ಪಿಎಸ್ಐ ಹುದ್ದೆ ಆಯ್ಕೆ ಪರೀಕ್ಷೆಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಪ್ರಜ್ವಲ್ ನಾಯಕ ಹಿರೇಗುತ್ತಿ.
ಇತ್ತೀಚೆಗೆ ಜರುಗಿದ 402 ಪಿಎಸ್ಐ ಹುದ್ದೆಗಳಿಗೆ ಜರುಗಿದ ಆಯ್ಕೆ ಪರೀಕ್ಷೆ ಯಲ್ಲಿ 121 ನೇ ರ್ಯಾಂಕ ಗಳಿಸುವ ಮೂಲಕ ಉನ್ನತ ಶ್ರೇಣಿಯಲ್ಲಿ ಪ್ರಜ್ವಲ್ ವಿ. ನಾಯಕ .ಹಿರೇಗುತ್ತಿ. ಆಯ್ಕೆಯಾಗಿದ್ದಾನೆ.
ಈ ಮೊದಲು ಪ್ರಥಮವಾಗಿ ನಡೆದ 545 ಪಿಎಸ್ಐ ಹುದ್ದೆ ಆಯ್ಕೆ ಪರೀಕ್ಷೆಯಲ್ಲಿ 19 ನೇ ರ್ಯಾಂಕ ಪಡೆದು ಆಯ್ಕೆಯಾಗಿದ್ದನು.ನಂತರ ಕೆಲವು ತಿಂಗಳುಗಳ ಹಿಂದೆ ನಡೆದ ಮರು ಪರೀಕ್ಷೆಯಲ್ಲಿ 121 ನೇ ರ್ಯಾಂಕ ಪಡೆದು ಹುದ್ದೆಗೆ ಆಯ್ಕೆಯಾಗಿ ಈಗಾಗಲೆ ಕಾಗದ ಪತ್ರಗಳ ಪರಿಶೀಲನೆಯ ನಡೆದು ಕೆಲವೆ ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವ ನಿರೀಕ್ಷೆಯಲ್ಲಿದ್ದು ಅದರ ನಡುವೆ ಇನ್ನೊಂದು ಪರೀಕ್ಷೆಯಲ್ಲೂ ಸಹ ಉನ್ನತ ಶ್ರೇಣಿಯಲ್ಲಿ ಪಾಸಾಗಿರುವುದು ಅವನ ಸತತ ಪರಿಶ್ರಮದ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
POST
29 ರಂದು ಪಂ. ಷಡಕ್ಷರಿ ಗವಾಯಿ ಪುಣ್ಯಸ್ಮರಣೆ ಪ್ರಶಸ್ತಿ ಪ್ರದಾನ
ಕುಮಟಾ : ಪಂ. ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ಪಂ. ಷಡಕ್ಷರಿ ಗವಾಯಿ ಪುಣ್ಯಸ್ಮರಣೆ-2024 ಹಾಗೂ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಪ್ರದಾನ ಕಾರ್ಯಕ್ರಮ ಡಿ. 29ರಂದು ಕೂಜಳ್ಳಿ ಕುಳಿಹಕ್ಕಲಿನ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ಪಂ. ವಿನಾಯಕ ತೊರ್ವಿ ಅವರಿಗೆ ಈ ಬಾರಿ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ.
ದಿನವಿಡೀ ವೈವಿಧ್ಯಮಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಪಂ. ವಿನಾಯಕ ತೊರ್ವಿ, ಮುಂಬೈನ ಕೃಷ್ಣ ಭಟ್ಟ ಅವರ ಗಾಯನ, ಮುಂಬೈನ ರಾಜನ್ ಮಾಶೇಲ್ಕರ ಅವರ ವಯೋಲಿನ್, ಬಸವರಾಜ ಭಜಂತ್ರಿ ಹೆಡಿಗ್ಗೊಂಡ ಅವರ ಶಹನಾಯಿ ವಾದನ ಕಾರ್ಯಕ್ರಮ, ಬಾರ್ಕೂರಿನ ಇಂದಿರಾ ಎಂ. ಭಟ್ಟ, ವಿನಾಯಕ ಹೆಗಡೆ ಹಿರೇಹದ್ದ ಅವರ ಗಾಯನ, ಭಾರ್ಗವ ಭಟ್ಟ ಮತ್ತು ಅಜಯ ಹೆಗಡೆ ಅವರ ಬಾನ್ಸುರಿ-ಹಾರ್ಮೋನಿಯಂ ಜುಗಲ್ಬಂಧಿ ಕಾರ್ಯಕ್ರಮ ನಡೆಯಲಿದೆ. ತಬಲಾದಲ್ಲಿ ಗುಣವಂತೆಯ ಎನ್.