ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘ ಜೇವರ್ಗಿ ವತಿಯಿಂದ ಜಿಲ್ಲಾ ನಿರ್ದೇಶಕರು ಕಮಲಾಕ್ಷ ಸರ್ ಅವ್ರ ನೇತೃತ್ವದಲ್ಲಿ ಗ್ರಾಮದ ನಿರ್ಗತಿಕ ಕುಟುಂಬದ ನಿರಾಶ್ರಿತರನ್ನು ಗುರುತಿಸಿ ದಿನಬಳಕೆಯ ಗೃಹ ಉಪಯೋಗಿ ಕಿಟ್ ಗಳನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ಜೇವರ್ಗಿ ತಾಲೂಕಿನ ಯೋಜನಾ ಅಧಿಕಾರಿಗಳಾದ ದಿನೇಶ್ ಸರ್ ಹಾಗು ಬಿಳವಾರ ವಲಯ ಮೇಲ್ವಿಚಾರಕರು ಸುಭಾಸ ಸರ್ . ಜೇವರ್ಗಿ ತಾಲೂಕಿನ ಜೈವಿಕ ಕೃಷಿ ವಿಭಾಗದ ಶ್ರೀಮತಿ ಮಲ್ಲಮ ಮೇಡಂ ಹಾಗೂ ಬಿಳವಾರ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯಾದ ಶಿವಪುತ್ರ ಗೋಗಿ ಬಿಳವಾರ ಹಾಗೂ ಪರಶುರಾಮ ದಂಡಗುಲ್ಕರ್ ಮಾಳಪ್ಪ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇಂಡಿ: ಇದೆ ದಿನಾಂಕ 10-12-2024 ರಂದು ಬೆಳಗಾಂವದಲ್ಲಿ ನಡೆದ ಪಂಚಮಸಾಲಿ ಸಮಾಜದ ಬಾಂಧವರು 2ಎ ಮೀಸಲಾತಿಗಾಗಿ ನಡೆಸಿದ ಬೃಹತ್ ಪ್ರತಿಭಟನೆಕಾರ ಮೇಲೆ ಪೋಲಿಸರು ವಿನಾಕಾರಣ ಲಾಠಿಚಾರ್ಜ್ ಮಾಡಿ ಹಲ್ಲೆಮಾಡಿದ್ದನ್ನು ಖಂಡಿಸಿ ಇಂದು ಇಂಡಿ ನಗರದಲ್ಲಿ ಬಸವೇಶ್ವರ ಪ್ರತಿಮೆ ಬಳಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಒಂದು ತಾಸುಕ್ಕಿಂತ ಹೆಚ್ಚು ಹೊತ್ತು ಬೃಹತ್ ಪ್ರತಿಭಟನೆ ಮಾಡಿದರು.ಈ ಸಂದರ್ಭದಲ್ಲಿ ಇಂಡಿ ಮಾಜಿ ಶಾಸಕರಾದ ಶ್ರೀ ರವಿಕಾಂತ ಪಾಟೀಲ ಅವರು ಮಾತನಾಡಿ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯಮೃತ್ಯುಂಜಯ ನೇತೃತ್ವದಲ್ಲಿ 2ಎ ಮೀಸಲಾತಿಗಾಗಿ ನ್ಯಾಯಯುತವಾಗಿ ಹೋರಾಟ ಮಾಡುತ್ತಿರುವಾಗ ವಿನಾಯಕ ನಮ್ಮ ಸಮುದಾಯದ ಮುಗ್ದ ಜನರ ಮೇಲೆ ಹಲ್ಲೆ ಮಾಡಿರುವುದು ತುಂಬಾ ಖಂಡನೆಯ ಎಂದು ಹೇಳಿದರು.ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರ ಪಂಚಮಸಾಲಿ ಸಮಾಜದ ಜನರನ್ನು ಕಗ್ಗೊಲೆ ಮಾಡಲು ಹೋರಟಿದೆ ನಾವು ನಾಯ್ಯಯುತವಾಗಿ ಹೋರಾಟ ಮಾಡಿದರೆ ಪೋಲಿಸರ ಮುಖಾಂತರ ನಮ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ನಮ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ 2ಡಿ ಮೀಸಲಾತಿ ನೀಡಿತ್ತು ಈಗಿನ ಸರ್ಕಾರ ಕಾರ್ಯರೂಪಕ್ಕೆ ತರಲು ಹಿಂದೆಟ್ಟು ಹಾಕುತ್ತಿದೆ ಎಂದು ದೂರರಿದರು.ಪುರಸಭೆ ಸದಸ್ಯರಾದ ಭೀಮನಗೌಡ ಪಾಟೀಲ ಮಾತನಾಡಿ ಪಂಚಮಸಾಲಿ ಜನರು ಪ್ರಾಮಾಣಿಕ ಜನರು ಹಿಡಿದರೆ ಹಿಡಿ ಚೇಳು ಹಿಡಿಯಬೇಕು ಆದರೆ ಪಂಚಮಸಾಲಿ ಜನರನ್ನು ಕೆಣಕಬಾರದು ಆದರೆ ಸಿದ್ದರಾಮಯ್ಯ ಸರ್ಕಾರ ಈಗ ಪಂಚಮಸಾಲಿಗಳನ್ನು ಕೆಣಕಿದೆ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಹೇಳಿದರು.ಇಂಡಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಶ್ರೀ ವಿ ಎಚ್ ಬಿರಾದಾರ ಅವರು ಮಾತನಾಡಿ ಪಂಚಮಸಾಲಿ ಸಮಾಜದ ಬಾಂಧವರು ಸ್ವಾಭಿಮಾನಿ ಜನರು, ಅವರು ಸರ್ವ ಜನರನ್ನು ಪ್ರೀತಿ ವಾತ್ಸಲ್ಯದಿಂದ ಬದುಕುನ್ನು ಕಟ್ಟಿಕೊಂಡು ಜೀವನ ಜೀವನ ಸಾಗಿಸುತ್ತಿದ್ದಾರೆ.ಆದರೆ 2ಎ ಮೀಸಲಾತಿಗಾಗಿ ನ್ಯಾಯಯುತವಾಗಿ ಹೋರಾಟ ಮಾಡಿದೆ ನಮ್ಮ ಜನಾಂಗದ ಮೇಲೆ ಪೋಲಿಸರು ಲಾಠಿ ಚಾರ್ಜ್ ನಡೆಸಿ ಹಲ್ಲೆ ನಡೆಸಿದ್ದಾರೆ ಇದನ್ನು ನಾವು ಖಂಡಿಸುತ್ತೆವೆ ಎಂದು ಹೇಳಿದರು.ಈ ಇಂಡಿ ತಾಲೂಕು ಬಿಜೆಪಿ ಘಟಕ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಿವಡೆ ಅಯೂಬ್ ನಾಟಿಕಾರ ಸೇರಿದಂತೆ ಅನೇಕರು ಮಾತನಾಡಿದರು.