ಕುಂದಾ ನಗರಿ ಬೆಳಗಾವಿ ಜಿಲ್ಲೆಯ ಚಳಿಗಾಲ ಅಧಿವೇಶನ ನಡೆದ ಸಂದರ್ಭದಲ್ಲಿ ಸುವರ್ಣಾ ಸೌಧದ ಮುಂಭಾಗದ ಸುವರ್ಣಾ ಗಾರ್ಡನ್ ಟೆಂಟ್ ನಂಬರ್ ಆರ ರಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ನಡೆದ ಧರಣಿ ಪ್ರತಿಭಟನೆಯ ಹೋರಾಟದಲ್ಲಿ ಗ್ರಾಮಾಂತರ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ನ ಪ್ರಸ್ತುತ ಸರ್ಕಾರ ಹೊರಡಿಸಿರುವ ಕರಾಳ ಆದೇಶದ ಮಾನದಂಡನೆಗಳನ್ನು ಸರಳಿಕರಿಸಬೇಕು, ಪತ್ರಕರ್ತರ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಲೇಬೇಕು, ಇತರರ ಹಾಗೆ ಇನ್ನೀತರ ಮೂಲ ಸೌಕರ್ಯಗಳ ಬೇಡಿಕೆಗಳನ್ನು ಈಡೇರಿಸಲೇಬೇಕು ಎಂದು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯವರ ಬೇಡಿಕೆಯಾಗಿದ್ದು, ಸರ್ಕಾರದ ಪ್ರತಿನಿಧಿಯಾಗಿ ಮನವಿ ಸ್ವೀಕರಿಸಲು ಬಂದಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಶಿವರಾಜ್ ತಂಗಡಗಿ, ಯವರಿಗೆ ಕಾರ್ಯನಿರತ ಪತ್ರ ಕರ್ತರ ದ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ ಬಂಗ್ಲೆ ಮಲ್ಲಿಕಾರ್ಜುನರವರು ಹಾಗೂ ವಿವಿಧ ಜಿಲ್ಲೆ ಯ ಮತ್ತು ತಾಲೂಕುಗಳ ಅಧ್ಯಕ್ಷರು ಸದಸ್ಯರು ಸಹಭಾಗಿತ್ವದಲ್ಲಿ ಬೇಡಿಕಿಗೆ ಒಂದು ತಿಂಗಳ ಗಡುವು ಸರ್ಕಾರಕ್ಕೆ ನೀಡಿ ಮನವಿ ಸಲ್ಲಿಸಲಾಯಿತು,
ವರದಿ ರಾಮಚಂದ್ರ ಹ ಕುಕಡಿ ರಾಮದುರ್ಗ