ಜಿ. ಅನಂತಮೂರ್ತಿ, ಮುಂಬೈನ ಗುರುಶಾಂತ ಸಿಂಗ್, ಹೊಸಗದ್ದೆ ಮಹೇಶ ಹೆಗಡೆ, ಬೆಂಗಳೂರಿನ ಯೋಗೀಶ ಭಟ್ಟ, ಕಡತೋಕಾದ ವಿನೋದ ಭಂಡಾರಿ, ಹರಿಕೇರಿ ಗಣಪತಿ ಹೆಗಡೆ, ಅಂಸಳ್ಳಿ ಅಕ್ಷಯ ಭಟ್ಟ ಸಹಕರಿಸುವರು. ಕೂಜಳ್ಳಿ ಗೌರೀಶ ಯಾಜಿ, ವರ್ಗಾಸರದ ಅಜೇಯ ಹೆಗಡೆ ಸಂವಾದಿನಿ ಸಾಥ್ ನೀಡುವರು ಬೆಳಗ್ಗೆ 9 ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಪಂ.ಬಸವರಾಜ ಭಜಂತ್ರಿ, ಹೆಡಿಗ್ಗೊಂಡ, ಸ್ವರ ಸಂಗಮದ ಅಧ್ಯಕ್ಷ ಎಸ್.ಜಿ. ಭಟ್ಟ, ಷಡಕ್ಷರಿ ಗವಾಯಿ ಅಕಾಡೆಮಿ ಖಜಾಂಚಿ ಎಸ್.ಎನ್.ಭಟ್ಟ ಭಾಗವಹಿಸುವರು.‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿಯಿಂದ ‘ನೆನಪಿನೊಂದಿಗೆ ವಿಷ್ಣು ನಾಯ್ಕ’ ಕಾರ್ಯಕ್ರಮ.
ಪ್ರಶಸ್ತಿ ಪ್ರದಾನ:ಸಂಜೆ 4 ಗಂಟೆ ಷಡಕ್ಷರಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯದ್ದು, ಮೇರು ಗಾಯಕ ಬೆಂಗಳೂರಿನ ವಿನಾಯಕ ತೊರ್ವಿ ಅವರಿಗೆ ಪುರಸ್ಕಾರ ನೀಡಲಾಗುವುದು. ಪ್ರಾಧ್ಯಾಪಕ, ಗುಣವಂತೆಯ ಡಾ. ನರಸಿಂಹ ಪಂಡಿತ, ಉಡುಪಿ ಆಭರಣ ಗ್ರೂಪ್ನ ಸಂಧ್ಯಾ ಸುಭಾಷ ಕಾಮತ್, ಹುಬ್ಬಳ್ಳಿಯ ರಂಗನಾಥ ಕಮತರ, ವೇಲಾ ಟೆಕ್ನಾಲಾಟಿಸ್ನ ಗಿರೀಶ ಹೆಗಡೆ, ಲೆಕ್ಕ ಪರಿಶೋಧಕ ಸಚಿನ್ ಬಿ.ಆರ್. ಪಾಲ್ಗೊಳ್ಳುವರು. ಷಡಕ್ಷರಿ ಗವಾಯಿ ಅಕಾಡೆಮಿಯ ಅಧ್ಯಕ್ಷ ವಸಂತರಾವ್ ಅಧ್ಯಕ್ಷತೆ ವಹಿಸುವರು ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಆಶೀರ್ವಾದ ಪ್ರಾರ್ಥನ ಮಂದಿರವತಿಯಿಂದ ಗ್ರಾಂಡ್ ಕ್ರಿಸ್ಮಸ್
ಪವಿತ್ರ ಕ್ರಿಸ್ಮಸ್ ಹಬ್ಬದ ಅಂಗವಾಗಿ ಗಂಗಾವತಿಯ ಸಾಯಿನಗರದಲ್ಲಿನ ಆಶೀರ್ವಾದ ಪ್ರಾರ್ಥನ ಮಂದಿರ ಇವರ ವತಿಯಿಂದ ಗ್ರಾಂಡ್ ಕ್ರಿಸ್ಮಸ್ ಕಾರ್ಯಕ್ರಮ ಆಚರಿಸಲಾಯಿತುಇದೇ ಸಂದರ್ಭದಲ್ಲಿ ವಿಶೇಷ ಅತಿಥಿಗಳು ಗಾಲಿ ಲಕ್ಷ್ಮಿ ಅರುಣ ಅವರು ಮುಖಂಡರಾದ ಮನೋಹರ್ ಗೌಡ್ರು, ಮಾಜಿ ನಗರ ಸಭಾ ಸದಸ್ಯರು
ಸಂದೇಶಕರು ಪಾಸ್ಟರ್ ಸುರೇಶ್ ಬಂಗಾರಪ್ಪ, ಪಾಸ್ಟರ್ ಬಂಗಾರಪ್ಪ, ಬ್ರದರ್ ಶಾಮೇಶ್, ಬ್ರದರ್ ನಾಗೇಶ್, ಜಕ್ಕಯ್ಯ, ಪೌವುಲಾಯ್ಯ್ ಸಿಮೋನ, ಮಲೇಶಪ್ಪ ಗೌಡ್ರು, ಜಾಶ್ವ, ವೆಂಕಟೇಶ್, ಗೋಪಿ, ಆನಂದ, ರಾಜು ಬಂಗಾರಪ್ಪ ಹಾಗೂ ಕ್ರೈಸ್ತ ಸಮಾಜದ ಬಾಂಧವರು ಉಪಸ್ಥಿತರಿದ್ದರು.
