ಇಂಡಿ: ಇದೆ ದಿನಾಂಕ 10-12-2024 ರಂದು ಬೆಳಗಾಂವದಲ್ಲಿ ನಡೆದ ಪಂಚಮಸಾಲಿ ಸಮಾಜದ ಬಾಂಧವರು 2ಎ ಮೀಸಲಾತಿಗಾಗಿ ನಡೆಸಿದ ಬೃಹತ್ ಪ್ರತಿಭಟನೆಕಾರ ಮೇಲೆ ಪೋಲಿಸರು ವಿನಾಕಾರಣ ಲಾಠಿಚಾರ್ಜ್ ಮಾಡಿ ಹಲ್ಲೆಮಾಡಿದ್ದನ್ನು ಖಂಡಿಸಿ ಇಂದು ಇಂಡಿ ನಗರದಲ್ಲಿ ಬಸವೇಶ್ವರ ಪ್ರತಿಮೆ ಬಳಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಒಂದು ತಾಸುಕ್ಕಿಂತ ಹೆಚ್ಚು ಹೊತ್ತು ಬೃಹತ್ ಪ್ರತಿಭಟನೆ ಮಾಡಿದರು.ಈ ಸಂದರ್ಭದಲ್ಲಿ ಇಂಡಿ ಮಾಜಿ ಶಾಸಕರಾದ ಶ್ರೀ ರವಿಕಾಂತ ಪಾಟೀಲ ಅವರು ಮಾತನಾಡಿ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯಮೃತ್ಯುಂಜಯ ನೇತೃತ್ವದಲ್ಲಿ 2ಎ ಮೀಸಲಾತಿಗಾಗಿ ನ್ಯಾಯಯುತವಾಗಿ ಹೋರಾಟ ಮಾಡುತ್ತಿರುವಾಗ ವಿನಾಯಕ ನಮ್ಮ ಸಮುದಾಯದ ಮುಗ್ದ ಜನರ ಮೇಲೆ ಹಲ್ಲೆ ಮಾಡಿರುವುದು ತುಂಬಾ ಖಂಡನೆಯ ಎಂದು ಹೇಳಿದರು.ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರ ಪಂಚಮಸಾಲಿ ಸಮಾಜದ ಜನರನ್ನು ಕಗ್ಗೊಲೆ ಮಾಡಲು ಹೋರಟಿದೆ ನಾವು ನಾಯ್ಯಯುತವಾಗಿ ಹೋರಾಟ ಮಾಡಿದರೆ ಪೋಲಿಸರ ಮುಖಾಂತರ ನಮ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ನಮ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ 2ಡಿ ಮೀಸಲಾತಿ ನೀಡಿತ್ತು ಈಗಿನ ಸರ್ಕಾರ ಕಾರ್ಯರೂಪಕ್ಕೆ ತರಲು ಹಿಂದೆಟ್ಟು ಹಾಕುತ್ತಿದೆ ಎಂದು ದೂರರಿದರು.ಪುರಸಭೆ ಸದಸ್ಯರಾದ ಭೀಮನಗೌಡ ಪಾಟೀಲ ಮಾತನಾಡಿ ಪಂಚಮಸಾಲಿ ಜನರು ಪ್ರಾಮಾಣಿಕ ಜನರು ಹಿಡಿದರೆ ಹಿಡಿ ಚೇಳು ಹಿಡಿಯಬೇಕು ಆದರೆ ಪಂಚಮಸಾಲಿ ಜನರನ್ನು ಕೆಣಕಬಾರದು ಆದರೆ ಸಿದ್ದರಾಮಯ್ಯ ಸರ್ಕಾರ ಈಗ ಪಂಚಮಸಾಲಿಗಳನ್ನು ಕೆಣಕಿದೆ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಹೇಳಿದರು.ಇಂಡಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಶ್ರೀ ವಿ ಎಚ್ ಬಿರಾದಾರ ಅವರು ಮಾತನಾಡಿ ಪಂಚಮಸಾಲಿ ಸಮಾಜದ ಬಾಂಧವರು ಸ್ವಾಭಿಮಾನಿ ಜನರು, ಅವರು ಸರ್ವ ಜನರನ್ನು ಪ್ರೀತಿ ವಾತ್ಸಲ್ಯದಿಂದ ಬದುಕುನ್ನು ಕಟ್ಟಿಕೊಂಡು ಜೀವನ ಜೀವನ ಸಾಗಿಸುತ್ತಿದ್ದಾರೆ.ಆದರೆ 2ಎ ಮೀಸಲಾತಿಗಾಗಿ ನ್ಯಾಯಯುತವಾಗಿ ಹೋರಾಟ ಮಾಡಿದೆ ನಮ್ಮ ಜನಾಂಗದ ಮೇಲೆ ಪೋಲಿಸರು ಲಾಠಿ ಚಾರ್ಜ್ ನಡೆಸಿ ಹಲ್ಲೆ ನಡೆಸಿದ್ದಾರೆ ಇದನ್ನು ನಾವು ಖಂಡಿಸುತ್ತೆವೆ ಎಂದು ಹೇಳಿದರು.ಈ ಇಂಡಿ ತಾಲೂಕು ಬಿಜೆಪಿ ಘಟಕ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಿವಡೆ ಅಯೂಬ್ ನಾಟಿಕಾರ ಸೇರಿದಂತೆ ಅನೇಕರು ಮಾತನಾಡಿದರು.ಈ ಸಂದರ್ಭದಲ್ಲಿ ಇಂಡಿ ತಾಲೂಕು ಪಂಚಮಸಾಲಿ ಯುವ ಘಟಕ ಅಧ್ಯಕ್ಷರಾದ ಸೋಮು ದೇವರ ಬಾಳು ಮುಳಜಿ ಶ್ರೀಶೈಲಗೌಡ ಪಾಟೀಲ ಅನೀಲಗೌಡ ಬಿರಾದಾರ ಅನೀಲ ಪ್ರಸಾದ ಏಳಗಿ ಚಂದು ದೇವರ ಶಿವಾನಂದ ಚಾಳಿಕಾರ ಪಾಪು ಕಿತ್ತಲಿ ಉಮೇಶ ಲಚ್ಯಾನ ಶ್ರೀಧರ ತಾಂಬೆ ವೀರೇಂದ್ರ ಪಾಟೀಲ್ ಡಿ ಜಿ ಜೊತಗೊಂಡ ಬಿ ಬಿ ಬಿರಾದಾರ ಎಸ್ ಆರ್ ಬಿರಾದಾರ ಅಶೋಕ ಅಕಲಾದಿ ಅನೀಲ ತೆನ್ನೆಹಳ್ಳಿ ಸಾಯಬಣ್ಣ ಅವಟಿ ಹಾಗೂ ಪಂಚಮಸಾಲಿ ಸಮಾಜದ ಬಾಂಧವರು ಉಪಸ್ಥಿತರಿದ್ದರು.
