ಕುಮಟಾ :-ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಹೂವನ್ನು ಕಟ್ಟಿ ಮಾರುವ ಸುಮಾರು 39 ತಾಯಂದಿರಿಗೆ ಸನ್ಮಾನಿಸುವ ಮೂಲಕ ಅಮ್ಮನಮನ ಎನ್ನುವ ಭಾವನಾತ್ಮಕ ಕಾರ್ಯಕ್ರಮ ಶ್ರೀ ಶಾಂತೇರಿ ಕಾಮಾಕ್ಷಿ ದೇವಾಲಯದಲ್ಲಿ ನಡೆಸಲಾಯಿತು.
ತಾಲೂಕಿನ ಆರೋಗ್ಯಾಧಿಕಾರಿಯಾದ ಶ್ರೀಮತಿ ಆಜ್ಞಾ ನಾಯಕ ಅವರು ಮಾತನಾಡಿ ದೇವರು ಹಾಗೂ ಮನುಷ್ಯನ ನಡುವಿನ ಸೇತುವೆಯಾಗಿ ಹೂವು ಮಾರುವವರು ಕೆಲಸ ಮಾಡುತ್ತಿದ್ದು ಗುರುತಿಸಿ ಸನ್ಮಾನಿಸುತ್ತಿರುವದು ಸಂತಸದ ಸಂಗತಿಯಾಗಿದೆ ಎಂದರು. ದೇವಾಲಯ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಮೂಡ್ಲಗೀರಿ ನಾಯಕ ಹಾಗೂ ಪುರಸಭೆಯ ಸಮುದಾಯ ಸಂಘಟಕರಾದ ಶ್ರೀಮತಿ ಮೀನಾಕ್ಷಿ ಆಚಾರಿ ಅವರು ಕಾರ್ಯಕ್ರಮದ ಕುರಿತು ಹರ್ಷವ್ಯಕ್ತಪಡಿಸಿದರು. ಶ್ರೀಮತಿ ವಿಜಯ ನಾಯಕ ಬರ್ಗಿ ಇವರು ಎಲ್ಲಾ ತಾಯಂದಿರಿಗೆ ಸೀರೆಯನ್ನು ನೀಡಿದರು.
ಯುವಾ ಬ್ರಿಗೇಡ್ ತಾಲೂಕ ಸಂಚಾಲಕರಾದ ಸಚೀನ್ ಭಂಡಾರಿಯವರು ಸ್ವಾಗತಿಸಿದರು ಅಣ್ಣಪ್ಪ ನಾಯ್ಕ ಪ್ರಾಸ್ತಾವಿಕ ಮಾತುಗಳನಾಡಿದರು, ಗೌರೀಶ ನಾಯ್ಕ ನಿರೂಪಿಸಿದರು, ಸದಸ್ಯರಾದ ರವೀಶ ನಾಯ್ಕ, ಚಿಂದಂಬರ ಅಂಬಿಗ, ಪ್ರಕಾಶ ನಾಯ್ಕ, ಲಕ್ಷ್ಮೀಕಾಂತ ಮುಕ್ರಿ, ಸಂದೀಪ ಮಡಿವಾಳ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದ ಜ್ಯೋತಿನಾಯ್ಕ, ಗಾಯತ್ರಿ ಮಡಿವಾಳ ಇನ್ನಿತರರು ಇದ್ದರು.
POST
KWJV ಶಿವಮೊಗ್ಗ ಘಟಕದ ಸಭೆ ಯಶಸ್ವಿ: ಶೀಘ್ರದಲ್ಲೇ ನೂತನ ಪತ್ರಿಕಾಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಲು ಸಿದ್ದತೆ!!
ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ಪದಾಧಿಕಾರಿಗಳು ಮತ್ತು ನಿರ್ದೆಶಕರ ಸಭೆ ಇಂದು ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಡಿ.ಜಿ.ನಾಗರಾಜ್ ನೇತೃತ್ವದಲ್ಲಿ ಸಂಘದ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿKWJV ಶಿವಮೊಗ್ಗ ಜಿಲ್ಲಾ ಘಟಕದ ಪದಾಧಿಕಾರಿಗಳು ಮತ್ತು ನಿರ್ದೆಶಕರುಗಳು ಆಯ್ಕೆಯಾದ ಬಗ್ಗೆ ಪಟ್ಟಿಯನ್ನು ಸಭೆಯಲ್ಲಿ ಅನುಮೋದಿಸಲಾಯಿತು. ಸಭೆಯಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು. KWJV ಶಿವಮೊಗ್ಗ ಜಿಲ್ಲಾ ಘಟಕದ ಸಂಘದ ಹೊಸ ಕಚೇರಿ ಮಾಡುವ ಬಗ್ಗೆ ಮತ್ತು KWJV ಶಿವಮೊಗ್ಗ ಘಟಕದ ಪತ್ರಿಕಾ ಭವನ ಮಾಡಿ ಸದರಿ ಜಾಗದಲ್ಲಿ ಪ್ರೆಸ್ ಮೀಟ್ ಮಾಡುವ ಬಗ್ಗೆ ಚರ್ಚಿಸಲಾಯಿತು. ಎಲ್ಲರೂ ಅದಕ್ಕೆ ಒಪ್ಪಿಗೆಯನ್ನು ಸೂಚಿಸಿ ಅಧ್ಯಕ್ಷರ ತೀರ್ಮಾನಕ್ಕೆ ಬಿಡಲಾಯಿತು. ಬರುವ 2025 ಹೊಸ ವರ್ಷದಲ್ಲಿ KWJVOICE ಸಂಘದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲು ಮತ್ತು ಪ್ರೆಸ್ ನೋಟ್ ಸ್ವೀಕರಿಸಲು