ರೈತರ ವಿರುದ್ಧ ಅರಣ್ಯ ಇಲಾಖೆಯವರು ಸುಳ್ಳು ದೂರುಗಳನ್ನು ದಾಖಲಿಸಿದ್ದನ್ನು ಹಿಂಪಡೆಯುವಂತೆ ಒತ್ತಾಯ
ಶಿವಮೊಗ್ಗ ತಾಲ್ಲೂಕು ಆಯನೂರು ಹೋಬಳಿ ಸಿರಿಗೆರೆ ವಲಯ ಅರಣ್ಯ ಅಧಿಕಾರಿ ಗಳ ಕಚೇರಿ ಎದುರು.
ಮಾಜಿ ಸಚಿವರು ಹಾಗೂ ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾದ ಹಾಲಪ್ಪನವರ ನೇತೃತ್ವದಲ್ಲಿ.
ಹೊಸನಗರ ತಾಲೂಕು ಅಡ್ಡೇರಿ ಹಾಗು ಮಚಲಿ ಜಡ್ಡು ಗ್ರಾಮದ ರೈತರ ವಿರುದ್ಧ ಅರಣ್ಯ ಇಲಾಖೆಯವರು ಸುಳ್ಳು ದೂರುಗಳನ್ನು ದಾಖಲಿಸಿದ್ದನ್ನು ಹಿಂಪಡೆಯುವಂತೆ ಒತ್ತಾಯಿಸಿ ಹಾಗೂ ಈ ಹಿಂದೆ ಅರಣ್ಯ ಇಲಾಖೆಯವರು ಕಾಡಿನ ಅಂಚಿ ನಿರ್ಮಿಸಿರುವ EPT ಕಾಲುವೆಯ ನೀರು ಹರಿದು ರಸ್ತೆ ಕೊಚ್ಚಿ ಹೋಗಿದ್ದು ಮಚ್ಚಲಿ ಜಡ್ಡು ಗ್ರಾಮದ ರೈತ ದೇವೇಂದ್ರಪ್ಪ ಅದೇ ರಸ್ತೆಯಲ್ಲಿ ಹಾದು ಹೋಗುವಾಗ ರಸ್ತೆಕೊಚ್ಚಿ ಹೋದ ಹೊಂಡಕ್ಕೆ ಬಿದ್ದು ಸ್ಥಳದಲ್ಲಿಯೇ ಮರಣ ಹೊಂದಿದ್ದು ಸರ್ಕಾರದಿಂದ ಮೃತನ ಕುಟುಂಬದವರಿಗೆ ಪರಿಹಾರ ಕೊಡಬೇಕೆಂದು ಆಗ್ರಹಿಸಿ ರಿಪ್ಪನ್ ಪೇಟೆ. ಅರಸಾಳು ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರು ಸುಮಾರು ನೂರರಷ್ಟು ಜನ ಸೇರಿದ್ದು ಈ ಸಭೆಯಲ್ಲಿ ಹಾಲಪ್ಪನವರು. ಟಿಡಿ ಮೇಘರಾಜ್. ಕುಪೇಂದ್ರ ಆಯನೂರು. ವೀರೇಶ್. ಸುರೇಶ್ ಸ್ವಾಮಿರಾವ್. ಇನ್ನಿತರರು ಭಾಗಿಯಾಗಿದ್ದರು .
ವರದಿ.MH ರಾಘವೇಂದ್ರ ಸಂಪೋಡಿ
ಕನಸಿನ ಭಾರತ ವರದಿಗಾರ ಜೆಟ್ಟಪ್ಪ ಪೂಜಾರಿಗೆ ಮಾಧ್ಯಮ ರತ್ನ ಪ್ರಶಸ್ತಿ. ಮಾಳಿಂಗರಾಯ ಕಾರಗೊಂಡ ಹರ್ಷ.
