ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದಂತಹ ಪಾಲನಳ್ಳಿ ಸಿದ್ದರಾಜು ಸ್ವಾಮಿಗಳು ಮಾದಿಗ ಸಮುದಾಯಕ್ಕೆ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ.ಒಳಮೀಸಲಾತಿ ಜಾರಿ ಆದಾಗ ಮಾತ್ರ ಪರಿಪಕ್ವವಾಗಿ ದೊರೆಯುತ್ತದೆ. ಮೇ 5ರಂದು ನಡೆಯುವ ಜಾತಿ ಗಣತಿಯಲ್ಲಿ ಕಾಲಂ61ರಲ್ಲಿ ಮಾದಿಗ ಎಂದು ಬರೆಸಬೇಕು.ಇದಾದಾಗ ಒಗ್ಗಟ್ಟಾಗಿ ಸಮುದಾಯಕ್ಕೆ ಬಲ ದೊರೆಯುತ್ತದೆ. ನಮ್ಮ ಸಮುದಾಯದಲ್ಲಿಅನಕ್ಷರಸ್ಥರು ಹೆಚ್ಚು ಹೀಗಾಗಿ ಮಾದಿಗ ಎಂದು ಮಾತ್ರ ಬರೆಸಬೇಕು.ಹೀಗಾದಾಗ ಮಾತ್ರ ನ್ಯಾಯ ದೊರೆಯಲಿದೆ ಎಂದರು.ಮಾದಿಗ ಸಮುದಾಯ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಪ್ರಾತಿನಿಧ್ಯ ದೊರೆಯುತ್ತಿಲ್ಲ.ಕಾಲಂ ನಂಬರ್ 061 ನಲ್ಲಿ ಮಾದಿಗ ಎಂದು ಬರೆಸಿ ಎಂದರು.
ಪಟ್ರೆನಳ್ಳಿ ಕೃಷ್ಣ ಮಾತನಾಡುತ್ತ ಪರಿಶಿಷ್ಟ ಜಾತಿಯಲ್ಲಿರುವ 101ಜಾತಿಯಲ್ಲಿ ಮಾದಿಗ ಅತ್ಯಂತ ಹಿಂದುಳಿದ ಸಮುದಾಯ ಆಗಿದೆ. ದತ್ತಾಂಶ ಸಂಗ್ರಹಕ್ಕೆ ಬಂದಾಗ ಮಾದಿಗ ಎಂದು ಮಾತ್ರ ಬರೆಸಿ ಎಂದು ಮನವಿ ಮಾಡಿದರು
ಪತ್ರಿಕಾಗೋಷ್ಠಿಯಲ್ಲಿ ಪಾಲಿನ ಹಳ್ಳಿ ಸಿದ್ಧರಾಜು ಸ್ವಾಮೀಜಿ,ಮಾಜಿ ಶಾಸಕಿ ಅನಸೂಯಮ್ಮ, ಬೆಳವಾಡ ಮಾದಿಗ ಸಮುದಾಯದ ಆನಂದ ಗುರೂಜಿ, ನಾರಾಯಣಸ್ವಾಮಿ, ವಿಜಯಶಂಕರ್, ಪಟ್ರೇನಹಳ್ಳಿ ಕೃಷ್ಣ ಇತರರು ಹಾಜರಿದ್ದರು
