ಬೆಂಗಳೂರಿನ ಮಾಗಡಿರಸ್ತೆ ಪೋಲಿಸ್ ಕಾಲೋನಿ, ಸರ್ಕಾರಿ ಫ್ರೌಡಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 566(90.56%) ಅಂಕಗಳನ್ನು ಪಡೆದ ಶಿಲ್ಪಶ್ರೀ.ಜಿ ಗೆ ಅವರ ತಾತಾ ಮರಿಸ್ವಾಮಿ, ಅಜ್ಜಿ, ತಂದೆ ತಾಯಿ ದೊಡ್ಡಪ್ಪ ದೊಡ್ಡಮ್ಮ ಅತ್ತೆ ಮಾವ ಹಾಗೂ ಕುಟುಂಬವರ್ಗದವರು ಶುಭ ಹಾರೈಸಿದ್ದಾರೆ
POST
ಜಾತಿ ಗಣತಿಯಲ್ಲಿ ಕಾಲಂ61ರಲ್ಲಿ ಮಾದಿಗ ಎಂದು ಮಾತ್ರ ಬರೆಸಿ
ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದಂತಹ ಪಾಲನಳ್ಳಿ ಸಿದ್ದರಾಜು ಸ್ವಾಮಿಗಳು ಮಾದಿಗ ಸಮುದಾಯಕ್ಕೆ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ.ಒಳಮೀಸಲಾತಿ ಜಾರಿ ಆದಾಗ ಮಾತ್ರ ಪರಿಪಕ್ವವಾಗಿ ದೊರೆಯುತ್ತದೆ. ಮೇ 5ರಂದು ನಡೆಯುವ ಜಾತಿ ಗಣತಿಯಲ್ಲಿ ಕಾಲಂ61ರಲ್ಲಿ ಮಾದಿಗ ಎಂದು ಬರೆಸಬೇಕು.ಇದಾದಾಗ ಒಗ್ಗಟ್ಟಾಗಿ ಸಮುದಾಯಕ್ಕೆ ಬಲ ದೊರೆಯುತ್ತದೆ. ನಮ್ಮ ಸಮುದಾಯದಲ್ಲಿಅನಕ್ಷರಸ್ಥರು ಹೆಚ್ಚು ಹೀಗಾಗಿ ಮಾದಿಗ ಎಂದು ಮಾತ್ರ ಬರೆಸಬೇಕು.ಹೀಗಾದಾಗ ಮಾತ್ರ ನ್ಯಾಯ ದೊರೆಯಲಿದೆ ಎಂದರು.ಮಾದಿಗ ಸಮುದಾಯ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಪ್ರಾತಿನಿಧ್ಯ ದೊರೆಯುತ್ತಿಲ್ಲ.ಕಾಲಂ ನಂಬರ್ 061 ನಲ್ಲಿ ಮಾದಿಗ ಎಂದು ಬರೆಸಿ ಎಂದರು.
ಪಟ್ರೆನಳ್ಳಿ ಕೃಷ್ಣ ಮಾತನಾಡುತ್ತ ಪರಿಶಿಷ್ಟ ಜಾತಿಯಲ್ಲಿರುವ 101ಜಾತಿಯಲ್ಲಿ ಮಾದಿಗ ಅತ್ಯಂತ ಹಿಂದುಳಿದ ಸಮುದಾಯ ಆಗಿದೆ. ದತ್ತಾಂಶ ಸಂಗ್ರಹಕ್ಕೆ ಬಂದಾಗ ಮಾದಿಗ ಎಂದು ಮಾತ್ರ ಬರೆಸಿ ಎಂದು ಮನವಿ ಮಾಡಿದರು
ಪತ್ರಿಕಾಗೋಷ್ಠಿಯಲ್ಲಿ ಪಾಲಿನ ಹಳ್ಳಿ ಸಿದ್ಧರಾಜು ಸ್ವಾಮೀಜಿ,ಮಾಜಿ ಶಾಸಕಿ ಅನಸೂಯಮ್ಮ, ಬೆಳವಾಡ ಮಾದಿಗ ಸಮುದಾಯದ ಆನಂದ ಗುರೂಜಿ, ನಾರಾಯಣಸ್ವಾಮಿ, ವಿಜಯಶಂಕರ್, ಪಟ್ರೇನಹಳ್ಳಿ ಕೃಷ್ಣ ಇತರರು ಹಾಜರಿದ್ದರು
ವಿಶ್ವ ಬಸವ ಜಯಂತಿಯನ್ನು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು
ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಸವ ಜಯಂತಿಯನ್ನು ಆಚರಿಸಲಾಯಿತು. ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಿದರು ಪೂಜ್ಯಶ್ರೀ ಶಿವರುದ್ರಮಹಾಸ್ವಾಮಿಗಳು ಅದ್ಯಕ್ಷರು ಬೇಲಿಮಠ ಮಹಾಸಂಸ್ಥಾನ ಬೆಂಗಳೂರು ದಿವ್ಯ ಸಾನಿಧ್ಯವನ್ನು ವಹಿಸಿದ್ದರು
ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್, ಎಂಬಿ ಪಾಟೀಲ್ ಪ್ರಿಯಾಂಕ್ ಖರ್ಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶ್ರೀ ಕೆ ಮೋಹನ್ ದೇವ ಆಳ್ವಾ ಶ್ರೀಯುತರು ಬೆಂಗಳೂರು ಮಾಜಿ ಕಾರ್ಪೊರೇಟರ್ ಮತ್ತು ಬಸವ ಸಮಿತಿಯ ಟ್ರಸ್ಟ್ ನ ಚುನಾಯಿತ ಸದಸ್ಯರು ಅವರಿಗೆ “ದಾಸೋಹ ರತ್ನ” ಪ್ರಶಸ್ತಿ ಪ್ರಧಾನವನ್ನು ಮಾಡಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರವಿಂದ ಜತ್ತಿ ರವರು ವಹಿಸಿಕೊಂಡಿದ್ದರು