ಯಡ್ರಾಮಿ ತಾಲ್ಲೂಕಿನ ಕನಸಿನ ಬಾರತ ದಿನ ಪತ್ರಿಕೆಯ ವರದಿಗಾರರಾದ ಜೆಟ್ಟೆಪ್ಪ ಎಸ್ ಪೂಜಾರಿಗೆ ಮಾಧ್ಯಮ ರತ್ನ ಪ್ರಶಸ್ತಿ ಬಂದಿದು ತುಂಬಾ ಹರ್ಷವಾಗಿದೆ ಎಂದು ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯ ಕಾರ್ಯಧ್ಯಕ್ಷರಾದ ಮಾಳಿಂಗರಾಯ ಕಾರಗೊಂಡ ಹರ್ಷ ವ್ಯಕ್ತಪಡಿಸಿ ಪೂಜಾರಿ ಅವರಿಗೆ ಶುಭಾಶಯ ಕೋರಿದರು ಅದೇ ರೀತಿಯಾಗಿ ಸಂವಿಧಾನದ ನಾಲ್ಕನೇ ಅಂಗವೆಂದು ಪರಿಗಣಿಸಲ್ಪಡುವ ಪತ್ರಿಕಾ ಮಾಧ್ಯಮವು ಸರಕಾರದ ಹಾಗೂ ಸಾರ್ವಜನಿಕರ ಸಂಪರ್ಕದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ ಹಾಗೂ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಮತ್ತು ಸರ್ಕಾರಕ್ಕೆ ಚಾಟಿ ಬಿಸಿ ಜನರಲ್ಲಿ ಜಾಗೃತಿ ಮನೋಭಾವನೆಯನ್ನು ಬೆಳೆಸುವಲ್ಲಿ ಪತ್ರಿಕಾ ಮಾಧ್ಯಮದ ಪಾತ್ರ ಮಹತ್ವದ್ದಾಗಿದ್ದೆ ಆದ್ದರಿಂದ ದೇಶದ ನಾಲ್ಕನೇ ಸೈನಿಕರಂತೆ ಪ್ರತಿಯೊಬ್ಬ ಪತ್ರಕರ್ತರು ತಮ್ಮ ಜೀವದ ಹಂಗು ತೋರಿದು ಸಮಾಜದ್ರೋಹಿ ಮತ್ತು ದೇಶದ್ರೋಹಿ ಭ್ರಷ್ಟಾಚಾರಿಗಳ ವಿರುದ್ಧ ದೇಶದ ಒಳಗಡೆ ನಡೆಯುವ ಅನಧಿಕೃತ ಚಟುವಟಿಕೆಗಳನ್ನು ಪತ್ರಿಕಾ ಮಾಧ್ಯಮದಲ್ಲಿ ನಿರಂತರ ಸುದ್ದಿ ಮಾಡುವಲ್ಲಿ ಪತ್ರಕರ್ತರ ಪಾತ್ರ ತುಂಬಾ ಮಹತ್ವದ್ದಾಗಿದೆ ಅದೇ ರೀತಿಯಾಗಿ ಯಡ್ರಾಮಿ ತಾಲೂಕಿನ ಕನಸಿನ ಭಾರತ ದಿನಪತ್ರಿಕೆಯ ವರದಿಗಾರರಾದ ಜೆಟ್ಟಪ್ಪ ಎಸ್ ಪೂಜಾರಿ ಬೀಳವಾರ ಅವ್ರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಲ್ಬುರ್ಗಿ ವತಿಯಿಂದ ಜಿಲ್ಲಾಧ್ಯಕ್ಷರಾದ ಡಾ. ಮಲ್ಲಿಕಾರ್ಜುನ್ ನಾಯ್ಕೋಡಿ ಅವರ ನೇತೃತ್ವದಲ್ಲಿ ಶರಣಬಸವೇಶ್ವರ ಅನುಭವ ಮಂಟಪದಲ್ಲಿ ರೈತರ ಉತ್ಸವ ಸುಗ್ಗಿ ಹಬ್ಬ ಹಾಗೂ ಜಿಲ್ಲಾ ಮಟ್ಟದ ರೈತರ ಸಮಾವೇಶ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜೆಟ್ಟಪ್ಪ ಪೂಜಾರಿ ಅವರ ಪತ್ರಿಕಾ ರಂಗದ ಸೇವೆಯನ್ನು ಗುರುತಿಸಿ ಮಾಧ್ಯಮ ರತ್ನ ಪ್ರಶಸ್ತಿ ನೀಡಿರುವುದು ತುಂಬಾ ಹರ್ಷವಾಗಿದೆ ಎಂದು ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯ ಕಾರ್ಯಧ್ಯಕ್ಷರಾದ ಮಾಳಿಂಗರಾಯ ಕಾರಗೊಂಡ ಅವರು ಹರ್ಷ ವ್ಯಕ್ತಪಡಿಸಿ ಶುಭಾಶಯ ಕೋರಿದ್ದಾರೆ
ಎನ್ ಎಸ್ ಎಸ್ ವಿದ್ಯಾರ್ಥಿಗಳನ್ನ ಸಮಾಜಮುಖಿ ಮಾಡುತ್ತದೆ : ಶಾಸಕ ಅಶೋಕ ಮನಗೂಳಿ
