ಹಾಸನ::ಮಹಿಳಾ ಸುರಕ್ಷತೆ ಸಾಮೂಹಿಕ ಜವಾಬ್ದಾರಿ ಅಭಿಯಾನದ ಅಂಗವಾಗಿ ಇಂದು ಬೃಹತ್ ಪ್ರತಿಭಟನೆ
ಹಾಸನ ವಿಮ್ ಇದರ ಎರಡು ತಿಂಗಳ ಕ್ಯಾಂಪ್ ಪೇನ್ ನ ಅಂಗಾವಗಿ ಇಂದು ಹಾಸನದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ದಿನಾಂಕ 02/12/2024ಕ್ಕೆ ರಾಷ್ಟ್ರೀಯ ಮಟ್ಟದ ಸಮಾರೋಪ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಹಿತು ಪ್ರತಿಭಟನೆಯಲ್ಲಿ ಮಾತನಾಡಿದ ಜೀಲ್ಲಾ ಅಧ್ಯಕ್ಷೆ ಅಫರೋಜಾ ಬಾನು ಕಳೆದ ಎರಡು ತಿಂಗಳಿನಿಂದ ದೇಶದ್ಯಂತ ವಿಮ್ ವತಿಯಿಂದ ಕಾರ್ನರ್ ಮೀಟಿಂಗ್, ಮನೆ ಮನೆಗಳಿಗೆ ಭೇಟಿ, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಂಡು ಮಹಿಳೆಯರಿಗೆ ಜಾಗೃತಿ ಮೂಡಿಸಲಾಹಿತು. ನಮ್ಮ ದೇಶ ಅಳಿವು ಉಳಿವು ಹೆಣ್ಣಿನಿಂದ ಮಾತ್ರ ಸಾಧ್ಯ ಹೆಣ್ಣೊಂದು ಕಲ್ಲಿತರೆ ಶಾಲೆ ಯೊಂದು ತೆರೆದಂತೆ ಎಂಬ ಮಾತಿದೆ.
ಬೇಟಿ ಪಡಾವೋ ಬೇಟಿ ಬಜಾವೋ ಎಂಬ ಘೋಷಣೆ ಹೇಳುವವರು ಪಕ್ಷದ ನಾಯಕರು ಕಾರ್ಯಕರ್ತರು ಹೆಣ್ಣಿಗೆ ಬೆಲ್ಲೆ ನಿಡುತ್ತಿಲ್ಲ ಮಹಿಳಾ ಮೇಲಿನ ಆತ್ಯಚಾರ ಲೈಂಗಿಕ ದೌರ್ಜನ್ಯ ನಡೆಸುವವರ ವಿರುದ್ಧ ಫಾಸ್ಟ್ ಟ್ಯಾಗ್ ನ್ಯಾಯಾಲಯನಡೆಸಿ ಅವರನ್ನು ಗಲ್ಲಿಗೇರಿಸಬೇಕು ಇಲ್ಲದಿದ್ದರೆ ಮಹಿಳೆ ಮೇಲಿನ ದೌರ್ಜನ್ಯ ನಿಲ್ಲುವುದಿಲ್ಲ. ಹಾಗಾಗಿ ನಮ್ಮ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಒಂದಾಗೊಣ್ಣ ಎಂದು ತಿಳಿಸಿದರು.
ಭೀಮ್ ಆರ್ಮಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೂಪ ಅವರು ಮಾತನಾಡಿ ನಾವೆಲ್ಲರೂ ಒಂದಾಗಿ ಬೀದಿಗೆ ಇಳಿದು ಅನ್ಯಾಯದ ವಿರುದ್ಧ ಹೋರಾಟಗಳನ್ನು ನಡೆಸುವುದರ ಮುಖಾಂತರ ದೇಶದಲ್ಲಿ ಸಂವಿಧಾನವನ್ನು ಉಳಿಸಲು ಹಾಗೂ ಮಹಿಳೆಯರ ಸಾಮಾಜಿಕ ನ್ಯಾಯ.ಭದ್ರತೆಡಳಿಗಾಗಿ
ಹೋರಾಡಬೇಕು ಎಂದು ತಿಳಿಸಿದರು. ಇಂತಹ ಹೋರಾಟಗಳಲ್ಲಿ ನಾವು ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ ಎಂದು ಆಶ್ವಾಸನೆ ಕೂಡ ನೀಡಿದರು.
ಈ ಸಂದರ್ಭದಲ್ಲಿ ವಿಮ್ ರಾಜ್ಯಮಾಧ್ಯಮ ಉಸ್ತುವಾರಿ ರೂಬಿ ವಾಹಿದ್ ಕಾರ್ಯದರ್ಶಿ ಸಾಹಿರಾಬಾನು, ಬಿಮ್ ಆರ್ಮಿ ಮಹಿಳಾ ಘಟಕದ ಅಧ್ಯಕ್ಷೆ ರೂಪ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ ಪರ್ವಿಜ್ ಅಹಮದ್ ಹಾಸನ