ಒಪ್ಪಿಗೆ ಪಡೆಯಲಾಯಿತು. ಸಭೆಯು ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರು ಮಾತನಾಡಿ ಸಂಘದ ಬಲವರ್ಧನೆಗೆ ಮತ್ತು ಅಭಿವೃದ್ಧಿಗೆ ಹಾಗೂ ಮುಂದಿನ ಸಂಘದ ಕಾರ್ಯಚಟುವಟಿಕೆ ಬಗ್ಗೆ ಸಹಕರಿಸುವಂತೇ ಮತ್ತು ತಮ್ಮ ಸಲಹೆಗಳನ್ನು ನೀಡುವಂತೆ ಕೋರಿದರು. ಈಗಾಗಲೇ ಹಲವು ಸದಸ್ಯರಿಗೆ ಐಡಿ ಕಾರ್ಡ್ ನೀಡಿದ್ದು,ಹೊಸದಾಗಿ 50 ಕ್ಕೂ ಹೆಚ್ಚು ಸದಸ್ಯರು ನೊಂದಣಿಗೆ ಅರ್ಜಿ ಸಲ್ಲಿಸಿದ್ದು ಪರಿಶೀಲಿಸಿ ಐಡಿ ಕಾರ್ಡ್ ನೀಡಲು ಒಪ್ಪಿಗೆ ಪಡೆಯಲಾಯಿತು. ಈ ಸಭೆಯಲ್ಲಿ ಉಪಾಧ್ಯಕ್ಷರಾದ ಚಿತ್ರಪ್ಪ ಯರಬಾಳ,ಪ್ರಧಾನ ಕಾರ್ಯದರ್ಶಿ ಡಿ.ಪಿ.ಅರವಿಂದ್,ಕಾರ್ಯದರ್ಶಿ R.V.ಕ್ರೃಷ್ಣ,ಸಹಕಾರ್ಯದರ್ಶಿ ಶಿವರಾಜ್ ಬಿ.ಸಿ,ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ.ಎಂ,ಖಜಾಂಚಿ ಸತೀಶ್ ಗೌಡ ಕೆ.ಎಂ,ಮತ್ತು ನಿರ್ದೇಶಕರಾದ ನಂದನ್ ಕುಮಾರ್ ಸಿಂಗ್,ಲಿಯೋ ಅರೋಜ,ಲಕ್ಷ್ಮಣಕುಮಾರ್ ಉದಾವತ್,ಹೆಚ್.ಎಸ್.ವಿಷ್ಣುಪ್ರಸಾದ್, ಭರದ್ವಾಜ್ ಯು.ಎಸ್,ಸುರೇಶ್ ಬಿ.ಎ,ಗಿರೀಶ್ ಬಿ.ಎಸ್. ಷಡಾಕ್ಷರಪ್ಪ ಜಿ.ಆರ್ ಉಪಸ್ಥಿತರಿದ್ದರು.
ಪ್ರತಿಷ್ಠಾನಕ್ಕೆ ಡಾ.ರಮೇಶ ಕತ್ತಿ ನೇಮಕ
ಆಲಮೇಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುವ ಹಲಸಂಗಿ ಗೆಳೆಯರ ಟ್ರಸ್ಟ್ ನ ಸದಸ್ಯರಾಗಿ ಪಟ್ಟಣದ ಸಾಹಿತಿ ಡಾ.ರಮೇಶ ಕತ್ತಿ ನೇಮಕವಾಗಿದ್ದರೆ.
ಈ ಟ್ರಸ್ಟ್ ನಲ್ಲಿ ಅಧ್ಯಕ್ಷರಾಗಿ ವಿಜಯಪೂರ ಜಿಲ್ಲಾಧಿಕಾರಿ, ಸದಸ್ಯರಾಗಿ ಪುಲಿಕೇಶಿ ಪುರುಷೋತ್ತಮ ಗಲಗಲಿ, ಡಾ.ವಿ.ಡಿ.ಐಹೋಳ್ಳಿ, ಬಿ.ಆರ್.ಬನಸೋಡೆ, ಶ್ರೀಮತಿ ದ್ರಾಕ್ಷಾಯಣಿ ರಮೇಶ ಬಿರಾದಾರ, ರಮೇಶ ಕತ್ತಿ ಮತ್ತು ಸದಸ್ಯ ಕಾರ್ಯದರ್ಶಿಯಾಗಿ ವಿಜಯಪೂರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ನೇಮಕರಾಗಿದ್ದಾರೆ. ಉಮೇಶ ಕ್ಷತ್ರಿ ರಾಜು ವಡ್ಡರ. ಭೋಗಪ್ಪ ಪಾತ್ರೊಟಿ. ಬಸವರಾಜ್ ಕಂಬಾರ ವಿವೇಕಾನಂದ ಕಲಶಟ್ಟಿ ಶುಭ ಕೋರಿದರು
ವರದಿ.ಉಮೇಶ ಕಟಬರ
ಶ್ರೀ ಪೇಟೆ ಆಂಜನೇಯ ಸ್ವಾಮಿ ಯುವಕರ ಬಳಗದ ವತಿಯಿಂದ ಮೂರನೇ ವರ್ಷದ ಹನುಮ ಜಯಂತೋತ್ಸವ
ಸಾಲಿಗ್ರಾಮ ಪಟ್ಟಣದಲ್ಲಿ ಶ್ರೀ ಪೇಟೆ ಆಂಜನೇಯ ಸ್ವಾಮಿ ಯುವಕರ ಬಳಗದ ವತಿಯಿಂದ ಮೂರನೇ ವರ್ಷದ ಹನುಮ ಜಯಂತೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಜಯಂತೋತ್ಸವದ ಅಂಗವಾಗಿ ಪಟ್ಟಣದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದಿಂದ ತೆರೆದ ವಾಹನಗಳಲ್ಲಿ ಗ್ರಾಮದ ಉತ್ಸವ ಮೂರ್ತಿ, ಶ್ರೀ ಆಂಜನೇಯಸ್ವಾಮಿ, ಶ್ರೀರಾಮ, ಕೃಷ್ಣರುಕ್ಮಿಣಿ, ಈಶ್ವರ, ಪುನೀತ್ ರಾಜ್ ಕುಮಾರ್ ಅವರುಗಳ ಸ್ತಬ್ಧ ಚಿತ್ರಗಳನ್ನು ಅಲಂಕಾರ ಗೊಳಿಸಿ ವಿವಿಧ ಕಲಾತಂಡಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.
