗಡೆ ಮಾಡದಿರಬಹುದು. ಕುಮಾರಸ್ವಾಮಿ ಅದ್ರ ಬಗ್ಗೆ ಸಂಬಂಧಪಟ್ಟವರ ಜೊತೆ ಚರ್ಚಿಸಿದ್ದಾರೆ. ಜೆಡಿಎಸ್ ಹೊರತು ಪಡಿಸಿ ಜಿಲ್ಲೆಗೆ ಎರಡು ಪಕ್ಷಗಳ ಕೊಡುಗೆ ಏನಿದೆ ? 10 ವರ್ಷದಿಂದ ನೆನೆಗುದಿಗೆ ಬಿದ್ದ ಆಸ್ಪತ್ರೆ ಮಾಡಿದವರ್ಯಾರು ? ಅಧಿಕಾರಿಗಳಿಂದ ನಾವು ರಾಜಕೀಯ ಮಾಡುವುದಿಲ್ಲ.ಜನರ ಬೆಂಬಲ, ಆಶೀರ್ವಾದ, ಪ್ರೀತಿ ನಮ್ಮ ಮೇಲಿದೆ. ನಾವು ಯಾರ ಮನೆ ಬಾಗಿಲಿಗೆ ಹೋಗಲ್ಲ. ದೇವರ ಶಕ್ತಿಯಿದೆ ದೇವೇಗೌಡರಿಂದ ಮಾರ್ಚನಲ್ಲಿ ಬೃಹತ್ ಸಮಾವೇಶ ಆಯೋಜನೆ, ಅದು ನನಗೆ ಗೊತ್ತಿಲ್ಲ. ಜಿಲ್ಲಾ ಮಟ್ಟದಲ್ಲಿ ಶೀಘ್ರದಲ್ಲಿಯೇ ಮಾಡ್ತಿವಿ ಮುಂದಿನ ದಿನದಲ್ಲಿ ಪಕ್ಷ ಸಂಘಟನೆಯನ್ನು ಗಟ್ಟಿಯಾಗಿ ಮಾಡುತ್ತೇವೆ ಎಂದು ತಿಳಿಸಿದರು.