ಇದೇ ಸಂದರ್ಭದಲ್ಲಿ ಶ್ರೀದೇವ ಆಳ್ವ ಹಾಗೂ ಕೊಡಮನ ಗುತ್ತು ಶ್ರೀಮತಿ ವಿಟ್ಟಮ್ಮ ಆಳ್ವಾರ್ ಅವರ ಸಂಸ್ಮರಣೆಯಲ್ಲಿ ವಚನ ಸಂಗೀತ ಮತ್ತು ಕಲೆಗೆ ಸಲ್ಲಿಸುತ್ತಿರುವ ಅಪ್ರತಿಮಾ ಸೇವೆಗಾಗಿ ಶ್ರೀ ತೊಂಟಪ್ಪ ಉತ್ತಂಗಿ ಚಿತ್ರದುರ್ಗ ರವರಿಗೆ ಗೌರವ ಸಮರ್ಪಣೆಯಾಗಿ ಒಂದು ಲಕ್ಷ ರೂಪಾಯಿಗಳನ್ನು ಒಳಗೊಂಡ ಪ್ರಶಸ್ತಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು

ಸುರಪುರದಲ್ಲಿ ವಿಜೃಂಭಣೆದಿಂದ ಆಚರಿಸಿದ ಬಸವ ಜಯಂತಿ
ಸುರಪುರ : ಸುರಪುರದಲ್ಲಿ ಸಮಾನತೆಯ ಹರಿಕಾರ ಮಹಾ ಮಾನವವತಾವಾದಿ, ಮಾನವ ಸಂವಿಧಾನ ಶಿಲ್ಪಿ ಮಾನವ ಹಕ್ಕುಗಳ ಹರಿಕಾರ ಮಹಿಳಾಸಮಾನತೆಯ ಪ್ರತಿಪಾದಕರು,ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ 892ನೇ ಜಯಂತಿ ವಿಜ್ರಂಭಣೆಯಿಂದ ಆಚರಿಸಲಾಯಿತು. ನಗರದ ಪಂಚಾಂಗ ಮಠ ದಲ್ಲಿ ಮಹಭಿಷೇಕದ ಮೂಲಕ ಪೂಜಾ ಕಾರ್ಯಕ್ರಮ ಪ್ರಾರಂಭವಾಗಿ ಇದರ ನೇತೃತ್ವವನ್ನು ವೀರೇಶ್ ಪಂಚಾಂಗಮಠ ಇವರು ನೆರವೇರಿಸಿ ಕೊಟ್ಟರು. ನಂತರ ಧ್ವಜಾರೋಹಣ ಕಾರ್ಯಕ್ರಮವನ್ನು ರಾಜ್ಯ ಕೃಷ್ಣಪ್ಪ ನಾಯಕ, ರಾಜ ಕುಮಾರ್ ನಾಯಕ, ರಾಜಶೇಖರ್ ಗೌಡ ವಜ್ಜಲ್, ಸುನಿಲ್ ಶೆಟ್ಟಿ, ಮಲ್ಲಣ್ಣ ಸಾಹುಕಾರ ಮುಧೋಳ್, ಸಮಾಜದ ಬಾಂಧವರ ಉಪಸ್ಥಿತಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮಾಡಲಾಯಿತು. ದಿನಾಂಕ 30 -4 – 2025 ರಂದು ಪಂಚಾಂಗ ಮಠದಿಂದ ಹಲವು ಪ್ರಮುಖ ಬೀದಿಗಳ ಮೂಲಕ ಬೈಕ್ ಗಳ ಮೂಲಕ ತಹಶೀಲ್ದಾರ್ ಕಾರ್ಯಾಲಯ ವರೆಗೆ ಬೈಕ್ ರ್ಯಾಲಿ ನಡೆಸಿದರು ತಹಶೀಲ್ದಾರ್ ಕಾರ್ಯಾಲಯದಲ್ಲಿ ಬಸವೇಶ್ವರರ ಜಯಂತಿ ಉತ್ಸವವನ್ನು ಅದ್ದೂರಿಯಾಗಿ ಆಚರಣೆಯನ್ನು ಮಾಡಲಾಯಿತು.
ಸಾಯಂಕಾಲ ಬಸವೇಶ್ವರರ ಭವ್ಯ ಮೆರವಣಿಗೆ ಪಂಚಾಂಗದಿಂದ ಗಾಂಧಿ ವೃತ ಮಾರ್ಗವಾಗಿ, ಗೋಪಾಲಸ್ವಾಮಿ ದೇವಸ್ಥಾನದ ಮಾರ್ಗವಾಗಿ ಕಬಾಡಗೆರಾ ಓಣಿ ಮಾರ್ಗವಾಗಿ ಪುನ ಪಂಚಾಂಗಮಠ ಅವರಿಗೆ ಸಾಗಿ ಪುನಃ ಮಠದ ಆವರಣದಲ್ಲಿ ಮೆರವಣಿಗೆ ಸ್ವಪ್ನಗೊಂಡಿತು.
ಭವ್ಯ ಮೆರವಣಿಗೆಯಲ್ಲಿ ರಾಜ ಹನುಮಪ್ಪ ನಾಯಕ್ ತಾತ, ನಗರಸಭೆ ಸದಸ್ಯರಾದ ವೇಣು ಮಾಧವ್ ನಾಯಕ, ಶಂಕರ್ ನಾಯಕ, , ಶರಣಪ್ಪ ಹಳ್ಳದ, ಮಂಜುನಾಥ್ ಜಾಲಹಳ್ಳಿ ಮುಖಂಡರು ಸಮಾಜದ ಎಲ್ಲಾ ಬಾಂಧವರು ಪಾಲ್ಗೊಂಡಿದ್ದರು.
ಭವ್ಯ ಮೆರವಣಿಗೆಯಲ್ಲಿ ನಾಸಿಕ ಡೋಲು ಬಡಿತವು ಆಕರ್ಷಣೆಯಾಗಿತ್ತು. ಬಸವ ಜಯಂತಿಯಲ್ಲಿ ಸುರಪುರ ನಗರದ ಬಸವ ಭಕ್ತಾದಿಗಳು ಹೆಜ್ಜೆ ಹಾಕುವ ಮೂಲಕ ಸಡಗರದಿಂದ ಜಯಂತಿಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ,ವೀರೇಂದ್ರ ನಿಷ್ಠೀ ದೇಶಮುಖ ಸುನಿಲ್ ಸರ್ ಪಟ್ಟಣಶೆಟ್ಟಿ ಶರಣಯ್ಯಾ ಸ್ವಾಮಿ ಮಠಪತಿ ಮಿಟಲಾಕ್ಷೀ ಪಂಚಾಂಗಮಠ ಸಿದ್ದಣ್ಣ ದಿಗ್ಗಾವಿ ಸೂಗರೇಶ ಮಡ್ಡಿ ಮಹೇಶ್ ಹಳ್ಳದ ಶರಣಪ್ಪ ಹಳ್ಳದ ಸಿದ್ದಯ್ಯ ಸ್ವಾಮಿ ಬಳುಂಡಿಮಠ ಸುಗರೇಶ ವಾರದ ಶರಣು ಬೆಚ್ಚಿನಮನಿ, ಸಮಾಜದ ಎಲ್ಲಾ ಹಿರಿಯರು ಯುವಕರು ಪಾಲ್ಗೊಂಡಿದ್ದರು.