ಪಟ್ಟಣದ ಪೇಟೆ ಬಾಗಿಲಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಕಾರ್ಯಕ್ರಮಕ್ಕೆ ಮಾಜಿ ಸಚಿವ ಸಾ ರಾ ಮಹೇಶ್. ಹಾಲಿ ವಿಧಾನ ಪರಿಷತ್ ಸದಸ್ಯರಾದ ಎಚ್ ವಿಶ್ವನಾಥ್, ಮಂಜೇಗೌಡ ನೀಡಿದರು.

ನಂತರ ಮಾತನಾಡಿದ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು ಯಾವುದೇ ಜಾತಿಗೆ ಸೀಮಿತವಾಗದೆ ಸರ್ವದರ್ಮೀಯರು ಒಟ್ಟಿಗೆ ಸೇರಿ ಹನುಮ ಜಯಂತಿ ಆಚರಣೆ ಮಾಡುತ್ತಿರುವುದು ಉತ್ತಮ ಸಾಮರಸ್ಯ ವಾತಾವರಣ ನಿರ್ಮಾಣಕ್ಕೆ ನಾಂದಿ ಹಾಡಿದೆ ಎಂದರು. ಮಾಜಿ ಸಚಿವ ಸಾರಾ ಮಹೇಶ್ ಅವರು ಮಾತನಾಡಿ ದೇವನೊಬ್ಬ ನಾಮ ಹಲವು ನಾವು ಈಶ್ವರ ಎಂದರೆ ಮುಸಲ್ಮಾನ್ ಬಾಂಧವರಿಗೆ ಅಲ್ಲಾ ಎನ್ನುತ್ತಾರೆ ಹಾಗೆ ಕ್ರಿಶ್ಚಿಯನ್ ಧರ್ಮದವರು ಎಸು ಎನ್ನುತ್ತಾರೆ ಸಾಲಿಗ್ರಾಮ ಗ್ರಾಮದಲ್ಲಿ 3 ನೇ ವರ್ಷದ ಜಯಂತೋತ್ಸವ ಆಚರಣೆ
ಹನುಮ ಜಯಂತೋತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಗಳೆಲ್ಲವೂ ಕೇಸರಿ ಬಂಟಿಂಗ್ಸ್ ಗಳು ರಾರಾಜಿಸುತ್ತಿದ್ದವು. ಹನುಮನ ಮೂರ್ತಿಯನ್ನು ಚುಂಚನಕಟ್ಟೆ ಮುಖ್ಯ ರಸ್ತೆ. ಗಾಂಧಿ ವೃತ್ತ. ಬಸ್ ಸ್ಟ್ಯಾಂಡ್ ರಸ್ತೆ. ರಾಮನಾಥಪುರ ರಸ್ತೆ. ಮಹಾವೀರ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಭಾಗವಹಿಸಿದ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣಾ ಕಾರ್ಯವನ್ನು ಮಾಡಲಾಯಿತು.
ಮಹಿಳೆಯರು ಕುಟುಂಬ ಸಮೇತರಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆಯನ್ನು ಸಲ್ಲಿಸಿದರು. ನಂತರ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಅನ್ನದಾಸೋಹಕ್ಕೆ ತೆರಳಿ ಪಂಕ್ತಿ ಭೋಜನ ಪ್ರಸಾದ ಸ್ವೀಕರಿಸಿದರು.
ವಿಎಸ್ ಎಸ್ ಎನ್ ಅಧ್ಯಕ್ಷರಾದ ಸತೀಶ್, ನಾಗೇಂದ್ರ ಮುಖಂಡರಾದ ಎಸ್ ಪಿ ಆನಂದ್ ಲಾಲೂ ಸಾಹೇಬ್ ಗ್ರಾಂ ಪಂ ಮಾಜಿ ಅಧ್ಯಕ್ಷರಾದ ಎಸ್ ವಿ ನಟರಾಜ್ ಎಸ್ ಆರ್ ಪ್ರಕಾಶ್ ದೇವಿಕಾ ಸುಧಾರೇವಣ್ಣ ಸದಸ್ಯರಾದ ನೀಲಮ್ಮ ವಾಹನ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಹನುಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಪೇಟೆ ಆಂಜನೇಯ ಸ್ವಾಮಿ ಯುವಕರ ಬಳಗದವರು, ಜನಪ್ರತಿನಿಧಿಗಳು, ಮುಖಂಡರು, ಮಹಿಳೆಯರು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು
ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಮನವಿ
ಕುಂದಾ ನಗರಿ ಬೆಳಗಾವಿ ಜಿಲ್ಲೆಯ ಚಳಿಗಾಲ ಅಧಿವೇಶನ ನಡೆದ ಸಂದರ್ಭದಲ್ಲಿ ಸುವರ್ಣಾ ಸೌಧದ ಮುಂಭಾಗದ ಸುವರ್ಣಾ ಗಾರ್ಡನ್ ಟೆಂಟ್ ನಂಬರ್ ಆರ ರಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ನಡೆದ ಧರಣಿ ಪ್ರತಿಭಟನೆಯ ಹೋರಾಟದಲ್ಲಿ ಗ್ರಾಮಾಂತರ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ನ ಪ್ರಸ್ತುತ ಸರ್ಕಾರ ಹೊರಡಿಸಿರುವ ಕರಾಳ ಆದೇಶದ ಮಾನದಂಡನೆಗಳನ್ನು ಸರಳಿಕರಿಸಬೇಕು, ಪತ್ರಕರ್ತರ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಲೇಬೇಕು, ಇತರರ ಹಾಗೆ ಇನ್ನೀತರ ಮೂಲ ಸೌಕರ್ಯಗಳ ಬೇಡಿಕೆಗಳನ್ನು ಈಡೇರಿಸಲೇಬೇಕು ಎಂದು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯವರ ಬೇಡಿಕೆಯಾಗಿದ್ದು, ಸರ್ಕಾರದ ಪ್ರತಿನಿಧಿಯಾಗಿ ಮನವಿ ಸ್ವೀಕರಿಸಲು ಬಂದಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಶಿವರಾಜ್ ತಂಗಡಗಿ, ಯವರಿಗೆ ಕಾರ್ಯನಿರತ ಪತ್ರ ಕರ್ತರ ದ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ ಬಂಗ್ಲೆ ಮಲ್ಲಿಕಾರ್ಜುನರವರು ಹಾಗೂ ವಿವಿಧ ಜಿಲ್ಲೆ ಯ ಮತ್ತು ತಾಲೂಕುಗಳ ಅಧ್ಯಕ್ಷರು ಸದಸ್ಯರು ಸಹಭಾಗಿತ್ವದಲ್ಲಿ ಬೇಡಿಕಿಗೆ ಒಂದು ತಿಂಗಳ ಗಡುವು ಸರ್ಕಾರಕ್ಕೆ ನೀಡಿ ಮನವಿ ಸಲ್ಲಿಸಲಾಯಿತು,
ವರದಿ ರಾಮಚಂದ್ರ ಹ ಕುಕಡಿ ರಾಮದುರ್ಗ
ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ 2024-25 ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರ
ಡಿ.ವಿ.ಎಸ್ ಸಂಜೆ ಕಾಲೇಜು ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ 2024-25 ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಮಲೇಶಂಕರ ಗ್ರಾಮದಲ್ಲಿ ದಿನಾಂಕ 12-12-24 ರಿಂದ18-12-24 ರವರೆಗೆ ನಡೆಯದಿದ್ದು ಇದರ ಉದ್ಘಾಟನ ಕಾರ್ಯಕ್ರಮವನ್ನು ದಿನಾಂಕ 17-18-24 ಮಂಗಳವಾರ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀ ಸಂತೋಷ್ ಎಂ.ಎಸ್.ಬಿಎ ಎಲ್ಎಲ್.ಬಿ (ಹಾನರ್ಸ )
ಎಲ್ ಎಲ್. ಎಂ. ಹಿರಿಯ ಸಿವಿಲ್ ನ್ಯಾಯಾಧೀಶರು ,ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ. ಇವರು ಭಾಗವಹಿಸಿ ಕಾನೂನು ಅರಿವು-ನೆರವು ವಿಷಯದ ಕುರಿತು ಉಪನ್ಯಾಸ ನೀಡಿದರು.
