ಸಿರುಗುಪ್ಪ ನಗರದಲ್ಲಿ ಜೋಳ ಖರೀದಿ ಕೇಂದ್ರದಲ್ಲಿ ಸಂಪೂರ್ಣವಾಗಿ ಹಸ್ತವ್ಯಸ್ತವಾಗಿದ್ದು ರೈತರಿಗೆ ತುಂಬಾ ತೊಂದರೆ ಅನುಭವಿಸಿದ್ದು ಮಾನ್ಯ ಮಾಜಿ ಶಾಸಕರಾದ ಎಂ ಎಸ್ ಸೋಮಲಿಂಗಪ್ಪ ಅವರು ಭೇಟಿ ನೀಡಿ ಅಲ್ಲಿನ ರೈತರಿಗೆ ಅವ್ಯವಸ್ಥೆಗಳನ್ನು ಗಮನಿಸಿ ರೈತರು ತಂದಿರ್ತಕ್ಕಂತ ಜೋಳವನ್ನು ಬೇಗನೆ ಖರೀದಿ ಮಾಡಬೇಕೆಂದು ರಾಜ್ಯ ಹೆದ್ದಾರಿಯನ್ನು ಎರಡು ಗಂಟೆಗಳ ಕಾಲ ತಡೆದು ಪ್ರತಿಭಟನೆ ಮಾಡಲಾಯಿತು ರೈತರು ತಂದಂತಹ ಜೋಳದ ಚೀಲಗಳು ಮಳಿಗೆ ಸಂಪೂರ್ಣವಾಗಿ ಮೊಳಕೆ ಹೊಡೆದಿದ್ದು ರೈತರು ಕಂಗಾಲಾಗಿದ್ದಾರೆ ತಾಲೂಕು ದಂಡಾಧಿಕಾರಿಗಳಾದ ನರಸಪ್ಪ ಅವರು ಮತ್ತು ಬಳ್ಳಾರಿ ಅಡಿಷನಲ್ ಎಸ್ಪಿ ನವೀನ್ ಕುಮಾರ್ ಅವರು ಸ್ಥಳಕ್ಕೆ ಆಗಮಿಸಿ ಇನ್ನು ಎರಡು ದಿನಗಳಲ್ಲಿ ಸಂಪೂರ್ಣವಾಗಿ ರೈತರ ತಂದಂತಹ ಜೋಳವನ್ನು ತೆಗೆದುಕೊಳ್ಳುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ ಒಂದು ವೇಳೆ ಇನ್ನೂ ಎರಡು ದಿನಗಳಲ್ಲಿ ರೈತರ ಜೋಳವನ್ನು ಬೇಗನೆ ಖರೀದಿ ಮಾಡದೆ ಇದ್ದಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಮಾಜಿ ಶಾಸಕರಾದ ಎಂ ಎಸ್ ಸೋಮಲಿಂಗಪ್ಪ ಅವರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ತಾಲೂಕು ಅಧ್ಯಕ್ಷರಾದ ಕುಂಟನಹಳ್ ಮಲ್ಲಿಕಾರ್ಜುನ ಸ್ವಾಮಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಎಂ ಎಸ್ ಸಿದ್ದಪ್ಪ,ಮಹಾದೇವ,ರಾಮಕೃಷ್ಣ ವೈ ಡಿ ವೆಂಕಟೇಶ ಹಾಗೂ ನೂರಾರು ಜನ ರೈತ ಮುಖಂಡರು ಇದ್ದರು.
ವರದಿ ಶೇಖರ್ ಹೆಚ್
