ಬೆಳಗಾವಿ: ಲಿಂಗಾಯತರು ಎಂಬ ಹಣೆಪಟ್ಟಿ ಕಟ್ಟಿ ಮೀಸಲಾತಿ ಆದೇಶದಲ್ಲಿ ತಮ್ಮನ್ನು ಮುಂದುವರೆದ ಜಾತಿಗಳಿರುವ ೩ಬಿ ಪ್ರವರ್ಗಕ್ಕೆ ಸೇರಿಸಿದ್ದಾರೆ. ಈ ತಾರತಮ್ಯ ನಿವಾರಿಸಿ, ತಮ್ಮ ಕ್ಷೌರಿಕ ಕುಲಕಸಬು ಆಧರಿಸಿ ತಮ್ಮನ್ನು ಪರಿಶಿಷ್ಟ ಪಂಗಡ (ST) ಕ್ಕೆ ಸೇರಿಸಬೇಕು ಎಂದು ಹಡಪದ ಅಪ್ಪಣ್ಣ ಸಮಾಜ ಆಗ್ರಹಿಸಿದೆ.
ಇತ್ತೀಚೆಗೆ ನಗರದಲ್ಲಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ನೂರಾರು ಜನ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಮತ್ತು ನಮ್ಮ ಹಡಪದ ಅಪ್ಪಣ್ಣ ಸಮಾಜದ ಹೋರಾಟದಲ್ಲಿ ಭಾಗವಹಿಸಿದರ ಕಾಂಗ್ರೆಸ್ ಶಾಸಕರು. ಸಚಿವರು. ಹಾಗೂ ಬಿಜೆಪಿಯ ಶಾಸಕರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸಿ ಅತ್ಯಂತ್ಯ ಹಿಂದುಳಿದ ಸಮಾಜವಾದ ಹಡಪದ (ಕ್ಷೌರಿಕ) ಸಮಾಜವನ್ನು ಮುಖ್ಯವಾಹಿನಿಗೆ ತರಬೇಕೆಂದು ವಿನಂತಿಸಿಕೊಂಡರು.
ತಂಗಡಗಿಯ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಶ್ರೀ ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು
ಮನವಿ ಪತ್ರಕ್ಕೆ ಸಹಿ ಮಾಡಿ, ಹೋರಾಟಕ್ಕೆ ನೇತೃತ್ವ ನೀಡಿದರು.
ಹಡಪದ ಅಪ್ಪಣ್ಣ ಸಮಾಜ ಸಂಘದ ರಾಜ್ಯಾಧ್ಯಕ್ಷ ಸಿದ್ದಪ್ಪ ಮ. ಹಡಪದ, ರಾಜ್ಯ ಉಪಾಧ್ಯಕ್ಷ ಸಂತೋಷ ಈ ಹಡಪದ, ಕಾರ್ಯಾಧ್ಯಕ್ಷ ನಾಗರಾಜ ಸರ್ಜಾಪುರ, ಬಸವರಾಜ ಹಡಪದ ಸುಗೂರ ಎನ್. ಮತ್ತು ಪಿ.ಹಾಲಪ್ಪ, ಮಂಜಪ್ಪ ಮ. ಹಡಪದ, ಈರಣ್ಣ ಹಡಪದ ಸಣ್ಣೂರ, ಹಾಗೂ ಈರಣ್ಣ ಚಿಕ್ಕಬೆಳಕಟ್ಟಿ. ಹೆಚ್.ಮಹಾಂತೇಶ ಹಡಪದ, ಕಾನೂನು ಸಲಹೆಗಾರಾದ ನಾಗರಾಜ ಸಿ. ಕಾಯಕದ, ರಮೇಶ ಎ. ಹಡಪದ ಮಲಕೂಡ, ಖಜಾಂಚಿ ಸುರೇಶ ಹಡಪದ ಕಿತ್ತೂರ, ನಾ.ನಿ. ಉಪಾಧ್ಯಕ್ಷ ಸುರೇಶ ಎ. ಹಡಪದ, ಸಂಘಟನಾ ಕಾರ್ಯದರ್ಶಿ ಹೊ.ಚಿದಾನಂದ ಜಯಣ್ಣ ಮತ್ತು ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ಹೋರಾಟದಲ್ಲಿ ಭಾಗವಹಿಸಿದ್ದರು.