ಈ ಸಂದರ್ಭದಲ್ಲಿ ಇಂಡಿ ತಾಲೂಕು ಪಂಚಮಸಾಲಿ ಯುವ ಘಟಕ ಅಧ್ಯಕ್ಷರಾದ ಸೋಮು ದೇವರ ಬಾಳು ಮುಳಜಿ ಶ್ರೀಶೈಲಗೌಡ ಪಾಟೀಲ ಅನೀಲಗೌಡ ಬಿರಾದಾರ ಅನೀಲ ಪ್ರಸಾದ ಏಳಗಿ ಚಂದು ದೇವರ ಶಿವಾನಂದ ಚಾಳಿಕಾರ ಪಾಪು ಕಿತ್ತಲಿ ಉಮೇಶ ಲಚ್ಯಾನ ಶ್ರೀಧರ ತಾಂಬೆ ವೀರೇಂದ್ರ ಪಾಟೀಲ್ ಡಿ ಜಿ ಜೊತಗೊಂಡ ಬಿ ಬಿ ಬಿರಾದಾರ ಎಸ್ ಆರ್ ಬಿರಾದಾರ ಅಶೋಕ ಅಕಲಾದಿ ಅನೀಲ ತೆನ್ನೆಹಳ್ಳಿ ಸಾಯಬಣ್ಣ ಅವಟಿ ಹಾಗೂ ಪಂಚಮಸಾಲಿ ಸಮಾಜದ ಬಾಂಧವರು ಉಪಸ್ಥಿತರಿದ್ದರು.
ಆಲಮೇಲ: ತಾಲೂಕ ಎರಡನೆ ಕನ್ನಡ ಸಾಹಿತ್ಯ ಸಮ್ಮೇಳನ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ ಬಿ ಯಡ್ರಾಮಿ ಅವರು ಮಂಗಳವಾರ ಪರಿಷತ್ತಿನ ಕಾರ್ಯಾಲಯದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ ಗೌರವ ಕಾರ್ಯದರ್ಶಿ ಶ್ರೀಶೈಲ ಮಠಪತಿ ಕ್ಷೇತ್ರ ಸಮನ್ವಯಾಧಿಕಾರಿ ಐ ಎಸ ಟಕ್ಕೆ. ಶಿಕ್ಷಣ ಸಂಯೋಜಕ ಎಂ ಪಿ ಭಿ ಸೆ ಮುಖ್ಯ ಗುರುಗಳಾದ ಎಸ್.ಬಿ ಪಟಶೆಟ್ಟಿ ಡಿ ಎಂ ಮಾವೂರ. ರವಿ ಹೊಸಮನಿ ಗಿರೀಶ್ ಗತಾಟೆ. ಡಾಕ್ಟರ್ ಸಮೀರ್ ಹಾದಿಮನಿ ಶೈಲಾ ಶ್ರೀ ಯಡ್ರಾಮಿ ಡಿಡಿ ಮುಲ್ಲಾ ನಂದಿಕೋಲ ವರ್ತೂರು ರಾಜು ವಡ್ಡರ ಮುಂತಾದವರು ಉಪಸ್ಥಿತರಿದ್ದರು
ಮೂಡಲಗಿ : ಯಾದವಾಡ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ ಯಾದವಾಡ ಸಂಸ್ಕೃತಿಕ ಉತ್ಸವ-2024 ಹಮ್ಮಿಕೊಳ್ಳಲಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ದೀಪವನ್ನು ಬೆಳಗಿಸುವ ಮುಲಕ ಉದ್ಘಾಟನೆ ಮಾಡಿ ಮಾತನಾಡಿದರು. ಕಲ್ಮೇಶ ಗಾಣಗಿ ಕನ್ನಡ ನಾಡು ಮತ್ತು ನುಡಿಗಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಜೀವನ ಅನ್ನೋದು ಸಿಕ್ಕಿರೊದು ಒಮ್ಮೆ ನಾವು ಬದುಕಿರುವಾಗಲೇ ಸಮಾಜಕ್ಕೆ ಅಬೂತಪೂರ್ವಾದ ಸಾಕ್ಷಿಯನ್ನು ಬಿಟ್ಟು ಹೋಗಬೇಕು ನಾಳೆ ಸಮಾಜದಲ್ಲಿ ನಮ್ಮ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಇಂತಹವರು ಇಂತಹ ಕೆಲಸವನ್ನು ಮಾಡಿದರು ಅನ್ನುವ ಸ್ವಾಭಿಮಾನದ ಮಾತುಗಳನ್ನು ಆಡಬೇಕು ನನಗೆ ಇವತ್ತು ಈ ವೇದಿಕೆಯ ಮೇಲೆ ನಿಂತುಕೋಳ್ಳಲು ತುಂಬಾ ಹೆಮ್ಮೆ ಅನಿಸುತ್ತಿದೆ .ಈ ವೇದಿಕೆ ಮತ್ತು ಇದರ ಆಯೋಜನೆ ಸೌಂಡ ಸಿಸ್ಟಮ್ , ಲೈಟಿಂಗ್, ಎಲ್ಲವನ್ನು ಭವ್ಯವಾಗಿ ಮಾಡಿದ್ದಾರೆ , ಹಳ್ಳಯಲ್ಲಿಯೂ ಇಷ್ಟೋಂದು ಭವ್ಯವಾದ ಕಾರ್ಯಕ್ರಮ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಬಾರದು ಬಪ್ಪದು ಬಪ್ಪದು ತಪ್ಪದು ಬಗವಂತನ ದಯೆ ಒಂದಿರಬೇಕು ಜೀವನದಲ್ಲಿ ಎಲ್ಲವನ್ನು ನಾನು ಗೆಲ್ತಿನಿ ಅಂದರೆ ಆಗುವುದಿಲ್ಲ ಆರು ಇಲೆಕ್ಷೆನ ಮಾಡಿದಿನಿ ಮೂರು ಗೆದ್ದೀದಿನಿ ಮೂರು ಸೋತಿದ್ದೀನಿ ಮೊನ್ನೆ ನಡೆದ ಲೋಕಸಭೆಯ ಇಲೆಕ್ಷನನಲ್ಲಿ ಎಲ್ಲರೂ ನೀವೇ ಗೆಲ್ತಿರಿ ಅಂದರು ಅದರಲ್ಲಿಯೂ ಯಾದವಾಡ ಗ್ರಾಮ ನನಗೆ 1600 ಲೀಡನ್ನು ಕೊಟ್ಟಿತು ಎಲ್ಲಿ ಹೋದರೂ ಸಾವಿರಾರು ಜನ ರಾತ್ರಿ ಹನ್ನೊಂದು ಗಂಟೆಯವರೆಗೆ ಕಾದ್ರೂ ಇಷ್ಟೊಂದು ಪ್ರೀತಿ ವಿಶ್ವಾಸ ನೋಡಿದ ನನಗೆ ಕನಸ ಮನಸನಲ್ಲಿಯೂ ಸೋಲಾಗತ್ತೆ ಅಂತಾ ಅನಿಸಿರಲಿಲ್ಲ ಅದಕ್ಕೆ ಹೇಳೊದು ಬಾರದು ಬಪ್ಪದು ಬಪ್ಪದು ತಪ್ಪದು ಆದರೆ ನಾವು ಸೋತಿದ್ದಿವಿ ಅಂತಾ ಕೈ ಕಟ್ಟಿಕುತುಕೊಳ್ಳುವ ಜಾಯಿಮಾನ ನಂದು ಅಲ್ಲ ನನ್ನ ಮಗನದ್ದು ಅಲ್ಲ ಎಂದರು.
