ಕರ್ನಾಟಕ ರಾಜ್ಯ ಆರ್ ಪಿ ಡಿ ಟಾಸ್ಕ್ ಫೋರ್ಸ್ ಬೆಂಗಳೂರು ಹಾಗೂ ಮಾನಸ ಸಾಧನ ವಿಕಲಚೇತನರ ಸೇವಾ ಟ್ರಸ್ಟ್ ದಾವಣಗೆರೆ ವತಿಯಿಂದ ವಿಶ್ವ ವಿಕಲಚೇತನರ ದಿನಾಚರಣೆಯ ಪ್ರಯುಕ್ತ ದಿನಾಂಕ: 27-12-2024 ರಂದು ಆಯೋಜಿಸಿದ್ದ ವಿಶೇಷ ಸಾಧನ ಪುರಸ್ಕಾರ-2024 ಸಮಾರಂಭದಲ್ಲಿ ಸಮನ್ವಿತಾ ಫೌಂಡೇಶನ್(ರಿ), ದಾವಣಗೆರೆ ಸಂಸ್ಥೆಯು ಕಳೆದ ಆರು ವರ್ಷದಿಂದ ದಾವಣಗೆರೆಯಲ್ಲಿ ವಿಶೇಷ ಚೇತನರ ಶ್ರೇಯೋಭಿವೃದ್ಧಿಗಾಗಿ ಸಲ್ಲಿಸುತ್ತಿರುವ ಅಪಾರ ಸೇವೆಯನ್ನು ಗುರುತಿಸಿ ಸಂಸ್ಥೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಶ್ರೀಯುತ ಪ್ರಶಾಂತ ಎಂ ಯು ಹಾಗೂ ಸಂಸ್ಥೆಯ ನಿರ್ದೇಶಕರಾದ ಶ್ರೀಯುತ ಪ್ರಕಾಶ ಕೆ ರವರನ್ನು ಗುರುತಿಸಿ ವಿಶೇಷ ಸಾಧನ ಪುರಸ್ಕಾರ 2024 ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಸಂಸ್ಥೆಯ ಹಾಗೂ ಸನ್ಮಾನಿತರ ಸಮಾಜ ಸೇವೆಯನ್ನು ಗುರುತಿಸಿ ಗೌರವಿಸಿದ್ದಕ್ಕೆ ಸಂಸ್ಥೆಯ ಪರವಾಗಿ ಹೃತ್ಪೂರ್ವಕವಾದ ಧನ್ಯವಾದಗಳು.