ಕಾರ್ಮಿಕರು ದೇಶದ ಆಸ್ತಿ ಪಿ.ಡಿ.ಓ.ಮಹಮದ್ಗೌಸ್
ಹೂವಿನಹಡಗಲಿ..ನವಲಿ ಗ್ರಾಮ ಪಂಚಾಯತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸದ ಸ್ಥಳದಲ್ಲಿ ಕೂಲಿಕಾರರೊಂದಿಗೆ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪಿಡಿಒ ರವರಾದ ಮಹ್ಮದ್ ಗೌಸ್ ಬಿಲ್ಲುಖಾನ್ ರವರು ಮಾತನಾಡಿ ಕಾರ್ಮಿಕರು ದೇಶದ ಆಸ್ತಿ ಕಾರ್ಮಿಕರಿಗೆ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಅದನ್ನು ಎಲ್ಲರೂ ಉಪಯೋಗಿ ಸಮೃದ್ಧಿ ಜೀವನ ರೂಪಿಸಿಕೊಳ್ಳಲು ತಿಳಿಸಿ ಶುಭ ಕೋರಿದರು ಹಾಗೂ ಸದಸ್ಯರಾದ ಶ್ರೀ ಟಿ. ಲಕ್ಷ್ಮಣ್ ಹಾಗೂ ಮುಖಂಡರಾದ ಶ್ರೀ ಪ್ರಶಾಂತ್ ಪಿ ಹಾಗೂ ಉದ್ಯೋಗ ಖಾತ್ರಿ ಮೇಟಿಗಳು, ಕೂಲಿಕಾರರು ಹಾಜರಿದ್ದರು. ಈ ಸಂದರ್ಭದಲ್ಲಿ ಕೂಲಿಕಾರರಿಗೆ ಪ್ರತಿ ಗುಂಪಿಗೆ ಒಂದು ಕುಡಿಯುವ ನೀರಿನ ಕ್ಯಾನ್ ವಿತರಿಸಲಾಯಿತು ದಿನಾಚರಣೆಯಲ್ಲಿ ನೂರಾರು ಕಾರ್ಮಿಕರು ಭಾಗವಹಿಸಿದ್ದರು
ಮರದ ಕೆಳಗೆ ಮಲಗಿದ್ದ ರೈತನ ಕಾಲುಗಳ ಮೇಲೆ ಹರಿದ ಟಿಪ್ಪರ್…ಎರಡು ಕಾಲುಗಳು ಮುರಿತ…
ಮಂಡ್ಯ ಅರಳಿ ಮರದ ಕೆಳಗೆ ವಿರಮಿಸುತ್ತಿದ್ದ ರೈತನ ಕಾಲುಗಳ ಮೇಲೆ ಟಿಪ್ಪರ್ ಹರಿದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಆಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪುಟ್ಟೇಗೌಡ ಎಂಬುವವರ ಮೇಲೆ ಹರಿದ ಪರಿಣಾಮ ಎರಡು ಕಾಲುಗಳಿಗೆ ಗಂಭೀರ ಗಾಯವಾಗಿದೆ.
ಪುಟ್ಟೇಗೌಡರ ಎರಡು ಕಾಲುಗಳು ನಜ್ಜುಗುಜ್ಜಾಗಿದೆ.
ಗಾಯಾಳುವನ್ನ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಸವಣ್ಣನವರ ಸಂದೇಶ, ಆದರ್ಶಗಳು ಎಲ್ಲರಿಗೂ ದಾರಿ ದೀಪ:ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ
ಚಿಕ್ಕಬಳ್ಳಾಪುರ
ಹನ್ನೆರಡನೇ ಶತಮಾನದಲ್ಲಿ ವಚನ ಚಳುವಳಿಯ ನೇತಾರ ಬಸವಣ್ಣನವರು ಜನರಿಗೆ ಅರ್ಥವಾಗುವ ಅತ್ಯಂತ ಸರಳ ಭಾಷೆಯಲ್ಲಿ ವಚನಗಳನ್ನು ರಚಿಸುವ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಜನರಲ್ಲಿ ಅರಿವು ಮೂಡಿಸಿದರು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದರು.
ಅವರು ಬುಧವಾರ ಚಿಕ್ಕಬಳ್ಳಾಪುರ ನಗರದ ಬಸವನಗುಡಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ನಾಯಕ , ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಶಿವನನ್ನು ಒಲಿಸಿಕೊಳ್ಳಲು ಆಡಂಬರ,ಡಾಂಭಿಕತೆ ಅವಶ್ಯಕತೆ ಇಲ್ಲ. ಭಕ್ತಿ ಸರಳವಾಗಿ ಮತ್ತು ಪ್ರಾಮಾಣಿಕವಾಗಿದ್ದರೆ ಶಿವ ಎಂತವರಿಗೂ ಒಲಿಯುತ್ತಾನೆ ಎಂಬ ಸಂದೇಶವನ್ನು ನೀಡಿದರು. ಜಾತಿ ತಾರತಮ್ಯಗಳನ್ನು ನಿರಾಕರಿಸಿ ಸಮಾಜದ ವಿವಿಧ ಸ್ತರದ ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಕೆಲಸ ಮಾಡಿದರು. ಅವರ ವಚನಗಳ ಆಶಯಗಳನ್ನು ಅರ್ಥ ಮಾಡಿಕೊಂಡು ಸಮಾಜದ ಬದಲಾವಣೆಗೆ ಶ್ರಮಿಸಬೇಕು ಎಂದು ಪ್ರತಿಯೊಬ್ಬರೂ ಶ್ರಮಿಸಿದರು ಎಂದರು.
