ಮೂಡಲಗಿ : ಯಾದವಾಡ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ ಯಾದವಾಡ ಸಂಸ್ಕೃತಿಕ ಉತ್ಸವ-2024 ಹಮ್ಮಿಕೊಳ್ಳಲಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ದೀಪವನ್ನು ಬೆಳಗಿಸುವ ಮುಲಕ ಉದ್ಘಾಟನೆ ಮಾಡಿ ಮಾತನಾಡಿದರು. ಕಲ್ಮೇಶ ಗಾಣಗಿ ಕನ್ನಡ ನಾಡು ಮತ್ತು ನುಡಿಗಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಜೀವನ ಅನ್ನೋದು ಸಿಕ್ಕಿರೊದು ಒಮ್ಮೆ ನಾವು ಬದುಕಿರುವಾಗಲೇ ಸಮಾಜಕ್ಕೆ ಅಬೂತಪೂರ್ವಾದ ಸಾಕ್ಷಿಯನ್ನು ಬಿಟ್ಟು ಹೋಗಬೇಕು ನಾಳೆ ಸಮಾಜದಲ್ಲಿ ನಮ್ಮ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಇಂತಹವರು ಇಂತಹ ಕೆಲಸವನ್ನು ಮಾಡಿದರು ಅನ್ನುವ ಸ್ವಾಭಿಮಾನದ ಮಾತುಗಳನ್ನು ಆಡಬೇಕು ನನಗೆ ಇವತ್ತು ಈ ವೇದಿಕೆಯ ಮೇಲೆ ನಿಂತುಕೋಳ್ಳಲು ತುಂಬಾ ಹೆಮ್ಮೆ ಅನಿಸುತ್ತಿದೆ .ಈ ವೇದಿಕೆ ಮತ್ತು ಇದರ ಆಯೋಜನೆ ಸೌಂಡ ಸಿಸ್ಟಮ್ , ಲೈಟಿಂಗ್, ಎಲ್ಲವನ್ನು ಭವ್ಯವಾಗಿ ಮಾಡಿದ್ದಾರೆ , ಹಳ್ಳಯಲ್ಲಿಯೂ ಇಷ್ಟೋಂದು ಭವ್ಯವಾದ ಕಾರ್ಯಕ್ರಮ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಬಾರದು ಬಪ್ಪದು ಬಪ್ಪದು ತಪ್ಪದು ಬಗವಂತನ ದಯೆ ಒಂದಿರಬೇಕು ಜೀವನದಲ್ಲಿ ಎಲ್ಲವನ್ನು ನಾನು ಗೆಲ್ತಿನಿ ಅಂದರೆ ಆಗುವುದಿಲ್ಲ ಆರು ಇಲೆಕ್ಷೆನ ಮಾಡಿದಿನಿ ಮೂರು ಗೆದ್ದೀದಿನಿ ಮೂರು ಸೋತಿದ್ದೀನಿ ಮೊನ್ನೆ ನಡೆದ ಲೋಕಸಭೆಯ ಇಲೆಕ್ಷನನಲ್ಲಿ ಎಲ್ಲರೂ ನೀವೇ ಗೆಲ್ತಿರಿ ಅಂದರು ಅದರಲ್ಲಿಯೂ ಯಾದವಾಡ ಗ್ರಾಮ ನನಗೆ 1600 ಲೀಡನ್ನು ಕೊಟ್ಟಿತು ಎಲ್ಲಿ ಹೋದರೂ ಸಾವಿರಾರು ಜನ ರಾತ್ರಿ ಹನ್ನೊಂದು ಗಂಟೆಯವರೆಗೆ ಕಾದ್ರೂ ಇಷ್ಟೊಂದು ಪ್ರೀತಿ ವಿಶ್ವಾಸ ನೋಡಿದ ನನಗೆ ಕನಸ ಮನಸನಲ್ಲಿಯೂ ಸೋಲಾಗತ್ತೆ ಅಂತಾ ಅನಿಸಿರಲಿಲ್ಲ ಅದಕ್ಕೆ ಹೇಳೊದು ಬಾರದು ಬಪ್ಪದು ಬಪ್ಪದು ತಪ್ಪದು ಆದರೆ ನಾವು ಸೋತಿದ್ದಿವಿ ಅಂತಾ ಕೈ ಕಟ್ಟಿಕುತುಕೊಳ್ಳುವ ಜಾಯಿಮಾನ ನಂದು ಅಲ್ಲ ನನ್ನ ಮಗನದ್ದು ಅಲ್ಲ ಎಂದರು.
