ಕ್ಷಯ ಮುಕ್ತ ಗ್ರಾಮ ಪಂಚಾಯತಿ ಆಂದೋಲನ ಗ್ರಾಮ

Share

ಕುಷ್ಟಗಿ: ತಾಲ್ಲೂಕಿನ ಕ್ಯಾದಿಗುಪ್ಪ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾಡಳಿತ ಕೊಪ್ಪಳ, ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರ ಕೊಪ್ಪಳ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಕುಷ್ಟಗಿ, ಪ್ರಾಥಮಿಕ ಆರೋಗ್ಯ ಕೇಂದ್ರ ದೋಟಿಹಾಳ, ಗ್ರಾಮ ಪಂಚಾಯಿತಿ ಕಾರ್ಯಾಲಯ ಕ್ಯಾದಿಗುಪ್ಪ ಸಹಯೋಗದಲ್ಲಿ ಆಯೋಜಿಸಿದ್ದ ಕ್ಷಯ ಮುಕ್ತ ಗ್ರಾಮ ಪಂಚಾಯತ್ ಅಂದೋಲನ ಕಾರ್ಯಕ್ರಮದಲ್ಲಿ
ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾಕ್ಟರ್ ಮಹೇಶ್ ಎಮ್ ಜಿ* ಅವರು ಮಾತನಾಡಿ 2025 ರವಳಗೆ ಕ್ಷಯ ಮುಕ್ತ ಭಾರತ ಮಾಡುವಲ್ಲಿ ಭಾರತ ಸರ್ಕಾರ ಗುರಿ ಹೊಂದಿದ್ದು, ಅದು ಸಕಾರಗೊಳ್ಳಲು ಸ್ಥಳೀಯ ಸರಕಾರದಂತಿರುವ ಗ್ರಾಮ ಪಂಚಾಯಿತಿ ಮಹತ್ವದ ಪಾತ್ರ ವಹಿಸಬೇಕಿದೆ… ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೇ ಮೊದಲಿಗೆ ಕ್ಯಾದಿಗುಪ್ಪ ಪಂಚಾಯಿತಿ ಕ್ಷಯ ಮುಕ್ತ ಮಾಡಲು ಮೊದಲ ಹೆಜ್ಜೆ ಹಾಕಿದ್ದು, ಎಲ್ಲಾ ಇಲಾಖೆಯ ಸಹಾಯದೊಂದಿಗೆ ಸಹಕಾರಗೊಳ್ಳಲಿ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾಕ್ಟರ್ ಆನಂದ ಗೋಟುರ್* ಮಾತನಾಡಿ ಕ್ಷಯ ಮುಕ್ತ ಕ್ಯಾದಿಗುಪ್ಪ ಗ್ರಾಮ ಪಂಚಾಯಿತಿ ಮಾಡುವಲ್ಲಿ ನಮ್ಮ ತಾಲ್ಲೂಕಿನಿಂದಲೆ ಮೊದಲ ಹೆಜ್ಜೆ ಇಡೋಣ ಎಂದರು.

ಕಾರ್ಯಕ್ರಮದಲ್ಲಿ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಂತೋಷ , ಗ್ರಾಮ ಪಂಚಾಯಿತಿ ಪಿಡಿಓ ಶ್ರೀಶೈಲ್, ಕ್ಷಯರೋಗ ಸಿಬ್ಬಂದಿ ವೆಂಕಟೇಶ್ ಗುಡಗುಡಿ ಮತ್ತು ವೀರಭದ್ರಪ್ಪ ಗಂಗನಾಳ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಎಮ್.ಎಮ್.ಕೋರಿ,
ವೆಂಕಟೇಶ ರೆಡ್ಡಿ ,ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಭುವನೇಶ್ವರಿ ಬಳಿಗಾರ,
ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.


Share