ಸಿಂದಗಿ : ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳನ್ನು ಸಮಾಜಮುಖಿಯನ್ನಾಗಿ ಮಾಡುತ್ತದೆ. ಇದು ವಿದ್ಯಾರ್ಥಿಗಳ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ತಾಲೂಕಿನ ರಾಂಪುರ ಗ್ರಾಮದಲ್ಲಿ ಸಿಂದಗಿಯ ಎಚ್.ಜಿ.ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಡಿಯಲ್ಲಿ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಎನ್ಎಸ್ಎಸ್ ಶಿಬಿರವನ್ನು ಗ್ರಾಮೀಣ ಪ್ರದೇಶದಲ್ಲಿ ಆಯೋಜನೆ ಮಾಡಿದ್ದು ಅತ್ಯಂತ ಸಂತಸ ತಂದಿದೆ. ಗ್ರಾಮಗಳಲ್ಲಿ ಮತ್ತು ಗ್ರಾಮದ ಜನತೆಗೆ ಸ್ವಚ್ಛತೆ, ಪರಿಸರ ಮತ್ತು ಸಾಮಾಜಿಕ ಕಳಕಳಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಶಿಬಿರದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಸೇವೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾ ವಿದ್ಯಾಲಯದ ಪ್ರಾಚಾರ್ಯ ಎ. ಆರ್. ಹೆಗ್ಗನದೊಡ್ಡಿ ಅವರು ಮಾತನಾಡಿ, ಇದೊಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಸಾನಿಧ್ಯವನ್ನು ರಾಂಪುರ ಗ್ರಾಮದ ಆರೂಢ ಮಠದ ಶ್ರೀ ನಿತ್ಯಾನಂದ ಮಹಾರಾಜರು ವಹಿಸಿದ್ದರು. ಶಿಬಿರದ ಸಂಯೋಜನಾಧಿಕಾರಿ ಡಾ.ಎಸ್.ಎಸ್.ಚವಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಗ್ರಾಮ ಪಂಚಾಯತಿ ಅಧ್ಯಕ್ಷೆ ನೂರಜಾನ ನದಾಫ, ಶಾಲೆಯ ಮುಖ್ಯ ಗುರುಗಳಾದ ಎನ್.ಆರ್. ಅತ್ತಾರ, ಐ.ಬಿ.ಬಂಕಲಗಿ, ಜೆ.ಪಿ.ಪಾಟೀಲ, ಷಣ್ಮುಖಯ್ಯ ಹಿರೇಮಠ ಸೇರಿ ಇತರರಿದ್ದರು.
ಉಪನ್ಯಾಸಕರಾದ ಬಿ.ಎಸ್.ಬಿರಾದಾರ, ಎಸ್.ಎ.ಪಾಟೀಲ, ಆರ್.ಬಿ.ಹೊಸಮನಿ, ಎಮ್.ಎನ್.ಅಜ್ಜಪ್ಪ, ಎಸ್.ಪಿ.ಬಿರಾದಾರ, ಎಫ್.ಎ.ಹಾಲಪ್ಪನವರ, ಎಮ್.ಸಿ.ಕತ್ತಿ, ಎ.ಆರ್.ಸಿಂದಗಿಕರ, ಎ.ಬಿ.ಪಾಟೀಲ, ಎಸ್.ಎ.ಬಸರಕೋಡ, ಜಿ.ಎಸ್.ಪವಾರ ಸೇರಿದಂತೆ ಶಿಬಿರದ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಉಪನ್ಯಾಸಕ ಸಿದ್ದಲಿಂಗ ಕಿಣಿಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕ.ಭಾ ವರದಿಗಾರರು : ಯಮನಪ್ಪ ಚೌಧರಿ
ಡಾ.ಸುಮಂತ್ ಬಳಗಂಡಿಗೆ ಹವ್ಯಕ ವಿದ್ಯಾ ರತ್ನ ಪುರಸ್ಕಾರಕ್ಕೆ ಆಯ್ಕೆ
ಕುಮಟಾ: ಮೆದುಳು ಮತ್ತು ನರರೋಗ ತಜ್ಞ ವೈದ್ಯರಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಭರವಸೆಯ
ಕುಡಿಯಾಗಿರುವ ಡಾ.ಸುಮಂತ್ ಜಯದೇವ ಬಳಗಂಡಿ