ಚೌಕಿಮಠದ ಶಿವಯೋಗಿ ಶ್ರೀಗಳು, ಶಿವಾನಂದ ಮಠದ ಬಸವರಾಜ ಸ್ವಾಮಿಜಿಗಳು ಆಶಿರ್ವಚನ ಮಾಡಿದರು ಕಲ್ಮೇಶ ಗಾಣಗಿ ಜಿಲ್ಲಾ ಸಂಚಾಲಕರು ನಮ್ಮ ಕರವೇ ಕಾಂಗ್ರೆಸ ಮುಖಂಡ ಮಹಾಂತೇಶ ಕಡಾಡಿ ಗೋಕಾವಿ ಕನ್ನಡ ನಾಡು ನುಡಿ ಬಗ್ಗೆ ಮಾತನಾಡಿದರು, ರಾಷ್ಟ್ರಮಟ್ಟದ ಸಾಮೂಹಿಕ ನೃತ್ಯಗಳು ಜರುಗಿದವು ಗ್ರುಪ್ ಡ್ಯಾನ್ಸ ಗಳಲ್ಲಿ 1st ವಿಜಯ ಡ್ಯಾನ್ಸ ಗ್ರುಪ್ ಇಳಕಲ್, 35000 2nd ಎ.ಕೆ.ಡ್ಯಾನ್ಸ ಅಕಾಡೆಮಿ ಧಾರವಾಡ 30000 3rd ಆರಾಧನಾ ಡ್ಯಾನ್ಸ ಅಕಾಡೆಮಿ ಗಂಗಾವತಿ 25000 4TH ವಿ.ಕೆ.ಸ್ಟೈಲ್ ಮಹಾಲಿಂಗಪೂರ 20000, 5TH ವಿ.ಬಿ.ಡ್ಯಾನ್ಸ ಅಕಾಡೆಮಿ ಬೆಳಗಾವಿ 15000 6TH ಹಿಪಾಪ್ ಕ್ಲಸ್ಟರ್ಸ ಬೆಳಗಾವಿ 10000 7TH ಲಕ್ಕಿ ಡ್ಯಾನ್ಸ ಅಕಾಡೆಮಿ ಬೆಳಗಾವಿ, ರೂ 7000 8TH ರೇವಾ ತಾಂಡವ ಮುಧೋಳ 5000. ವಯಕ್ತಿಕ ನೃತ್ಯ ಗಳಲ್ಲಿ 1ST ವೃಷಭ ಗೋಡಚಿ 10000 2ND ಗೋಸಾಖಾನ ಧಾರವಾಡ 7000 3RD ಏ ಪಿ ಅಭಿನಾಷಾ ಬಿಜಾಪೂರ 5000 4TH ಪ್ರಿಯಾಂಕಾ ಬಿಳಗಿ ಮುಧೋಳ 3000. ಬಹುಮಾನ ಪಡೆದುಕೊಂಡರು ಯಾದವಾಡ ಚೌಕಿಮಠದ ಶ್ರೀ ಶಿವಯೋಗಿದೇವರು, ಕುಮಾರ ಹಿರೇಮಠ,ಶಿವಪ್ಪಗೌಡ ನ್ಯಾಮಗೌಡರ, ಕಾಂಗ್ರೇಸ್ ಮುಖಂಡರಾದ ಮಹಾಂತೇಶ ಕಡಾಡಿ , ಶ್ರೀ ಹರ್ಷಾ ನೀಲೋಪಂತ,ಸಂಗಮೇಶ ಕತ್ತಿ , ರಾವುಸಾಬ ಬೆಳಕೋಡ ಬಿ.ಬಿ.ಹಂದಿಗುಂದ , ಈರಣ್ಣ ಕೊಣ್ಣುರ , ಮಲ್ಲಪ್ಪ ಮದಗುಣಕಿ, ಮಲ್ಲಿಕಾರ್ಜುನ ಚೌಕಾಶಿ, ರಾಜನಗೌಡ ಪಾಟೀಲ , ಈರಣ್ಣ ಮುದ್ದಾಪೂರ ಇದ್ದರು.
