ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘ ಚಿಕ್ಕಬಳ್ಳಾಪುರ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನೌಕರರ ಭವನ ದಲ್ಲಿ ಆರೋಗ್ಯ ಸಲಹೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ವಿಶ್ವವಿಖ್ಯಾತ ಡಾ. ಆಂಜನಪ್ಪನವರು ಆರೋಗ್ಯ ಸಲಹೆಗಳನ್ನು ನೀಡುವುದರ ಜೊತೆಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಿದರು ಕರ್ನಾಟಕ ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಿರುವಂತಹ ಕರೋನ ಕಾಯಿಲೆ ಬಗ್ಗೆ ಕೇಳಿದಾಗ ಕೊರೊನ ಕಾಯಿಲೆ ಬಗ್ಗೆ ಜನರಲ್ಲಿ ಆತಂಕ ಬೇಡ ಮುನ್ನೆಚ್ಚರಿಕೆ ಮಾತ್ರ ಸಾಕು ಕೊರೋನಾ ವೈರಸ್ ಒಂದು ತಾತ್ಕಾಲಿಕವಾದ ವೈರಸ್ ಆಗಿದೆ ಇದು ವಾತಾವರಣಕ್ಕೆ ಅನುಗುಣವಾಗಿ ರೂಪಾಂತರ ಪಡೆಯುತ್ತಿರುತ್ತದೆ ಇದರ ಬಗ್ಗೆ ಗಾಬರಿಯಾಗುವ ಅವಶ್ಯಕತೆ ಇಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಸಾಕು ಎಂದು ತಿಳಿಸಿದರು. ಯುವಕರಲ್ಲಿ ಹೃದಯಘಾತ ಹೆಚ್ಚಾಗಿದೆ ಇದಕ್ಕೆ ಕಾರಣ ಏನು ಎಂದು ಕೇಳಿದಾಗ ಅವರ ಜೀವನಶೈಲಿ ಇದಕ್ಕೆ ಕಾರಣ ಎಂದು ತಿಳಿಸಿದರು. ಆರೋಗ್ಯವೇ ಭಾಗ್ಯ ನಮ್ಮ ಆರೋಗ್ಯ ನಮ್ಮ ಜೀವನಶೈಲಿಯಲ್ಲಿ ಇದೆ ಎಂದು ತಿಳಿಸಿದರು.