ಕಾಯಕವೇ ಕೈಲಾಸ ಎಲ್ಲರೂ ಅಳವಡಿಸಿಕೊಳ್ಳಬೇಕು
ಬಸವಣ್ಣನವರು ಜಗತ್ತಿನ ಮೊದಲ ಸಂಸತ್ತು ಎಂದು ಕರೆಸಿಕೊಳ್ಳುವ ಅನುಭವ ಮಂಟಪವನ್ನು ಸ್ಥಾಪಿಸಿ ಮಹಿಳೆ, ಪುರುಷರು, ಕೆಳ ವರ್ಗದವರು ಎನ್ನದೆ ಎಲ್ಲ ವರ್ಗದವರಿಗೂ ಅವಕಾಶ ನೀಡಿದ್ದ ಅವರು ಆ ಕಾಲಕ್ಕೆ ಸಮಾಜದಲ್ಲಿ ಹೊಸ ಕ್ರಾಂತಿಯನ್ನು ಮಾಡಿದ ಶರಣರಲ್ಲಿ ಅಗ್ರಗಣ್ಯರು. ಇವರ ಒಂದೊಂದು ವಚನವೂ ಎಲ್ಲರ ಬದುಕಿಗೂ ಆದರ್ಶ, ಸ್ಫೂರ್ತಿಯಾಗಿದೆ. 12ನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕ ಬಸವಣ್ಣ. ಇವರ ಸಾರಥ್ಯದಲ್ಲಿ ನಡೆದ ಸುಧಾರಣೆಯ ಪ್ರಯತ್ನ ಒಂದು ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿತ್ತು. ಇವರ ತತ್ವ, ಆದರ್ಶಗಳು, ಚಿಂತನೆಗಳು ಇಂದಿಗೂ ಪ್ರಸ್ತುತ. ಇದು ಜೀವನ ಪಾಠವೂ ಹೌದು. ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದರೆ ಜೀವನ ಸುಖಮಯ. “ಕಾಯಕವೇ ಕೈಲಾಸ”ಎಂದು ಹೇಳಿ ನುಡಿದಂತೆ ನಡೆದವರು. ತಮ್ಮ ವಚನಗಳ ಮೂಲಕವೇ ಜ್ಞಾನದ ಬೆಳಕು ಚೆಲ್ಲಿದವರು.
ಬಸವಣ್ಣ ನವರ ಸಿದ್ದಾಂತಗಳ ಮೇಲೆ ಇಂದಿನ ನಮ್ಮ ಪ್ರಜಾಪ್ರಭುತ್ವ ನಿಂತಿದೆ.ಇವರ ವಚನಗಳು ಹಲವು ಭಾಷೆಗಳಿಗೆ ಭಾಷಾಂತರಗೊಂಡಿವೆ. ದೊಡ್ಡ ದೊಡ್ಡ ಮಹಾ ಗ್ರಂಥಗಳಲ್ಲಿರುವ ಆದರ್ಶಗಳ ಸಾರಂಶವನ್ನು ವಚನಗಳ ಮೂಲಕ ಸರಳ ವಿಧಾನದಲ್ಲಿ ಜನರಿಗೆ ತಲುಪಿಸುವ ಕಾರ್ಯವನ್ನು ಬಸವಣ್ಣ ಮಾಡಿದ್ದಾರೆ.ಅಂದಿನ ಅನುಭವ ಮಂಟಪವು ಇಂದಿನ ಸಂಸತ್ ಗೆ ಸಮ ಎಂದರೆ ತಪ್ಪಾಗಲಾರದು. ವಚನಗಳ ಮೂಲಕ ಜ್ಞಾನದ ಬೆಳಕು ಚೆಲ್ಲಿದ ಮಹಾನ್ ಮಾನವತಾವಾದಿ ಬಸವಣ್ಣನವರ ಸಂದೇಶ, ಆದರ್ಶಗಳು ಎಲ್ಲರಿಗೂ ಪಾಠ, ದಾರಿ ದೀಪವಾಗಬೇಕು ಎಂದು ಜಿಲ್ಲಾಧಿಕಾರಿಗಳು ಬಣ್ಣಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸಕರು ಹಾಗೂ ಆಕಾಶವಾಣಿ,ದೂರದರ್ಶನ ಚಂದನವಾಹಿನಿಯ ಜಿಲ್ಲಾ ವರದಿಗಾರ ಎನ್ ಚಂದ್ರಶೇಖರ್ ಅವರು ಮಾತನಾಡುತ್ತಾ,12ನೇ ಶತಮಾನದಲ್ಲೇ ಜಾತಿ ವ್ಯವಸ್ಥೆಯನ್ನು ತೊಲಗಿಸಲು ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾದವರು ಬಸವಣ್ಣನವರು ಆದರೂ ಕೂಡ 21ನೇ ಶತಮಾನದ ಪ್ರಸ್ತುತದಲ್ಲೂ ಜಾತಿ ವ್ಯವಸ್ಥೆಯ ಜಾಡ್ಯ ಹೋಗದಿರುವುದು ಕಳವಳಕಾ ರಿ ವಿಚಾರ. ಬಸವಣ್ಣನವರ ವಚನಗಳು ಜಾತಿ ವ್ಯವಸ್ಥೆಯ ಆಚರಣೆಯನ್ನು ನೇರವಾಗಿ ದಿಕ್ಕರಿಸುತ್ತವೆ. ಬಸವಣ್ಣನವರಂತೆ ಅನೇಕ ವಚನಕಾರರು ವಚನ ಸಾಹಿತ್ಯ ರಚನೆ ಮೂಲಕ ಸಾಮಾಜಿಕ ಪರಿವರ್ತನೆಗೆ ಪ್ರಯತ್ನ ಪಟ್ಟಿದ್ದಾರೆ ಆದ್ದರಿಂದ ಅನೇಕ ವಚನಕಾರರ ಜಯಂತಿಗಳನ್ನು ಸರ್ಕಾರ ಆಚರಣೆ ಮಾಡುತ್ತಿದೆ ಆ ಜಯಂತಿಗಳಿಗೂ ಎಲ್ಲಾ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಮುಂದಿನ ದಿನಗಳ ಅಚರಿಸಬೇಕು,ಜೊತೆಗೆ ಅವರ ವಿಚಾರದಾರೆಗಳು, ಆದರ್ಶಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿ ಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅತಿಕ್ ಪಾಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ತಹಸಿಲ್ದಾರ್ ಅನಿಲ್,ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾರಾಯಣಸ್ವಾಮಿ,ಸಮುದಾಯದ ಮುಖಂಡರಾದ ಬಿ ಗಿರೀಶ್,ಮಹೇಶ್ ಬಸ್ಸಾಪುರ ಹಾಗೂ ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಲಿಂಗಾಯತ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಜಗತ್ತಿನ ಮೊಟ್ಟ ಮೊದಲ ಸಮಾಜ ಸುಧಾರಕ ಮಹಾತ್ಮ ಬಸವೇಶ್ವರರು.
