ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗಂಗೆ ಕೊಳ್ಳದಲ್ಲಿ, ಮೀನುಗಾರಿಕೆಗೆ ಬಂದಿದ್ದ ಒರಿಸ್ಸಾ ರಾಜ್ಯದ ಕಾರ್ಮಿಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.ರಾಜಸ್ಥಾನದ ಸಂಬಲಪುರದ ನಿವಾಸಿ ನಿರಂಜನ ಎಂಬಾತ ಮೃತಪಟ್ಟ ಕಾರ್ಮಿಕ ಎನ್ನಲಾಗಿದ್ದು ಮೀನುಗಾರಿಕೆಗಾಗಿ ಒರಿಸ್ಸಾದಿಂದ ಗೋಕರ್ಣಕ್ಕೆ ಬಂದಿದ್ದ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಗೋಕರ್ಣ ಪೊಲೀಸರು ದಾವಿಸಿದ್ದು ಗೋಕರ್ಣ ಸರ್ಕಾರಿ ಆಸ್ಪತ್ರೆಗೆ ಶವ ರವಾನಿಸಲಾಗಿದೆ.
ಈ ಕುರಿತು ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
POST
ಕೆ ಆರ್ ಎಸ್ ಪಕ್ಷ ಸದಸ್ಯರ ಸಭೆ
ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕ ಪ್ರವಾಸಿ ಮಂದಿರದಲ್ಲಿ z p T P ಚುನಾವಣೆ ದೃಷ್ಟಿ ಯಲ್ಲಿ ಪಕ್ಷ ಸಂಘಟನೆ ಹಾಗೂ ಸದಸ್ಯರು ಗಳ ಮರು ಸೇರ್ಪಡೆ ಬೆಳಗಾವಿ ಜಿಲ್ಲಾ ಸದಸ್ಯರು ಸೇರಿ ಹಮ್ಮಿಕೊಂಡು ಬರುವ ತಾಲೂಕ ಪಂಚಾಯತಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಎಲ್ಲರೂ ಒಗ್ಗೂಡಿ ಕೆಆರ್ಎಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಸೇರಿ ಶ್ರಮಪಟ್ಟಲ್ಲಿ ಜೆಸಿಬಿ ಪಕ್ಷಗಳ ದುರಾಡಳಿತ ಭ್ರಷ್ಟಾಚಾರ ಭ್ರಷ್ಟ ರಾಜಕಾರಣಿಗಳನ್ನು ಹಿಮ್ಮಿಕ್ಕಲು ಕೆಆರ್ಎಸ್ ಪಕ್ಷದ ಅಭ್ಯರ್ಥಿಯನ್ನು ಪ್ರಬಲವಾಗಿಸಿದ್ದಲ್ಲಿ ಮಾತ್ರ ಭ್ರಷ್ಟಾಚಾರವನ್ನು ತಳಮಟ್ಟದಿಂದ ತಡೆಗಟ್ಟಲು ಸಾಧ್ಯವಾಗುತ್ತದೆ ಕೆಆರ್ಎಸ್ ಪಕ್ಷ ಭ್ರಷ್ಟಾಚಾರದ ವಿರುದ್ಧ ಹಗಲಿರುಳು ಶ್ರಮವಹಿಸಿ ದುಡಿಯುತ್ತದೆ ಒಮ್ಮತದಿಂದ ಅಭ್ಯರ್ಥಿಯ ಗೆಲುವಿನ ಹಿತದೃಷ್ಟಿಯಿಂದ ಪಕ್ಷ ಸಂಘಟನೆಯಲ್ಲಿ ಈಗಿಂದಲೇ ಎಚ್ಚೆತ್ತುಕೊಳ್ಳಬೇಕೆಂದು ಜಿಲ್ಲಾ ಸಮಿತಿ ತೀರ್ಮಾನಿಸಿದೆ ಮರಳಿ ಪಕ್ಷಕ್ಕೆ ಸೇರ್ಪಡೆಗೊಂಡ ಹಣಮಂತ ಮಡಿವಾಳರ ಇವರಿಗೆ ಜಿಲ್ಲಾ ಕಮಿಟಿಯ ಪರವಾಗಿ ಸ್ವಾಗತಗಳನ್ನು ಬಯಸುತ್ತಾ ಮೊದಲಿನಂತೆ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪಕ್ಷದ ಏಳಿಗೆಗೆ ಹಗಲಿರಲು ದುಡಿದಿದ್ದು ಪಕ್ಷಕ್ಕೆ ಮರು ಸೇರ್ಪಡೆಗೊಂಡದ್ದು ತಾಲೂಕ ಪಂಚಾಯತ್ ಜಿಲ್ಲಾ ಪಂಚಾಯತ್ ಚುನಾವಣೆಯ ಎಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಬಲಬಂದಂತಾಗಿದೆ ಅವರು ಮೊದಲಿನಂತೆಯೇ ಪಕ್ಷದ ಸಕ್ರಿಯ ಕಾರ್ಯಗಳಲ್ಲಿ ಪಾಲ್ಗೊಂಡು ತನು ಮನ ಧನದಿಂದ ಪಕ್ಕದ ಅಭ್ಯರ್ಥಿಗಳ ಬೆನ್ನಿಗೆ ನಿಂತು ಅವರ ಪಕ್ಷದ ಸಂಘಟನೆಯಲ್ಲಿ ಪಾಲ್ಗೊಳ್ಳಲಿ ಈಗಿನಿಂದಲೇ ಚುನಾವಣಾ ತೊಡಗಿಕೊಳ್ಳಿ ಎಂದು ಜಿಲ್ಲಾ ಸಮಿತಿ ಹಾಗೂ ಬೆಳಗಾವಿ ಜಿಲ್ಲಾ ರೈತ ಘಟಕ ಸೇರ್ಪಡೆಗೊಂಡ ಸದಸ್ಯರಿಗೆ ಸ್ವಾಗತ ಕೋರಿದರು
ನೌಕರರ ಭವನ ದಲ್ಲಿ ಆರೋಗ್ಯ ಸಲಹೆ ಕಾರ್ಯಕ್ರಮ
ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘ ಚಿಕ್ಕಬಳ್ಳಾಪುರ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನೌಕರರ ಭವನ ದಲ್ಲಿ ಆರೋಗ್ಯ ಸಲಹೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ವಿಶ್ವವಿಖ್ಯಾತ ಡಾ. ಆಂಜನಪ್ಪನವರು ಆರೋಗ್ಯ ಸಲಹೆಗಳನ್ನು ನೀಡುವುದರ ಜೊತೆಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಿದರು ಕರ್ನಾಟಕ ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಿರುವಂತಹ ಕರೋನ ಕಾಯಿಲೆ ಬಗ್ಗೆ ಕೇಳಿದಾಗ ಕೊರೊನ ಕಾಯಿಲೆ ಬಗ್ಗೆ ಜನರಲ್ಲಿ ಆತಂಕ ಬೇಡ ಮುನ್ನೆಚ್ಚರಿಕೆ ಮಾತ್ರ ಸಾಕು ಕೊರೋನಾ ವೈರಸ್ ಒಂದು ತಾತ್ಕಾಲಿಕವಾದ ವೈರಸ್ ಆಗಿದೆ ಇದು ವಾತಾವರಣಕ್ಕೆ ಅನುಗುಣವಾಗಿ ರೂಪಾಂತರ ಪಡೆಯುತ್ತಿರುತ್ತದೆ ಇದರ ಬಗ್ಗೆ ಗಾಬರಿಯಾಗುವ ಅವಶ್ಯಕತೆ ಇಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಸಾಕು ಎಂದು ತಿಳಿಸಿದರು. ಯುವಕರಲ್ಲಿ ಹೃದಯಘಾತ ಹೆಚ್ಚಾಗಿದೆ ಇದಕ್ಕೆ ಕಾರಣ ಏನು ಎಂದು ಕೇಳಿದಾಗ ಅವರ ಜೀವನಶೈಲಿ ಇದಕ್ಕೆ ಕಾರಣ ಎಂದು ತಿಳಿಸಿದರು. ಆರೋಗ್ಯವೇ ಭಾಗ್ಯ ನಮ್ಮ ಆರೋಗ್ಯ ನಮ್ಮ ಜೀವನಶೈಲಿಯಲ್ಲಿ ಇದೆ ಎಂದು ತಿಳಿಸಿದರು.
ಶ್ರೀ ಗುರುವಿನ ಆಶೀರ್ವಾದ ಪಡೆದ ಗುರು ವಿದ್ಯಾಪೀಠ ಶಿಕ್ಷಣ ಸಂಸ್ಥೆ
ಯಾದಗಿರಿ: ಸುರಪುರ ತಾಲ್ಲೂಕು ರುಕ್ಮಪೂರದ ಹಿರೇಮಠ ಶ್ರೀ ಷ. ಭ್ರ. ಶ್ರೀ ಗುರು ಶಾಂತಮೂರ್ತಿ ಶಿವಾಚಾರ್ಯರು ಹಿರೇಮಠ್ ಸಂಸ್ಥಾನ ರುಕ್ಮಪುರ, ರುಕ್ಮಾಪುರದ ಶ್ರೀ ಶಿವಾಚಾರ್ಯ ಸಂಸ್ಥಾನ ಮಠ ಗುರುಗಳನ್ನ ಭೇಟಿಯಾದ ಸಂದರ್ಭ ಈ ಸಂದರ್ಭದಲ್ಲಿ ಶ್ರೀ ಶ್ರೀ ಷ.ಶಿವಾಚಾರ್ಯ ಸ್ವಾಮೀಜಿಗಳು ಈ ವಿದ್ಯಾಸಂಸ್ಥೆಗೆ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯ ನಿರ್ಮಾಣ ಆಗಲಿ ಎಂದು ಬಿತ್ತಿ ಪತ್ರವನ್ನು ಬಿಡುಗಡೆಗೊಳಿಸಿ ಆಶೀರ್ವಾದವನ್ನು ಮಾಡಿದರು , ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ವಿದ್ಯ ಗುರುಪೀಠ ಸತ್ಯ ಅಧ್ಯಕ್ಷರಾದ ರುದ್ರಪ್ಪ ದಿನ್ನಿಬಾವಿ ಹಾಗೂ ಕಾರ್ಯದರ್ಶಿ ಮಹೇಶ ಕುಂಬಾರ ಉಪಾಧ್ಯಕ್ಷರಾದ ಸಿದ್ದರಾಮ ಬೇವಿನಮಟ್ಟಿ ಮತ್ತು ಶಿಕ್ಷಣ ಪ್ರೇಮಿಗಳಾಗಿರತಕ್ಕಂತ ಮಂಜುನಾಥ ಚೆಟ್ಟಿ, ಸಂತೋಷ್ ಪರಚಂಡಿ ಉಸ್ಥಿತರಿದ್ದರು.
ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾಗಿ ಮೌಲಾನಾ ಶಾಫಿ ಸಅದಿ ಅಧಿಕಾರ ಸ್ವೀಕಾರ.
ಬೆಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾಗಿ ಮೌಲಾನಾ ಶಾಫಿ ಸಅ ದಿ ಯನ್ನು ರಾಜ್ಯ ಸರಕಾರ ನೇಮಕ ಮಾಡಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಗಾದಿ ಪೈಪೋಟಿಯಲ್ಲಿ ಮೌಲಾನಾ ಶಾಫಿ ಸಅದಿ ಹೆಸರು ಮುಂಚೂಣಿಯಲ್ಲಿತ್ತು.ಈ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಕರ್ನಾಟಕ ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ ಸಂಧಾನದಲ್ಲಿ ಶಾಫಿ ಸಅದಿಯವರಿಗೆ ಸೂಕ್ತ ಸ್ಥಾನಮಾನದ ಭರವಸೆ ನೀಡಿ ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾಗಿ ತೀರ್ಮಾನಿಸಲಾಗಿತ್ತು. ಕಳೆದ ಮೂರು ತಿಂಗಳಿಂದ ಶಾಫಿ ಸಅದಿ ಬೆಂಗಳೂರು ಅಧಿಕಾರ ಸ್ವೀಕರಿಸದ ಕಾರಣ ಅನಿಶ್ಚಿತತೆಯಲ್ಲಿ ಮುಂದುವರೆದಿತ್ತು.