ಚೈತನ್ಯ ಭಾರತಿ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗಡಿನಾಡು ಉತ್ಸವದ ಅಂಗವಾಗಿ. ಕಾರ್ಯಕ್ರಮ ಗಳು, ಸಾಧಕರಿಗೆ ಪ್ರಶಸ್ತಿ ಪ್ರಧಾನವನ್ನು ಮಾಡಲಾಯಿತು-ಕೇರಳ ಕರ್ನಾಟಕ ಗಡಿಭಾಗದಲ್ಲಿ ಧ್ವಜಾರೋಹಣ -400 ಆಡಿ ಧ್ವಜ ಮೆರವಣಿಗೆ ಶಾಲಾ ಮಕ್ಕಳಿಂದ ವೇದಿಕೆಕಾರ್ಯಕ್ರಮ ನಡೆಸಿದರು. ಶ್ರೀ ಎಂ ಎನ್ ನಟರಾಜು ರವರು ರಾಜ್ಯ ನಿರ್ದೇಶಕರು (ನಿವೃತ್ತ ) NYKS ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಭಾರತ ಸರ್ಕಾರ ರವರ ಅಧ್ಯಕ್ಷತೆಯಲ್ಲಿ. ಕೇರಳ ಕರ್ನಾಟಕ ಗಡಿಭಾಗದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು, ತಹಸೀಲ್ದಾರ್ ಶ್ರೀ ಶ್ರೀನಿವಾಸ್ ಸರ್ ರವರು, ತಾಲೂಕು ವೈದ್ಯಧಿಕಾರಿಗಳು, ಶ್ರೀ ರವಿಕುಮಾರ್ ಟಿ ಸರ್, ಪದ್ಮಶ್ರೀ ಪುರಸ್ಕೃತರು ಆದ ಶ್ರೀ ಸೋಮಣ್ಣ ರವರು ಯಶೋದಾಮ್ಮಾ ರಾಜಣ್ಣ, ಟ್ರಸ್ಟಿನ ಸಂಯೋಜಕಿ ನಂದಿನಿ ರವರು,ಪರೀಕ್ಷಿತ್ ರಾಜ್ ಅರಸು ರವರು, ಮಹೇಶ್ ಸರ್,ಸಾಹಿತಿ ಶ್ರೀಮತಿ ಹೆಚ್.ಎಸ್.ಪ್ರತಿಮಾ ಹಾಸನ್ ರವರು ಮತ್ತು ಶಾಲಾ ಶಿಕ್ಷಕರು. ಮತ್ತು ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ನಮಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲಾ ಸಹೋದರ ಸಹೋದರಿಯರಿಗೂ, ಗ್ರಾಮಸ್ಥರಿಗು, ಮತ್ತು ಮುಖ್ಯವಾಗಿ ಆಟೋ ಚಾಲಕರಿಗೆ, ಗ್ರಾಮಪಂಚಾಯಿತಿ ಸದಸ್ಯರುಗಳು, ಅಧ್ಯಕ್ಷರು ಇನ್ನು ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಲಬುರ್ಗಿ:-ಬಾಗಲಕೋಟೆ ವಕ್ಛ ಭೂ ಕಬಳಿಕೆಯ ವಿರೋಧಿಸಿ ಹೋರಾಟದ ವೇದಿಕೆ ಮುಂಭಾಗದ ಸಹಸ್ರಾರು ಜನಸಂಖ್ಯೆಯ ಜನತೆಯ ಮುಂದೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆಯುವ ಈ ಬೃಹತ್ ಸಮಾವೇಶ ದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಕಾಂಗ್ರೆಸ್ ನ ಶಾಸಕರು ಸಚಿವ ಜಮ್ಮೀರ ಅಹ್ಮದ್ ಗೇ ವೈಯುಕ್ತಿಕ ವಾಗಿ ಭೈಯುವ ಸುಸಂಧರ್ಭದಲ್ಲಿ ವಿಜಯಪುರ ಬಿಜೆಪಿ ಶಾಸಕರು ಬಸನ್ನಗೌಡ ಪಾಟೀಲ ಯತ್ನಾಳ ವೇದಿಕೆಯಲ್ಲಿ ಬಹಿರಂಗವಾಗಿ ರಾಜಾರೋಷವಾಗಿ ಮಾತನಾಡುವ ಭರಾಟೆಯಲ್ಲಿ ಸಣ್ಣ ಸಣ್ಣ ಸಮುದಾಯಕ್ಕೆ ನೋವು ಕೊಡುವುದು ಎಷ್ಟರ ಮಟ್ಟಿಗೆ ಸರಿ.? ವೀರಶೈವ ಸಮಾಜವದ ಒಳ ಪಂಗಡದ ಸಣ್ಣ ಸಮುದಾಯದ ಹೆಸರು ಬಳಸಿಕೊಂಡು ಅನೇಕ ಸಭೆ ಸಮಾರಂಭ ಮಾಡಲು ಈ ಸಣ್ಣ ಸಣ್ಣ ಕಾಯಕ ಸಮುದಾಯ ಬೇಕು. ? ಆದರೆ ಈಗ ಇದೇ ಸಮುದಾಯದ ಜನತೆಗೆ ಈಗ ಈ ರೀತಿಯಾಗಿ ಜಾತಿ ನಿಂದನೆ ಮಾಡಿ ಈ ಸಮಾಜದ ಜನತೆಗೆ ಅಗೌರವ ತೋರುವ ಕೆಲಸ ಮಾಡಬೇಡಿ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಎಂದು ಕಿಡಿ ಕಾರಿದರು. ಹನ್ನೆರಡನೆಯ ಶತಮಾನದ ವಿಶ್ವಗುರು ಬಸವಣ್ಣನವರ ಆಪ್ತಕಾರ್ಯದರ್ಶಿ ನಿಜಸುಖಿ ಹಡಪದ ಅಪ್ಪಣ್ಣ ಸಮಾಜಕ್ಕೆ ಈ ರೀತಿಯ ಜಾತಿ ನಿಂದನೆ ಪದ ಬಳಕೆ ಮಾಡುವುದು ಸರಿಯೆ. ಶಾಸಕರೆ .? ನಮ್ಮ ಹಡಪದ ಅಪ್ಪಣ್ಣ (ಕ್ಷೌರಿಕ) ಸಮುದಾಯಕ್ಕೆ ಈ ರೀತಿಯ ಜಾತಿ ನಿಂದನೆ ಪದ ಬಳಕೆ ಮಾಡಿದ್ದು ಅಕ್ಷಮ್ಯ ಅಫರಾದ ಮತ್ತು ನಮ್ಮ ಕ್ಷೌರಿಕ ವೃತ್ತಿಗೆ ಗೇಲಿ ಮಾಡಿ (ಜಾತಿ) ನಿಂದನೆ ಪದ ಬಳಕೆ ಮಾಡಿ ಮಾತನಾಡಿದ ವಿಚಾರವಾಗಿ ಹಡಪದ ಅಪ್ಪಣ್ಣ ಸಮುದಾಯ ಕಾಯಕ ಮಾಡುವ “ಕ್ಷೌರ ವೃತ್ತಿಯನ್ನು ” ಈ ಕಾಯಕ ಸಮಾಜಕ್ಕೆ ತುಂಬಾ ಹಗುರವಾಗಿ ಮಾತನಾಡಿರುವುದು ಖಂಡನೀಯ . ಬಿಜೆಪಿಯ ಹಿರಿಯ ಶಾಸಕರು ಬಸನ್ನಗೌಡ ಪಾಟೀಲ ಯತ್ನಾಳ ನವರು ರಾಜ್ಯದ ಸಮಸ್ತ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜನತೆಗೆ ಕ್ಷಮೆ ಕೇಳಬೇಕು .