ಅರ್ಥವಾಗದ ಭಾಷೆಯನ್ನು ಧಿಕ್ಕರಿಸಿ, ದೂರದ ದೇಶಗಳಿಂದ ಬಂದ ಸೂಫಿ ಸಂತರು,ದೇಶದ ಬೇರೆ ಬೇರೆ ರಾಜ್ಯಗಳಿಂದ ಬಂದ ಕಾಶಿಯ ರಾಜ ದಂಪತಿಗಳು ಇನ್ನು ಅನೇಕ ಶರಣ ದಂಪತಿಗಳಿಗೆ ಕನ್ನಡವನ್ನು ಕಲಿಸಿ ಸರಳ ಕನ್ನಡದಲ್ಲಿ ವಚನಗಳನ್ನು ಬರೆಯುವಂತೆ ಪ್ರೇರಣೆ ನೀಡಿದ ಅಪ್ಪಟ ಕನ್ನಡಿಗ.
ವೇದ,ಉಪನಿಷತ್ತು,ಸಂಸ್ಕೃತ,ಹಿಂದಿ ಹೀಗೆ ಎಲ್ಲಾ ಪಾಂಡಿತ್ಯ ಗೊತ್ತಿದ್ದರೂ ಕನ್ನಡದಲ್ಲಿ ವಚನಗಳನ್ನು ರಚಿಸಿ ಇನ್ನಿತರರು ಕನ್ನಡದಲ್ಲಿ ವಚನಗಳನ್ನು ರಚಿಸುವಂತೆ ಮಾರ್ಗದರ್ಶನ ನೀಡಿ ಅಪ್ಪಟ ಕನ್ನಡ ಪ್ರೇಮಿ ಎಂದೆನಿಸಿದ ಕನ್ನಡದ ಚಳುವಳಿಗಾರ.
ಹನ್ನೆರಡನೇ ಶತಮಾನದಲ್ಲಿ ಅಂತರ್ಜಾತಿ ವಿವಾಹವನ್ನು ಮಾಡಿ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಮುನ್ನುಡಿ ಬರೆದ ಕ್ರಾಂತಿಕಾರಿ.
ಮಹಿಳೆಯರಿಗೂ ಲಿಂಗ ದೀಕ್ಷೆಯನ್ನು ನೀಡಿ ಅವರಿಗೂ ವಿದ್ಯೆ ಕಲಿಸಿ ಅನುಭವ ಮಂಟಪದಲ್ಲಿ ಚರ್ಚಿಸಲು ಅವಕಾಶ ನೀಡಿ ಅಂದೇ ಸಂಸತ್ತನ್ನು ಪರಿಚಯಿಸಿ ಜಗತ್ತಿನ ಮೊಟ್ಟ ಮೊದಲ ಬಾರಿಗೆ ಆ ಕಲ್ಪನೆ ನೀಡಿದ ಮಹಾಮಾನವತಾವಾದಿ.
ಜಾತಿ,ವರ್ಣ,ಲಿಂಗ,ಅಸ್ಪೃಶ್ಯತೆ
ಇಂತವುಗಳನ್ನು ಧಿಕ್ಕರಿಸಿ
ಕಾಯಕ,ದಾಸೋಹ,ಸಮಾನತೆ,ಭಕ್ತಿ ತಳಹದಿಯ ಮೇಲೆ ಸಮಾಜವನ್ನು ಕಟ್ಟಿದ ಲಿಂಗಾಯತ ಧರ್ಮ ಸ್ಥಾಪಕ.
ಇಂದಿನ ವಿಶ್ವಸಂಸ್ಥೆಯ ಮತ್ತು ಜಗತ್ತಿನ ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳ ಬಹುತೇಕ ಆಶಯಗಳನ್ನು, ಆ ಕಲ್ಪನೆಗಳನ್ನು ಜಗತ್ತಿಗೆ ಮೊಟ್ಟಮೊದಲಬಾರಿಗೆ ನೀಡಿದ ಮಹಾಜ್ಞಾನಿ.
ನಿರ್ಗತಿಕರಿಗೆ,ಅಸಹಾಯಕರಿಗೆ,ದಲಿತರಿಗೆ ತುಳಿಯಲ್ಪಟ್ಟ ಜೀವಿಗಳಿಗೆ ಕೇವಲ ಮನುಷ್ಯನಷ್ಟೇ ಅಲ್ಲದೆ ಸಕಲ ಜೀವಾತ್ಮರಿಗೆ ಲೇಸನೇ ಬಯಸಿ ಎಲ್ಲರನ್ನೂ ಎತ್ತಿ ಕೈ ಹಿಡಿದು ಮುನ್ನಡೆಸಿ ಮುಖ್ಯ ವೇದಿಕೆಗೆ ಬರಲು ಕಾರಣಿಭೂತನಾದ ಕರ್ತೃ.
ಪ್ರಭು ಪ್ರಭುತ್ವದ ಪರಂಪರೆಯಲ್ಲಿ ಮನು ಸ್ಮೃತಿಯಂತಹ ಬದುಕಲು ಬಿಡದ ಮತ್ತು ಅರ್ಥವಾಗದ,ಜನಸಾಮಾನ್ಯರಿಗೆ ಸಿಗದ ಪುರಾಣ,ವೇದ,ಉಪನಿಷತ್ಗಳತಹ
ಮಹಾನ್ ಗ್ರಂಥಗಳನ್ನು ಧಿಕ್ಕರಿಸಿ ವಚನ ಚಳುವಳಿಗೆ ಮುನ್ನುಡಿ ಬರೆದ ಮಹಾತ್ಮ.
ನೀನು ಈ ಭೂಮಿಗೆ ಬರದಿದ್ದರೆ ನಮ್ಮ ಅಸ್ತಿತ್ವ ಎಲ್ಲಿರುತ್ತಿತ್ತು ಹೇಗಿರುತ್ತಿತ್ತು ಎಂದು ನಮ್ಮೊಳಗೆ ಪ್ರಶ್ನಿಸುವ ಕಾಲ ಬಂದಿದೆ.
