ಹೂವಿನಹಡಗಲಿ..ನವಲಿ ಗ್ರಾಮ ಪಂಚಾಯತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸದ ಸ್ಥಳದಲ್ಲಿ ಕೂಲಿಕಾರರೊಂದಿಗೆ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪಿಡಿಒ ರವರಾದ ಮಹ್ಮದ್ ಗೌಸ್ ಬಿಲ್ಲುಖಾನ್ ರವರು ಮಾತನಾಡಿ ಕಾರ್ಮಿಕರು ದೇಶದ ಆಸ್ತಿ ಕಾರ್ಮಿಕರಿಗೆ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಅದನ್ನು ಎಲ್ಲರೂ ಉಪಯೋಗಿ ಸಮೃದ್ಧಿ ಜೀವನ ರೂಪಿಸಿಕೊಳ್ಳಲು ತಿಳಿಸಿ ಶುಭ ಕೋರಿದರು ಹಾಗೂ ಸದಸ್ಯರಾದ ಶ್ರೀ ಟಿ. ಲಕ್ಷ್ಮಣ್ ಹಾಗೂ ಮುಖಂಡರಾದ ಶ್ರೀ ಪ್ರಶಾಂತ್ ಪಿ ಹಾಗೂ ಉದ್ಯೋಗ ಖಾತ್ರಿ ಮೇಟಿಗಳು, ಕೂಲಿಕಾರರು ಹಾಜರಿದ್ದರು. ಈ ಸಂದರ್ಭದಲ್ಲಿ ಕೂಲಿಕಾರರಿಗೆ ಪ್ರತಿ ಗುಂಪಿಗೆ ಒಂದು ಕುಡಿಯುವ ನೀರಿನ ಕ್ಯಾನ್ ವಿತರಿಸಲಾಯಿತು ದಿನಾಚರಣೆಯಲ್ಲಿ ನೂರಾರು ಕಾರ್ಮಿಕರು ಭಾಗವಹಿಸಿದ್ದರು