ಇಲ್ಲವಾದರೆ ಅವರ ಹೇಳಿಕೆ ಸರಿಯಾದ ಸಮರ್ಥನೆ ಮಾಡಿಕೊಳ್ಳಲಿ ಇಲ್ಲವಾದರೆ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಶಾಸಕರ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ಸಜ್ಜಾಗಬೇಕಾಗುತ್ತದೆ. ಇತ್ತಿಚಿನ ದಿನಗಳಲ್ಲಿ ಜನ ಪ್ರತಿನಿಧಿಗಳು .ಕಾಯಕ ಸಮಾಜದ ಬಗ್ಗೆ ತುಂಬಾ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು . ಇದೇ ಡಿಸೆಂಬರ್ ೯ ರಂದು ನಡೆಯುವ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಕಾಯಕ ಸಮಾಜಕ್ಕೆ ಜಾತಿ ನಿಂದನೆ ಪದ ಬಳಕೆ ಮಾಡುವುದು ಈ ರೀತಿ ದೊಡ್ಡ ದೊಡ್ಡ ವ್ಯಕ್ತಿಗಳು. ಮತ್ತು ಸಾರ್ವಜನಿಕವಾಗಿ ಈ ಸಣ್ಣ ಸಮಾಜಕ್ಕೆ ಗೇಲಿ ಮಾಡಿ ಜಾತಿ ನಿಂದನೆ ಮಾಡಿ ಸಣ್ಣ ಸಣ್ಣ ಸಮಾಜದ ಜನತೆಯ ಮನಸ್ಸಿಗೆ ಘಾಸಿ ಮಾಡುವುದು ಸರಿಯೇ.ಇದನ್ನು ಅರಿತು ರಾಜ್ಯ ಸರ್ಕಾರ ಈ ಸಮಾಜಕ್ಕೆ ಜಾತಿ ನಿಂದನೆಯ ಅಡಿಯಲ್ಲಿ “ಅಟ್ರಾಸಿಟಿ’ ಕಾನೂನು ಜಾರಿಗೆ ತರಲು ಈ ಬೆಳಗಾವಿಯ ಅಧಿವೇಶನ ದಲ್ಲಿ ಚರ್ಚೆ ಮಾಡಿ ಅನೇಕ ಶಾಸಕರು. ಸಚಿವರು. ವಿಧಾನ ಪರಿಷತ್ ಸದಸ್ಯರು.ಮತ್ತು ವಿರೋಧ ಪಕ್ಷದ ನಾಯಕರು ಈ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಡುವ ಕೆಲಸ ಮಾಡಬೇಕು. ಇಲ್ಲವಾದರೆ ಮುಂದೆ ಬರುವ ಯಾವುದೇ ಚುನಾವಣೆಯಲ್ಲಿ ಈ ರೀತಿಯ ಅಸಭ್ಯ ವರ್ತನೆ ಮಾಡಿ ಸಮಾಜಕ್ಕೆ ಗೇಲಿ ಮಾಡಿ ಸಮಾಜದ ಜನತೆ ಗೇ ಜಾತಿ ನಿಂದನೆ ಮಾಡುವ ವ್ಯಕ್ತಿಗಳಿಗೆ ಇಡೀ ರಾಜ್ಯದ ಸ್ವಾಬಿಮಾನಿ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜನತೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ .ಮತ್ತು ಇದೇ ಕಾಂಗ್ರೆಸ್ ಸರ್ಕಾರವೇ ನಮ್ಮ ಸಮಾಜದ ಜಾತಿ ನಿಂದನೆ ಪದ ಬಳಕೆ ಮಾಡಬಾರದು ಎಂದು ಆಗ ಸಮಾಜ ಕಲ್ಯಾಣ ಸಚಿವರು ಎಚ್ .ಆಂಜನೇಯ ಸಾಹೇಬ್ರೆ ಅವರು ಈ ಅಜಾಮ್ ಎಂಬ ಪದ ಬಳಕೆ ಮಾಡಬಾರದು ಎಂದು ನಿಷೇಧ , ಮಾಡಿದರು. ಇದಕ್ಕೆ ಕಾನೂನು ಪ್ರಕಾರ “ಅಟ್ರಾಸಿಟಿ’ ಕಾನೂನು ಜಾರಿಗೆ ತರದೇ ಇರುವುದು ನೋವಿನ ಸಂಗತಿಯಾಗಿದೆ. ಈಗಲಾದರೊ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬಂದಿದೆ. ಈಗಲಾದರೊ ಈ ಪದ ಬಳಕೆ ಮಾಡುವವರಿಗೆ ಕಾನೂನು ಪ್ರಕಾರ ” ಅಟ್ರಾಸಿಟಿ ” ಜಾರಿಗೆ ಇರಲೇಬೇಕು ಮತ್ತು ಮೊದಲು ಜಾತಿ ನಿಂದನೆಯ ಪಿಡುಗು ತೂಲಗಬೇಕು .? ಎಂದು ಸರ್ಕಾರಕ್ಕೆ ಮತ್ತು ಸಮಾಜ ಕಲ್ಯಾಣ ಸಚಿವರಿಗೆ ಈ ಸಮಾಜದ ಮೇಲೆ ಮೇಲೆ ಆಗುವ ಅನೇಕ ದೌರ್ಜನ್ಯ ಹಿಂಸೆ. ಹಲ್ಲೆ ಯನ್ನು ಗಮನಿಸಲು . ರಾಜ್ಯ ಸರ್ಕಾರಕ್ಕೆ ಒತ್ತಾಯದ ಮೂಲಕ ಈ ಪತ್ರಿಕೆಯಲ್ಲಿ ಬೇಸರ ವ್ಯಕ್ತ ಪಡಿಸಿದರು.