ಭಕ್ತಿಭಂಡಾರಿ,ಆದರ್ಶ ಪ್ರಧಾನಿ,
ಬಿಜ್ಜಳನ ಬಸವ ರಾಜ್ಯದ ಮಾದರಿ, ಲಿಂಗಾಯಿತ ಧರ್ಮದ ರುವಾರಿ.
ಕಾಯಕದ ಮಹತ್ವವನ್ನು ತಿಳಿಸಿ ಕಾರ್ಮಿಕ, ರೈತರ ಕ್ಷಮತೆಯನ್ನು ಹೆಚ್ಚಿಸಿ ಬೆಳೆ ಮತ್ತು ಉತ್ಪಾದನೆ ಅಧಿಕಗೊಳಿಸಿ ಬಿಜ್ಜಳನ ಬಂಡಾರಕ್ಕೆ ಸ್ವಯಂ ಪ್ರೇರಿತ ಸುಂಕ ಬರುವಂತೆ ಮಾಡಿ, ಸೋಹo ಎನಿಸದೆ ದಾಸೋಹo ಎನಿಸಿ ಹಸಿವಿನ ಆಹಾಕಾರ ನೀಗಿಸಿದ ನಿಪುಣ.
ವೈಜ್ಞಾನಿಕ,ವೈಚಾರಿಕ,ಸಮಾನತೆ ಮುಖೇನ ದೇವರ ಸ್ಪಷ್ಟ ಕಲ್ಪನೆಯನ್ನು ಇಷ್ಟಲಿಂಗವೆಂಬ ಕುರುವಿನ ಮುಖಾಂತರ ಶಿವ ಅಥವಾ ಪರಮಾತ್ಮನ ಅಗೋಚರ ಶಕ್ತಿಯನ್ನು ಏಕದೇವೋಪಾಸನೆ ಮಾಡಿ ಆತ್ಮ ಜಾಗೃತಿಗೊಳಿಸಿ ಲಿಂಗೈಕ್ಯನಾಗುವ ಅಥವಾ ಪರಮಾತ್ಮನಲ್ಲಿ ವಿಲೀನಗೊಳ್ಳುವ ಸಾಕ್ಷಾತ್ ಪರಮಾತ್ಮನೇ ತಾನೇ ಆಗುವ ಮಾರ್ಗ ತೋರಿ ದೇಹವನ್ನೇ ದೇಗುಲವನ್ನು ಮಾಡಿ ಕೆಲವರಿಗೆ ಮಾತ್ರ ಮೀಸಲಾಗಿದ್ದ ಕಲ್ಲು-ಮಣ್ಣಿನ ಗುಡಿಗಳನ್ನು ದಿಕ್ಕರಿಸಿದ ಧೀರ.
ದೇವರ ಹೆಸರಿನಲ್ಲಿ ಮೋಸ ಮಾಡುವ, ಗುಡಿ-ಗುಂಡಾರದ ಹೆಸರಿನಲ್ಲಿ ಜ್ಯೋತಿಷ್ಯರು ಬ್ರಹ್ಮ ಜ್ಞಾನವನ್ನೇ ಹೇಳುತ್ತೇವೆ ಎನ್ನುವ ಕಲ್ಪನೆಯಲ್ಲಿರುವವರನ್ನು ಧಿಕ್ಕರಿಸಿ ಸರಳ ಸಹಜ ಧರ್ಮವನ್ನು ನೀಡಿದ ಧರ್ಮ ಕರ್ತೃವೇ
ನಿನ್ನಂತೆ ಹಲವು ಶರಣರನ್ನು ಬಸವಾದಿ ಪ್ರಮಥರನ್ನು ಜಗತ್ತಿಗೆ ಪರಿಚಯಿಸಿ ಕನ್ನಡದ ಕಂಪನ್ನು,ಕನ್ನಡದ ಕೀರ್ತಿಯನ್ನು,ಕನ್ನಡಿಗರ ಸ್ವಾಭಿಮಾನವನ್ನು,ಕನ್ನಡದ ಹೆಮ್ಮೆಯನ್ನು, ಕನ್ನಡದ ಭಾಷೆಯನ್ನು,ಕನ್ನಡದ ಸಾಹಿತ್ಯವನ್ನು, ಕನ್ನಡದ ಧರ್ಮವನ್ನು,ಕನ್ನಡಿಗರನ್ನು ಜಗತ್ತಿಗೆ ಗುರುತಿಸುವಂತೆ ಮಾಡಿದ ಕನ್ನಡತನವನ್ನು ನೀಡಿದ-
ಓ ಮಹಾತ್ಮನೇ,
ಓ ಕ್ರಾಂತಿಕಾರಿಯೇ,
ಹೇ ಜಗಜ್ಯೋತಿಯೇ
ಹೇ ವಿಶ್ವ ಗುರುವೇ
ನಮ್ಮ ಉಸಿರೊಳಗೆ ಉಸಿರಾಗಿರುವ
ನಮ್ಮ ದಾರಿದೀಪವೇ, ಮಹಾನ್ ಚೇತನವೇ,
ನಿಮ್ಮ ಹುಟ್ಟು ನಮಗೊಂದು ಬೆಳಕು.
ನಿಮ್ಮ ನಡೆ ನಮಗೊಂದು ಮಾರ್ಗ.
ನಿಮ್ಮ ಬದುಕು ನಮಗೊಂದು ಭರವಸೆ.
ನಿಮ್ಮ ವಚನ ನಮ್ಮ ಧರ್ಮ ಗ್ರಂಥ.
ನೀವೇ ನಮ್ಮ ಮಹಾದೇವ.
ಬಸವಜಯಂತಿ ಅಂದರೆ ನಮ್ಮ-ನಿಮ್ಮೆಲ್ಲರ ಮರುಹುಟ್ಟು.
ಸಮಾಜದ ಅಜ್ಞಾನವನ್ನು ಕಳೆದು,
ನಮ್ಮ ಜ್ಞಾನದ,ನಮ್ಮ ಸಮಾನತೆಯ ಹುಟ್ಟು.
ನಾವು ಜಗತ್ತಿನಲ್ಲಿ ಜಯಿಸುವ ಹುಟ್ಟು.