ಇದೀಗ ಅಲ್ಪಸಂಖ್ಯಾತ ವಕ್ಫ್ ಸಚಿವರಾದ ಬಿ ಝೆಡ್ ಜಮೀರ್ ಅಹ್ಮದ್ ಖಾನ್ ಮಾರ್ಗದರ್ಶನದಂತೆ ಮೌಲಾನಾ ಶಾಫಿ ಸಅದಿ ಅಧಿಕಾರ ಸ್ವೀಕರಿಸಲು ಮುಂದಾಗಿದ್ದು, ಸರ್ಕಾರದ ಆದೇಶವೂ ಹೊರಬಿದ್ದಿದೆ. ಸಾಮಾನ್ಯವಾಗಿ ವಕ್ಫ್ ಕೌನ್ಸಿಲ್ ವಕ್ಫ್ ಸಚಿವರು ಅಧ್ಯಕ್ಷರಾಗಿ ಸದಸ್ಯರು ಮಾತ್ರ ಆಯ್ಕೆ ಮಾಡುವ ವಾಡಿಕೆಯಾಗಿದೆ. ಶಾಫಿ ಸಅದಿ ಗೆ ವಿಶೇಷ ಸ್ಥಾನವನ್ನು ಕಲ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳು ನೇರವಾಗಿ ರಾಜ್ಯ ಆರ್ಥಿಕ ಇಲಾಖೆಯ ಅನುಮತಿ ಪಡೆದು ಹೊಸ ಸ್ಥಾನವನ್ನು ಕಲ್ಪಿಸಿ ವಕ್ಫ್ ಸಚಿವರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಹೆಚ್ಚುವರಿ ಸ್ಥಾನವಾಗಿ ಕಲ್ಪಿಸಿ ಅಧಿಕಾರ ನೀಡಲಾಗಿದೆ.
ಪಕ್ಷಾತೀತವಾಗಿ ತನ್ನ ಛಾಪನ್ನು ಹೊಂದಿರುವ , ವಕ್ಫ್ ಮಂಡಳಿ ಅಧ್ಯಕ್ಷರಾಗಿ ಮಾದರಿಯೋಗ್ಯ ಸೇವೆ ಸಲ್ಲಿಸಿರುವ ಶಾಫಿ ಸಅದಿಯ ಆಯ್ಕೆಗೆ ವ್ಯಾಪಕ ಅಭಿನಂದನೆಗಳು ಮತ್ತು ಪ್ರಶಂಸೆಗಳು ವ್ಯಕ್ತವಾಗುತ್ತಿದೆ.
ಕರ್ನಾಟಕ ವಕ್ಫ್ ಪರಿಷತ್ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಮೌಲಾನ ಶಾಫಿ ಸಅದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಪತ್ರ ನೀಡಿದರು. ಈ ವೇಳೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವರಾದ ಜಮೀರ್ ಅಹ್ಮದ್ ಖಾನ್ , KMF ಅಧ್ಯಕ್ಷ ಭೀಮ ನಾಯ್ಕ್ ಉಪಸ್ಥಿತರಿದ್ದರು.
ವರದಿ : ಪರ್ವಿಜ್ ಅಹಮದ್
ಸತಿಸಹಗಮನ ಪದ್ಧತಿಯನ್ನು ಬುಡಸಮೇತ ಕಿತ್ತೊಗೆದ’ ಕಾಲಪುರುಷ ರಾಜಾ ರಾಮ್ ಮೋಹನ್ ರಾಯ್
ಮೇ 22. ರಾಜಾ ರಾಮ್ ಮೋಹನರಾಯ್ ರ ಹುಟ್ಟಿದ ದಿನ. ಅವರು ಮುಖ್ಯವಾಗಿ ಸತಿಸಹಗಮನ ಪದ್ಧತಿಯನ್ನು ಅಂದರೆ ಪತಿಯ ಚಿತೆಯಲ್ಲಿ ಸತಿಯೂ ಹಾರಿ ಪ್ರಾಣ ಬಿಡುವ ಅನಿಷ್ಟ ಸಾಂಪ್ರದಾಯಿಕ ಪದ್ಧತಿಯನ್ನು ಬುಡ ಸಮೇತ ಕಿತ್ತೊಗೆದ ಮೂಲ ಪುರುಷ. ಈ ಮಹಾ ಪುರುಷನ ಹುಟ್ಟಿದ ದಿನ ಮೇ 22. ಇವರ ನೆನೆದು ಒಂದೆರಡು ಮಾತು...
ಚಿತಾಗ್ನಿಯು ತನ್ನ ಕೆನ್ನಾಲಗೆಯನ್ನು ಮಾರುದ್ದ ಚಾಚುತ್ತಿತ್ತು. ಸಜೀವಿಯನ್ನೇ ದಹಿಸಲು ಕಾತರಗೊಂಡಿತ್ತು. ಅಲೋಕಮಂಜರಿ ತನ್ನ ಪತಿಯ ಮರಣದಿಂದ ಅರ್ಧ ಕುಸಿದಿದ್ದಳು. ಜೀವನವೇ ವ್ಯರ್ಥ ಎಂದು ಪತಿಯ ಹಾದಿ ಹಿಡಿಯ ಹೊರಟಿದ್ದಳು. ಇನ್ನೇನು ಚಿತೆಗೆ ಹಾರಬೇಕೆನ್ನುವಷ್ಟರಲ್ಲಿ ಪತಿಯ ಸೋದರ ಅವಳನ್ನು ತಡೆಯುತ್ತಾನೆ...
“ಬೇಡ ತಾಯಿ, ಮೂರ್ಖತನದ ಕೆಲಸ ಬೇಡ. ನಿನ್ನ ಬಾಳನ್ನು ಬೆಂಕಿಗೆ ಆಹುತಿ ನೀಡಬೇಡ. ಈ ತ್ಯಾಗದಿಂದ ಅಣ್ಣನ ಆತ್ಮಕ್ಕೆ ಎಳ್ಳಷ್ಟು ಶಾಂತಿ ಸಿಗದು,” ಎಂದು ಗೋಗರೆಯುತ್ತಾನೆ. ಅವಳು ವಾಸ್ತವ ಲೋಕಕ್ಕೆ ಬರುತ್ತಾಳೆ. ಆ ಮಾತುಗಳಿಂದ ದ್ವಂದ್ವಕ್ಕೆ ಸಿಲುಕುತ್ತಾಳೆ. ತನ್ನ ಮುಂದಿದ್ದ ಬೆಂಕಿಯ ಭೀಕರ ಘರ್ಜನೆಯಿಂದ ಅಧೀರಗೊಂಡು ಒಂದು ಹೆಜ್ಜೆ ಹಿಂದಿಡುತ್ತಾಳೆ...