ಚೌಕಿಮಠದ ಶಿವಯೋಗಿ ಶ್ರೀಗಳು, ಶಿವಾನಂದ ಮಠದ ಬಸವರಾಜ ಸ್ವಾಮಿಜಿಗಳು ಆಶಿರ್ವಚನ ಮಾಡಿದರು ಕಲ್ಮೇಶ ಗಾಣಗಿ ಜಿಲ್ಲಾ ಸಂಚಾಲಕರು ನಮ್ಮ ಕರವೇ ಕಾಂಗ್ರೆಸ ಮುಖಂಡ ಮಹಾಂತೇಶ ಕಡಾಡಿ ಗೋಕಾವಿ ಕನ್ನಡ ನಾಡು ನುಡಿ ಬಗ್ಗೆ ಮಾತನಾಡಿದರು, ರಾಷ್ಟ್ರಮಟ್ಟದ ಸಾಮೂಹಿಕ ನೃತ್ಯಗಳು ಜರುಗಿದವು ಗ್ರುಪ್ ಡ್ಯಾನ್ಸ ಗಳಲ್ಲಿ 1st ವಿಜಯ ಡ್ಯಾನ್ಸ ಗ್ರುಪ್ ಇಳಕಲ್, 35000 2nd ಎ.ಕೆ.ಡ್ಯಾನ್ಸ ಅಕಾಡೆಮಿ ಧಾರವಾಡ 30000 3rd ಆರಾಧನಾ ಡ್ಯಾನ್ಸ ಅಕಾಡೆಮಿ ಗಂಗಾವತಿ 25000 4TH ವಿ.ಕೆ.ಸ್ಟೈಲ್ ಮಹಾಲಿಂಗಪೂರ 20000, 5TH ವಿ.ಬಿ.ಡ್ಯಾನ್ಸ ಅಕಾಡೆಮಿ ಬೆಳಗಾವಿ 15000 6TH ಹಿಪಾಪ್ ಕ್ಲಸ್ಟರ್ಸ ಬೆಳಗಾವಿ 10000 7TH ಲಕ್ಕಿ ಡ್ಯಾನ್ಸ ಅಕಾಡೆಮಿ ಬೆಳಗಾವಿ, ರೂ 7000 8TH ರೇವಾ ತಾಂಡವ ಮುಧೋಳ 5000. ವಯಕ್ತಿಕ ನೃತ್ಯ ಗಳಲ್ಲಿ 1ST ವೃಷಭ ಗೋಡಚಿ 10000 2ND ಗೋಸಾಖಾನ ಧಾರವಾಡ 7000 3RD ಏ ಪಿ ಅಭಿನಾಷಾ ಬಿಜಾಪೂರ 5000 4TH ಪ್ರಿಯಾಂಕಾ ಬಿಳಗಿ ಮುಧೋಳ 3000. ಬಹುಮಾನ ಪಡೆದುಕೊಂಡರು ಯಾದವಾಡ ಚೌಕಿಮಠದ ಶ್ರೀ ಶಿವಯೋಗಿದೇವರು, ಕುಮಾರ ಹಿರೇಮಠ,ಶಿವಪ್ಪಗೌಡ ನ್ಯಾಮಗೌಡರ, ಕಾಂಗ್ರೇಸ್ ಮುಖಂಡರಾದ ಮಹಾಂತೇಶ ಕಡಾಡಿ , ಶ್ರೀ ಹರ್ಷಾ ನೀಲೋಪಂತ,ಸಂಗಮೇಶ ಕತ್ತಿ , ರಾವುಸಾಬ ಬೆಳಕೋಡ ಬಿ.ಬಿ.ಹಂದಿಗುಂದ , ಈರಣ್ಣ ಕೊಣ್ಣುರ , ಮಲ್ಲಪ್ಪ ಮದಗುಣಕಿ, ಮಲ್ಲಿಕಾರ್ಜುನ ಚೌಕಾಶಿ, ರಾಜನಗೌಡ ಪಾಟೀಲ , ಈರಣ್ಣ ಮುದ್ದಾಪೂರ ಇದ್ದರು.