ಪಿಎಸ್ಐ ಹುದ್ದೆ ಆಯ್ಕೆ ಪರೀಕ್ಷೆಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಪ್ರಜ್ವಲ್ ನಾಯಕ ಹಿರೇಗುತ್ತಿ.
ಇತ್ತೀಚೆಗೆ ಜರುಗಿದ 402 ಪಿಎಸ್ಐ ಹುದ್ದೆಗಳಿಗೆ ಜರುಗಿದ ಆಯ್ಕೆ ಪರೀಕ್ಷೆ ಯಲ್ಲಿ 121 ನೇ ರ್ಯಾಂಕ ಗಳಿಸುವ ಮೂಲಕ ಉನ್ನತ ಶ್ರೇಣಿಯಲ್ಲಿ ಪ್ರಜ್ವಲ್ ವಿ. ನಾಯಕ .ಹಿರೇಗುತ್ತಿ. ಆಯ್ಕೆಯಾಗಿದ್ದಾನೆ.
ಈ ಮೊದಲು ಪ್ರಥಮವಾಗಿ ನಡೆದ 545 ಪಿಎಸ್ಐ ಹುದ್ದೆ ಆಯ್ಕೆ ಪರೀಕ್ಷೆಯಲ್ಲಿ 19 ನೇ ರ್ಯಾಂಕ ಪಡೆದು ಆಯ್ಕೆಯಾಗಿದ್ದನು.ನಂತರ ಕೆಲವು ತಿಂಗಳುಗಳ ಹಿಂದೆ ನಡೆದ ಮರು ಪರೀಕ್ಷೆಯಲ್ಲಿ 121 ನೇ ರ್ಯಾಂಕ ಪಡೆದು ಹುದ್ದೆಗೆ ಆಯ್ಕೆಯಾಗಿ ಈಗಾಗಲೆ ಕಾಗದ ಪತ್ರಗಳ ಪರಿಶೀಲನೆಯ ನಡೆದು ಕೆಲವೆ ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವ ನಿರೀಕ್ಷೆಯಲ್ಲಿದ್ದು ಅದರ ನಡುವೆ ಇನ್ನೊಂದು ಪರೀಕ್ಷೆಯಲ್ಲೂ ಸಹ ಉನ್ನತ ಶ್ರೇಣಿಯಲ್ಲಿ ಪಾಸಾಗಿರುವುದು ಅವನ ಸತತ ಪರಿಶ್ರಮದ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
