ಚಿಕ್ಕಬಳ್ಳಾಪುರದ ನಾಗಾರ್ಜುನ ಕಾಲೇಜಿನ ಎನ್ಸಿಸಿ ವಿದ್ಯಾರ್ಥಿಗಳಿಂದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಬೆಂಬಲಿಸುತ್ತ ಸೈನಿಕರಿಗೆ ಮನೋಸ್ಥೈರ್ಯ ತುಂಬ ವ ಉದ್ದೇಶದಿಂದ ತಿರಂಗ ಯಾತ್ರೆಯನ್ನು ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಿಂದ ಪ್ರಾರಂಭವಾಗಿ. ಚಿಕ್ಕಬಳ್ಳಾಪುರದ ಹೃದಯ ಭಾಗದಲ್ಲಿರುವಂತ ಟೌನ್ ಹಾಲ್ ಸರ್ಕಲ್ ಬಳಿ ಮುಕ್ತಾಯವಾಯಿತು ಈ ಒಂದು ಯಾತ್ರೆಯಲ್ಲಿ ನಾಗಾರ್ಜುನ ಕಾಲೇಜಿನ 80 ಜನ ಎನ್ ಸಿ ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು ಏನ್ ಸಿ ಸಿ ಅಧಿಕಾರಿಗಳಾದಂತಹ ಮಹಮ್ಮದ್ ಸಾಕೀರ್ ಅವರು ಮಾತನಾಡುತ್ತಾ ದೇಶ ಸೇವೆಯಲ್ಲಿ ಯುವಕರನ್ನು ತೊಡಗಿಸಿಕೊಳ್ಳುವಂತಹ ಅವಕಾಶ ಎನ್ ಸಿ ಸಿ ಎಲ್ಲಿದೆ. ದೇಶ ರಕ್ಷಣೆಗೆ ನಾವು ಸದಾ ಸಿದ್ಧರಿರುತ್ತೇವೆ ನಮಗೆ ಅವಕಾಶ ನೀಡಿದರೆ ಭಾರತೀಯ ಸೈನಿಕರ ಜೊತೆ ಸೇರಿ ದೇಶದ ಪರ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ನಾಗಾರ್ಜುನ ಕಾಲೇಜಿನ ಮೊಹಮ್ಮದ್ ಸಾಕೀರ್. ಗೋವರ್ಧನ್. ಶ್ರೀ ರಾಮ್ . ಶ್ರೀಮತಿ ಗೀತಾಂಜಲಿ ಮತ್ತು ಮನ್ಸೂರ್ ಮುಂತಾದ ಸಿಬ್ಬಂದಿ ಹಾಜರಿದ್ದರು