ಮತ್ತೊರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಸಿದ್ದಲಿಂಗರೆಡ್ಡಿ ,ಕ.ಆ.ಸೆ (ಹಿರಿಯ ಶ್ರೇಣಿ) ಅಪರ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಗಳು ಶಿವಮೊಗ್ಗ,ಇವರು ಭಾಗವಹಿಸಿ ಮಲೆಶಂಕರ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡುವುದಾಗಿ ತಿಳಿಸಿದರು..ಕಾರ್ಯಕ್ರಮದಲ್ಲಿ ಶ್ರೀ ದೇವೆಂದ್ರಪ್ಪ ಹಾಗೂ ಶ್ರೀ ಸಚಿನ್, ಕಾನೂನು ಸಹಾಯಕರು ಇವರು ಉಪಸ್ಥಿತರಿದ್ದರು..ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಹಾಲಪ್ಪ ಎಂ.ಜೆ ಸದಸ್ಯರು ದೇವಸ್ಥಾನ ಮುಜರಾಯಿ ಸಮಿತಿ,ಮಲೆಶಂಕರ ಇವರು ವಹಿಸಿಕೊಂಡಿದ್ದರು ಗ್ರಾಮಸ್ಥರ ಪರವಾಗಿ ಶ್ರೀ ಶಂಕರಮೂರ್ತಿ, ಜಿಲ್ಲಾ ಕೋರ್ ಕಮಿಟಿ ಸದಸ್ಯರು,ಮಾನವ ಹಕ್ಕುಗಳ ಆಯೋಗ ಶಿವಮೊಗ್ಗ ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಕುವೆಂಪು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸಂಯೋಜನಾ ಅಧಿಕಾರಿ ಆದಂತಹ ಡಾ. ಶುಭಾ ಮರವಂತೆ ರವರು ಆಗಮಿಸಿ ಶಿಬಿರಾರ್ಥಿಗಳ ಮತ್ತು ಶಿಬಿರದ ಮಹತ್ವ ಕುರಿತು ಮಾಹಿತಿ ನೀಡಿದರು ,ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ಪ್ರೊ ಎ.ಟಿ.ಪದ್ಮೇಗೌಡ .. ಪ್ರಾಂಶುಪಾಲರು ಡಿವಿಎಸ್ ಸಂಜೆ ಕಾಲೇಜು ಶಿವಮೊಗ್ಗ ಇವರು ನೆರವೆರಿಸಿದರು ..ಕಾರ್ಯಕ್ರಮದಲ್ಲಿ ಡಿವಿಎಸ್ ಸಂಜೆ ಕಾಲೇಜು ವತಿಯಿಂದ ಶ್ರೀ ಸುರೇಶ್,ಮನು.ಎಸ್ ಮೂರ್ತಿ, ಶ್ರೀಮತಿ ವೀಣಾ ಹಾಗೂ ಮಂಜುನಾಥ್ ಉಪಸ್ಥಿತರಿದ್ದರು,ಕಾರ್ಯಕ್ರಮದ ನಿರೂಪಣೆಯನ್ನು ಮಧುಸೂದನ್ ರವರು ಹಾಗೂ ಸ್ವಾಗತ ಕಾರ್ಯಕ್ರಮವನ್ನ ಮಂಜಪ್ಪ ಜಿ ಕೆ.ಎನ್ ಎಸ್ ಎಸ್ ಅಧಿಕಾರಿಗಳು ಇವರು ಮಾಡಿದರು .ಸಫಿವುಲ್ಲಾ ಶಿಬಿರಾರ್ಥಿ ಇವರು ಗಣ್ಯರನ್ನು ವಂದಿಸಿದರು..
ಡಾ|| ಜಿ ಮುನಿರಾಜು ಮತ್ತು ಆದೂರು ಪ್ರಕಾಶ್ ರವರು ಸಾಹಿತ್ಯ ಸಮ್ಮೇಳನಕ್ಕೇ ಹೊರಡುವ ಬಸ್ಸಿಗೆ ಚಾಲನೆ ನೀಡಿದರು
ಆನೇಕಲ್ ತಾಲ್ಲೂಕಿನ ಕನ್ನಡ ಭಾಷೆ, ಸಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗುವ ಸಲುವಾಗಿ ಕೂಡಲೇ ಕನ್ನಡಭವನ ನಿರ್ಮಿಸಬೇಕಾದ ಅಗತ್ಯವಿದೆ ಎಂದು ಶಿಕ್ಷಣ ತಜ್ಞ ಜಿ.ಮುನಿರಾಜು ರವರು ತಿಳಿಸಿದರು.