ಅಲ್ಲಿ ನೆರೆದಿದ್ದ ಪುರೋಹಿತರು, ಸಂಪ್ರದಾಯವಾದಿಗಳು ಆತನನ್ನು ವಿರೋಧಿಸಿ ದೂರಕ್ಕೆ ದೂಡುತ್ತಾರೆ. ಅಲೋಕಮಂಜರಿಗೆ ಬೆಂಕಿಗೆ ಬೀಳಲು ಚಿ ಪ್ರೋತ್ಸಾಹಿಸುತ್ತಾರೆ. “ಪತಿ ಇಲ್ಲದ ಮೇಲೆ ವಿಧವೆಯ ಬಾಳು ಹೀನಾಯವಾದದ್ದು. ನೀನು ಸಾಯುವುದೇ ಧರ್ಮ. ಪತಿಯ ಜೊತೆ ಹೋಗಿ ಸ್ವರ್ಗವನ್ನು ಸೇರಿ ಅಲ್ಲಿಯೂ ಆತನನ್ನು ಸೇವೆ ಮಾಡುವುದೇ ಅವಳಿಗೆ ಒಳಿತು” ಎಂದು ಆಕೆಯನ್ನು ಬಲವಂತವಾಗಿ ಆಕೆಗೆ ಇನ್ನೇನೂ ಯೋಚಿಸಲು ಸಮಯ ನೀಡದೆ ಬೆಂಕಿಗೆ ತಳ್ಳುತ್ತಾರೆ. ಆಕೆ ಸಹಿಸಲುಸಾಧ್ಯ ನೋವಿನಿಂದ ಸಹಾಯಕ್ಕಾಗಿ ಕೂಗುತ್ತಾಳೆ. ‘ಕಾಪಾಡಿ’ ಎಂದು ಚೀತ್ಕರಿಸುತ್ತಾಳೆ. ಅವರೆಲ್ಲಾ ಕಿವಿ ಕೇಳದವರಂತೆ, ಕಣ್ಣು ಕಾಣದವರಂತೆ ನಟಿಸುತ್ತಾರೆ. ತಕ್ಷಣವೇ ಜಯಕಾರ ಘೋಷಗಳು, ತಮಟೆಯ ಸದ್ದು ಆಕೆಯ ಚೀತ್ಕಾರವನ್ನು ಮುಚ್ಚಿಹಾಕುತ್ತವೆ. ಎಲ್ಲರೂ ಆಕೆಯ ತ್ಯಾಗವನ್ನು ಹೊಗಳುತ್ತಾರೆ, ನಾಟಕೀಯ ಕನಿಕರವನ್ನು ತೋರುತ್ತಾರೆ. ಆಕೆ ತೊಳಲಾಡಿದಷ್ಟೂ ಬೆಂಕಿಯಲ್ಲಿ ಕಾದು ಕೆಂಪಗಾದ ಬಿದಿರು ಬೊಂಬುಗಳು ಆಕೆಯನ್ನು ತಿವಿದು, ತನ್ನೊಳಗೆ ಎಳೆದುಕೊಂಡು ಸಮಾಧಿ ಮಾಡುತ್ತವೆ. ಅಲ್ಲಿ ನೆರೆದವರೆಲ್ಲಾ ಆಕೆಯನ್ನು ಸ್ತುತಿಸುತ್ತಾ ಮನೆಗೆ ತೆರಳುತ್ತಾರೆ...
ಆದರೆ ಕಣ್ಮುಂದೆಯೇ ನಡೆದ ಈ ಘೋರ ಕೃತ್ಯ ಆ ಯುವಕನಲ್ಲಿ ತೀವ್ರ ಪರಿಣಾಮವನ್ನುಂಟು ಮಾಡುತ್ತದೆ. ಮನುಷ್ಯ ಸಮಾಜಕ್ಕೆ ಕಳಂಕಪ್ರಾಯವಾದ ಈ ಕ್ರೂರ ಸತಿಪದ್ಧತಿಯನ್ನು ಬುಡಸಮೇತ ಕಿತ್ತೊಗೆಯುವ ನಿರ್ಧಾರವನ್ನು ಅಂದೇ ಕೈಗೊಳ್ಳುತ್ತಾನೆ. ಆತನೇ ಮುಂದೆ ಭಾರತದ ನವೋದಯದ ಧೃವತಾರೆ ಎಂಬ ಬಿರುದನ್ನು ಪಡೆಯುತ್ತಾರೆ...
ಆತ ರಾಜಾರಾಮ್ ಮೋಹನ್ ರಾಯ್
1774 ರ ಮೇ 22 ರಂದು ಬಂಗಾಳದ ರಾಧಾನಗರದಲ್ಲಿ ಜನಿಸಿದ ರಾಜಾರಾಮ್ ಮೋಹನ್ ರಾಯ್ ರವರ ತಂದೆ ರಮಾಕಾಂತ್ ರಾಯ್ ಮತ್ತು ತಾಯಿ ತಾರಿಣೀದೇವಿ. ಇವರದ್ದು ಅತ್ಯಂತ ಸಂಪ್ರದಾಯಸ್ಥ ಕುಟುಂಬ. ಸುಸಂಸ್ಕಾರಗಳನ್ನು ಚಿ ಮೈಗೂಡಿಸಿಕೊಂಡು ಬೆಳೆದ ಇವರು ತಮ್ಮ ಬಾಲ್ಯ ಶಿಕ್ಷಣವನ್ನು ಹಳ್ಳಿಯಲ್ಲೇ ಪಡೆದು, 9 ನೇ ವಯಸ್ಸಿನಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಪಾಟ್ನಾಗೆ ತೆರಳಿದರು. ಅಲ್ಲಿ ಪರ್ಷಿಯನ್ ಮತ್ತು ಅರೇಬಿಕ್ ಭಾಷೆ ಕಲಿತರು. ಮೌಲ್ವಿಗಳ ಪರಿಚಯವಾಗಿ ಇಸ್ಲಾಂ ಧರ್ಮದ ಕೆಲವು ಉತ್ತಮ ಅಂಶಗಳಿಂದ ಆಕರ್ಷಿತರಾದರು. ಏಕದೇವೋಪಾಸನೆ ಮತ್ತು ದೇವರು ನಿರಾಕಾರ ಸ್ವರೂಪಿ ಎಂಬ ವಿಚಾರಗಳು ಅವರಿಗೆ ತುಂಬಾ ಹಿಡಿಸಿತು...
