ಸುರಪುರ : ಸುರಪುರದಲ್ಲಿ ಸಮಾನತೆಯ ಹರಿಕಾರ ಮಹಾ ಮಾನವವತಾವಾದಿ, ಮಾನವ ಸಂವಿಧಾನ ಶಿಲ್ಪಿ ಮಾನವ ಹಕ್ಕುಗಳ ಹರಿಕಾರ ಮಹಿಳಾಸಮಾನತೆಯ ಪ್ರತಿಪಾದಕರು,ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ 892ನೇ ಜಯಂತಿ ವಿಜ್ರಂಭಣೆಯಿಂದ ಆಚರಿಸಲಾಯಿತು. ನಗರದ ಪಂಚಾಂಗ ಮಠ ದಲ್ಲಿ ಮಹಭಿಷೇಕದ ಮೂಲಕ ಪೂಜಾ ಕಾರ್ಯಕ್ರಮ ಪ್ರಾರಂಭವಾಗಿ ಇದರ ನೇತೃತ್ವವನ್ನು ವೀರೇಶ್ ಪಂಚಾಂಗಮಠ ಇವರು ನೆರವೇರಿಸಿ ಕೊಟ್ಟರು. ನಂತರ ಧ್ವಜಾರೋಹಣ ಕಾರ್ಯಕ್ರಮವನ್ನು ರಾಜ್ಯ ಕೃಷ್ಣಪ್ಪ ನಾಯಕ, ರಾಜ ಕುಮಾರ್ ನಾಯಕ, ರಾಜಶೇಖರ್ ಗೌಡ ವಜ್ಜಲ್, ಸುನಿಲ್ ಶೆಟ್ಟಿ, ಮಲ್ಲಣ್ಣ ಸಾಹುಕಾರ ಮುಧೋಳ್, ಸಮಾಜದ ಬಾಂಧವರ ಉಪಸ್ಥಿತಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮಾಡಲಾಯಿತು. ದಿನಾಂಕ 30 -4 – 2025 ರಂದು ಪಂಚಾಂಗ ಮಠದಿಂದ ಹಲವು ಪ್ರಮುಖ ಬೀದಿಗಳ ಮೂಲಕ ಬೈಕ್ ಗಳ ಮೂಲಕ ತಹಶೀಲ್ದಾರ್ ಕಾರ್ಯಾಲಯ ವರೆಗೆ ಬೈಕ್ ರ್ಯಾಲಿ ನಡೆಸಿದರು ತಹಶೀಲ್ದಾರ್ ಕಾರ್ಯಾಲಯದಲ್ಲಿ ಬಸವೇಶ್ವರರ ಜಯಂತಿ ಉತ್ಸವವನ್ನು ಅದ್ದೂರಿಯಾಗಿ ಆಚರಣೆಯನ್ನು ಮಾಡಲಾಯಿತು.
ಸಾಯಂಕಾಲ ಬಸವೇಶ್ವರರ ಭವ್ಯ ಮೆರವಣಿಗೆ ಪಂಚಾಂಗದಿಂದ ಗಾಂಧಿ ವೃತ ಮಾರ್ಗವಾಗಿ, ಗೋಪಾಲಸ್ವಾಮಿ ದೇವಸ್ಥಾನದ ಮಾರ್ಗವಾಗಿ ಕಬಾಡಗೆರಾ ಓಣಿ ಮಾರ್ಗವಾಗಿ ಪುನ ಪಂಚಾಂಗಮಠ ಅವರಿಗೆ ಸಾಗಿ ಪುನಃ ಮಠದ ಆವರಣದಲ್ಲಿ ಮೆರವಣಿಗೆ ಸ್ವಪ್ನಗೊಂಡಿತು.
ಭವ್ಯ ಮೆರವಣಿಗೆಯಲ್ಲಿ ರಾಜ ಹನುಮಪ್ಪ ನಾಯಕ್ ತಾತ, ನಗರಸಭೆ ಸದಸ್ಯರಾದ ವೇಣು ಮಾಧವ್ ನಾಯಕ, ಶಂಕರ್ ನಾಯಕ, , ಶರಣಪ್ಪ ಹಳ್ಳದ, ಮಂಜುನಾಥ್ ಜಾಲಹಳ್ಳಿ ಮುಖಂಡರು ಸಮಾಜದ ಎಲ್ಲಾ ಬಾಂಧವರು ಪಾಲ್ಗೊಂಡಿದ್ದರು.
ಭವ್ಯ ಮೆರವಣಿಗೆಯಲ್ಲಿ ನಾಸಿಕ ಡೋಲು ಬಡಿತವು ಆಕರ್ಷಣೆಯಾಗಿತ್ತು. ಬಸವ ಜಯಂತಿಯಲ್ಲಿ ಸುರಪುರ ನಗರದ ಬಸವ ಭಕ್ತಾದಿಗಳು ಹೆಜ್ಜೆ ಹಾಕುವ ಮೂಲಕ ಸಡಗರದಿಂದ ಜಯಂತಿಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ,ವೀರೇಂದ್ರ ನಿಷ್ಠೀ ದೇಶಮುಖ ಸುನಿಲ್ ಸರ್ ಪಟ್ಟಣಶೆಟ್ಟಿ ಶರಣಯ್ಯಾ ಸ್ವಾಮಿ ಮಠಪತಿ ಮಿಟಲಾಕ್ಷೀ ಪಂಚಾಂಗಮಠ ಸಿದ್ದಣ್ಣ ದಿಗ್ಗಾವಿ ಸೂಗರೇಶ ಮಡ್ಡಿ ಮಹೇಶ್ ಹಳ್ಳದ ಶರಣಪ್ಪ ಹಳ್ಳದ ಸಿದ್ದಯ್ಯ ಸ್ವಾಮಿ ಬಳುಂಡಿಮಠ ಸುಗರೇಶ ವಾರದ ಶರಣು ಬೆಚ್ಚಿನಮನಿ, ಸಮಾಜದ ಎಲ್ಲಾ ಹಿರಿಯರು ಯುವಕರು ಪಾಲ್ಗೊಂಡಿದ್ದರು.
