ಕಲಬುರ್ಗಿ:-ಬಾಗಲಕೋಟೆ ವಕ್ಛ ಭೂ ಕಬಳಿಕೆಯ ವಿರೋಧಿಸಿ ಹೋರಾಟದ ವೇದಿಕೆ ಮುಂಭಾಗದ ಸಹಸ್ರಾರು ಜನಸಂಖ್ಯೆಯ ಜನತೆಯ ಮುಂದೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆಯುವ ಈ ಬೃಹತ್ ಸಮಾವೇಶ ದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಕಾಂಗ್ರೆಸ್ ನ ಶಾಸಕರು ಸಚಿವ ಜಮ್ಮೀರ ಅಹ್ಮದ್ ಗೇ ವೈಯುಕ್ತಿಕ ವಾಗಿ ಭೈಯುವ ಸುಸಂಧರ್ಭದಲ್ಲಿ ವಿಜಯಪುರ ಬಿಜೆಪಿ ಶಾಸಕರು ಬಸನ್ನಗೌಡ ಪಾಟೀಲ ಯತ್ನಾಳ ವೇದಿಕೆಯಲ್ಲಿ ಬಹಿರಂಗವಾಗಿ ರಾಜಾರೋಷವಾಗಿ ಮಾತನಾಡುವ ಭರಾಟೆಯಲ್ಲಿ ಸಣ್ಣ ಸಣ್ಣ ಸಮುದಾಯಕ್ಕೆ ನೋವು ಕೊಡುವುದು ಎಷ್ಟರ ಮಟ್ಟಿಗೆ ಸರಿ.? ವೀರಶೈವ ಸಮಾಜವದ ಒಳ ಪಂಗಡದ ಸಣ್ಣ ಸಮುದಾಯದ ಹೆಸರು ಬಳಸಿಕೊಂಡು ಅನೇಕ ಸಭೆ ಸಮಾರಂಭ ಮಾಡಲು ಈ ಸಣ್ಣ ಸಣ್ಣ ಕಾಯಕ ಸಮುದಾಯ ಬೇಕು. ? ಆದರೆ ಈಗ ಇದೇ ಸಮುದಾಯದ ಜನತೆಗೆ ಈಗ ಈ ರೀತಿಯಾಗಿ ಜಾತಿ ನಿಂದನೆ ಮಾಡಿ ಈ ಸಮಾಜದ ಜನತೆಗೆ ಅಗೌರವ ತೋರುವ ಕೆಲಸ ಮಾಡಬೇಡಿ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಎಂದು ಕಿಡಿ ಕಾರಿದರು. ಹನ್ನೆರಡನೆಯ ಶತಮಾನದ ವಿಶ್ವಗುರು ಬಸವಣ್ಣನವರ ಆಪ್ತಕಾರ್ಯದರ್ಶಿ ನಿಜಸುಖಿ ಹಡಪದ ಅಪ್ಪಣ್ಣ ಸಮಾಜಕ್ಕೆ ಈ ರೀತಿಯ ಜಾತಿ ನಿಂದನೆ ಪದ ಬಳಕೆ ಮಾಡುವುದು ಸರಿಯೆ. ಶಾಸಕರೆ .? ನಮ್ಮ ಹಡಪದ ಅಪ್ಪಣ್ಣ (ಕ್ಷೌರಿಕ) ಸಮುದಾಯಕ್ಕೆ ಈ ರೀತಿಯ ಜಾತಿ ನಿಂದನೆ ಪದ ಬಳಕೆ ಮಾಡಿದ್ದು ಅಕ್ಷಮ್ಯ ಅಫರಾದ ಮತ್ತು ನಮ್ಮ ಕ್ಷೌರಿಕ ವೃತ್ತಿಗೆ ಗೇಲಿ ಮಾಡಿ (ಜಾತಿ) ನಿಂದನೆ ಪದ ಬಳಕೆ ಮಾಡಿ ಮಾತನಾಡಿದ ವಿಚಾರವಾಗಿ ಹಡಪದ ಅಪ್ಪಣ್ಣ ಸಮುದಾಯ ಕಾಯಕ ಮಾಡುವ “ಕ್ಷೌರ ವೃತ್ತಿಯನ್ನು ” ಈ ಕಾಯಕ ಸಮಾಜಕ್ಕೆ ತುಂಬಾ ಹಗುರವಾಗಿ ಮಾತನಾಡಿರುವುದು ಖಂಡನೀಯ . ಬಿಜೆಪಿಯ ಹಿರಿಯ ಶಾಸಕರು ಬಸನ್ನಗೌಡ ಪಾಟೀಲ ಯತ್ನಾಳ ನವರು ರಾಜ್ಯದ ಸಮಸ್ತ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜನತೆಗೆ ಕ್ಷಮೆ ಕೇಳಬೇಕು .ಇಲ್ಲವಾದರೆ ಅವರ ಹೇಳಿಕೆ ಸರಿಯಾದ ಸಮರ್ಥನೆ ಮಾಡಿಕೊಳ್ಳಲಿ ಇಲ್ಲವಾದರೆ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಶಾಸಕರ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ಸಜ್ಜಾಗಬೇಕಾಗುತ್ತದೆ. ಇತ್ತಿಚಿನ ದಿನಗಳಲ್ಲಿ ಜನ ಪ್ರತಿನಿಧಿಗಳು .