ವ್ಯಾಸಂಗ ಮುಗಿಸಿ ಮನೆಗೆ ಮರಳಿದ ಮೇಲೆ ಅವರು ಮನೆಯಲ್ಲಿ ನಡೆಯುತ್ತಿದ್ದ ಅರ್ಥರಹಿತ ಆಚರಣೆಗಳನ್ನು ಪ್ರಶ್ನಿಸತೊಡಗಿದರು. ಇದರಿಂದ ತಂದೆ ಮಗನಲ್ಲಿ ವೈಮನಸ್ಯವುಂಟಾಗಿ ಅವರು ಮನೆಯನ್ನು ತ್ಯಜಿಸಬೇಕಾಯಿತು. ಅವರು ಬೌದ್ಧ ಧರ್ಮದ ಬಗ್ಗೆ ತಿಳಿಯಲು ಟಿಬೆಟ್ ಗೆ ತೆರಳಿದರು. ಲಾಮಾಗಳು ಅನುಸರಿಸುತ್ತಿದ್ದ ಮೂಢ ಪದ್ಧತಿಗಳನ್ನು ಕುರುಡು ಸಂಪ್ರದಾಯಗಳನ್ನು, ದೇವಾಲಯಗಳಲ್ಲಿ ನಡೆಯುತ್ತಿದ್ದ ಧರ್ಮದ ಹೆಸರಿನ ದಂಧೆಗಳನ್ನು ಟೀಕಿಸಿದರು. ಇದರಿಂದ ಕೆರಳಿದ ಲಾಮಾಗಳು ಅವರ ಪ್ರಾಣಕ್ಕೆ ಕುತ್ತು ತರಲು ಪ್ರಯತ್ನಿಸಿದಾಗ ಅಲ್ಲಿನ ಕೆಲವು ಸಹೃದಯ ಮಹಿಳೆಯರ ಸಹಾಯದಿಂದ ತಪ್ಪಿಸಿಕೊಂಡು ಬಂದರು. ಇದರಿಂದ ಅವರಿಗೆ ಮಹಿಳೆಯರ ಮೇಲಿನ ಗೌರವ ಭಾವನೆ ಮತ್ತಷ್ಟು ಹೆಚ್ಚಾಯಿತು...
ಹಿಂತಿರುಗಿದ ಮೇಲೆ ಹಿಂದೂ ಧರ್ಮದ ಮೂಲ ಅರಿಯಲು ವೇದ ಉಪನಿಷತಗಳ ಆಳ ಅಧ್ಯಯನದಲ್ಲಿ ತೊಡಗಿದರು. ಚಿ ಮೂಲಧರ್ಮಕ್ಕೂ ಪ್ರಸ್ತುತ ಆಚರಣೆಗಳಿಗೂ ಇರುವ ಅಜಗಜಾಂತರ ವ್ಯತ್ಯಾಸವನ್ನು ಗ್ರಹಿಸಿದರು. ತಮ್ಮ ಭಾಷಾ ಜ್ಞಾನವನ್ನು ಬಳಸಿಕೊಂಡು ವೇದಗಳನ್ನು ಬಂಗಾಳಿಗೆ ಅನುವಾದಿಸಿದರು, ಜನರಲ್ಲಿ ಆ ಬಗ್ಗೆ ಅರಿವು ಮೂಡಿಸಲು ಯತ್ನಿಸಿದರು. ಚರ್ಚೆ, ಸಂವಾದಗಳ ಮೂಲಕ ಜಾಗೃತಿ ಮೂಡಿಸಲೆತ್ನಿಸಿದರು. ಉತ್ತಮ ಇಂಗ್ಲಿಷ್ ಜ್ಞಾನವನ್ನು ಹೊಂದಿದ್ದ ಇವರು ಪಾಶ್ಚಿಮಾತ್ಯ ವಿಚಾರಧಾರೆ, ಅಲ್ಲಿನ ಶಿಕ್ಷಣ ಪದ್ಧತಿ, ಕ್ರಾಂತಿಕಾರಿ ಹೋರಾಟಗಳು, ವಿಜ್ಞಾನ, ಪತ್ರಿಕಾ ಸ್ವಾತಂತ್ರ್ಯ ಇತ್ಯಾದಿ ಉನ್ನತ ವಿಚಾರಗಳಿಂದ ಪ್ರಭಾವಿತರಾದರು...