ಮಂಡ್ಯದಲ್ಲಿ ನಡೆಯುತ್ತಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಆನೇಕಲ್ ತಾಲ್ಲೂಕು ಕನ್ನಡಾಭಿಮಾನಿಗಳಿಗಾಗಿ ಕೆ.ಎಸ್.ಆರ್.ಟಿ.ಸಿ ಸಾರಿಗೆ ಇಲಾಖೆಯಿಂದ ಆಯೋಜಿಸಿರುವ ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು.
ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹಾಗೆಯೇ, ನಮ್ಮ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಧ್ಯಕ್ಷರಾದ ಎನ್.ಲೋಕೇಶ್ ಗೌಡ ಅವರು ಹೇಳಿದರು.
ಈಗಾಗಲೇ ಶಾಸಕ ಬಿ.ಶಿವಣ್ಣ ಅವರು ಕನ್ನಡಭವನ ನಿರ್ಮಾಣಕ್ಕೆ ಆಸಕ್ತಿ ತೋರಿದ್ದಾರೆ. ಅದನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕನ್ನಡ ಸಂಘ-ಸಂಸ್ಥೆಗಳು ಒತ್ತಡ ಹಾಕಬೇಕಿದೆ. ಇದರ ಜೊತೆಗೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯವಾದ ಜಾಗವನ್ನು ಗುರುತಿಸಬೇಕಾಗಿದೆ ಎಂದು ಅವರು ಹೇಳಿದರು.
ಕನ್ನಡ ಭಾಷೆಯನ್ನು ಕೇವಲ ನವೆಂಬರ್ಗೆ ಸೀಮಿತಗೊಳಿಸಬಾರದು. ನಿಸಾರ ಅಹಮ್ಮದ್ ಅವರ ನಿತ್ಯೋತ್ಸವದಂತೆ ನಿತ್ಯವಾಗಿರಬೇಕು. ಕನ್ನಡ ನಾಡು ನುಡಿ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ತಬಲಾ ಮಂಜು ರವರು ಹೇಳಿದರು
ಚುಟುಕು ಶಂಕರ್ ರವರು ಮಾತನಾಡಿ ಪುಸ್ತಕ ಓದುವ ಗೀಳು ಬೆಳೆಸಿಕೊಳ್ಳಬೇಕು. ಓದುವ ಪ್ರವೃತ್ತಿ ಹೆಚ್ಚಿಸುವ ಸಾಹಿತ್ಯ ಇನ್ನಷ್ಟು ಮೂಡಿಬರಲಿ ಎಂದು ಹೇಳಿದರು.
ಇನ್ನೂ ಈ ಕಾರ್ಯಕ್ರಮದಲ್ಲಿ ಎಲೈಟ್ ಅಕಾಡೆಮಿ ಜಿ.ಎಮ್.ಆರ್ ಮುನಿರಾಜು ರವರು, ಆನೇಕಲ್ ತಾಲ್ಲೂಕು ಅಧ್ಯಕ್ಷ ಆದೂರು ಪ್ರಕಾಶ್, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷರಾದ ಲೋಕೇಶ್ಗೌಡ, ತಬಲ ಮಂಜು, ಚುಟುಕು ಶಂಕರ್, ಅಪ್ಸರ್ ಅಲಿಖಾನ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಮತ್ತಿತರರು ಹಾಜರಿದ್ದರು.
ವರದಿ :- ನಾಗರಾಜ್ ಪದ್ಮಶಾಲಿ
ವಿವಿಧ ಗ್ರಾ.ಪಂ ಉಪ ಚುನಾವಣೆ | ನೂತನ ಸದಸ್ಯರ ಹೆಸರು ಪ್ರಕಟ : ಜಿಲ್ಲಾಧಿಕಾರಿ ಟಿ. ಭೂಬಾಲನ್
ವಿಜಯಪುರ : ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಹೊಸದಾಗಿ ಆಯ್ಕೆಯಾದ ಗ್ರಾಮ ಪಂಚಾಯತಿ ಸದಸ್ಯರ ಹೆಸರುಗಳನ್ನು ಗ್ರಾಮ ಪಂಚಾಯತಿಯ ಕ್ಷೇತ್ರವಾರು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪ್ರಕಟಿಸಿದ್ದಾರೆ. ನಿಡಗುಂದಿ ತಾಲೂಕಿನ ಆಲಮಟ್ಟಿ ಪಂಚಾಯತಿಯ ಅರಳದಿನ್ನಿ ಕ್ಷೇತ್ರಕ್ಕೆ (ಅನುಸೂಚಿತ ಜಾತಿ) ನಿಜವ್ವ ಪರಸಪ್ಪ ಮಾದರ, ಚಿಮ್ಮಲಗಿ ಪು.ಕೆ. ಕ್ಷೇತ್ರದಿಂದ (ಅನುಸೂಚಿತ ಜಾತಿ) ಸೀತವ್ವ ಹಣಮಂತ ಭಜಂತ್ರಿ ಅವರು ಆಯ್ಕೆಯಾಗಿದ್ದಾರೆ.
ಇಂಡಿ ತಾಲೂಕಿನ ಸಾಲೋಟಗಿ ಕ್ಷೇತ್ರದಿಂದ (ಸಾಮಾನ್ಯ ಮಹಿಳೆ) ಸಾವಿತ್ರಿ ರಾವುತರಾಯ ಬಗಲಿ ಹಾಗೂ ಖೇಡಗಿ ಕ್ಷೇತ್ರದಿಂದ (ಹಿಂದುಳಿದ ವರ್ಗ ಅ (ಮಹಿಳೆ)) ಪ್ರಿಯಾಂಕ ಈ.ವಾಲಿಕಾರ, ಬಸವನಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮ ಪಂಚಾಯತಿಯ ನಾಗರಾಳಹುಲಿ ಕ್ಷೇತ್ರದಿಂದ (ಹಿಂದುಳಿದ ವರ್ಗ ಬ (ಮಹಿಳೆ)) ಸರೋಜಿನಿ ನಿಂಗಣ್ಣ ಹೇರಾನವರ, ಮುತ್ತಗಿ ಕ್ಷೇತ್ರದಿಂದ (ಸಾಮಾನ್ಯ) ಶಾಂತವ್ವ ಬ.ದೇವಣಗಾಂವಿ ಹಾಗೂ ಬ್ಯಾಕೋಡ ಗ್ರಾಮ ಪಂಚಾಯತಿಯ ಜಾಯವಾಡಗಿ ಕ್ಷೇತ್ರದಿಂದ (ಅನುಸೂಚಿತ ಜಾತಿ) ಬಸಪ್ಪ ಮರೆಪ್ಪ ಚಲವಾದಿ ಅವರು ಆಯ್ಕೆಯಾಗಿದ್ದಾರೆ.