“ಸಾರ್ವಜನಿಕರ ಸಹಕಾರವು ಬಹಳ ಮುಖ್ಯ :ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ “
ಜನ ಸಂಪರ್ಕ ಸಭೆಯಲ್ಲಿ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರುವ ಕೆಲವರನ್ನು ಗಡಿಪಾರು ಮಾಡಲು ಕ್ರಮವಹಿಸಲಾಗಿದೆ:ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ
“ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಹೇಳಿಕೆ ಅಪರಾಧ ತಡೆಗೆ ಸಿಸಿ ಕ್ಯಾಮರ ಅಳವಡಿಸಿ, ಅಕ್ರಮ ದಂಧೆಗಳಿಗೆ ಕಡಿವಾಣ ಸಾರ್ವಜನಿಕರ ಸಹಕಾರ ಬಹಳ ಮುಖ್ಯ ಎಂದು ಹೇಳಿದರು “
ಕೊಟ್ಟೂರು: ಪಟ್ಟಣದ ಪೋಲೀಸ್ ಠಾಣೆ ಆವರಣದಲ್ಲಿ ಬುಧವಾರ ರಂದು ಪೋಲೀಸ್ ಇಲಾಖೆಯು ಜನ ಸಂಪರ್ಕ ಸಭೆಯನ್ನು ಏರ್ಪಡಿಸಿದ ಹಿನ್ನೆಲೆಯಲ್ಲಿ ಸಭೆ ಉದ್ದೇಶಿಸಿ ಕುಂದು ಕೊರತೆಗಳ ಆಲಸಿ ಕೂಡ್ಲಿಗಿ ವಿಭಾಗ ಡಿವೈಎಸ್ಪಿ ಅವರ ನೇತೃತ್ವದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು ಕೊಟುರೇಶ್ವರ ಕಾಲೇಜ್ ,ಜ್ಯೂನಿಯರ್ ಕಾಲೇಜ್ನಲ್ಲಿ ಈಗಾಗಲೆ ಸಿಸಿ ಟಿವಿ ಅಳವಡಿಸಿದ್ದಾರೆ. ಪಟ್ಟಣದಲ್ಲಿ ಸಿಸಿ ಟಿವಿ ಅಳವಡಿಕೆಗೆ ಪಪಂ ಮುಂದಾಗಬೇಕು. ಕಳ್ಳತನ ಹಾಗೂ ಇತರೆ ಅಪರಾದಗಳನ್ನು ತಡಿಯಲು ಅನುಕೂಲವಾಗುತ್ತೆ. ಇನ್ಸ್ಪೆಟ್ , ಅಕ್ರಮ ಮದ್ಯ ಮಾರಾಟ, ಅಕ್ರಮ ಮರಳು ದಂಧೆ,ಮಟ್ಕಾ, ಜೂಜಾಟ ಕ್ಯಾನ್ಸರ್ ಗಡ್ಡೆ ಇದ್ದಂತೆ ಇದನ್ನು ತಡೆಯುವಲ್ಲಿ ಇಲಾಖೆ ಅನೇಕ ಕ್ರಮ ಕೈಗೊಂಡಿದೆ. ಕೆಲವರನ್ನು ಗಡಿಪಾರು ಮಾಡಲು ಕ್ರಮವಹಿಸಲಾಗಿದೆ. ಎಂದರು. ಸಿಪಿಐ ವೆಂಕಟಸ್ವಾಮಿ ಮಾತನಾಡಿ, ಕೊಟ್ಟೂರು ಪಟ್ಟಣ ವೇಗವಾಗಿ ಬೆಳೆಯುತ್ತಿರುವುದರಿಂದ ಪಟ್ಟಣದ ವ್ಯಾಪಾರಿಗಳು ಸುರಕ್ಷತೆ ಹಿತ ದೃಷ್ಟಿಯಿಂದ ಅಂಗಡಿ ಮಾಲೀಕರು ಹಾಗೂ ಜನಸಂದಣಿ ಇರುವ ಜಾಗದಲ್ಲಿ ಸಿ.ಸಿ ಕ್ಯಾಮರ ಅಳವಡಿಕೆಗೆ ಮುಂದಾಗಬೇಕೆಂದರು. ಮುಖಂಡರಾದ ಬದ್ದಿ ಮರಿಸ್ವಾಮಿ ಮಾತನಾಡಿ, ಯುವಕರು ವೇಗವಾಗಿ ಗಾಡಿಗಳನ್ನು ಓಡಿಸುತ್ತಾರೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಇಂತಹ ಯವಕರ ನಿಯಂತ್ರಣಕ್ಕೆ ಮುಂದಾಗ ಬೇಕೆಂದರು.
ರೈತ ಸಂಘದ ಭರಮ್ಮಣ್ಣ ಹಾಗೂ ಜಯಪ್ರಕಾಶ ನಾಯ್ಕ ಅವರು ಮಾತನಾಡಿ ಹಲವು ಬಾರಿ ಪೊಲೀಸ್ ಠಾಣೆಗೆ ಟ್ರಾಫಿಕ್ ಬಗ್ಗೆ ನಾನೇ ದೂರವಾಣಿ ಮೂಲಕ ತಿಳಿಸಿರುವೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಬೆಳಿಗ್ಗೆ ಸಂಜೆ ಸಮಯದಲ್ಲಿ ಅತಿ ಹೆಚ್ಚು ಜನಸಂದಣಿ ವಾಹನ ಸಂಚಾರದಿಂದ ಟ್ರಾಫಿಕ್ ಆಗುವುದರಿಂದ ಟ್ರಾಫಿಕ್ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು. ಉಜ್ಜಿನಿ ರುದ್ರಪ್ಪ ಮಾತನಾಡಿ, ಪಿಎಸ್ಐ ಶಿಂಧೆ ಅವರಿಂದ ತಾಲೂಕಿನ ಹಳ್ಳಿಗಳಲ್ಲಿ ಗಲಾಬೆ ನಿಯಂತ್ರಿಸಬೇಕು.ಕೆ ಕೊಟ್ರೇಶ್ ಮಾತನಾಡಿ ಇನ್ಸ್ಪೆಟ್ , ಅಕ್ರಮ ಮದ್ಯ ಮಾರಾಟ, ಅಕ್ರಮ ಮರಳು ದಂಧೆ,ಮಟ್ಕಾ, ಜೂಜಾಟ ಕಡಿವಾಣ ಹಾಕಬೇಕು ಮತ್ತು ಸ್ಲಂ ವಾರ್ಡ್ ಗಳಲ್ಲಿ ಕಾನೂನು ಅರಿವು ಬಗ್ಗೆ ಮೂಡಿಸಬೇಕು ಎಂದರುಕಾಂಗ್ರೇಸ್ ಮುಖಂಡ ಅಡಕೆ ಮಂಜುನಾಥ ಅವರು ಮಾತನಾಡಿ ಪಿ.ಎಸ್.ಐ ಗೀತಾಂಜಿಲಿ ಶಿಂಧೆ ಪಟ್ಟಣದ ಮುಖ್ಯ ರಸ್ತೆ ಮೇನ್ ಬಜಾರ್ ಪಾರ್ಕಿಂಗ್ ನಿಯಮ ಅಳವಡಿಸಿ ಟ್ರಾಫಿಕ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಎಂದರು ಹಾಗೂ ಇತರೆ ಮುಖಂಡ ಬದ್ದಿ ದುರುಗೇಶ್, ಬಸವರಾಜ್ ಸಭೆಯಲ್ಲಿ ಮಾತನಾಡಿದರು. ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು. ಪಿಎಸ್ಐ ಗೀತಾಂಜಲಿ ಶಿಂಧೆ ನಿರ್ವಹಿಸಿದರು ಏರಿಸ್ವಾಮಿ ,ಕಲ್ಲೇಶ್, ಶಿವಪ್ರಕಾಶ್ ಪೊಲೀಸ್ ಸಿಬ್ಬಂದಿ ಇದ್ದರು
ಕರ್ನಾಟಕ ಹೆಸರು ನಾಮಕರಣವಾಗಿ ಐವತ್ತು ವರ್ಷ ತುಂಬಿದ ನೆನಪಿನಲ್ಲಿ ರೂಪಿಸಿರುವ ಕನ್ನಡ ರಥ ಯಾತ್ರೆಯನ್ನು ಆನೇಕಲ್ ನಲ್ಲಿ ಸ್ವಾಗತಿಸಲಾಯಿತು.
