ಸುರಪುರ: ಶ್ರೀ ಬಸವೇಶ್ವರ ಪತ್ತಿನ ಸಹಕಾರ ಬ್ಯಾಂಕ್ ಕೇಂದ್ರ ಶಾಖೆ ಸುರಪುರ ಇದಕ್ಕೆ ನೂತನವಾಗಿ ಸಂಘಟನಾ ಸಮಿತಿ ಸದಸ್ಯರನ್ನು ಬ್ಯಾಂಕಿನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ನೇಮಕ ಮಾಡಿದರು.
. ಇತ್ತೀಚಿಗೆ ನಡೆದ ಬಸವೇಶ್ವರ ಬ್ಯಾಂಕಿನ ಕಾರ್ಯಕಾರಿ ಸಭೆಯಲ್ಲಿ ಬ್ಯಾಂಕಿನ ಸಂಘಟನಾ ಸಮಿತಿಯ ಸದಸ್ಯರನ್ನಾಗಿ ವಿಜಯಕುಮಾರ ತಂದೆ ಸoಗನಬಸಪ್ಪ ಮದರಿ ಇವರನ್ನು ಅಧ್ಯಕ್ಷರು ಹಾಗೂ ಸದಸ್ಯರ ಸರ್ವಾನುಮತದಿಂದ ನೇಮಕ ಮಾಡಲಾಯಿತು.
ಇವರ ಆದೇಶ ಪ್ರತಿಯನ್ನು ಬಸವೇಶ್ವರ ಪತ್ತಿನ ಸಹಕಾರ ಶಾಖೆ ಕೊಡೆಕಲದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಎಚ್ ಸಿ ಪಾಟೀಲ್ ಹಾಗೂ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಸುರೇಶ್ ಸಜ್ಜನ್ , ಉಪಾಧ್ಯಕ್ಷರಾದ ವೀರೇಶ್ ದೇಶಮುಕ, ನಿರ್ದೇಶಕರಾದ ರವೀಂದ್ರ ಅಂಗಡಿ,ಪ್ರಕಾಶ್ ಅಂಗಡಿ ಕನ್ನಳ್ಳಿ, ಹಾಗೂ ಶಂಕರ್ ಗೌಡ ಜೇವರ್ಗಿ ಇವರ ಸಮ್ಮುಖದಲ್ಲಿ ಆದೇಶ ಪತ್ರವನ್ನು ನೀಡಿ ಸನ್ಮಾನ ಮಾಡಿದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷರು ಮಾತನಾಡಿ ಬ್ಯಾಂಕಿನ ಅಭಿವೃದ್ಧಿಯ ಸಲುವಾಗಿ ತಾವು ಸಂಘಟನಾತ್ಮಕವಾಗಿ ಕಾರ್ಯವನ್ನು ನಿರ್ವಹಿಸಿ ಬ್ಯಾಂಕಿನ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ಈ ಜವಾಬ್ದಾರಿಯನ್ನು ನೀಡಿರುವುದಕ್ಕಾಗಿ ನಾನು ಬ್ಯಾಂಕಿನ ಅಧ್ಯಕ್ಷರಿಗೆ ಹಾಗೂ ಸರ್ವ ಸದಸ್ಯರಿಗೂ ಸಮಾಜದ ಹಿರಿಯರಿಗೂ ವೀರಶೈವ ಸಮಾಜದ ಬಾಂಧವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ನನ್ನ ಜವಾಬ್ದಾರಿಯನ್ನು ನಾನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ವಿಜಯಕುಮಾರ್ ಮದರಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮುಖಂಡರು ಬ್ಯಾಂಕಿನ ಸಿಬ್ಬಂದಿ ವರ್ಗದವರು ಅನೇಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
POST
ಚಿಕ್ಕಬಳ್ಳಾಪುರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಸಮ್ಮೇಳನ