ಬಬಲೇಶ್ವರ ತಾಲೂಕಿನ ಬೋಳಚಿಕ್ಕಲಕಿ ಗ್ರಾಮ ಪಂಚಾಯತಿಯ ಕಾತ್ರಾಳ ಕ್ಷೇತ್ರದಿಂದ (ಹಿಂದುಳಿದ ವರ್ಗ ಬ) ಮಲ್ಲಯ್ಯ ಕಾಡಯ್ಯ ಮಠಪತಿ, ವಿಜಯಪುರ ತಾಲೂಕಿನ ಕನ್ನೂರ ಕ್ಷೇತ್ರದಿಂದ (ಸಾಮಾನ್ಯ) ಈಸಾಕಸಾಬ ಬುಡನಸಾಬ ಜಮಾದಾರ, ನಾಗಠಾಣ ಕ್ಷೇತ್ರದಿಂದ (ಹಿಂದುಳಿದ ವರ್ಗ ಅ) ನಂದಾ ಸಿದ್ದಪ್ಪ ಕತ್ನಳ್ಳಿ, ಜುಮನಾಳ ಕ್ಷೇತ್ರದಿಂದ (ಸಾಮಾನ್ಯ) ಹಣಮಂತ ಶ್ರೀಶೈಲ ಸಾಹೇಬಗೊಂಡ ಹಾಗೂ ಹೊನಗನಹಳ್ಳಿ ಕ್ಷೇತ್ರದಿಂದ (ಸಾಮಾನ್ಯ) ಮಾರತಪ್ಪ ಭೀಮಪ್ಪ ದಿನ್ನಿ ಅವರು ಆಯ್ಕೆಯಾಗಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಕ್ಷೇತ್ರದಿಂದ ಹಿಂದುಳಿದ ವರ್ಗ-ಬ (ಮಹಿಳೆ) ಶಾಂತಾ ವಿರೇಶ ಮದರಿ, ತಾಳಿಕೋಟೆ ತಾಲೂಕಿನ ಹಿರೂರ ಪಂಚಾಯತಿಯ ತಮದಡ್ಡಿ ಕ್ಷೇತ್ರದಿಂದ (ಸಾಮಾನ್ಯ (ಮಹಿಳೆ)) ಅನ್ನಪೂರ್ಣ ಬಸವರಾಜ ಕನಕರಡ್ಡಿ, ಚಡಚಣ ತಾಲೂಕಿನ ಲೋಣಿ ಬಿ.ಕೆ.ಕ್ಷೇತ್ರದಿಂದ (ಸಾಮಾನ್ಯ (ಮಹಿಳೆ)) ಸುಧಾರಾಣಿ ಅಶೋಕ ಮಾಳಾಬಗಿ ಹಾಗೂ ಹತ್ತಳ್ಳಿ ಕ್ಷೇತ್ರದಿಂದ (ಹಿಂದುಳಿದ ವರ್ಗ ಅ (ಮಹಿಳೆ)) ಭವರಮ್ಮ ಧರೆಪ್ಪ ಬಿರಾದಾರ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಯಮನಪ್ಪ ಚೌಧರಿ
ಪ್ರವಾಸಕ್ಕೆ ಬಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಮಕ್ಕಳಿಗೆ ಗಾಯ
ಹೊನ್ನಾವರ :-ಕೋಲಾರ ಜಿಲ್ಲೆ ಮಾಲೂರ್ ತಾಲೂಕ ಮಾಸ್ತಿಹಳ್ಳಿಯ ಕರ್ನಾಟಕ ಪ್ರೌಢಶಾಲೆಯ ಶಾಲಾ ಮಕ್ಕಳ ಖಾಸಗಿ ಬಸ್ ಉತ್ತರಕನ್ನಡ ಜಿಲ್ಲಾ ಪ್ರವಾಸ ಮುಗಿಸಿಕೊಂಡು ಗೋಕರ್ಣದಿಂದ ಪುನ್ಹ ಕೋಲಾರಕ್ಕೆ ಹೋಗುವಾಗ ರಾತ್ರಿ 12 ಗಂಟೆ ಸುಮಾರಿಗೆ ಎರಡು ಬಸ್ ಗಳ ಪೈಕಿ ಒಂದು ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದೆ ಬಸ್ ನಲ್ಲಿ ಇದ್ದ 40 ಶಾಲಾ ಮಕ್ಕಳ ಪೈಕಿ 34 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶಿಕ್ಷಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಹೊನ್ನಾವರ ತಾಲೂಕ ಆಸ್ಪತ್ರೆಗೆ ಪೊಲೀಸ್ ಮತ್ತು ಸ್ಥಳೀಯರ ಸಹಕಾರದೊಂದಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮತ್ತು ಗಂಭೀರ ಗಾಯಗೊಂಡ ನಾಲ್ವರು ವಿದ್ಯಾರ್ಥಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ
ಪರಿಶಿಷ್ಟ ಪಂಗಡ ಸ್ಥಾನ, ಮೀಸಲಾತಿಗೆ ಹಡಪದ ಅಪ್ಪಣ್ಣ ಸಮಾಜದ ಆಗ್ರಹ
ಬೆಳಗಾವಿ: ಲಿಂಗಾಯತರು ಎಂಬ ಹಣೆಪಟ್ಟಿ ಕಟ್ಟಿ ಮೀಸಲಾತಿ ಆದೇಶದಲ್ಲಿ ತಮ್ಮನ್ನು ಮುಂದುವರೆದ ಜಾತಿಗಳಿರುವ ೩ಬಿ ಪ್ರವರ್ಗಕ್ಕೆ ಸೇರಿಸಿದ್ದಾರೆ. ಈ ತಾರತಮ್ಯ ನಿವಾರಿಸಿ, ತಮ್ಮ ಕ್ಷೌರಿಕ ಕುಲಕಸಬು ಆಧರಿಸಿ ತಮ್ಮನ್ನು ಪರಿಶಿಷ್ಟ ಪಂಗಡ (ST) ಕ್ಕೆ ಸೇರಿಸಬೇಕು ಎಂದು ಹಡಪದ ಅಪ್ಪಣ್ಣ ಸಮಾಜ ಆಗ್ರಹಿಸಿದೆ.