ತಮ್ಮ ಕುಟುಂಬದಲ್ಲಾದ ಸತಿ ಪದ್ಧತಿಯ ಅನುಸರಣೆಯಿಂದ ನೊಂದ ಇವರು ಈ ಕೆಟ್ಟ ಪದ್ಧತಿಯ ಜೊತೆಗೆ ಇತರ ಪಿಡುಗುಗಳಾದ ಬಹುಪತ್ನಿತ್ವ, ಬಾಲ್ಯವಿವಾಹ, ಸ್ತ್ರೀ ಭ್ರೂಣ ಹತ್ಯೆ, ಜಾತಿಪದ್ಧತಿ ಇತ್ಯಾದಿಗಳ ವಿರುದ್ಧ ಟೊಂಕ ಕಟ್ಟಿ ನಿಂತರು. ಬ್ರಹ್ಮಸಮಾಜವನ್ನು ಸ್ಥಾಪಿಸಿ ಅದನ್ನು ಸಾಮಾಜಿಕ ಸಮಸ್ಯೆಗಳನ್ನು ನಿರ್ಮೂಲನಗೊಳಿಸುವ ಅಸ್ತ್ರವನ್ನಾಗಿ ಬಳಸಿದರು. ಪತ್ರಿಕೆಗಳಲ್ಲಿ ತಮ್ಮ ಶಕ್ತಿಯುತ ಲೇಖನಗಳ ಮೂಲಕ ಸತಿ ಪದ್ಧತಿಯ ವಿರುದ್ಧ ಟೀಕಾಪ್ರಹಾರ ಮಾಡಿದರು…
1928 ರಲ್ಲಿ ಕಲ್ಕತ್ತಾದಲ್ಲಿ 309 ವಿಧವೆಯರನ್ನು ಸಜೀವ ದಹಿಸಲಾಗಿತ್ತೆಂಬ ವಿಷಯವನ್ನು ಪ್ರಕಟಿಸಿದರು. ಸರ್ಕಾರಕ್ಕೆ ಅರ್ಜಿಯ ಮೇಲೆ ಅರ್ಜಿಯನ್ನು ಸಲ್ಲಿಸಿ ಸತಿ ಪದ್ಧತಿಯನ್ನು ರದ್ದುಗೊಳಿಸಬೇಕೆಂದು ಆಗ್ರಹಪಡಿಸಿದರು. ಇದರಿಂದ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದರು. ಜೀವ ಬೆದರಿಕೆಯನ್ನು ಲೆಕ್ಕಿಸದೆ ಜನರ ಬಳಿ ಸಹಿ ಸಂಗ್ರಹಿಸಿ ಸರ್ಕಾರದ ಮೇಲೆ ಒತ್ತಡ ತಂದರು. ಹಿಂದೂ ಧರ್ಮದಲ್ಲೆಲ್ಲೂ ಸತಿ ಪದ್ಧತಿಯ ಸಮರ್ಥನೆ ಇಲ್ಲವೆಂದು ಪ್ರತಿಪಾದಿಸಿದರು. ಅದಕ್ಕಾಗಿ ಹಣ, ಆರೋಗ್ಯ ಎಲ್ಲವನ್ನೂ ತ್ಯಾಗ ಮಾಡಿದರು. ಆ ಕೆಲಸಕ್ಕಾಗಿಯೇ ಇಂಗ್ಲೆಂಡ್ಗೂ ಹೋದರು. ಕೊನೆಗೂ ಇವರ ಒತ್ತಡಕ್ಕೆ ಮಣಿದ ಬ್ರಿಟಿಷ್ ಸರ್ಕಾರ 1929 ರಲ್ಲಿ ಸತಿ ಚಿ ಪದ್ಧತಿಯನ್ನು ನಿಷೇಧಿಸಿ ಕಾನೂನನ್ನು ಜಾರಿಗೊಳಿಸಿತು. ಆ ಕಾನೂನು ಎಷ್ಟು ಕಟುವಾಗಿತ್ತೆಂದರೆ ಸತಿ ಪದ್ಧತಿ ಕೆಲವೇ ತಿಂಗಳುಗಳಲ್ಲಿ ಸಂಪೂರ್ಣವಾಗಿ ಕಣ್ಮರೆಯಾಯಿತು, ಅಲ್ಲೊಂದು ಇಲ್ಲೊಂದು ಘಟನೆಗಳನ್ನು ಹೊರತುಪಡಿಸಿ…
19 ನೇ ಶತಮಾನದ ಭಾರತದ ಸುಧಾರಣಾ ಚಳುವಳಿಯ ಪ್ರವರ್ತಕರೆನಿಸಿಕೊಂಡಿರುವ ರಾಮ್ಮೋಹನ್ ರಾಯ್ರವರು ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದರು. ಹಳೆಯ ಸಾಂಪ್ರದಾಯಿಕ ಶಿಕ್ಷಣವನ್ನು ವಿರೋಧಿಸಿ ಪ್ರಗತಿಪರ ವಿಚಾರಧಾರೆಯುಳ್ಳ ವೈಜ್ಞಾನಿಕ ಶಿಕ್ಷಣ ಎಲ್ಲರಿಗೂ ದೊರೆಯಬೇಕೆಂದು ಪ್ರತಿಪಾದಿಸಿದರು. ಬಹುಪತ್ನಿತ್ವ ಮತ್ತು ಬಾಲ್ಯವಿವಾಹಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಒಟ್ಟಾರೆ ಮಹಿಳೆಯರ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿದರು. ಏಕೆಂದರೆ ಸಮಾಜದ ಅರ್ಧ ಭಾಗವನ್ನು ಕತ್ತಲೆಯಲ್ಲಿಟ್ಟು, ಸಮಾಜ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲವೆಂಬುದು ಅವರ ದೃಢ ಅಭಿಪ್ರಾಯವಾಗಿತ್ತು...
1833 ರಲ್ಲಿ ಲಂಡನ್ನ ಬ್ರಿಸ್ಟಲ್ನಲ್ಲಿ ತಮ್ಮ ಕೊನೆಯುಸಿರೆಳೆದರು. ಹೆಣ್ಣುಮಕ್ಕಳ ಉದ್ಧಾರಕ್ಕಾಗಿ ಶ್ರಮಿಸಿದ ಮಹನೀಯರ ಸಾಲಿನಲ್ಲಿ ಅಗ್ರಸ್ಥಾನದಲ್ಲಿರುವ ರಾಮ್ ಮೋಹನ್ ರಾಯ್ ರವರು ತಮ್ಮ ಸಮಸ್ಯೆಗಳ ವಿರುದ್ಧ ಹೋರಾಡುತ್ತಿರುವ ಮಹಿಳೆಯರಿಗೆ ಎಂದಿಗೂ ದಾರಿದೀಪಕರಾಗಿ ಉಳಿಯುತ್ತಾರೆ...
ಇಂತಹ ಮಹಾನ್ ಚೇತನಕ್ಕೆ ನನ್ನ ನಮನಗಳು.