ಅವರನ್ನು ಹವ್ಯಕ ವಿದ್ಯಾ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲು ಶ್ರೀ ಅಖಿಲ ಹವ್ಯಕ ಮಹಾಸಭೆ ಆಯ್ಕೆಮಾಡಿದ್ದು,ಪ್ರಶಸ್ತಿ- ಸನ್ಮಾನ ಸ್ವೀಕರಿಸಲು ಅವರನ್ನು ಅಧಿಕೃತವಾಗಿ ಆಹ್ವಾನಿಸಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ತೃತೀಯ ‘ವಿಶ್ವ ಹವ್ಯಕ ಸಮ್ಮೇಳನ’ದಲ್ಲಿ ಹಮ್ಮಿಕೊಂಡಿರುವ ಈ ಭವ್ಯ ಸಮಾರಂಭದಲ್ಲಿ ಡಿ.28 ರಂದು ಪ್ರಶಸ್ತಿ- ಸನ್ಮಾನ ಸ್ವೀಕರಿಸಲು ತಾನು ಕುಟುಂಬದವರೊಂದಿಗೆ ಪಾಲ್ಗೊಳ್ಳುತ್ತಿರುವುದಾಗಿ ಬಳಗಂಡಿ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ. ಮುಂಬರುವ 2025 ಫೆಬ್ರುವರಿ ಯಲ್ಲಿ ನವದೆಹಲಿಯಲ್ಲಿ ಡಾ.ಸುಮಂತ್ ಜರುಗಲಿರುವ
ಅಂತರರಾಷ್ಟ್ರೀಯ ಮಟ್ಟದ 15
‘ಏಶಿಯನ್ ಆ್ಯಂಡ್ ಓಷಿಯನ್ ಎಪಿಲೆಪ್ಪಿ ಕಾಂಗ್ರೆಸ್ ‘ನಲ್ಲಿ ಭಾಗವಹಿಸಿ ತನ್ನ ಅಧ್ಯಯನ ಪ್ರಬಂಧ ಮಂಡಿಸುವ ಅಪೂರ್ವ ಸದವಕಾಶ ತನಗೆ ಲಭಿಸಿದ್ದು, ಈಗಾಗಲೇ ಈ ಕುರಿತಾಗಿ ಅಧಿಕೃತ ಆಹ್ವಾನ ಪಡೆದಿರು ವುದಾಗಿಯೂ ಈ ಸಂದರ್ಭದಲ್ಲಿ ಅವರು ಮಾಹಿತಿ ನೀಡಿದರು.
ಇವರು ಎಂಬಿಬಿಎಸ್ ಪದವಿ ಪಡೆದ ನಂತರ ಜನರಲ್ ಮೆಡಿಸಿನ್ ವಿಷಯದಲ್ಲಿ ಎಮ್.ಡಿ. ಮತ್ತು ಡಿ.ಎನ್.ಬಿ. ಸ್ನಾತಕೋತ್ತರ ಪದವಿಗಳನ್ನು ಪಡೆದು, ಅಂತಾರಾಷ್ಟ್ರೀಯ ಮನ್ನಣೆ ಪಡೆದ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್) ನಡೆಸಿದ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಯತ್ನ ದಲ್ಲಿಯೇ ದಾಖಲೆಯ ಅಂಕಗಳನ್ನು ಪಡೆದು ಆಯ್ಕೆಯಾಗಿ ಪ್ರವೇಶ ಪಡೆದು ನ್ಯೂರೋಲೊಜಿಯಲ್ಲಿ 3 ವರ್ಷಗಳ ಡಿ.ಎಮ್.ಸೂಪರ್ ಸ್ಪೆಶಲೈಸೇಶನ್ ಕೋರ್ಸ್ ನ್ನು ಯಶಸ್ವಿಯಾಗಿ ಪೂರೈಸಿರುತ್ತಾರೆ. ಪ್ರತಿಭಾವಂತರಾಗಿರುವ
ಇವರು ಪಠ್ಯ, ಪತ್ಯೇತರ ವಿಷಯಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ವೇದ, ಉಪನಿಷತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ,ಲಘು ಸಂಗೀತಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಡಾ. ಸುಮ೦ತ್ ಜಯದೇವ ಬಳಗಂಡಿ ಅವರು ಪ್ರಸ್ತುತ ಶಿವಮೊಗ್ಗಾ ಜಿಲ್ಲೆಯ ಸಾಗರದ ಪ್ರತಿಷ್ಠಿತ ‘ಭಾಗವತ್ ಆಸ್ಪತ್ರೆ’ ಯಲ್ಲಿ ಮೆದುಳು ಹಾಗೂ ನರ ರೋಗ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಪರಾಧ ತಡೆ ಮಾಸಾಚರಣೆ | ಮಾದಕ ವಸ್ತುಗಳ ಬಗ್ಗೆ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು: ಪಿಎಸ್ಐ ಆರೀಫ್ ಮುಷಾಪುರಿ
