ಅಂಕೋಲಾ:- ತಾಲೂಕಿನ ಅಚವೆ ನಿವಾಸಿಯಾದ ಶ್ರೀ ದಾಮೋದರ ನಾರಾಯಣ ಪಟಗಾರ, ಇವರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅಂಗಡಿಬೈಲ್ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಬೈಕ್ ಬಂದು ಅಪಘಾತ ಪಡಿಸಿದ ಕಾರಣದಿಂದ ಅವರ ಕಾಲಿನ ಮೂಳೆ ಮುರಿದು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ಅವರಿಗೆ ಸ್ವಲ್ಪ ಆದರೂ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ ಗ್ರಾಮ ಒಕ್ಕಲು ಯುವ ಬಳಗದವರು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಅವರಿಗೆ ರೂಪಾಯಿ 7500=00( ಏಳು ಸಾವಿರದ ಐದು ನೂರು ಮಾತ್ರ) ಸಹಾಯ ಧನವನ್ನು ವಿತರಿಸಿ ಬೇಗ ಗುಣಮುಖರಾಗಲಿ ಎಂದು ಬಳಗದವರು ಹಾರೈಸಿದರು, ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗದ ಸದಸ್ಯರು ಹಾಗೂ ಸ್ಥಳೀಯ ಯುವ ಬಳಗದ ಸದಸ್ಯರು ಹಾಜರಿದ್ದರು, ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗದವರ ಸಮಾಜಮುಖಿ ಕಾರ್ಯವು ಮೆಚ್ಚುವಂತಹದ್ದಾಗಿದೆ.