ಡಾ. ದಿವ್ಯಾ ಕೆ ವಾಡಿ ಮತ್ತು ಡಾ. ರಾಮಕೃಷ್ಣ ಬಿ ಸಹಾಯಕ ಪ್ರಾಧ್ಯಾಪಕರು ಇತಿಹಾಸ ವಿಭಾಗ ಮತ್ತು ಅರ್ಥಶಾಸ್ತ್ರ ವಿಭಾಗ,
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ
ಶ್ರೀಮತಿ. ಚಿನ್ನಮ್ಮ ಬಸಪ್ಪ ಪಾಟೀಲ್ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಚಿಂಚೋಳಿ. ತಾ. ಚಿಂಚೋಳಿ,
ಜಿ. ಕಲ್ಬುರ್ಗಿ
ಎನ್ಸಿಸಿ ವಿದ್ಯಾರ್ಥಿಗಳಿಂದ ಸೈನಿಕರಿಗೆ ಮನೋಸ್ಥೈರ್ಯ ತುಂಬ ವ ಉದ್ದೇಶದಿಂದ ತಿರಂಗ ಯಾತ್ರೆ
ಚಿಕ್ಕಬಳ್ಳಾಪುರದ ನಾಗಾರ್ಜುನ ಕಾಲೇಜಿನ ಎನ್ಸಿಸಿ ವಿದ್ಯಾರ್ಥಿಗಳಿಂದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಬೆಂಬಲಿಸುತ್ತ ಸೈನಿಕರಿಗೆ ಮನೋಸ್ಥೈರ್ಯ ತುಂಬ ವ ಉದ್ದೇಶದಿಂದ ತಿರಂಗ ಯಾತ್ರೆಯನ್ನು ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಿಂದ ಪ್ರಾರಂಭವಾಗಿ. ಚಿಕ್ಕಬಳ್ಳಾಪುರದ ಹೃದಯ ಭಾಗದಲ್ಲಿರುವಂತ ಟೌನ್ ಹಾಲ್ ಸರ್ಕಲ್ ಬಳಿ ಮುಕ್ತಾಯವಾಯಿತು ಈ ಒಂದು ಯಾತ್ರೆಯಲ್ಲಿ ನಾಗಾರ್ಜುನ ಕಾಲೇಜಿನ 80 ಜನ ಎನ್ ಸಿ ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು ಏನ್ ಸಿ ಸಿ ಅಧಿಕಾರಿಗಳಾದಂತಹ ಮಹಮ್ಮದ್ ಸಾಕೀರ್ ಅವರು ಮಾತನಾಡುತ್ತಾ ದೇಶ ಸೇವೆಯಲ್ಲಿ ಯುವಕರನ್ನು ತೊಡಗಿಸಿಕೊಳ್ಳುವಂತಹ ಅವಕಾಶ ಎನ್ ಸಿ ಸಿ ಎಲ್ಲಿದೆ. ದೇಶ ರಕ್ಷಣೆಗೆ ನಾವು ಸದಾ ಸಿದ್ಧರಿರುತ್ತೇವೆ ನಮಗೆ ಅವಕಾಶ ನೀಡಿದರೆ ಭಾರತೀಯ ಸೈನಿಕರ ಜೊತೆ ಸೇರಿ ದೇಶದ ಪರ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ನಾಗಾರ್ಜುನ ಕಾಲೇಜಿನ ಮೊಹಮ್ಮದ್ ಸಾಕೀರ್. ಗೋವರ್ಧನ್. ಶ್ರೀ ರಾಮ್ . ಶ್ರೀಮತಿ ಗೀತಾಂಜಲಿ ಮತ್ತು ಮನ್ಸೂರ್ ಮುಂತಾದ ಸಿಬ್ಬಂದಿ ಹಾಜರಿದ್ದರು
ಸಿರುಗುಪ್ಪ ಜೋಳ ಖರೀದಿ ಕೇಂದ್ರದಲ್ಲಿ ಜೋಳ ಸಂಪೂರ್ಣ ಮೊಳಕೆಹೊಡೆದ ಜೋಳ ಅಸ್ತವ್ಯಸ್ತವಾಗಿದ್ದು ರೈತರಿಗೆ ಅನ್ಯಾಯ.
ಸಿರುಗುಪ್ಪ ನಗರದಲ್ಲಿ ಜೋಳ ಖರೀದಿ ಕೇಂದ್ರದಲ್ಲಿ ಸಂಪೂರ್ಣವಾಗಿ ಹಸ್ತವ್ಯಸ್ತವಾಗಿದ್ದು ರೈತರಿಗೆ ತುಂಬಾ ತೊಂದರೆ ಅನುಭವಿಸಿದ್ದು ಮಾನ್ಯ ಮಾಜಿ ಶಾಸಕರಾದ ಎಂ ಎಸ್ ಸೋಮಲಿಂಗಪ್ಪ ಅವರು ಭೇಟಿ ನೀಡಿ ಅಲ್ಲಿನ ರೈತರಿಗೆ ಅವ್ಯವಸ್ಥೆಗಳನ್ನು ಗಮನಿಸಿ ರೈತರು ತಂದಿರ್ತಕ್ಕಂತ ಜೋಳವನ್ನು ಬೇಗನೆ ಖರೀದಿ ಮಾಡಬೇಕೆಂದು ರಾಜ್ಯ ಹೆದ್ದಾರಿಯನ್ನು ಎರಡು ಗಂಟೆಗಳ ಕಾಲ ತಡೆದು ಪ್ರತಿಭಟನೆ ಮಾಡಲಾಯಿತು ರೈತರು ತಂದಂತಹ ಜೋಳದ ಚೀಲಗಳು ಮಳಿಗೆ ಸಂಪೂರ್ಣವಾಗಿ ಮೊಳಕೆ ಹೊಡೆದಿದ್ದು ರೈತರು ಕಂಗಾಲಾಗಿದ್ದಾರೆ ತಾಲೂಕು ದಂಡಾಧಿಕಾರಿಗಳಾದ ನರಸಪ್ಪ ಅವರು ಮತ್ತು ಬಳ್ಳಾರಿ ಅಡಿಷನಲ್ ಎಸ್ಪಿ ನವೀನ್ ಕುಮಾರ್ ಅವರು ಸ್ಥಳಕ್ಕೆ ಆಗಮಿಸಿ ಇನ್ನು ಎರಡು ದಿನಗಳಲ್ಲಿ ಸಂಪೂರ್ಣವಾಗಿ ರೈತರ ತಂದಂತಹ ಜೋಳವನ್ನು ತೆಗೆದುಕೊಳ್ಳುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ ಒಂದು ವೇಳೆ ಇನ್ನೂ ಎರಡು ದಿನಗಳಲ್ಲಿ ರೈತರ ಜೋಳವನ್ನು ಬೇಗನೆ ಖರೀದಿ ಮಾಡದೆ ಇದ್ದಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಮಾಜಿ ಶಾಸಕರಾದ ಎಂ ಎಸ್ ಸೋಮಲಿಂಗಪ್ಪ ಅವರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ತಾಲೂಕು ಅಧ್ಯಕ್ಷರಾದ ಕುಂಟನಹಳ್ ಮಲ್ಲಿಕಾರ್ಜುನ ಸ್ವಾಮಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಎಂ ಎಸ್ ಸಿದ್ದಪ್ಪ,ಮಹಾದೇವ,ರಾಮಕೃಷ್ಣ ವೈ ಡಿ ವೆಂಕಟೇಶ ಹಾಗೂ ನೂರಾರು ಜನ ರೈತ ಮುಖಂಡರು ಇದ್ದರು.