ಆನೇಕಲ್: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡದ ಅಸ್ಮಿತೆ ಹಾಗೂ ಅಸ್ತಿತ್ವದ ವಿಚಾರದಲ್ಲಿ ನಮ್ಮವರ ಅಭಿಮಾನ ಮೊದಲಿನಿಂದಲೂ ಜೋರಾಗಿಯೇ ಇದೆ. ಕರ್ನಾಟಕವೂ ರಚನೆಯಾಗಿ ಐದು ದಶಕ ತುಂಬಿ ಹೋಗಿದ್ದು. ಈ ಸಂಬಂಧ ಅಲ್ಲಲ್ಲಿ ಚಟುವಟಿಕೆಗಳೂ ನಡೆದಿವೆ. ಅದರಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ ಅಭಿಯಾನ ಕೂಡ ಒಂದು. ಸರ್ಕಾರವು ಕರ್ನಾಟಕ ಸಂಭ್ರಮ -50 ರಡಿ ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ ಅಭಿಯಾನದ ಅಂಗವಾಗಿ ರಾಜಧಾನಿಯಿಂದ ಆನೇಕಲ್ ಪಟ್ಟಣಕ್ಕೆ ಶುಕ್ರವಾರ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ವಿವಿಧ ಜಾನಪದ ಕಲಾತಂಡಗಳ ಮುಖೇನ ಆನೇಕಲ್ ಪಟ್ಟಣದ ರಾಜಬೀದಿಗಳಲ್ಲಿ ಕನ್ನಡ ರಥಯಾತ್ರೆಯ ಮೆರವಣಿಗೆ ನಡೆಸಲಾಯಿತು. ಆನೇಕಲ್ ತಾಲ್ಲೂಕು ವಿಷೇಶ ತಹಸೀಲ್ದಾರ್ ಕರಿಯ ನಾಯಕ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪ್ರಕಾಶಮೂರ್ತಿ , ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕ್ ಅಧ್ಯಕ್ಷ ಆದೂರು ಪ್ರಕಾಶ್, ಕರ್ನಾಟಕ ರಕ್ಷಣಾ ವೇದಿಕೆ ಲೋಕೇಶ್ ಗೌಡ ಹಾಗೂ ಮಂಜುನಾಥ್ ಅವರು ಕನ್ನಡಾಂಬೆಯ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಲೋಕೇಶ್ ಗೌಡ ಮಾತನಾಡಿ ನಾಡು-ನುಡಿಗಾಗಿ ಶ್ರಮಿಸಿದ ಕಲಾವಿದರು, ಲೇಖಕರು, ಹೋರಾಟಗಾರರನ್ನು ಸ್ಮರಿಸುತ್ತಾ, ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಕುರಿತು ಜಾಗೃತಿ ಮೂಡಿಸುವುದು, ಅಧಿಕಾರಿ ಹಾಗೂ ನಾಗರೀಕರಲ್ಲಿ ಕನ್ನಡ ವಾತಾವರಣ ನಿರ್ಮಾಣ ಮಾಡುವುದು ಈ ರಥಯಾತ್ರೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಹುಣಸೂರು ಮೈಕ್ರೋ ಫೈನಾನ್ಸ್ ನವರ ಕಿರುಕುಳ ತಾಳಲಾರದೇ ಕಾಳಿನ ಕ್ರಿಮಿನಾಶಕ ಮಾತ್ರೆ ನುಂಗಿ ಮಹಿಳೆಯೊಬ್ಬರು ಆತ್ಮಹತ್ಯೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಕಿರಿಜಾಜಿ ಗ್ರಾಮದಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಕಿರಿಜಾಜಿ ಗ್ರಾಮದ ಸಣ್ಣಕಾಳಯ್ಯನವರ ಪತ್ನಿ ಸುಶೀಲ (48) ಎಂಬ ಮಹಿಳೆಯ ಕಾಳಿನ ಕ್ರಿಮಿನಾಶಕ ಮಾತ್ರೆ ನುಂಗಿ ಸಾವನಪ್ಪಿರುವ ನತದೃಷ್ಟ ಯಾಗಿದ್ದು ಮೃತರಿಗೆ ಪತಿ ಹಾಗೂ ಓರ್ವ ಪುತ್ರ ಪುತ್ರಿ ಇದ್ದಾರೆ. ಸುಶೀಲ ಅವರು ಹುಣಸೂರಿನ ಫಾರ್ಚುನ್ ಮೈಕ್ರೋ ಫೈನಾನ್ಸ್ ರವರಿಂದ ಸಾಲ ಪಡೆದಿದ್ದು ಸಾಲದ ಮರುಪಾವತಿಯನ್ನು ಸಕಾಲದಲ್ಲಿ ಪಾವತಿ ಮಾಡುತ್ತ ಬಂದಿದ್ದಾರೆ. ಆದರೆ ಈ ವಾರದ ಮರುಪಾವತಿಯನ್ನು ಪಾವತಿಸಲು ಸಾಧ್ಯವಾಗದ ಕಾರಣ ನಾಳೆ ಕಟ್ಟುತ್ತೇನೆ ಸಮಯ ಕೊಡಿ ಎಂದು ಕೇಳಿದ್ದಾರೆ. ಆದರೆ ಮರುಪಾವತಿಗೆ ಬಂದಿದ್ದ ಉಮೇಶ್ ಮತ್ತು ಆತನ ನಾಲ್ಕು ಮಂದಿ ಸಹಚರರು ಸುಶೀಲ ರವರಿಗೆ ಈಗಲೇ ಹಣ ಕೊಡು ಎಂದು ಧಮ್ಕಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೀದಿಯಲ್ಲಿ ರಂಪಾಟ ಮಾಡಿದ್ದಾರೆ. ಇದರಿಂದ ಮನನೊಂದ ಸುಶೀಲ ಇಂದು ಮಧ್ಯಾಹ್ನ ಕಾಳಿನ ಕ್ರಿಮಿನಾಶಕ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ಬಿದ್ದಿರುವುದನ್ನು ಕಂಡು ಮನೆಯವರು ಹುಣಸೂರು ಡಿ ದೇವರಾಜ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದರೂ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಮೃತ ಪಟ್ಟಿದ್ದಾರೆ. ಈ ಬಗ್ಗೆ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪುತ್ರ ನವೀನ್ ಪ್ರಕರಣ ದಾಖಲಿಸಿದ್ದಾರೆ.