ಸಿಂದಗಿ : ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಸಿಂದಗಿ ಪೋಲಿಸ ಠಾಣೆ ಇವುಗಳ ಸಹಯೋಗದಲ್ಲಿ ಪಟ್ಟಣದ ಎಚ್. ಜಿ.ಪದವಿ ಪೂರ್ವ ವಿದ್ಯಾಲಯದಲ್ಲಿ ಸೋಮವಾರ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು. ಸಿಂದಗಿ ಠಾಣೆ ಪಿಎಸ್ಐ ಆರಿಫ್ ಮುಷಾಪುರಿ ಅವರು ಮಾತನಾಡಿ, ಸೈಬರ್ ಅಪರಾಧ, ರಸ್ತೆ ಸುರಕ್ಷತೆ, ಮಹಿಳೆ ಮತ್ತು ಮಕ್ಕಳ ರಕ್ಷಣೆ ಸೇರಿ ಮುಂತಾದ ಅಪರಾಧಗಳ ನಿಯಂತ್ರಣ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಪಟ್ಟಣದ ನಿವಾಸಿಗಳು ಮನೆಗೆ ಬೀಗ ಹಾಕಿ ಬೇರೆಡೆಗೆ ಹೋಗುವಾಗ ಪೊಲೀಸ್ ಠಾಣೆಗೆ ಲಿಖಿತ ಪತ್ರದೊಂದಿಗೆ ಮಾಹಿತಿ ನೀಡಬೇಕು. ಇಲ್ಲವಾದರೆ ಗೃಹ ರಕ್ಷಕ ತಂತ್ರಾಂಶದಲ್ಲಿ ನಿಮ್ಮ ಮನೆಯಿರುವ ಸ್ಥಳದ ಮಾಹಿತಿಯನ್ನು ಸೇರ್ಪಡೆ ಮಾಡಬೇಕು. ಆಗ ಪೊಲೀಸ್ ಗಸ್ತು ನೀಡಲಾಗುವುದು. ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಸವಾರರು ತಪ್ಪದೇ ಹೆಲ್ಮಟ್ ಧರಿಸಿ. ನಾಲ್ಕು ಚಕ್ರ ವಾಹನಗಳನ್ನು ಚಲಾಯಿಸುವ ಸವಾರರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಇದರಿಂದ ಅಪಘಾತ ಸಂಭವಿಸಿದಾಗ ಜೀವಕ್ಕೆ ಅಪಾಯ ಕಡಿಮೆಯಾಗುತ್ತದೆ. ಸಮಾಜದ ರಕ್ಷಣೆಗೆ ಪೊಲೀಸ್ ಇಲಾಖೆ ಸದಾ ಸನ್ನದ್ಧವಾಗಿದೆ. ವಿದ್ಯಾರ್ಥಿಗಳು ತಮ್ಮ ಶಾಲಾ- ಕಾಲೇಜುಗಳ ಬಳಿ ಯಾರಾದರೂ ಅಪರಿಚಿತರು ಕಂಡುಬಂದ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು. ಬಲವಂತವಾಗಿ ಮಾತನಾಡಲು ಯತ್ನಿಸಿದರೆ ಕೂಡಲೇ ನಿಮ್ಮ ಶಿಕ್ಷಕರಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಡ್ರಗ್ಸ್ ಸೇರಿದಂತೆ ಮಾಧಕ ವಸ್ತುಗಳ ಬಗ್ಗೆಯೂ ಸಾಕಷ್ಟು ಎಚ್ಚರಿಕೆವಹಿಸಬೇಕು. ಯಾರಾದರೂ ಅಂತಹ ವಸ್ತುಗಳನ್ನು ನೀಡುವುದು ಕಂಡುಬಂದರೂ ತಕ್ಷಣ ನಿಮ್ಮ ಶಿಕ್ಷಕರು ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಇಂದಿನ ವಿದ್ಯಾರ್ಥಿಗಳು ಹೆಚ್ಚು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ ಅವುಗಳ ಬಳಕೆ ಕಡಿಮೆಯಾಗಿ ಓದಿನ ಕಡೆ ಹೆಚ್ಚು ಗಮನಹರಿಸಬೇಕು ಎಂದು ತಿಳಿಸಿದರು. ಕಾಲೇಜಿನ ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆ ಮೇಲೆ ಉಪನ್ಯಾಸಕರಾದ ಎಸ್.ಎ.ಪಾಟೀಲ, ಆರ್.ಬಿ. ಹೊಸಮನಿ ಉಪಸ್ಥಿತರಿದ್ದರು. ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿ ವಂದಿಸಿದರು.