ತಮ್ಮೆಲ್ಲ ಶರಣ ಬಂಧುಗಳಿಗೆ ಬಸವ ಜಯಂತಿಯ ಶುಭಾಶಯಗಳು
✍ ಮಹೇಶ ಏನ್ ಕೆ
ಕರ್ನಾಟಕ ಪ್ರೆಸ್ ಕ್ಲಬ್ ಜಿಲ್ಲಾಧ್ಯಕ್ಷರು
ಓಂ ಶ್ರೀ ಗುರು ಬಸವ ಲಿಂಗಾಯ ನಮ:
ಜಗಜ್ಯೋತಿ ಗುರು ಬಸವಣ್ಣನವರ ಜಯಂತಿ ಯ ಶುಭಾಶಯಗಳು.
ವಿಶ್ವ ಕ್ಕೆ ಬಂತು ಹೊಸ ಹರುಷ
ಕನ್ನಡ ನಾಡಿನ ಯುಗಪುರುಷ
ಕನ್ನಡಕ್ಕೆ ಬಂತು ಹೊಸ ಹರುಷ
ವಚನ ವಾಘ್ಮಯದ ಮಹಾ ಪರುಷ
ಕನ್ನಡಕ್ಕೆ ಬಂತುಕೀರ್ತಿ ಕಳಶ
ದಾ.ರಾ ಬೇಂದ್ರೆಯವರು ಹೇಳಿದರು
ಕನ್ನಡನಾಡಿನಲ್ಲಿ ಏನಿದೆ ಎಂದು
ಕೇಳಿದರೆ ಎದೆ ತಟ್ಟಿ ಹೇಳುವೆನು ವಚನ ವಾಘ್ಮಯವಿದೆಯೆಂದು
ಆಡು ನುಡಿಯನ್ನೇ ಹಣತೆಯಾಡಿ
ವಚನ ನುಡಿಗಳ ಬೆಳಕನ್ನು ಹಚ್ಚಿ
ಕನ್ನಡ ದೇವಿಗೆ ಲಕ್ಷ ದೀಪೋತ್ಸವ
ಮಾಡಿ ಬೆಳಗಿದರು ಶರಣರು
ರನ್ನ ದೀವಿಗೆಯಂತೆ.
ಗುರು ಬಸವಣ್ಣ ರಚಿಸಿದರು
ವಚನಗಳ ನುಡಿಮುತ್ತುಗಳ
ಸುಲಿದ ಬಾಳೆಯ ಹಣ್ಣಿನಂತೆ
ಬೆಲೆಯಾಯ್ತು ಜಗದಲ್ಲಿ
ವಿಶಿಷ್ಟ ಮೌಲ್ಯದಲ್ಲಿ
ಸಿಕ್ಕಿತು ಬಸವಣ್ಣಗೆ ಜಗಜ್ಯೋತಿ ಇವರೆಂದು.
ಬೆಳಗಿದವು ವಚನಗಳು
ಸಹಸ್ರ ದೀಪಗಳಂತೆ
ವಿಶ್ವ ದಲ್ಲೆಡೆಯಲ್ಲಿ ಕಾರ್ತಿಕೋತ್ಸವದಂತೆ
ಎಲ್ಲೆಲ್ಲೂ ಬಸವಣ್ಣನ ಬೆಳೆಕೇ ಬೆಳಕು
ವಚನೋತ್ಸವದ ಬೆಳಕು
ವಿಶ್ವ ಗುರು ಬಸವಣ್ಣನವರ ಬೆಳಕು.
ಶರಣು ಶರಣಾರ್ಥಿ
ಮಾನವನ ಮನಸ್ಸುಗಳನ್ನು ಮೆಸೆದ ಮಹಾನ್ ಮಾನವತವಾದಿ ಮಹಾತ್ಮ ಬಸವೇಶ್ವರರು..
ಡಾ. ರಾಮಕೃಷ್ಣ

ಮಾನವನ ಮನಸ್ಸುಗಳನ್ನು ಮೆಸೆದ ಮಹಾನ್ ಮಾನವತಾವಾದಿ ಮಹಾತ್ಮ ಬಸವೇಶ್ವರರು.
ಕಾಯಕವೇ ಕೈಲಾಸ ಎಂದು ಸಾರಿ ದುಡಿಮೆಗೆ ಮಹತ್ವ ನೀಡಿದರು. ಆ ಮೂಲಕ ದುಡಿಮೆಯ ಬಗ್ಗೆ ಇರುವ ಮೇಲು ಮತ್ತು ಕೀಳು ಭಾವನೆಗಳನ್ನು ತೊಡೆದು ಕಾರ್ಮಿಕರ ಘನತೆ ಮತ್ತು ಗೌರವವನ್ನು ಹೆಚ್ಚಿಸಿದರೊ. ಕೊಲ್ಲುವವನೇ ಮಾದಿಗ, ಹೊಲಸು ತಿನ್ನುವವನೇ ಹೊಲೆಯ ಎನ್ನುವುದರ ಮೂಲಕ ಆಹಾರಾಧಾರಿತ ಜಾತಿ ವ್ಯವಸ್ಥೆಯನ್ನು ಖಂಡಿಸಿದರು. ಲಿಂಗ ಮಧ್ಯ ಜಗತ್ತು ಸರ್ವಂ, ಎನ್ನುವ ವಿಚಾರದಲ್ಲಿ ಅಂಗದಲ್ಲಿ ಲಿಂಗ ಪೂಜೆ ಮಾಡಿದರೆ ಇಡೀ ಭೂಮಂಡಲ ಪೂಜಿಸಿದಂತೆ, ಚರಾಚರ ಜೀವರಾಶಿಗಳನ್ನು ಗೌರವಿಸಿದ್ದಂತೆ. ಆದ್ದರಿಂದಲೇ ಸಕಲ ಜೀವಿಗಳ ಲೇಸನ್ನು ಬಯಸಿದರು. ದೇಹವೇ ದೇಗುಲ, ಶಿರವೇ ಹೊನ್ನ ಕಳಸ… ಎನ್ನುವ ವಿಚಾರದಲ್ಲಿ ನೂರಾರು ದೇಗುಲಗಳನ್ನು ಸುತ್ತಾಡಿದರೆ ಮುಕ್ತಿ ಸಿಗುವುದಿಲ್ಲ. ನಮ್ಮ ನಿಜವಾದ ದೇಗುಲ ಇರುವ ದೇಹದಲ್ಲಿನ ಮನಸೆಂಬ ಗರ್ಭಗುಡಿಯಲ್ಲಿ ಸತ್ಯ ನುಡಿದರೆ ಆಚಾರ ಅನುಸರಿಸಿದರೆ