ಅಂಬೇಡ್ಕರ ಆಶಯದ ಸಂವಿಧಾನ ಅಗತ್ಯ ಎಂ ಜಿ ಭಟ್ ಕುಮಟಾ :- ಗುರುಪ್ರಸಾದ ಪ್ರೌಢಶಾಲೆ ಮಲ್ಲಾಪುರದಲ್ಲಿ ಸಂವಿಧಾನ ದಿನದ ಅಂಗವಾಗಿ ನಡೆದ ಕಾರ್ಯಕ್ರಮ ಒಂದರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉಪನ್ಯಾಸಕ ಎಂಜಿ ಭಟ್ ಅವರು ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಂಜಿ ಭಟ್ ಅವರು ಭಾರತದ ಸಂವಿಧಾನವು ಅತ್ಯಂತ ಶ್ರೇಷ್ಠ ಸಂವಿಧಾನ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ಸಂವಿಧಾನವು ಹೌದು ಹಾಗೂ ಅತ್ಯಂತ ದೊಡ್ಡ ಸಂವಿಧಾನವು ಹೌದು. ಶ್ರೇಷ್ಠ ಜ್ಞಾನಿ ದೇಶಭಕ್ತ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದ ಸಮಿತಿ ದೇಶಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ. ಅಂಬೇಡ್ಕರ್ ರವರು ಸಂವಿಧಾನದಲ್ಲಿ ಸಮಾನತೆ ಸಾಮರಸ್ಯ ಹಾಗೂ ಅಭಿ ವ್ಯಕ್ತಿ ಸ್ವಾತಂತ್ರ್ಯದಂತಹ ಅದ್ಭುತವಾದ ಕಲ್ಪನೆಯನ್ನು ಇಟ್ಟುಕೊಂಡು ಸಂವಿಧಾನವನ್ನು ರಚಿಸಿದ್ದು ಭವ್ಯ ಭಾರತದ ಕನಸನ್ನ ಅಂಬೇಡ್ಕರ್ ರವರು ಕಂಡಿದ್ದರು. ಭಾವಿ ಪ್ರಜೆಗಳಾದ ತಾವು ದೇಶದ ಭದ್ರತೆ ಅಖಂಡತೆ ಹಾಗೂ ದೇಶದ ಏಳಿಗೆ ಹಾಗೂ ಸದೃಢ ಹಾಗೂ ಸಮೃದ್ಧ ಭಾರತವನ್ನು ಕಟ್ಟುವಲ್ಲಿ ತಾವುಗಳು ಸೈನಿಕರಂತೆ ಕೆಲಸ ಮಾಡುವ ಅವಶ್ಯಕತೆ ಇದೆ. ನನ್ನ ದೇಶ ನನ್ನ ಹೆಮ್ಮೆ ಎಂಬ ಅಭಿಮಾನದಿಂದ ಕೆಲಸ ಮಾಡಬೇಕಾಗಿದೆ. ಎಂದು ದೇಶ ಭಕ್ತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಅತ್ಯಂತ ಮನ ಮುಟ್ಟುವ ರೀತಿಯ ಮಾತುಗಳನ್ನು ಆಡಿದರು. ಸಮಾಜ ಸೇವಕ ಹಾಗೂ ವಕೀಲರಾದ ಶ್ರೀ ಹೇಮಂತ್ ಕುಮಾರ್ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ದೇಶ ಕಟ್ಟುವ ಕೆಲಸ ನಿಮ್ಮಿಂದ ಆಗಬೇಕಾಗಿದೆ ದೊಡ್ಡ ಮನಸ್ಸಿನಿಂದ ಹೊಸ ಸಮಾಜದ ನಿರ್ಮಾಣವನ್ನು ಮಾಡಬೇಕಾಗಿದೆ ಎಂದು ಹಿತನುಡಿದರು. ಗುರುಪ್ರಸಾದ ಪ್ರೌಢಶಾಲೆ ಮಲ್ಲಾಪುರದ ಮುಖ್ಯಾದ್ಯಾಪಕಿ ಶ್ರೀ ವಿಜಯಲಕ್ಷ್ಮಿ ಭಟ್ ವಹಿಸಿದ್ದರು.. ಶಾಲೆಯ ಎಲ್ಲ ಶಿಕ್ಷಕರು ಸಹಕರಿಸಿದರು ಹಾಗೂ ಶಾಲೆಯ ಶಿಕ್ಷಕ ಶ್ರೀರಾಮಚಂದ್ರ ಮಡಿವಾಳ್ ಸ್ವಾಗತಿಸಿ ವಂದಿಸಿದರು.