ಕರ್ನಾಟಕ ರಾಜ್ಯ ರೈತ ಸಂಘ ಪಟ್ಟಣ್ಣಯ್ಯ ಬಣ ವತಿಯಿಂದ ಇಂದು ಚಿಕ್ಬಳ್ಳಾಪುರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಸಮ್ಮೇಳನವನ್ನು ಆಯೋಜಿಸಲಾಗಿತ್ತು ಈ ಸಮ್ಮೇಳನದಲ್ಲಿ ರಾಜ್ಯ ಪದಾಧಿಕಾರಿಗಳು ಭಾಗವಹಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಘಟನೆಯ ಹೋರಾಟದ ರೂಪರೇಷೆಗಳನ್ನು ನಿರ್ಣಯ ಮಾಡಲಾಯಿತು. ದೇವನಹಳ್ಳಿ ತಾಲೂಕಿನ ಚನರಾಯಪಟ್ಟಣ ಹೋಬಳಿಯಲ್ಲಿ ನಿರಂತರವಾಗಿ ರೈತರು ಕಳೆದ ಎರಡುವರೆ ವರ್ಷಗಳಿಂದ ಹೋರಾಟ ನಡೆಸುತ್ತಿದ್ದು ಸುಮಾರು 1800 ಎಕರೆ ಜಮೀನನ್ನ ಕೆಡಿಬಿಐ ವಶಪಡಿಸಿಕೊಂಡಿದ್ದು ಇದು ನ್ಯಾಯಸಮ್ಮೇತವಲ್ಲ ಎಂದು ರೈತ ಸಂಘಟನೆಗಳು ಹೋರಾಟ ನಡೆಸುತ್ತಿದ್ದರು ಕಣ್ಮುಚ್ಚಿ ಕುಳಿತಿರುವಂತಹ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಉದ್ದೇಶದಿಂದ ದೇವನಹಳ್ಳಿ ಚಲೋ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು ಈ ಹೋರಾಟದಲ್ಲಿ ನಮ್ಮ ಸಂಘಟನೆಯು ಸಹ ಭಾಗವಹಿಸಿ ರೈತರಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ ಮತ್ತು ಜುಲೈ 2ನೇ ತಾರೀಕು ನಂದಿ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟದಲ್ಲಿ ರೈತರ ಪರವಾದ ತೀರ್ಮಾನಗಳು ಜಾರಿ ಮಾಡಬಹುದು ಎಂಬ ನಂಬಿಕೆ ನಮಗಿದೆ ಎಂದು ನೂತನವಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರಾಗಿರುವಂತಹ ಟಿಜಿ ಅರುಣ್ ಕುಮಾರ್ ಅವರು ತಿಳಿಸಿದರು. ಹಾಗೂ ಇನ್ನು ಮುಂದೆ ನಮ್ಮ ಸಂಘಟನೆಯಲ್ಲಿ ಅಡ್ಜಸ್ಟ್ಮೆಂಟ್ ರಾಜಕಾರಣ ನಡೆಯುವುದಿಲ್ಲ ಪ್ರಾಮಾಣಿಕವಾಗಿ ರೈತರ ಸಮಸ್ಯೆಗಳಿಗೆ ನ್ಯಾಯ ದೊರಕಿಸಿ ಕೊಡುವುದೇ ನಮ್ಮ ಗುರಿ. ನಿರಂತರವಾಗಿ ರೈತರನ್ನು ಶೋಷಿಸುತ್ತಿರುವ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಮ್ಮ ಜಿಲ್ಲೆಯಲ್ಲಿರುವ ಶಾಸಕರು ಮತ್ತು ಸಂಸದರು ರೈತರನ್ನ ನಿರ್ಲಕ್ಷಿಸುತ್ತಿದ್ದಾರೆ ಎಂದು ತಿಳಿಸಿದರು
ಅರಸೀಕೆರೆ ಯಲ್ಲಿ SDPI ಪಕ್ಷದ ಸಂಸ್ಥಾಪನ ದಿನಾಚರಣೆ ಆಚರಿಸಲಾಯಿತು
SDPI ಪಕ್ಷದ 17 ನೇ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಅರಸೀಕೆರೆ ಯ ಟಿಪ್ಪು ಸರ್ಕಲಿ ನಲ್ಲಿ
ಉಪಾಧ್ಯಕ್ಷರಾದ ಸಲ್ಮಾನ್ ಮತ್ತು ಸೈಯದ್ ಸದ್ದಾಂ ರವರು ಧ್ವಜಾರೋಹಣ ನೆರವರಿಸಿದರು.