ಮುಕ್ತಿ ಸಿಗುವುದು ಎಂದರು. ಇದರಿಂದಲೇ ಆಚಾರವೇ ಸ್ವರ್ಗ, ಅನಾಚಾರವೇ ನರಕ, ಸತ್ಯ ನುಡುವುದೇ ಸ್ವರ್ಗ ಲೋಕ ಮಿತ್ಯ ನುಡಿಯುವುದೇ ಮೃತ್ಯು ಲೋಕ… ಎಂದರು. ಮಾನವನ ಸೂಕ್ಷ್ಮ ಭಾವನೆಗಳಿಗೆ ಗೌರವಿಸಬೇಕು ಎಂದು ಹೇಳಲು ನುಡಿದರೆ ಮುತ್ತಿನ ಹಾರದಂತಿರಬೇಕು,… ಲಿಂಗ ಮೆಚ್ಚಿ ಅಹುದಹುದೆನ್ನಬೇಕು ಎಂದರು. ಒಟ್ಟಾರೆಯಾಗಿ ಮಾನವ ದಾನವವಾಗಿರದೆ ಭೂಮಿ ಮೇಲೆ ಬದುಕುವ ತನಕ ಮನುಷ್ಯನಾಗಿ ಹೇಗೆ ಬಾಳಬೇಕು ಎಂಬ ವಿಚಾರವನ್ನು ಅರುಹಿಸಿದರು. ಭೋಗ ಸಂಸ್ಕೃತಿಯನ್ನು ತೊರೆದು ಯೋಗ ಸಂಸ್ಕೃತಿಯನ್ನು ಅನುಸರಿಸಲು, ಕದ್ದು ತಿನ್ನುವುದನ್ನು ಬಿಟ್ಟು ದುಡಿದು ತಿನ್ನಲು, ತೋರ್ಪಡಿಕೆಯನ್ನು ಬಿಟ್ಟು ನೈಜತೆ ಇಂದಿರಬೇಕು. ಹೀಗೆ ಲಿಂಗ, ಜಾತಿ, ವಿಚಾರ ಭೇದಗಳನ್ನು ತೊಡೆದು ಹಾಕಲು ಶ್ರಮಿಸಿದರು. ತಮ್ಮ ವಿಚಾರಗಳನ್ನು ಅನುಭವ ಮಂಟಪ ಎಂಬ ವಿಶ್ವದ ಪ್ರಥಮ ವಿಚಾರ ವೇದಿಕೆ ಮತ್ತು ಸಂಸತ್ತಿನಲ್ಲಿ ಮೊಳಗಿಸಿ ಬೆಳಗಿಸಿ ಹೊರ ತಂದರು. ಅವರ ವಿಚಾರದಂತೆ, ಹಾಕಿದ ಮಾನವನ ಅಡಿಪಾಯದಂತೆ ಅವರ ನಂತರದ ಅವರ ಅನುಯಾಯಿಗಳು ನಡೆದಿದ್ದರೆ ಭಾರತ ನಿಜ ಅರ್ಥದಲ್ಲಿ ವಿಶ್ವಗುರು ಆಗುತ್ತಿತ್ತು. ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಈ ನಾಡಿನಲ್ಲಿ ನೆಲೆಗೊಳ್ಳುತ್ತಿರಲಿಲ್ಲ. ಇಂದು ನಡೆಯುತ್ತಿರುವ ಜಾತಿ ಮತ್ತು ಧರ್ಮ ಸಂಘರ್ಷ ಭಾರತದಲ್ಲಿ ಕಂಡುಬರುತ್ತಿರಲಿಲ್ಲ. ಅನಾಚಾರ, ಅತ್ಯಾಚಾರ , ಭ್ರಷ್ಟಾಚಾರ , ಪರಿಸರ ನಾಶ, ಜಲ , ವಾಯು ನಾಶ, ಮುಂತಾದ ಮಾನವೀಯ ಕೃತ್ಯಗಳು ಸಂಭವಿಸುತ್ತಿರಲಿಲ್ಲ. ಸತ್ಯಂ ಶಿವಂ ಸುಂದರಂ ಎಲ್ಲೆಡೆ ಕಂಡು ಬರುತ್ತಿತ್ತು. ಮಾನವ ಪ್ರೇಮ ಪತಾಕೆ ಹಾರಾಡುತ್ತಿತ್ತು. ಇಂಥ ಮಹಾತ್ಮರನ್ನು ಪಡೆದ ನಾಡು ಧನ್ಯತೆಯಿಂದ ಅವರನ್ನು ಸ್ಮರಿಸಬೇಕಿದೆ. ಅವರ ಜಯಂತಿ ನಿಮಿತ್ಯ ಅವರು ಹಾಕಿದ ಮಾನವ ಪ್ರೇಮದ ಮಾರ್ಗದಲ್ಲಿ ಮುಂದೆ ಸಾಗುವ ಸಂಕಲ್ಪ ಮಾಡಬೇಕಿದೆ. ಹಾಗೆ ಆಗಲು ಮಾನವನ ಮನಸ್ಸುಗಳಲ್ಲಿ ಮಹಾತ್ಮ ಬಸವೇಶ್ವರರು ವಿಚಾರಗಳನ್ನು ಮತ್ತೊಮ್ಮೆ ಸ್ಮರಿಸಲಿ ಎಂದು ಪ್ರಾರ್ಥಿಸುವೆ.
ಡಾ. ದಿವ್ಯಾ ಕೆ ವಾಡಿ ಮತ್ತು ಡಾ. ರಾಮಕೃಷ್ಣ ಬಿ ಸಹಾಯಕ ಪ್ರಾಧ್ಯಾಪಕರು ಇತಿಹಾಸ ವಿಭಾಗ ಮತ್ತು ಅರ್ಥಶಾಸ್ತ್ರ ವಿಭಾಗ,
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ
ಶ್ರೀಮತಿ. ಚಿನ್ನಮ್ಮ ಬಸಪ್ಪ ಪಾಟೀಲ್ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಚಿಂಚೋಳಿ. ತಾ. ಚಿಂಚೋಳಿ,
ಜಿ. ಕಲ್ಬುರ್ಗಿ
