ಬೇಸಿಗೆ ಕಾಲ, ನದಿಪಾತ್ರದಲ್ಲಿ ನೀರಿಲ್ಲ, ನೀರು ಅಮೂಲ್ಯ ಮಿತವಾಗಿ ಬಳಸಿ ಎಂದು ಎಸ್.ಸುರೇಶ್ ಕುಮಾರ್ ರವರು ಸಾರ್ವಜನಿಕರಿಗೆ ಮನವಿ
ಬೆಂಗಳೂರು:ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಜನರೊಂದಿಗೆ ಜನಸೇವಕ ಜನಸ್ಪಂದನಾ ಕಾರ್ಯಕ್ರಮ ಶಾಸಕರಾದ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ರಾಜಾಜಿನಗರ ಶಾಸಕರ ಜನಸಂಪರ್ಕ ಕಛೇರಿಯ ಅವರಣದಲ್ಲಿ ಜರುಗಿತು.
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್ ಗಳಲ್ಲಿ ವಾಸಿಸುವ ನಿವಾಸಿಗಳು ಮೂಲಭೂತ ಸಮಸ್ಯೆಗಳ ಕುರಿತು ಜನರೊಂದಿಗೆ ಜನಸೇವಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕರನ್ನು ನೇರ ಮಾಡಿ ತಮ್ಮ ಸಮಸ್ಯೆಗಳನ್ನು ನೇರವಾಗಿ ಅಹವಾಲು ಸಲ್ಲಿಸಿ, ಪರಿಹಾರಿಸಿಕೊಳ್ಳುವ ಜನಸ್ಪಂದನಾ ಕಾರ್ಯಕ್ರಮ.
ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ಜನರೊಂದಿಗೆ ಜನಸೇವಕ ಜನಸ್ಪಂದನಾ ಕಾರ್ಯಕ್ರಮ ಪ್ರತಿ ಸೋಮವಾರ ನಡೆಯುತ್ತಿದೆ. 6ನೇ ವಾರದ ಜನಸ್ಪಂದನಾ ಕಾರ್ಯಕ್ರಮ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.
ಸಾರ್ವಜನಿಕರ ಸಮಸ್ಯೆಗಳಿಗೆ ತತಕ್ಷಣ ಪರಿಹಾರ ಸಿಗಬೇಕು, ಎಂದು ಜನರನ್ನು ನೇರ ಮಾಡಿದಾಗ ಸಮಸ್ಯೆಗಳ ಕುರಿತು ಅಧಿಕಾರಿಗಳ ಸಮ್ಮುಖದಲ್ಲಿ ನಿವಾರಣೆ ಮಾಡಲಾಗುತ್ತಿದೆ.
ಕಸವಿಲೇವಾರಿ, ಇ.ಖಾತ ಮತ್ತು ನೀರಿನ ಸಮಸ್ಯೆ ಹಾಗೂ ರಸ್ತೆ ಗುಂಡಿ ಪಿಂಚಣಿ ಸೌಲಭ್ಯ ಹಾಗೂ ರಸ್ತೆ ಡಾಂಬರೀಕರಣಕ್ಕೆ ಮನವಿ ಹಾಗೂ ವೈದ್ಯಕೀಯ ನೆರವು ಸಾರ್ವಜನಿಕರಿಂದ ಈ ವಿಷಯಗಳು ಕುರಿತು ಹೆಚ್ಚಿನ ದೂರುಗಳು ಬರುತ್ತಿದೆ.
ಫೆಬ್ರವರಿ ತಿಂಗಳು ಬಿಸಿಲಿನ ತಾಪ ಹೆಚ್ಚಾಗಿದೆ ಮತ್ತು ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಬೋರ್ ವೆಲ್ ಗಳು ಒತ್ತಿಹೋಗಿದೆ ಮತ್ತು ಕೆಲವು ಬೋರ್ ವೆಲ್ ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.
ಬೇಸಿಗೆ ಕಾಲ, ಕಾವೇರಿ ನದಿ ಪಾತ್ರದಲ್ಲಿ ನೀರಿಲ್ಲ ಸಾರ್ವಜನಿಕರು ನೀರು ಅಮೂಲ್ಯ ಮಿತವಾಗಿ ಬಳಸಿ.
ಬೆಂಗಳೂರು ಬೆಳಯುತ್ತಿದೆ. ಸಮಸ್ಯೆಗಳು ನಿರಂತರ ಶಾಶ್ವತ ಪರಿಹಾರ ಸಿಗಬೇಕು ಹಾಗೂ ಮೂಲಭೂತ ಸಮಸ್ಯೆಗಳು ಬೇಗನೆ ಪರಿಹಾರ ವಾಗಬೇಕು ಎಂದು ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮಂಡಲದ ಅಧ್ಯಕ್ಷರಾದ ಸುದರ್ಶನ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ, ಮಾಜಿ ಉಪಮಹಾಪೌರರಾದ ರಂಗಣ್ಣ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಎಂ.ಮುನಿರಾಜು, ರಾಜಣ್ಣ, ಹೆಚ್.ಆರ್.ಕೃಷ್ಣಪ್ಪ, ದೀಪಾ ನಾಗೇಶ್, ಪ್ರತಿಮಾ, ಬಿಜೆಪಿ ಮುಖಂಡರುಗಳಾದ ಯಶಸ್ ನಾಯಕ್, ಅಮಿತ್ ಜೈನ್, ವಿಶ್ವನಾಥ, ಟಿ.ಎನ್.ರಮೇಶ್, ಉಮೇಶ್, ಗೌತಮ್, ಪ್ರವೀಣ್, ಮೋಹನ್ ರಾಜ್, ಕೃಷ್ಣಮೂರ್ತಿ ಮತ್ತು ಬಿಬಿಎಂಪಿ ಇಂಜನಿಯರ್ ವಿಭಾಗ, ಆರೋಗ್ಯ, ಕಂದಾಯ, ತೋಟಗಾರಿಕೆ ಅರಣ್ಯ ಘಟಕ ಮತ್ತು ಪೊಲೀಸ್ ಇಲಾಖೆ, ಬೆಸ್ಕಾಂ ಹಾಗೂ ಜಲಮಂಡಳಿ ಅಧಿಕಾರಿಗಳು ಭಾಗವಹಿಸದ್ದರು.