ಸೋಶಿಯಲ್ ಡೆಮೋಕ್ರೇಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷವು ಜೂನ್ 21,2009 ರಲ್ಲಿ ಅಸ್ತಿತ್ವಕ್ಕೆ ತರಲಾಹಿತು ಪಕ್ಷವು 16 ವರ್ಷ್ ಪೂರೈಸಿ 17 ನೇ ವರ್ಷದ ಸ್ಥಾಪನ ದಿನಾಚರಣೆ ಆಚರಿಸಲಾಯಿತು.
2014 ರಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಕೋಮು ದ್ವೇಷವಿಪರೀತವಾಹಿತು ಸಮಾನತೆ, ಭದ್ರತೆ ಜಾತಿಗಳ ಮದ್ಯೆ ದ್ವೇಷ ಮುಸ್ಲಿಮರು, ದಲಿತರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ, ಗುಂಪು ಹತ್ಯೆಗಳು ಹೆಚ್ಚಾದವು
ದೇಶದಲ್ಲಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿ ವಿರೋಧ ಪಕ್ಷಗಳನ್ನು ದಮನಿಸುವ ಷಡ್ಯಂತ್ರವನ್ನು ರಚಿಸಲಾಹಿತು. ದೇಶದಲ್ಲಿ ಮುಸ್ಲಿಮರ ವಿರುದ್ಧ ಕಪ್ಪು ಖಾಹಿದೆಗಳಾದ ತ್ರಿಬಲ್ ತಲಾಕ್, ಬುರ್ಖಾ, ಹಿಜಾಬ್ ಗೋ ಹತ್ಯೆ, ವಕ್ಫ್ ಮಸೂದೆ ತಿದ್ದುಪಡಿ ಎಂತಹ ಕರಾಳ ಕಾನೂನುಗಳನ್ನು ಜಾರಿ ಮಾಡಿ ಅಶಾಂತಿ ಸೃಷ್ಟಿಸಿದ್ದೆ ಬಿಜೆಪಿ ಕಾರ್ಯಕ್ರಗಳಾದವು. ದೇಶದ ಯುವಕರಿಗೆ ನಿರುದ್ಯೋಗ, ಶಿಕ್ಷಣ ವಸತಿ, ಮೂಲಭೂತ ಸೌಕರ್ಯಗಳ ಬಗ್ಗೆ ಯೋಚನೆ ಮಾಡದೆ ಯುವಕರನ್ನು ಜಾತಿ ಮದ್ಯೆ ವಿಷದ ಬೀಜ ಬಿತ್ತಿ ಹೆಣದ ಮೇಲಿನ ರಾಜಕೀಯವೇ ಹೆಚ್ಚಾಹಿತು
ಜಾತ್ಯತೀತ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಇತರ ಪಕ್ಷಗಳು ಅಲ್ಪಸಂಖ್ಯಾತ ಮುಸ್ಲಿಮರನ್ನು ಹಿಂದುಳಿದವರನ್ನು ದಲಿತರನ್ನು ಕಡೆಗಣಿಸುತ್ತ ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡು ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ ಈ ದೇಶದಲ್ಲಿ ಎಲ್ಲರಿಗೆ ಸಮಾನತೆಯಿಂದ ಬಾಳುವುದಕ್ಕಾಗ್ಗಿ ದೇಶವನ್ನು ಭಯ ಮುಕ್ತ ಮತ್ತು ಹಸಿವು ಮುಕ್ತ ದೇಶವನ್ನು ಕಟ್ಟುವ ದ್ಯೇಯ ದೊಂದಿಗೆ ನಮ್ಮ ಸಮುದಾಯದ, ಪಕ್ಷದ ಹಿರಿಯ ಮುಖಂಡರು ದೇಶದಲ್ಲಿ SDPI ಪಕ್ಷವನ್ನು ಸ್ಥಾಪಿಸಿ ಸಂಘಟಿಸಿದ್ದಾರೆ. ಈ ಪಕ್ಷವನ್ನು ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲರದ್ದು ಆಗಿದ್ದು ವಿಶೇಷವಾಗಿ ನಮ್ಮ ಯುವ ಸಮೂಹದಾಗಿದೆ ಎಂಬ ಸಂದೇಶವನ್ನು ನೀಡಿದರು ಈ ಸಮಯದಲ್ಲಿ ಎಲ್ಲರಿಗೂ ಶುಭ ಕೋರುತ್ತಾ ಎಲ್ಲರಿಗೂ ಸಿಹಿ ಹಂಚಲಾಹಿತು.
