ಹೊನ್ನಾವರ:-ಪ್ರವಾಸಿಗರ ಬಸ್ ಬೆಂಗಳೂರ ನಿಂದ ಗೋಕರ್ಣಕ್ಕೆ ಬರುವಾಗ ಹೊನ್ನಾವರ ತಾಲೂಕಿನ ಬಾಳೆಗದ್ದೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದ್ದು ಬಸ್ ನಲ್ಲಿ ಇದ್ದ 20 ಮಂದಿಯಲ್ಲಿ ಆರು ಮಂದಿಗೆ ಗಂಭೀರ ಗಾಯಗಳಾಗಿದ್ದು ಹಾಗೂ 10 ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಹೊನ್ನಾವರ ತಾಲೂಕ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಗಂಭೀರ ಗಾಯಗೊಂಡ 8 ಜನರನ್ನು ಉಡುಪಿ ಜಿಲ್ಲೆಯ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಪ್ರಕರಣ ಹೊನ್ನಾವರ ಠಾಣೆಯಲ್ಲಿ ದಾಖಲಾಗಿದೆ
