ಜಗಜ್ಯೋತಿ ಗುರು ಬಸವಣ್ಣನವರ ಜಯಂತಿ ಯ ಶುಭಾಶಯಗಳು.
ವಿಶ್ವ ಕ್ಕೆ ಬಂತು ಹೊಸ ಹರುಷ
ಕನ್ನಡ ನಾಡಿನ ಯುಗಪುರುಷ
ಕನ್ನಡಕ್ಕೆ ಬಂತು ಹೊಸ ಹರುಷ
ವಚನ ವಾಘ್ಮಯದ ಮಹಾ ಪರುಷ
ಕನ್ನಡಕ್ಕೆ ಬಂತುಕೀರ್ತಿ ಕಳಶ
ದಾ.ರಾ ಬೇಂದ್ರೆಯವರು ಹೇಳಿದರು
ಕನ್ನಡನಾಡಿನಲ್ಲಿ ಏನಿದೆ ಎಂದು
ಕೇಳಿದರೆ ಎದೆ ತಟ್ಟಿ ಹೇಳುವೆನು ವಚನ ವಾಘ್ಮಯವಿದೆಯೆಂದು
ಆಡು ನುಡಿಯನ್ನೇ ಹಣತೆಯಾಡಿ
ವಚನ ನುಡಿಗಳ ಬೆಳಕನ್ನು ಹಚ್ಚಿ
ಕನ್ನಡ ದೇವಿಗೆ ಲಕ್ಷ ದೀಪೋತ್ಸವ
ಮಾಡಿ ಬೆಳಗಿದರು ಶರಣರು
ರನ್ನ ದೀವಿಗೆಯಂತೆ.
ಗುರು ಬಸವಣ್ಣ ರಚಿಸಿದರು
ವಚನಗಳ ನುಡಿಮುತ್ತುಗಳ
ಸುಲಿದ ಬಾಳೆಯ ಹಣ್ಣಿನಂತೆ
ಬೆಲೆಯಾಯ್ತು ಜಗದಲ್ಲಿ
ವಿಶಿಷ್ಟ ಮೌಲ್ಯದಲ್ಲಿ
ಸಿಕ್ಕಿತು ಬಸವಣ್ಣಗೆ ಜಗಜ್ಯೋತಿ ಇವರೆಂದು.
ಬೆಳಗಿದವು ವಚನಗಳು
ಸಹಸ್ರ ದೀಪಗಳಂತೆ
ವಿಶ್ವ ದಲ್ಲೆಡೆಯಲ್ಲಿ ಕಾರ್ತಿಕೋತ್ಸವದಂತೆ
ಎಲ್ಲೆಲ್ಲೂ ಬಸವಣ್ಣನ ಬೆಳೆಕೇ ಬೆಳಕು
ವಚನೋತ್ಸವದ ಬೆಳಕು
ವಿಶ್ವ ಗುರು ಬಸವಣ್ಣನವರ ಬೆಳಕು.
ಶರಣು ಶರಣಾರ್ಥಿ