ಈ ಸಂದರ್ಭದಲ್ಲಿ ಅಸಂಬಲಿ ಸದಸ್ಯರಾದ ಸಹ ಕಾರ್ಯದರ್ಶಿ ಯಾದ ನಿಜಾಮ್ ಇಮ್ರಾನ್ ಇರ್ಫಾನ್ ಮತ್ತು ಪಕ್ಷದ ಕಾರ್ಯಕರ್ತರ ಇತರರು ಉಪಸ್ಥಿತರಿದ್ದರು.
ವರದಿ. ಎಂ ಡಿ ನಾಸೀರ್ ಅರಸೀಕೆರೆ
ಗುರುರಾಜ ಶೆಟ್ಟಿ ಈ ವರ್ಷದ ಬೆಸ್ಟ್ ರೊಟೇರಿಯನ್
ಕುಮಟಾ : ರೋಟರಿ ಕ್ಲಬ್ ಕುಮಟಾ ಕೊಡಮಾಡುವ ಪ್ರಸಕ್ತ ಸಾಲಿನ ಬೆಸ್ಟ್ ರೊಟೇರಿಯನ್ ಪುರಸ್ಕಾರಕ್ಕೆ ರೋಟರಿಯ ಸಕ್ರಿಯ ಸದಸ್ಯ ಹಾಗೂ ವಿಧಾತ್ರಿ ಅಕಾಡೆಮಿಯ ಸಂಸ್ಥಾಪಕ ಗುರುರಾಜ್ ಶೆಟ್ಟಿ ಭಾಜನರಾಗಿದ್ದಾರೆ.
ಅವರು ಕುಮಟಾ ರೋಟರಿ ಕ್ಲಬ್ ನ ಸದಸ್ಯರಾಗಿ ಎರಡು ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದು, ಸಮಾಜ ಸೇವೆಯಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. ರೋಟರಿಯ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಮೂಲಕ ಬೆಸ್ಟ್ ರೋಟಿರಿಯನ್ ಆಗಿ ಗುರುತಿಸಿಕೊಂಡಿದ್ದಾರೆ.
ಗುರುವಾರ ಕುಮಟಾದ ನಾದಶ್ರೀ ಕಲಾಕೇಂದ್ರದಲ್ಲಿ ನಡೆದ ರೋಟರಿಯ ಕಾರ್ಯಕ್ರಮದಲ್ಲಿ ಗುರುರಾಜ ಶೆಟ್ಟಿ ಅವರಿಗೆ ಈ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಅತುಲ್ ಕಾಮತ್, ಕಾರ್ಯದರ್ಶಿ ವಿನಾಯಕ ಹೆಗಡೆ ಹಾಗೂ ರೋಟರಿ ಪರಿವಾರದ ಸದಸ್ಯರು ಹಾಜರಿದ್ದರು.
ಇವರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜಮುಖಿ ಕಾರ್ಯ ಮಾಡುವಂತಾಗಲಿ ಎಂದು ವಿಧಾತ್ರಿ ಬಳಗದ ಸದಸ್ಯರುಗಳು ಹಾಗೂ ಆಪ್ತೇಷ್ಟರು ಶುಭ ಹಾರೈಸಿದ್ದಾರೆ
ಕಬ್ಬು ಕಟಾವು ಬಾಕಿ ಹಣ ಬಿಡುಗಡೆ ಕುರಿತು ಅಗ್ರಹ.
ಆಲಮೇಲ ತಾಲೂಕಿನ ಕಬ್ಬು ಕಟಾವ ಹಾಗೂ ಸಾಗಾಣಿಕೆ ದಾರರು ಸಂಘದ ಪದಾಧಿಕಾರಿಗಳಿಂದ ನಾವು ಕಳೆದ ವರ್ಷ ದಿನಾಂಕ. 28. 09. 2024 ರಂದು ಹಮ್ಮಿಕೊಂಡಿದ್ದ ಅನಿರ್ದಿಷ್ಟ ಅವಧಿ ಸತ್ಯಾಗ್ರದಲ್ಲಿ ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ಬಾಲಾಜಿ ಕಾರ್ಖಾನೆ ಯರಗಲ್ ತಾಲೂಕಿನ ಮುದ್ದೇಬಿಹಾಳ ಇವರ ನೀಡಿರುವಂತಹ ಹಣ ನೀಡಲು ನಿರ್ಧರಿಸಿರುವುದು. ಇರುತ್ತದೆ ಅದರಂತ ಅವರು 57 ರೂಪಾಯಿ ಗಳಂತೆ ಎರಡು (2)ಕಂತುಗಳಲ್ಲಿ ನೀಡಿದ್ದು ಇರುತ್ತದೆ. ಆದರೆ ಕೆಪಿಆರ್ ಕಾರ್ಖಾನೆಯವರು 57 ಮತ್ತು 28. 5 ರೂಪಾಯಿಗಳನ್ನು ಮಾತ್ರ ನೀಡುತ್ತಾರೆ ಮತ್ತು 28.5 ಇನ್ನುವರೆಗೂ ನೀಡಿರುವುದಿಲ್ಲ ಈ ವರ್ಷ ಕರಾರು ಬಾಂಡಗಳಲ್ಲಿ ಅನೇಕ ರೀತಿಯ ಷರತುಗಳನ್ನು ಹಾಕಿದ್ದು ಈ ಎಲ್ಲಾ ಷರತ್ತುಗಳಿಗೆ ವಾಹನ ಮಾಲೀಕರು ಒಪ್ಪಿಗೆ ಇರುವುದಿಲ್ಲ. ಈ ಕರಾರುಗಳಿಗೆ ಒಪ್ಪಿದರೆ ಮಾತ್ರ ಅಗ್ರಿಮೆಂಟ್ ಮಾಡಿಕೊಳ್ಳುತ್ತೇವೆ ಅಂಥಾ ಕಟಾವು ಹಾಗೂ ಸಾಗಾಣಿಕೆ ದಾರರಿಗೆ ಸತಾಯಿಸುತ್ತಿದ್ದಾರೆ.