ವರದಿ ಶೇಖರ್ ಹೆಚ್
ಚಿಂಚೋಳಿ ತಾಲೂಕ ಮಟ್ಟದ 892 ಬಸವ ಜಯಂತಿಯ ಕಾರ್ಯಕ್ರಮ
ಚಿಂಚೋಳಿ ತಾಲೂಕ ಮಟ್ಟದ 892 ಬಸವ ಜಯಂತಿಯ ಕಾರ್ಯಕ್ರಮವು ಜೂನ್ 6ನೇ ತಾರೀಕರಂದು ಹಮ್ಮಿಕೊಳ್ಳಲಾಗಿದೆ ಎಂದು ಬಸವ ಜಯಂತೋತ್ಸವದ ಸಮಿತಿ ಅಧ್ಯಕ್ಷರಾದ ನೀಲಕಂಠ ಸೀಳಿನ, ಅವರು ಹೇಳಿದರು ಅವರು ಪೋಲಕಪಳ್ಳಿ ಪ್ರವಾಸ ಮಂದಿರದಲ್ಲಿ ಕಾರ್ಯಕ್ರಮದ
ಪೋಸ್ಟರ್ ಹಾಗೂ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿ ಜೂನ್ 6ನೇ ತಾರೀಕು ಸಾಯಂಕಾಲ 5:00 ಗಂಟೆಗೆ ವೈಜನಾಥ್ ಪಾಟೀಲ್ ಕಲ್ಯಾಣ ಮಂಟಪ ಅವಣದಲ್ಲಿ ಬಸವ ಜಯಂತಿ ಕಾರ್ಯಕ್ರಮವ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಹಾರಕೂಡ ಶ್ರೀಗಳು ಮತ್ತು ಹುಲಸೂರು ಶಿವನಂದ ಸ್ವಾಮಿಗಳು ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ್, ಹಾಗೂ ಸಚಿವರು ಲೋಕಸಭಾ ಸದಸ್ಯರು ಶಾಸಕರು ವೀರಶೈವ ಲಿಂಗಾಯತ ಸಮಾಜದ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ದೀಪಕನಾಗ ಪುಣ್ಯಶೆಟ್ಟಿ, ಶರಣು ಪಾಟೀಲ್ ಮೋತಕಪಳ್ಳಿ, ಸಂತೋಷ ಗಡಂತಿ, ಮಲ್ಲಿಕಾರ್ಜುನ್ ಪಾಲಾಮೂರ್, ಅವರು ಕೂಡ ಮಧ್ಯಮದವರ ಜೊತೆಗೆ ಅವರು ಕೂಡ ಮಾತನಾಡಿ
ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಸಮಾಜದ ತಾಲೂಕ ಅಧ್ಯಕ್ಷರಾದ ಸಂಜೀವಕುಮಾರ್ ಪಾಟೀಲ, ರಾಷ್ಟ್ರೀಯ ಬಸವದಾಳದ ಅಧ್ಯಕ್ಷರಾದ ನಂದಿಕುಮಾರ್ ಪಾಟೀಲ, ಸಮಾಜ ಮುಖಂಡರಾದ ದಿನೇಶ್ ದುಗ್ಗಾಣಿ, ವೀರೇಶ್ ಯoಪಳ್ಳಿ, ವೀರೇಶ್ ದೇಸಾಯಿ, ಶಿವಶರಣಪ್ಪ ಡೆಂಗಿ, ಶಿವಬಸಯ್ಯ ಸ್ವಾಮಿ, ವಿವೇಕ ಪಾಟೀಲ್, ಸಂತೋಷ್ ಖಡಗದ, ಶಂಕರ್ ಶಿವಪೂರಿ, ಸುರೇಶ್ ದೇಶಪಾಂಡೆ, ಮಲ್ಲಿಕಾರ್ಜುನ ಭೂಶೆಟ್ಟಿ, ಅಣವರ್, ರಾಜಶೇಖರ್ ಮುಸ್ತಾರಿ, ಚೇತನ್ ಹುಡದಳ್ಳಿ, ಸುರೇಶ ಸುಂಕದ, ಸಂಗಮೇಶ್ ಮೂಲಿಮನಿ, ಸೂರ್ಯಕಾಂತ್ ಹುಲಿ, ಮತ್ತು ಅನೇಕ ವೀರಶೈವ ಲಿಂಗಾಯತ ಸಮಾಜದ ಬಾಂಧವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು
ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗದಿಂದ ಆರ್ಥಿಕ ಸಹಾಯ
ಅಂಕೋಲಾ:- ತಾಲೂಕಿನ ಅಚವೆ ನಿವಾಸಿಯಾದ ಶ್ರೀ ದಾಮೋದರ ನಾರಾಯಣ ಪಟಗಾರ, ಇವರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅಂಗಡಿಬೈಲ್ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಬೈಕ್ ಬಂದು ಅಪಘಾತ ಪಡಿಸಿದ ಕಾರಣದಿಂದ ಅವರ ಕಾಲಿನ ಮೂಳೆ ಮುರಿದು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ಅವರಿಗೆ ಸ್ವಲ್ಪ ಆದರೂ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ ಗ್ರಾಮ ಒಕ್ಕಲು ಯುವ ಬಳಗದವರು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಅವರಿಗೆ ರೂಪಾಯಿ 7500=00( ಏಳು ಸಾವಿರದ ಐದು ನೂರು ಮಾತ್ರ) ಸಹಾಯ ಧನವನ್ನು ವಿತರಿಸಿ ಬೇಗ ಗುಣಮುಖರಾಗಲಿ ಎಂದು ಬಳಗದವರು ಹಾರೈಸಿದರು, ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗದ ಸದಸ್ಯರು ಹಾಗೂ ಸ್ಥಳೀಯ ಯುವ ಬಳಗದ ಸದಸ್ಯರು ಹಾಜರಿದ್ದರು, ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗದವರ ಸಮಾಜಮುಖಿ ಕಾರ್ಯವು ಮೆಚ್ಚುವಂತಹದ್ದಾಗಿದೆ.