ಇತ್ತೀಚೆಗೆ ನಗರದಲ್ಲಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ನೂರಾರು ಜನ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಮತ್ತು ನಮ್ಮ ಹಡಪದ ಅಪ್ಪಣ್ಣ ಸಮಾಜದ ಹೋರಾಟದಲ್ಲಿ ಭಾಗವಹಿಸಿದರ ಕಾಂಗ್ರೆಸ್ ಶಾಸಕರು. ಸಚಿವರು. ಹಾಗೂ ಬಿಜೆಪಿಯ ಶಾಸಕರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸಿ ಅತ್ಯಂತ್ಯ ಹಿಂದುಳಿದ ಸಮಾಜವಾದ ಹಡಪದ (ಕ್ಷೌರಿಕ) ಸಮಾಜವನ್ನು ಮುಖ್ಯವಾಹಿನಿಗೆ ತರಬೇಕೆಂದು ವಿನಂತಿಸಿಕೊಂಡರು.
ತಂಗಡಗಿಯ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಶ್ರೀ ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು
ಮನವಿ ಪತ್ರಕ್ಕೆ ಸಹಿ ಮಾಡಿ, ಹೋರಾಟಕ್ಕೆ ನೇತೃತ್ವ ನೀಡಿದರು.
ಹಡಪದ ಅಪ್ಪಣ್ಣ ಸಮಾಜ ಸಂಘದ ರಾಜ್ಯಾಧ್ಯಕ್ಷ ಸಿದ್ದಪ್ಪ ಮ. ಹಡಪದ, ರಾಜ್ಯ ಉಪಾಧ್ಯಕ್ಷ ಸಂತೋಷ ಈ ಹಡಪದ, ಕಾರ್ಯಾಧ್ಯಕ್ಷ ನಾಗರಾಜ ಸರ್ಜಾಪುರ, ಬಸವರಾಜ ಹಡಪದ ಸುಗೂರ ಎನ್. ಮತ್ತು ಪಿ.ಹಾಲಪ್ಪ, ಮಂಜಪ್ಪ ಮ. ಹಡಪದ, ಈರಣ್ಣ ಹಡಪದ ಸಣ್ಣೂರ, ಹಾಗೂ ಈರಣ್ಣ ಚಿಕ್ಕಬೆಳಕಟ್ಟಿ. ಹೆಚ್.ಮಹಾಂತೇಶ ಹಡಪದ, ಕಾನೂನು ಸಲಹೆಗಾರಾದ ನಾಗರಾಜ ಸಿ. ಕಾಯಕದ, ರಮೇಶ ಎ. ಹಡಪದ ಮಲಕೂಡ, ಖಜಾಂಚಿ ಸುರೇಶ ಹಡಪದ ಕಿತ್ತೂರ, ನಾ.ನಿ. ಉಪಾಧ್ಯಕ್ಷ ಸುರೇಶ ಎ. ಹಡಪದ, ಸಂಘಟನಾ ಕಾರ್ಯದರ್ಶಿ ಹೊ.ಚಿದಾನಂದ ಜಯಣ್ಣ ಮತ್ತು ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ಹೋರಾಟದಲ್ಲಿ ಭಾಗವಹಿಸಿದ್ದರು.
ಮನವಿ ಪತ್ರದಲ್ಲಿ ಇರುವ ಇತರ ಬೇಡಿಕೆಗಳು
೧) “ಕರ್ನಾಟಕ ಹಡಪದ ಅಭಿವೃದ್ಧಿ ನಿಗಮ” ವನ್ನು ಆದೇಶ ಮಾಡಿದ್ದಾರೆ. ನಿಗಮವನ್ನು ಜಾರಿಗೆ ತರಬೇಕು ಹಾಗೂ ೫೦ ಕೋಟಿ ಅನುದಾನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು. ನಿಗಮಕ್ಕೆ ನಮ್ಮವರನ್ನೇ ಅಧ್ಯಕ್ಷರು ಮತ್ತು ಸದಸ್ಯರನ್ನಾಗಿ ನೇಮಿಸಬೇಕು.
೨) ಮೀಸಲಾತಿಯಲ್ಲಿ ಆಗಿರುವ ತಾರತಮ್ಯ ನಿವಾರಿಸಬೇಕು. ಕುಲಕಸಬು ಆಧರಿಸಿ ನಮ್ಮನ್ನು ಪರಿಶಿಷ್ಟ ಪಂಗಡ (ST) ಕ್ಕೆ ಸೇರಿಸಬೇಕು.
೩) ತೆಗೆದುಹಾಕಲಾದ ನಾಯಿಂದ ಪದವನ್ನು ಪುನಃ ಪ್ರತಿಷ್ಠಾಪಿಸಲಬೇಕು.
೪) 2ಎ ಜಾತಿ ಪ್ರಮಾಣ ಪತ್ರವನ್ನು ನೀಡಲು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು.
೫) ‘ಹಜಾಮ’ ಪದ ಬಳಸುವವರ ಮೇಲೆ ಜಾತಿನಿಂದನೆ ಕಾನೂನು ಕೂಡಲೇ ಜಾರಿಗೆ ತರಬೇಕು.
೬) ಸಮಾಜದವರನ್ನು ವಿಧಾನಪರಿಷತ್ತಿಗೆ ನಾಮನಿರ್ದೇಶನ ಸದಸ್ಯರನ್ನಾಗಿಸಲು ಅವಕಾಶ ಕಲ್ಪಿಸಬೇಕು.
