ಅಂಬೇಡ್ಕರ ಆಶಯದ ಸಂವಿಧಾನ ಅಗತ್ಯ ಎಂ ಜಿ ಭಟ್
ಕುಮಟಾ :- ಗುರುಪ್ರಸಾದ ಪ್ರೌಢಶಾಲೆ ಮಲ್ಲಾಪುರದಲ್ಲಿ ಸಂವಿಧಾನ ದಿನದ ಅಂಗವಾಗಿ ನಡೆದ ಕಾರ್ಯಕ್ರಮ ಒಂದರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉಪನ್ಯಾಸಕ ಎಂಜಿ ಭಟ್ ಅವರು ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಂಜಿ ಭಟ್ ಅವರು ಭಾರತದ ಸಂವಿಧಾನವು ಅತ್ಯಂತ ಶ್ರೇಷ್ಠ ಸಂವಿಧಾನ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ಸಂವಿಧಾನವು ಹೌದು ಹಾಗೂ ಅತ್ಯಂತ ದೊಡ್ಡ ಸಂವಿಧಾನವು ಹೌದು. ಶ್ರೇಷ್ಠ ಜ್ಞಾನಿ ದೇಶಭಕ್ತ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದ ಸಮಿತಿ ದೇಶಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ. ಅಂಬೇಡ್ಕರ್ ರವರು ಸಂವಿಧಾನದಲ್ಲಿ ಸಮಾನತೆ ಸಾಮರಸ್ಯ ಹಾಗೂ ಅಭಿ ವ್ಯಕ್ತಿ ಸ್ವಾತಂತ್ರ್ಯದಂತಹ ಅದ್ಭುತವಾದ ಕಲ್ಪನೆಯನ್ನು ಇಟ್ಟುಕೊಂಡು ಸಂವಿಧಾನವನ್ನು ರಚಿಸಿದ್ದು ಭವ್ಯ ಭಾರತದ ಕನಸನ್ನ ಅಂಬೇಡ್ಕರ್ ರವರು ಕಂಡಿದ್ದರು. ಭಾವಿ ಪ್ರಜೆಗಳಾದ ತಾವು ದೇಶದ ಭದ್ರತೆ ಅಖಂಡತೆ ಹಾಗೂ ದೇಶದ ಏಳಿಗೆ ಹಾಗೂ ಸದೃಢ ಹಾಗೂ ಸಮೃದ್ಧ ಭಾರತವನ್ನು ಕಟ್ಟುವಲ್ಲಿ ತಾವುಗಳು ಸೈನಿಕರಂತೆ ಕೆಲಸ ಮಾಡುವ ಅವಶ್ಯಕತೆ ಇದೆ. ನನ್ನ ದೇಶ ನನ್ನ ಹೆಮ್ಮೆ ಎಂಬ ಅಭಿಮಾನದಿಂದ ಕೆಲಸ
ಮಾಡಬೇಕಾಗಿದೆ. ಎಂದು ದೇಶ ಭಕ್ತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಅತ್ಯಂತ ಮನ ಮುಟ್ಟುವ ರೀತಿಯ ಮಾತುಗಳನ್ನು ಆಡಿದರು.
ಸಮಾಜ ಸೇವಕ ಹಾಗೂ ವಕೀಲರಾದ ಶ್ರೀ ಹೇಮಂತ್ ಕುಮಾರ್ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ದೇಶ ಕಟ್ಟುವ ಕೆಲಸ ನಿಮ್ಮಿಂದ ಆಗಬೇಕಾಗಿದೆ ದೊಡ್ಡ ಮನಸ್ಸಿನಿಂದ ಹೊಸ ಸಮಾಜದ ನಿರ್ಮಾಣವನ್ನು ಮಾಡಬೇಕಾಗಿದೆ ಎಂದು ಹಿತನುಡಿದರು.
ಗುರುಪ್ರಸಾದ ಪ್ರೌಢಶಾಲೆ ಮಲ್ಲಾಪುರದ ಮುಖ್ಯಾದ್ಯಾಪಕಿ ಶ್ರೀ ವಿಜಯಲಕ್ಷ್ಮಿ ಭಟ್ ವಹಿಸಿದ್ದರು.. ಶಾಲೆಯ ಎಲ್ಲ ಶಿಕ್ಷಕರು ಸಹಕರಿಸಿದರು ಹಾಗೂ ಶಾಲೆಯ ಶಿಕ್ಷಕ ಶ್ರೀರಾಮಚಂದ್ರ ಮಡಿವಾಳ್ ಸ್ವಾಗತಿಸಿ ವಂದಿಸಿದರು.