ವರದಿ : ಯಮನಪ್ಪ ಚೌಧರಿ
ಶ್ರೀ ಕ್ಷೇತ್ರ ಯಾಣದ ರಸ್ತೆಗೆ ಮಾರ್ಗಸೂಚಿ ಫಲಕ ಅಳವಡಿಕೆ
ಕುಮಟಾ :-ಶ್ರೀ ಕ್ಷೇತ್ರ ಯಾಣದ ಮ್ಯಾಪ್ ಮಾಸ್ತಿಹಳ್ಳದ ಕಡೆಗೆ ರೂಟ್ ತೋರಿಸುತ್ತಿದ್ದು ಪ್ರವಾಸಿಗರು ದಾರಿ ತಪ್ಪಿ ಯಾಣದ ರಸ್ತೆಯನ್ನು ಹುಡುಕುವುದು ಕಷ್ಟಕರವಾಗಿದ್ದು ಈ ನಿಟ್ಟಿನಲ್ಲಿ ಆನೆಗುಂದಿಯ ಶ್ರೀ ಮಹಾಸತಿ ಗೆಳೆಯರ ಬಳಗವು ಓಂ ಪೆಕ್ಸ್ ಸಹಕಾರದೊಂದಿಗೆ ಯಾಣಕ್ಕೆ ಬರುವ ಪ್ರವಾಸಿಗರ ಗಮನಕ್ಕಾಗಿ ಸರಿಯಾದ ಮಾರ್ಗಸೂಚಿ ಫಲಕ ಅಳವಡಿಸಲಾಗಿದೆ.ಗೂಗಲ್ ಮ್ಯಾಪ್ ನಲ್ಲಿ ಆದ ತೊಂದರೆಯನ್ನು ಸರಿಪಡಿಸುವಂತೆ ಮಹಾಸತಿ ಗೆಳೆಯರ ಬಳಗವು ಮನವಿ ಮಾಡಿದ್ದರು.ಮನವಿ ನೀಡಿದರು ಸರಿಯಾಗದ ಕಾರಣ ಮಹಾಸತಿ ಗೆಳೆಯರ ಬಳಗದ ಸದಸ್ಯರು ಮಾರ್ಗ ಮಧ್ಯೆ ಯಾಣಕ್ಕೆ ಸಾಗುವ ಮಾರ್ಗಸೂಚಿ ಫಲಕಗಳನ್ನು ಅಳವಡಿಸುವ ಮೂಲಕ ಯಾಣಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲಕ್ಕಾಗಿ ನೆರವಾಗಿದ್ದಾರೆ. ಈ ಸಂಧರ್ಭದಲ್ಲಿ ಮಹಾಸತಿ ಗೆಳೆಯರ ಬಳಗದ ಸದಸ್ಯರಾದ ಸುನೀಲ್ ನಾಯ್ಕ್,ಮಾರುತಿ ಮುಕ್ರಿ,
ಭಾಸ್ಕರ ಮುಕ್ರಿ,ರಘು ಭಂಡಾರಿ,ಗುರು ಮುಕ್ರಿ,ಅಭಿ ಗೌಡ,ವಿನಾಯಕ ನಾಯ್ಕ್ ಹಾಗೂ ಇನ್ನಿತರರು ಇದ್ದ
“ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಥವಾಗಿ ತಲುಪಿಸಿ – ಜನಸಾಮಾನ್ಯರ ಆರ್ಥಿಕ ಉನ್ನತಿಗೆ ಸರ್ವರೂ ಪರಿಶ್ರಮಿಸಿ”
“ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಥವಾಗಿ ತಲುಪಿಸಿ – ಜನಸಾಮಾನ್ಯರ ಆರ್ಥಿಕ ಉನ್ನತಿಗೆ ಸರ್ವರೂ ಪರಿಶ್ರಮಿಸಿ”
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್(Lead Bank) ಸಹಯೋಗದಲ್ಲಿ ಶಿವಮೊಗ್ಗದ ಜಿಲ್ಲಾ ಪಂಚಾಯತ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾ ಸಮಾಲೋಚನಾ ಸಮಿತಿ (District Consultative Committee – DCC) ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ (District Level Review Committee – DLRC) ಸಭೆಯು ಇಂದು ನನ್ನ ಅಧ್ಯಕ್ಷತೆಯಲ್ಲಿ ನಡೆಸಿಕೊಡಲಾಯಿತು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ “ಪಿ.ಎಂ. ಸ್ವನಿಧಿ” ಯೋಜನೆ, “ಪಿ.ಎಂ. ವಿಶ್ವಕರ್ಮ” ಯೋಜನೆ, “ಮುದ್ರಾ” ಯೋಜನೆ, “ಪಿ. ಎಂ. ಜೀವನ್ ಜ್ಯೋತಿ ಭೀಮಾ” ಯೋಜನೆ ಸೇರಿದಂತೆ ಇನ್ನೂ ಅನೇಕ ಆರ್ಥಿಕ ಸಬಲೀಕರಣ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಯಿತು.

ಕೇಂದ್ರ ಸರ್ಕಾರ ಜನಹಿತ ಕಾಯಲು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಹಲವಾರು ಐತಿಹಾಸಿಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅಧಿಕಾರಿಗಳು ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ಒದಗಿಸಿ ಅರ್ಹ ಫಲಾನುಭವಿಗಳಿಗೆ ಸೂಕ್ತ ಅನುಕೂಲ ಮಾಡಿಕೊಡುವಂತೆ ಸಭೆಯಲ್ಲಿ ಸೂಚನೆ ಕೊಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಹೇಮಂತ್ ಅವರು, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಪ್ರಬಂಧಕರಾದ ಶ್ರೀ ಚಂದ್ರಶೇಖರ್ ಅವರು, ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಶ್ರೀ ಶರತ್ ಅವರು ಸೇರಿದಂತೆ ಬ್ಯಾಂಕಿನ ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
