ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಸವ ಜಯಂತಿಯನ್ನು ಆಚರಿಸಲಾಯಿತು. ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಿದರು ಪೂಜ್ಯಶ್ರೀ ಶಿವರುದ್ರಮಹಾಸ್ವಾಮಿಗಳು ಅದ್ಯಕ್ಷರು ಬೇಲಿಮಠ ಮಹಾಸಂಸ್ಥಾನ ಬೆಂಗಳೂರು ದಿವ್ಯ ಸಾನಿಧ್ಯವನ್ನು ವಹಿಸಿದ್ದರು
ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್, ಎಂಬಿ ಪಾಟೀಲ್ ಪ್ರಿಯಾಂಕ್ ಖರ್ಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶ್ರೀ ಕೆ ಮೋಹನ್ ದೇವ ಆಳ್ವಾ ಶ್ರೀಯುತರು ಬೆಂಗಳೂರು ಮಾಜಿ ಕಾರ್ಪೊರೇಟರ್ ಮತ್ತು ಬಸವ ಸಮಿತಿಯ ಟ್ರಸ್ಟ್ ನ ಚುನಾಯಿತ ಸದಸ್ಯರು ಅವರಿಗೆ “ದಾಸೋಹ ರತ್ನ” ಪ್ರಶಸ್ತಿ ಪ್ರಧಾನವನ್ನು ಮಾಡಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರವಿಂದ ಜತ್ತಿ ರವರು ವಹಿಸಿಕೊಂಡಿದ್ದರು ಇದೇ ಸಂದರ್ಭದಲ್ಲಿ ಶ್ರೀದೇವ ಆಳ್ವ ಹಾಗೂ ಕೊಡಮನ ಗುತ್ತು ಶ್ರೀಮತಿ ವಿಟ್ಟಮ್ಮ ಆಳ್ವಾರ್ ಅವರ ಸಂಸ್ಮರಣೆಯಲ್ಲಿ ವಚನ ಸಂಗೀತ ಮತ್ತು ಕಲೆಗೆ ಸಲ್ಲಿಸುತ್ತಿರುವ ಅಪ್ರತಿಮಾ ಸೇವೆಗಾಗಿ ಶ್ರೀ ತೊಂಟಪ್ಪ ಉತ್ತಂಗಿ ಚಿತ್ರದುರ್ಗ ರವರಿಗೆ ಗೌರವ ಸಮರ್ಪಣೆಯಾಗಿ ಒಂದು ಲಕ್ಷ ರೂಪಾಯಿಗಳನ್ನು ಒಳಗೊಂಡ ಪ್ರಶಸ್ತಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು

