ಡಿ.ವಿ.ಎಸ್ ಸಂಜೆ ಕಾಲೇಜು ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ 2024-25 ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಮಲೇಶಂಕರ ಗ್ರಾಮದಲ್ಲಿ ದಿನಾಂಕ 12-12-24 ರಿಂದ18-12-24 ರವರೆಗೆ ನಡೆಯದಿದ್ದು ಇದರ ಉದ್ಘಾಟನ ಕಾರ್ಯಕ್ರಮವನ್ನು ದಿನಾಂಕ 17-18-24 ಮಂಗಳವಾರ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀ ಸಂತೋಷ್ ಎಂ.ಎಸ್.ಬಿಎ ಎಲ್ಎಲ್.ಬಿ (ಹಾನರ್ಸ )
ಎಲ್ ಎಲ್. ಎಂ. ಹಿರಿಯ ಸಿವಿಲ್ ನ್ಯಾಯಾಧೀಶರು ,ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ. ಇವರು ಭಾಗವಹಿಸಿ ಕಾನೂನು ಅರಿವು-ನೆರವು ವಿಷಯದ ಕುರಿತು ಉಪನ್ಯಾಸ ನೀಡಿದರು.
ಮತ್ತೊರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಸಿದ್ದಲಿಂಗರೆಡ್ಡಿ ,ಕ.ಆ.ಸೆ (ಹಿರಿಯ ಶ್ರೇಣಿ) ಅಪರ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಗಳು ಶಿವಮೊಗ್ಗ,ಇವರು ಭಾಗವಹಿಸಿ ಮಲೆಶಂಕರ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡುವುದಾಗಿ ತಿಳಿಸಿದರು..ಕಾರ್ಯಕ್ರಮದಲ್ಲಿ ಶ್ರೀ ದೇವೆಂದ್ರಪ್ಪ ಹಾಗೂ ಶ್ರೀ ಸಚಿನ್, ಕಾನೂನು ಸಹಾಯಕರು ಇವರು ಉಪಸ್ಥಿತರಿದ್ದರು..ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಹಾಲಪ್ಪ ಎಂ.ಜೆ ಸದಸ್ಯರು ದೇವಸ್ಥಾನ ಮುಜರಾಯಿ ಸಮಿತಿ,ಮಲೆಶಂಕರ ಇವರು ವಹಿಸಿಕೊಂಡಿದ್ದರು ಗ್ರಾಮಸ್ಥರ ಪರವಾಗಿ ಶ್ರೀ ಶಂಕರಮೂರ್ತಿ, ಜಿಲ್ಲಾ ಕೋರ್ ಕಮಿಟಿ ಸದಸ್ಯರು,ಮಾನವ ಹಕ್ಕುಗಳ ಆಯೋಗ ಶಿವಮೊಗ್ಗ ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಕುವೆಂಪು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸಂಯೋಜನಾ ಅಧಿಕಾರಿ ಆದಂತಹ ಡಾ. ಶುಭಾ ಮರವಂತೆ ರವರು ಆಗಮಿಸಿ ಶಿಬಿರಾರ್ಥಿಗಳ ಮತ್ತು ಶಿಬಿರದ ಮಹತ್ವ ಕುರಿತು ಮಾಹಿತಿ ನೀಡಿದರು ,ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ಪ್ರೊ ಎ.ಟಿ.ಪದ್ಮೇಗೌಡ .. ಪ್ರಾಂಶುಪಾಲರು ಡಿವಿಎಸ್ ಸಂಜೆ ಕಾಲೇಜು ಶಿವಮೊಗ್ಗ ಇವರು ನೆರವೆರಿಸಿದರು ..ಕಾರ್ಯಕ್ರಮದಲ್ಲಿ ಡಿವಿಎಸ್ ಸಂಜೆ ಕಾಲೇಜು ವತಿಯಿಂದ ಶ್ರೀ ಸುರೇಶ್,ಮನು.ಎಸ್ ಮೂರ್ತಿ, ಶ್ರೀಮತಿ ವೀಣಾ ಹಾಗೂ ಮಂಜುನಾಥ್ ಉಪಸ್ಥಿತರಿದ್ದರು,ಕಾರ್ಯಕ್ರಮದ ನಿರೂಪಣೆಯನ್ನು ಮಧುಸೂದನ್ ರವರು ಹಾಗೂ ಸ್ವಾಗತ ಕಾರ್ಯಕ್ರಮವನ್ನ ಮಂಜಪ್ಪ ಜಿ ಕೆ.ಎನ್ ಎಸ್ ಎಸ್ ಅಧಿಕಾರಿಗಳು ಇವರು ಮಾಡಿದರು .ಸಫಿವುಲ್ಲಾ ಶಿಬಿರಾರ್ಥಿ ಇವರು ಗಣ್ಯರನ್ನು ವಂದಿಸಿದರು..
