ಕುಮಟಾ :-ಶ್ರೀ ಕ್ಷೇತ್ರ ಯಾಣದ ಮ್ಯಾಪ್ ಮಾಸ್ತಿಹಳ್ಳದ ಕಡೆಗೆ ರೂಟ್ ತೋರಿಸುತ್ತಿದ್ದು ಪ್ರವಾಸಿಗರು ದಾರಿ ತಪ್ಪಿ ಯಾಣದ ರಸ್ತೆಯನ್ನು ಹುಡುಕುವುದು ಕಷ್ಟಕರವಾಗಿದ್ದು ಈ ನಿಟ್ಟಿನಲ್ಲಿ ಆನೆಗುಂದಿಯ ಶ್ರೀ ಮಹಾಸತಿ ಗೆಳೆಯರ ಬಳಗವು ಓಂ ಪೆಕ್ಸ್ ಸಹಕಾರದೊಂದಿಗೆ ಯಾಣಕ್ಕೆ ಬರುವ ಪ್ರವಾಸಿಗರ ಗಮನಕ್ಕಾಗಿ ಸರಿಯಾದ ಮಾರ್ಗಸೂಚಿ ಫಲಕ ಅಳವಡಿಸಲಾಗಿದೆ.ಗೂಗಲ್ ಮ್ಯಾಪ್ ನಲ್ಲಿ ಆದ ತೊಂದರೆಯನ್ನು ಸರಿಪಡಿಸುವಂತೆ ಮಹಾಸತಿ ಗೆಳೆಯರ ಬಳಗವು ಮನವಿ ಮಾಡಿದ್ದರು.ಮನವಿ ನೀಡಿದರು ಸರಿಯಾಗದ ಕಾರಣ ಮಹಾಸತಿ ಗೆಳೆಯರ ಬಳಗದ ಸದಸ್ಯರು ಮಾರ್ಗ ಮಧ್ಯೆ ಯಾಣಕ್ಕೆ ಸಾಗುವ ಮಾರ್ಗಸೂಚಿ ಫಲಕಗಳನ್ನು ಅಳವಡಿಸುವ ಮೂಲಕ ಯಾಣಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲಕ್ಕಾಗಿ ನೆರವಾಗಿದ್ದಾರೆ. ಈ ಸಂಧರ್ಭದಲ್ಲಿ ಮಹಾಸತಿ ಗೆಳೆಯರ ಬಳಗದ ಸದಸ್ಯರಾದ ಸುನೀಲ್ ನಾಯ್ಕ್,ಮಾರುತಿ ಮುಕ್ರಿ,
ಭಾಸ್ಕರ ಮುಕ್ರಿ,ರಘು ಭಂಡಾರಿ,ಗುರು ಮುಕ್ರಿ,ಅಭಿ ಗೌಡ,ವಿನಾಯಕ ನಾಯ್ಕ್ ಹಾಗೂ ಇನ್ನಿತರರು ಇದ್ದ