ಕಾಯಕ ಸಮಾಜದ ಬಗ್ಗೆ ತುಂಬಾ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು . ಇದೇ ಡಿಸೆಂಬರ್ ೯ ರಂದು ನಡೆಯುವ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಕಾಯಕ ಸಮಾಜಕ್ಕೆ ಜಾತಿ ನಿಂದನೆ ಪದ ಬಳಕೆ ಮಾಡುವುದು ಈ ರೀತಿ ದೊಡ್ಡ ದೊಡ್ಡ ವ್ಯಕ್ತಿಗಳು. ಮತ್ತು ಸಾರ್ವಜನಿಕವಾಗಿ ಈ ಸಣ್ಣ ಸಮಾಜಕ್ಕೆ ಗೇಲಿ ಮಾಡಿ ಜಾತಿ ನಿಂದನೆ ಮಾಡಿ ಸಣ್ಣ ಸಣ್ಣ ಸಮಾಜದ ಜನತೆಯ ಮನಸ್ಸಿಗೆ ಘಾಸಿ ಮಾಡುವುದು ಸರಿಯೇ.ಇದನ್ನು ಅರಿತು ರಾಜ್ಯ ಸರ್ಕಾರ ಈ ಸಮಾಜಕ್ಕೆ ಜಾತಿ ನಿಂದನೆಯ ಅಡಿಯಲ್ಲಿ “ಅಟ್ರಾಸಿಟಿ’ ಕಾನೂನು ಜಾರಿಗೆ ತರಲು ಈ ಬೆಳಗಾವಿಯ ಅಧಿವೇಶನ ದಲ್ಲಿ ಚರ್ಚೆ ಮಾಡಿ ಅನೇಕ ಶಾಸಕರು. ಸಚಿವರು. ವಿಧಾನ ಪರಿಷತ್ ಸದಸ್ಯರು.ಮತ್ತು ವಿರೋಧ ಪಕ್ಷದ ನಾಯಕರು ಈ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಡುವ ಕೆಲಸ ಮಾಡಬೇಕು. ಇಲ್ಲವಾದರೆ ಮುಂದೆ ಬರುವ ಯಾವುದೇ ಚುನಾವಣೆಯಲ್ಲಿ ಈ ರೀತಿಯ ಅಸಭ್ಯ ವರ್ತನೆ ಮಾಡಿ ಸಮಾಜಕ್ಕೆ ಗೇಲಿ ಮಾಡಿ ಸಮಾಜದ ಜನತೆ ಗೇ ಜಾತಿ ನಿಂದನೆ ಮಾಡುವ ವ್ಯಕ್ತಿಗಳಿಗೆ ಇಡೀ ರಾಜ್ಯದ ಸ್ವಾಬಿಮಾನಿ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜನತೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ .ಮತ್ತು ಇದೇ ಕಾಂಗ್ರೆಸ್ ಸರ್ಕಾರವೇ ನಮ್ಮ ಸಮಾಜದ ಜಾತಿ ನಿಂದನೆ ಪದ ಬಳಕೆ ಮಾಡಬಾರದು ಎಂದು ಆಗ ಸಮಾಜ ಕಲ್ಯಾಣ ಸಚಿವರು ಎಚ್ .ಆಂಜನೇಯ ಸಾಹೇಬ್ರೆ ಅವರು ಈ ಅಜಾಮ್ ಎಂಬ ಪದ ಬಳಕೆ ಮಾಡಬಾರದು ಎಂದು ನಿಷೇಧ , ಮಾಡಿದರು. ಇದಕ್ಕೆ ಕಾನೂನು ಪ್ರಕಾರ “ಅಟ್ರಾಸಿಟಿ’ ಕಾನೂನು ಜಾರಿಗೆ ತರದೇ ಇರುವುದು ನೋವಿನ ಸಂಗತಿಯಾಗಿದೆ. ಈಗಲಾದರೊ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬಂದಿದೆ. ಈಗಲಾದರೊ ಈ ಪದ ಬಳಕೆ ಮಾಡುವವರಿಗೆ ಕಾನೂನು ಪ್ರಕಾರ ” ಅಟ್ರಾಸಿಟಿ ” ಜಾರಿಗೆ ಇರಲೇಬೇಕು ಮತ್ತು ಮೊದಲು ಜಾತಿ ನಿಂದನೆಯ ಪಿಡುಗು ತೂಲಗಬೇಕು .? ಎಂದು ಸರ್ಕಾರಕ್ಕೆ ಮತ್ತು ಸಮಾಜ ಕಲ್ಯಾಣ ಸಚಿವರಿಗೆ ಈ ಸಮಾಜದ ಮೇಲೆ ಮೇಲೆ ಆಗುವ ಅನೇಕ ದೌರ್ಜನ್ಯ ಹಿಂಸೆ. ಹಲ್ಲೆ ಯನ್ನು ಗಮನಿಸಲು . ರಾಜ್ಯ ಸರ್ಕಾರಕ್ಕೆ ಒತ್ತಾಯದ ಮೂಲಕ ಈ ಪತ್ರಿಕೆಯಲ್ಲಿ ಬೇಸರ ವ್ಯಕ್ತ ಪಡಿಸಿದರು.