ಮನವಿ ಪತ್ರದಲ್ಲಿ ಇರುವ ಇತರ ಬೇಡಿಕೆಗಳು
೧) “ಕರ್ನಾಟಕ ಹಡಪದ ಅಭಿವೃದ್ಧಿ ನಿಗಮ” ವನ್ನು ಆದೇಶ ಮಾಡಿದ್ದಾರೆ. ನಿಗಮವನ್ನು ಜಾರಿಗೆ ತರಬೇಕು ಹಾಗೂ ೫೦ ಕೋಟಿ ಅನುದಾನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು. ನಿಗಮಕ್ಕೆ ನಮ್ಮವರನ್ನೇ ಅಧ್ಯಕ್ಷರು ಮತ್ತು ಸದಸ್ಯರನ್ನಾಗಿ ನೇಮಿಸಬೇಕು.
೨) ಮೀಸಲಾತಿಯಲ್ಲಿ ಆಗಿರುವ ತಾರತಮ್ಯ ನಿವಾರಿಸಬೇಕು. ಕುಲಕಸಬು ಆಧರಿಸಿ ನಮ್ಮನ್ನು ಪರಿಶಿಷ್ಟ ಪಂಗಡ (ST) ಕ್ಕೆ ಸೇರಿಸಬೇಕು.
೩) ತೆಗೆದುಹಾಕಲಾದ ನಾಯಿಂದ ಪದವನ್ನು ಪುನಃ ಪ್ರತಿಷ್ಠಾಪಿಸಲಬೇಕು.
೪) 2ಎ ಜಾತಿ ಪ್ರಮಾಣ ಪತ್ರವನ್ನು ನೀಡಲು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು.
೫) ‘ಹಜಾಮ’ ಪದ ಬಳಸುವವರ ಮೇಲೆ ಜಾತಿನಿಂದನೆ ಕಾನೂನು ಕೂಡಲೇ ಜಾರಿಗೆ ತರಬೇಕು.
೬) ಸಮಾಜದವರನ್ನು ವಿಧಾನಪರಿಷತ್ತಿಗೆ ನಾಮನಿರ್ದೇಶನ ಸದಸ್ಯರನ್ನಾಗಿಸಲು ಅವಕಾಶ ಕಲ್ಪಿಸಬೇಕು.
೭) ಶ್ರೇಷ್ಠ ವಚನಕಾರ ಶಿವಶರಣ ಹಡಪದ ಅಪ್ಪಣ್ಣನವರ ಜನ್ಮಸ್ಥಳ ಹಾಗೂ ವಚನಗಾರ್ತಿ ಶಿವಶರಣೆ ಹಡಪದ ಲಿಂಗಮ್ಮನವರ ಜನ್ಮಸ್ಥಳ ಮಸಬಿನಾಳ ಗ್ರಾಮ ದೇಗಿನಹಾಳ ಗ್ರಾಮ ಬಸವನ ಬಾಗೇವಾಡಿ ತಾಲೂಕ, ವಿಜಯಪುರ ಜಿಲ್ಲೆ ಇವುಗಳನ್ನು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇರಿಸಿ ಅಭಿವೃದ್ಧಿಪಡಿಸಬೇಕು.
೮) ಅದೇ ಪ್ರಕಾರ ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಬಸವಣ್ಣನವರ ಅರಿವಿನ ಗುಹೆ ಪಕ್ಕದಲ್ಲಿಯೆ ಇರುವ ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗುಹೆಯನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇರಿಸಿ ಅಭಿವೃದ್ಧಿ ಪಡಿಸಬೇಕು ಹಾಗೂ ನಾಮಫಲಕ ಅಳವಡಿಸಬೇಕು ಮತ್ತು ಪ್ರವಾಸೋಧ್ಯಮ ಕೇಂದ್ರಗಳನ್ನಾಗಿ ಮಾಡಬೇಕು. ಏಕೆಂದರೆ ಆಗಿನ ಸಮಕಾಲಿನ ಶಿವಶರಣರ ಗುಹೆಗಳನ್ನು ಅಲ್ಲಿನ ಪ್ರಾಧಿಕಾರದಲ್ಲಿ ಸೇರಿಸಿದ್ದು ಈ ಗುಹೆಯನ್ನು ಮಾತ್ರ ಬಿಟ್ಟಿದ್ದು ನಮ್ಮ ಸಮಾಜಕ್ಕೆ ನೋವಿನ ಸಂಗತಿಯಾಗಿದೆ.
೯) ಬಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕ ಶ್ರೀಕ್ಷೇತ್ರ ತಂಗಡಗಿಯ ಹಡಪದ ಅಪ್ಪಣ್ಣದೇವರ
ಮಹಾಸಂಸ್ಥಾನ ಮಠದ ಅಭಿವೃದ್ಧಿಗಾಗಿ ರೂ ೧೦ ಕೋಟಿ ಅನುದಾನವನ್ನು ಬಿಡುಗಡೆ ಮಾಡಬೇಕು.
೧೦) ಅತೀ ಹಿಂದುಳಿದ ಹಡಪದ ಸಮಾಜಕ್ಕೆ ಸರ್ಕಾರದಿಂದ ಕುಲಶಾಸ್ತ್ರೀಯ ಅಧ್ಯಯನವನ್ನು ಉತ್ತರ
ಕರ್ನಾಟಕದ ಯಾವುದಾದರು ಒಂದು ವಿಶ್ವವಿದ್ಯಾಲಯದಿಂದ ಒದಗಿಸಿಕೊಡಬೇಕು. ಅಧ್ಯಯನ
ಮಾಡಿಸಿ ನಮಗೆ ನ್ಯಾಯ ಒದಗಿಸಬೇಕು.
೧೧) ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ಅಧ್ಯಕ್ಷರಾದ ಶ್ರೀ ಕಾಂತರಾಜು ಅವರು
ತಯಾರಿಸಿದ ಜಾತಿಗಣತಿ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು. ಯಾವುದೇ ಸಂದರ್ಭದಲ್ಲಿ
ನಮ್ಮ ಜಾತಿಯನ್ನು ಮುಂದುವರೆದ ಲಿಂಗಾಯತರ ಪಟ್ಟಿಯಲ್ಲಿ ಸೇರಿಸಬಾರದು.
೧೨) ಈ ನಮ್ಮ ರಾಜ್ಯ ಹಡಪದ ಸಂಘಕ್ಕೆ ಬೆಂಗಳೂರು ಕೇಂದ್ರ ಸ್ಥಾನದಲ್ಲಿ ನಮ್ಮ ಬಡಮಕ್ಕಳಿಗೆ ಶಾಲಾ
ಕಾಲೇಜು, ಹಾಸ್ಟೇಲ್ ತೆರೆಯಲು ಮತ್ತು ಸಮುಧಾಯ ಭವನ ಸ್ಥಾಪಿಸಲು ೦೫ ಎಕರೆ ಭೂಮಿಯನ್ನು ನೀಡಬೇಕು. ಅದೇ ಪ್ರಕಾರ ಜಿಲ್ಲಾ ಕೇಂದ್ರಗಳಲ್ಲಿ ೦೩ ಎಕರೆ ಜಾಗೆಯನ್ನು ಹಾಗೂ ತಾಲೂಕಾ ಕೇಂದ್ರಗಳಲ್ಲಿ ೦೨ ಎಕರೆ ಜಾಗೆಯನ್ನು ನಮ್ಮ ಸಮಾಜದ ರಾಜ್ಯ ಮತ್ತು ಜಿಲ್ಲಾ ಮತ್ತು ತಾಲೂಕಾ ಸಂಘಗಳಿಗೆ ನೀಡಬೇಕು ಹಾಗೂ ಇದಕ್ಕೆ ಅನುದಾನ ನೀಡಬೇಕು.
೧೩) ಪ್ರತೀ ಜಿಲ್ಲೆ, ತಾಲೂಕು ಮತ್ತು ಹೋಬಳಿಗಳಲ್ಲಿ ನಮ್ಮ ಬಡ ಕ್ಷೌರಿಕರಿಗೆ ಅನುಕೂಲವಾಗಲು ಕ್ಷೌರಿಕ
ಕುಟೀರಗಳನ್ನು ಸರ್ಕಾರವೇ ೧೦’ x ೧೦’ ವಿಸ್ತೀರ್ಣದಲ್ಲಿ ಸ್ಥಾಪಿಸಿಕೊಡಬೇಕು.
ವರದಿ- ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್