ಇಂಡಿ: ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡಗುಡಿಯ ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ಮರುಳಸಿದ್ದೇಶ್ವರ ಜಾತ್ರೆ ನಡೆಯುತ್ತದೆ.ಜಾತ್ರೆ ನಿಮಿತ್ತವಾಗಿ ಶ್ರೀ ಮರುಳಸಿದ್ದೇಶ್ವರ ಜಾತ್ರೆ ಕಮೀಟಿ ಹಾಗೂ ಪಶು ಸಂಗೋಪನಾ ಇಲಾಖೆಯ ಸಹಯೋಗದಲ್ಲಿ ಬೃಹತ್ ಜಾನುವಾರುಗಳ ಜಾತ್ರೆ ಹಮ್ಮಿಕೊಳ್ಳಲಾಗಿತ್ತು.ಪ್ರಥಮ ಜಾನುವಾರುಗಳ ಜಾತ್ರೆ ಆಗಿದ್ದರು ಕೂಡಾ ಜಿಲ್ಲೆಯ ವಿವಿಧ ಭಾಗಗಳಿಂದ ಸಾಕಷ್ಟು ಜಾನುವಾರುಗಳು ನೆರೆದಿದ್ದವು.ಜಾತ್ರೆ ಮುಗಿದ ಬಳಿಕ ಉತ್ತಮ ಜಾನುವಾರುಗಳಿಗೆ ಪಾಸ್ ವಿತರಣೆ ಮಾಡುವುದು ವಾಡಿಕೆ.ಅದರಂತೆ ಪಶು ಸಂಗೋಪನಾ ಇಲಾಖೆಯ ಹಾಗೂ ಶ್ರೀ ಮರುಳಸಿದ್ದೇಶ್ವರ ಜಾತ್ರೆ ಕಮೀಟಿ ಸಹಯೋಗದಲ್ಲಿ ಉತ್ತಮ ಜಾನುವಾರುಗಳಿಗೆ ಪಾಸ್ ವಿತರಣೆ ಕಾರ್ಯಕ್ರಮ ನಡೆಯಿತು.ಮೊದಲು ಉತ್ತಮ ಜಾನುವಾರುಗಳ ಆಯ್ಕೆ ಸಮಿತಿ ರಚನೆ ಮಾಡಲಾಯಿತು ಆಯ್ಕೆ ಸಮಿತಿ ಇಂಡಿ ಪಶು ಸಂಗೋಪನಾ ಇಲಾಖೆ ತಾಲೂಕು ವೈದ್ಯಾಧಿಕಾರಿ ರಾಜಕುಮಾರ ಅಡಕಿ, ಝಳಕಿ ಪಶು ವೈದ್ಯಾಧಿಕಾರಿ ಪ್ರಕಾಶ ಮಿರ್ಜಿ,ತಾಂಬಾ ಪಶು ವೈದ್ಯಾಧಿಕಾರಿ ರವಿಶಂಕರ ಬಿರಾದಾರ,ಬಸನಾಳ ಪಶು ವೈದ್ಯಾಧಿಕಾರಿ ಸಂಜೀವ ಕುಮಾರ ಲಾಳಸಂಗಿ,ನಿಂಬಾಳ ಪಶು ವೈದ್ಯಾಧಿಕಾರಿ ರಾಜಶೇಖರ ಕಾರಜೊಳ,ಹೋರ್ತಿ ಪಶು ವೈದ್ಯಾಧಿಕಾರಿ ಪ್ರಶಾಂತ್ ಬೆಳುಡಂಗಿ ಹಾಗೂ ತಡವಲಗಾ ಪಶು ವೈದ್ಯಕೀಯ ಪರೀಕ್ಷರು ಅಶೋಕ ಕಾಗರೆ ನೇತೃತ್ವದಲ್ಲಿ ಒಂದು ತಂಡ ರಚನೆ ಮಾಡಲಾಯಿತು.ನಂತರ ಉತ್ತಮ ತಳಿಯ ಜಾನುವಾರುಗಳನ್ನು ಪರಿಸಿಲಿಸಿದ ಉತ್ತಮ ಜಾನುವಾರುಗಳನ್ನು ವಿವಿಧ ವಿಭಾಗಗಳನ್ನಾಗಿ ವಿಂಗಡಣೆ ಮಾಡಿ ಆಯ್ಕೆ ಮಾಡಿದರು, ಪ್ರಥಮ, ದ್ವಿತೀಯ ತೃತೀಯ ಸ್ಥಾನ ಪಡೆದವರ ಹೋರಿಗಳ ಮಾಲಿಕರ ಹೆಸರು ಪ್ರಕಟಿಸಿದರು 1) ಹಾಲಲ್ಲಿನ ಹೋರಿ(ಹಾಲು ಕುಡಿವುವ)ವಿಭಾಗದಲ್ಲಿ ಹಣಮಂತ ಕಲ್ಲಪ್ಪ ಗಣವಲಗಾ ಪ್ರಥಮ ಚಂದ್ರಾಮ ದುಂಡಪ್ಪ ಕೋಷ್ಠಿ, ದ್ವಿತೀಯ ಅಣ್ಣಾರಾಯ ಮಾದೇವ ಬೇವನೂರ ತೃತೀಯ ಮತ್ತು ಹಾಲಲ್ಲಿನ ಹೋರಿ (ಕೂಡಿಯದ) ವಿಭಾಗದಲ್ಲಿ ಚಂದ್ರಾಮ ದುಂಡಪ್ಪ ಕೋಷ್ಠಿ ಪ್ರಥಮ ಹಾಗೂ ಎರಡು ಹಲ್ಲಿನ ವಿಭಾಗದಲ್ಲಿ ಆದಿಲಶಾ ಹುಸೇನಿ ಬಾಗವಾನ ಪ್ರಥಮ ಹಾಗೂ ನಾಲ್ಕು ಹಲ್ಲಿನ ವಿಭಾಗದಲ್ಲಿ ಮಾದೇವ ಮಳಸಿದ್ದ ಕುದರಿ ಪ್ರಥಮ ಗುರುಲಿಂಗ ಶಿವಲಿಂಗ ಬಿರಾದಾರ (ಅಥರ್ಗಾ) ದ್ವಿತೀಯ ಪ್ರಭು ವಿಠೋಬಾ ಪಟೇದ(ಹಿರೇರೂಗಿ) ತೃತೀಯ ಆರು ಹಲ್ಲಿನ ವಿಭಾಗದಲ್ಲಿ ಚಂದ್ರಾಮ ದುಂಡಪ್ಪ ಕೋಷ್ಠಿ ಪ್ರಥಮ ಹಾಗೂ ಬಾಯಿ ಗೂಡಿದ ಹಾಲಿನ ಹೋರಿ ವಿಭಾಗದಲ್ಲಿ ಧನಸಿಂಗ್ ದಾಮು ನಾಯಕ ಪ್ರಥಮ ಮತ್ತು ಜೋಡ ಎತ್ತು ವಿಭಾಗದಲ್ಲಿ ಶಂಕರ ದ್ಯಾಮಗೊಂಡ ಹಿಪ್ಪರಗಿ (ಉತ್ನಾಳ) ಆಕಳು ಮಣಕ ವಿಭಾಗದಲ್ಲಿ ಚಂದ್ರಕಾಂತ ಮಾದೇವ ಬೇವನೂರ ಪ್ರಥಮ ಸಿದ್ದಪ್ಪ ಬೆನೂರ ದ್ವಿತೀಯ ಬಸವರಾಜ ದುಂಡಪ್ಪ ತಾರಾಪೂರ ತೃತೀಯ ಹಾಗೂ ಆಕಳು ವಿಭಾಗದಲ್ಲಿ ರಾಜಶೇಖರ ಅಥರ್ಗಾ ಪ್ರಥಮ ಚಂದ್ರಾಮ ದುಂಡಪ್ಪ ಕೋಷ್ಠಿ ದ್ವಿತೀಯ ಎಂದು ಆಯ್ಕೆ ಸಮಿತಿ ಅಧ್ಯಕ್ಷರು ಹಾಗೂ ಇಂಡಿ ಪಶು ಸಂಗೋಪನಾ ಇಲಾಖೆ ತಾಲೂಕು ವೈದ್ಯಾಧಿಕಾರಿ ರಾಜಕುಮಾರ ಅಡಕಿ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಶ್ರೀ ಮರುಳಸಿದ್ದೇಶ್ವರ ಜಾತ್ರೆ ಕಮೀಟಿ ವತಿಯಿಂದ ಬಸವರಾಜ ಇಂಡಿ, ಕೃಷ್ಣಪ್ಪ ಮಿರ್ಜಿ, ಶರಣು ಕನ್ನೂರ, ಯಶವಂತ ಖಸ್ಕಿ, ಕಲ್ಯಾಣಿ ಗಣವಲಗಾ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.