೭) ಶ್ರೇಷ್ಠ ವಚನಕಾರ ಶಿವಶರಣ ಹಡಪದ ಅಪ್ಪಣ್ಣನವರ ಜನ್ಮಸ್ಥಳ ಹಾಗೂ ವಚನಗಾರ್ತಿ ಶಿವಶರಣೆ ಹಡಪದ ಲಿಂಗಮ್ಮನವರ ಜನ್ಮಸ್ಥಳ ಮಸಬಿನಾಳ ಗ್ರಾಮ ದೇಗಿನಹಾಳ ಗ್ರಾಮ ಬಸವನ ಬಾಗೇವಾಡಿ ತಾಲೂಕ, ವಿಜಯಪುರ ಜಿಲ್ಲೆ ಇವುಗಳನ್ನು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇರಿಸಿ ಅಭಿವೃದ್ಧಿಪಡಿಸಬೇಕು.
೮) ಅದೇ ಪ್ರಕಾರ ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಬಸವಣ್ಣನವರ ಅರಿವಿನ ಗುಹೆ ಪಕ್ಕದಲ್ಲಿಯೆ ಇರುವ ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗುಹೆಯನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇರಿಸಿ ಅಭಿವೃದ್ಧಿ ಪಡಿಸಬೇಕು ಹಾಗೂ ನಾಮಫಲಕ ಅಳವಡಿಸಬೇಕು ಮತ್ತು ಪ್ರವಾಸೋಧ್ಯಮ ಕೇಂದ್ರಗಳನ್ನಾಗಿ ಮಾಡಬೇಕು. ಏಕೆಂದರೆ ಆಗಿನ ಸಮಕಾಲಿನ ಶಿವಶರಣರ ಗುಹೆಗಳನ್ನು ಅಲ್ಲಿನ ಪ್ರಾಧಿಕಾರದಲ್ಲಿ ಸೇರಿಸಿದ್ದು ಈ ಗುಹೆಯನ್ನು ಮಾತ್ರ ಬಿಟ್ಟಿದ್ದು ನಮ್ಮ ಸಮಾಜಕ್ಕೆ ನೋವಿನ ಸಂಗತಿಯಾಗಿದೆ.
೯) ಬಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕ ಶ್ರೀಕ್ಷೇತ್ರ ತಂಗಡಗಿಯ ಹಡಪದ ಅಪ್ಪಣ್ಣದೇವರ
ಮಹಾಸಂಸ್ಥಾನ ಮಠದ ಅಭಿವೃದ್ಧಿಗಾಗಿ ರೂ ೧೦ ಕೋಟಿ ಅನುದಾನವನ್ನು ಬಿಡುಗಡೆ ಮಾಡಬೇಕು.
೧೦) ಅತೀ ಹಿಂದುಳಿದ ಹಡಪದ ಸಮಾಜಕ್ಕೆ ಸರ್ಕಾರದಿಂದ ಕುಲಶಾಸ್ತ್ರೀಯ ಅಧ್ಯಯನವನ್ನು ಉತ್ತರ
ಕರ್ನಾಟಕದ ಯಾವುದಾದರು ಒಂದು ವಿಶ್ವವಿದ್ಯಾಲಯದಿಂದ ಒದಗಿಸಿಕೊಡಬೇಕು. ಅಧ್ಯಯನ
ಮಾಡಿಸಿ ನಮಗೆ ನ್ಯಾಯ ಒದಗಿಸಬೇಕು.
೧೧) ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ಅಧ್ಯಕ್ಷರಾದ ಶ್ರೀ ಕಾಂತರಾಜು ಅವರು
ತಯಾರಿಸಿದ ಜಾತಿಗಣತಿ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು. ಯಾವುದೇ ಸಂದರ್ಭದಲ್ಲಿ
ನಮ್ಮ ಜಾತಿಯನ್ನು ಮುಂದುವರೆದ ಲಿಂಗಾಯತರ ಪಟ್ಟಿಯಲ್ಲಿ ಸೇರಿಸಬಾರದು.
೧೨) ಈ ನಮ್ಮ ರಾಜ್ಯ ಹಡಪದ ಸಂಘಕ್ಕೆ ಬೆಂಗಳೂರು ಕೇಂದ್ರ ಸ್ಥಾನದಲ್ಲಿ ನಮ್ಮ ಬಡಮಕ್ಕಳಿಗೆ ಶಾಲಾ
ಕಾಲೇಜು, ಹಾಸ್ಟೇಲ್ ತೆರೆಯಲು ಮತ್ತು ಸಮುಧಾಯ ಭವನ ಸ್ಥಾಪಿಸಲು ೦೫ ಎಕರೆ ಭೂಮಿಯನ್ನು ನೀಡಬೇಕು. ಅದೇ ಪ್ರಕಾರ ಜಿಲ್ಲಾ ಕೇಂದ್ರಗಳಲ್ಲಿ ೦೩ ಎಕರೆ ಜಾಗೆಯನ್ನು ಹಾಗೂ ತಾಲೂಕಾ ಕೇಂದ್ರಗಳಲ್ಲಿ ೦೨ ಎಕರೆ ಜಾಗೆಯನ್ನು ನಮ್ಮ ಸಮಾಜದ ರಾಜ್ಯ ಮತ್ತು ಜಿಲ್ಲಾ ಮತ್ತು ತಾಲೂಕಾ ಸಂಘಗಳಿಗೆ ನೀಡಬೇಕು ಹಾಗೂ ಇದಕ್ಕೆ ಅನುದಾನ ನೀಡಬೇಕು.
೧೩) ಪ್ರತೀ ಜಿಲ್ಲೆ, ತಾಲೂಕು ಮತ್ತು ಹೋಬಳಿಗಳಲ್ಲಿ ನಮ್ಮ ಬಡ ಕ್ಷೌರಿಕರಿಗೆ ಅನುಕೂಲವಾಗಲು ಕ್ಷೌರಿಕ
ಕುಟೀರಗಳನ್ನು ಸರ್ಕಾರವೇ ೧೦’ x ೧೦’ ವಿಸ್ತೀರ್ಣದಲ್ಲಿ ಸ್ಥಾಪಿಸಿಕೊಡಬೇಕು.
ವರದಿ- ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್