ಆದ ಕಾರಣ ಎಲ್ಲಾ ಗಾಡಿಯ ಮಾಲೀಕರು ಸೇರಿ ದಿನಾಂಕ 16/6/2025 ರಂದು ಬೆಳಗ್ಗೆ 11 ಗಂಟೆಗೆ ಕಾರ್ಖಾನೆ ಅಧಿಕಾರಿಗಳಿಗೆ ನಮ್ಮ ಬೇಡಿಕೆಗಳ ಮನವಿಯನ್ನು ಸಲ್ಲಿಸಿ. ಮೂರು ದಿನಗಳವಾದರೂ ಯಾವುದೇ ಉತ್ತರ ಬಂದಿರುವುದಿಲ್ಲ.ಆದ ಕಾರಣ ದಿನಾಂಕ.23.6.2025 ರಂದು ಕಾರ್ಖಾನೆ ಆವರಣದ ಮುಂದುಗಡೆ ಆನಿರ್ದಿಷ್ಟವಧಿ ಧರಣಿ ಸತ್ಯಾಗ್ರ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಶ್ರೀ ಶಶಿಧರ್ ನಾಯ್ಕೋಡಿ ಅಧ್ಯಕ್ಷರು ಮಾಂತೇಶ್ ಕತ್ತಿ ಉಪಾಧ್ಯಕ್ಷರು ಮಹೇಶ್ ಹುನಳ್ಳಿ .ಕಾರ್ಯದರ್ಶಿ. ಕರಿಯಪ್ಪ ಹಿರೇ ಪೂಜಾರಿ ಬಸಪ್ಪ ಹಂಜಗಿ ರಾಜು ಮೇತ್ರಿ ನಬಿರರಸೂಲ ಸುಂಠಣ. ರಾಜಶೇಖರ.ಬಿರಾದರ.ಯಲ್ಲಪ್ಪ ಪೂಜಾರಿ.ಜಗದೇವಪ್ಪ ಹಲಕಟ್ಟಿ ಕನಸಿನ ಭಾರತ ಪತ್ರಿಕೆಗೆ ತಿಳಿಸಿದರು
ವರದಿ. ಉಮೇಶ ಕಟಬರ.
ನಮ್ಮ ಊರಿಗೆ ನಮ್ಮ ಶಾಸಕರು ಎಂಬ ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರದ ಜನಪ್ರಿಯ ಶಾಸಕರಾದಂತ ಶ್ರೀ ಪ್ರದೀಪ್ ಈಶ್ವರ್ ರವರು ನಮ್ಮ ಊರಿಗೆ ನಮ್ಮ ಶಾಸಕರು ಎಂಬ ಕಾರ್ಯಕ್ರಮದ ಅಡಿಯಲ್ಲಿ ಇಂದು ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯ
ಇಟ್ಟಪ್ಪನಹಳ್ಳಿ, ಹಾಗೂ ಗೊಂಗಡಿಪುರ ಗ್ರಾಮಗಳಿಗೆ 36 ಇಲಾಖೆಗಳ ಸರ್ಕಾರಿ ಅಧಿಕಾರಿಗಳ ಜೊತೆ ಭೇಟಿ ನೀಡಿ ಜನರ ಸಮಸ್ಯೆಯನ್ನು ಆಲಿಸುತ್ತಾ ಸ್ಥಳದಲ್ಲೇ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನವನ್ನು ಮಾಡಿದರು. ರಸ್ತೆಯನ್ನೇ ಕಾಣದಂತ ಈ ಹಳ್ಳಿಗಳಿಗೆ ಸಿಸಿ ರಸ್ತೆಯನ್ನು ಮಂಜೂರು ಮಾಡುವ ಭರವಸೆಯನ್ನು ನೀಡಿದರು. ಈ ಗ್ರಾಮಗಳಲ್ಲಿ ಒಳಚರಂಡಿಯ ವ್ಯವಸ್ಥೆಯೇ ಇರಲಿಲ್ಲ ಇದನ್ನು ನೋಡಿದ ಶಾಸಕರು ಇನ್ನು ಒಂದು ವಾರದ ಒಳಗೆ ಈ ಎಲ್ಲಾ ಚರಂಡಿ ವ್ಯವಸ್ಥೆ ಮತ್ತು ಸ್ವಚ್ಛತಾ ಕಾರ್ಯ ಆಗಬೇಕೆಂದು ಸೂಚಿಸಿದರು ಬೀದಿ ದೀಪದ ವ್ಯವಸ್ಥೆಯನ್ನು ಸರಿಪಡಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಆದೇಶಿಸಿದರು ಮಾನ್ಯ ಶಾಸಕರು ಮಾತನಾಡುತ್ತಾ ನಾನು ಶಾಸಕನಾದಾಗಿಂದ ಈ ಕ್ಷೇತ್ರದಲ್ಲಿ 186 ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಯನ್ನು ಆಲಿಸಿ ಅದಕ್ಕೆ ಪರಿಹಾರ ಸೂಚಿಸಿದ್ದೇನೆ ಮುಂದಿನ ದಿನಗಳಲ್ಲಿ ಎಲ್ಲಾ ಹಳ್ಳಿಗಳಿಗೂ ಭೇಟಿ ನೀಡಿರುವ ಯೋಜನೆಯನ್ನು ರೂಪಿಸಿಕೊಂಡಿದ್ದೇನೆ ಎಂದು ತಿಳಿಸಿದರು
ಗೃಹ ಜ್ಯೋತಿ ಯೋಜನೆ:
ಕರ್ನಾಟಕದ ಕುಟುಂಬಗಳಿಗೆ ನೆಮ್ಮದಿಯ ಕಿರಣ
ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಪ್ರಗತಿಪರ ಕ್ರಮದಲ್ಲಿ, ಕರ್ನಾಟಕ ಸರ್ಕಾರವು ಗೃಹ ಜ್ಯೋತಿ ಯೋಜನೆಯನ್ನು ಪ್ರಾರಂಭಿಸಿದೆ, ಇದು ರಾಜ್ಯಾದ್ಯಂತ ವಸತಿ ಗ್ರಾಹಕರಿಗೆ ತಿಂಗಳಿಗೆ 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಅನ್ನು ನೀಡುತ್ತದೆ. ಆಗಸ್ಟ್ 1, 2023 ರಿಂದ ಅಧಿಕೃತವಾಗಿ ಜಾರಿಗೆ ಬಂದ ಈ ಯೋಜನೆಯು ಕಾಂಗ್ರೆಸ್ ಪಕ್ಷದ ಚುನಾವಣಾ ಭರವಸೆಯ ನೆರವೇರಿಕೆಯಾಗಿದೆ ಮತ್ತು ದೀರ್ಘಕಾಲೀನ ಸಾಮಾಜಿಕ-ಆರ್ಥಿಕ ಮತ್ತು ಪರಿಸರ ಪ್ರಯೋಜನಗಳನ್ನು ಹೊಂದಿರುವ ಜನ-ಕೇಂದ್ರಿತ ಉಪಕ್ರಮವೆಂದು ಪ್ರಶಂಸಿಸಲಾಗುತ್ತಿದೆ.
ಗೃಹ ಜ್ಯೋತಿ ಯೋಜನೆಯ ಪ್ರಮುಖ ಉದ್ದೇಶವೆಂದರೆ ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಮಾಸಿಕ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಬೆಂಬಲ ನೀಡುವುದು. ಈ ಯೋಜನೆಯಡಿಯಲ್ಲಿ, ಹಿಂದಿನ ವರ್ಷದ ಆಧಾರದ ಮೇಲೆ ಸರಾಸರಿ ವಿದ್ಯುತ್ ಬಳಕೆ (ಶೇಕಡಾ 10 ಭತ್ಯೆ ಸೇರಿದಂತೆ) 200 ಯೂನಿಟ್ಗಳು ಅಥವಾ ಅದಕ್ಕಿಂತ ಕಡಿಮೆ ಇರುವ ಕುಟುಂಬಗಳಿಗೆ ಮಾಸಿಕ ಬಳಕೆ 200 ಯೂನಿಟ್ಗಳನ್ನು ಮೀರದಿದ್ದರೆ, ಶೂನ್ಯ ವಿದ್ಯುತ್ ಬಿಲ್ ಪಡೆಯಬಹುದು. ಸರ್ಕಾರಿ ದಾಖಲೆಗಳ ಪ್ರಕಾರ, ಜನವರಿ 2024 ರ ಹೊತ್ತಿಗೆ ಸುಮಾರು 1.65 ಕೋಟಿ ಕುಟುಂಬಗಳು ಈಗಾಗಲೇ ಈ ಯೋಜನೆಗೆ ನೋಂದಾಯಿಸಿಕೊಂಡಿವೆ ಮತ್ತು ಅವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ಈ ಯೋಜನೆಯ ಅತ್ಯಂತ ಆಕರ್ಷಕ ವೈಶಿಷ್ಟ್ಯವೆಂದರೆ ಮಾಲೀಕತ್ವದ ಸ್ಥಿತಿಯನ್ನು ಲೆಕ್ಕಿಸದೆ ನಿವಾಸಿಗಳಿಗೆ ಇದು ಸಾರ್ವತ್ರಿಕವಾಗಿ ಅನ್ವಯಿಸುತ್ತದೆ. ಕರ್ನಾಟಕದಲ್ಲಿ ವಾಸಿಸುವ ಬಾಡಿಗೆದಾರರು ಮತ್ತು ಸ್ಥಳೀಯರಲ್ಲದ ನಿವಾಸಿಗಳು ಸಹ ತಮ್ಮ ಆಧಾರ್ ಅನ್ನು ತಮ್ಮ ವಿದ್ಯುತ್ ಖಾತೆಗೆ ಲಿಂಕ್ ಮಾಡಿದ್ದರೆ ಮತ್ತು ಅವರು ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಪ್ರಯೋಜನ ಪಡೆಯಬಹುದು. ಅರ್ಜಿ ಪ್ರಕ್ರಿಯೆಯನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಮತ್ತು ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಮತ್ತು ನಾಡಕಚೇರಿ ಕೇಂದ್ರಗಳ ಮೂಲಕ ಆಫ್ಲೈನ್ನಲ್ಲಿ ಪ್ರವೇಶಿಸಬಹುದಾಗಿದೆ.
ಅರ್ಹತೆ ಪಡೆಯಲು, ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು, ಸಕ್ರಿಯ ಗೃಹ ವಿದ್ಯುತ್ ಸಂಪರ್ಕವನ್ನು ಹೊಂದಿರಬೇಕು ಮತ್ತು ಅವರ ಸರಾಸರಿ ವಾರ್ಷಿಕ ವಿದ್ಯುತ್ ಬಳಕೆ 200 ಯೂನಿಟ್ಗಳನ್ನು ಮೀರಬಾರದು. ಹೊಸ ವಿದ್ಯುತ್ ಸಂಪರ್ಕವನ್ನು ಸ್ಥಾಪಿಸಿದ ಸಂದರ್ಭಗಳಲ್ಲಿ ಅಥವಾ ವ್ಯಕ್ತಿಯು ಇತ್ತೀಚೆಗೆ ಹೊಸ ನಿವಾಸಕ್ಕೆ ಸ್ಥಳಾಂತರಗೊಂಡ ಸಂದರ್ಭಗಳಲ್ಲಿ, ಉಚಿತ ವಿದ್ಯುತ್ ಅರ್ಹತೆಯನ್ನು ಲೆಕ್ಕಾಚಾರ ಮಾಡಲು ಸರ್ಕಾರವು ಆರಂಭಿಕ ಸರಾಸರಿಯಾಗಿ 53 ಯೂನಿಟ್ಗಳ ತಾತ್ಕಾಲಿಕ ಮಾನದಂಡವನ್ನು ಜೊತೆಗೆ 10% ಭತ್ಯೆಯನ್ನು (ಸರಿಸುಮಾರು 58 ಯೂನಿಟ್ಗಳು) ನಿಗದಿಪಡಿಸಿದೆ.
ಈ ಯೋಜನೆಯು ಆರ್ಥಿಕ ಪರಿಹಾರಕ್ಕಿಂತ ಹೆಚ್ಚಿನದನ್ನು ನೀಡುತ್ತದೆ. ದಕ್ಷ ವಿದ್ಯುತ್ ಬಳಕೆಗೆ ಪ್ರತಿಫಲ ನೀಡುವ ಮೂಲಕ, ಇದು ಜವಾಬ್ದಾರಿಯುತ ಇಂಧನ ಬಳಕೆಯನ್ನು ಪ್ರೋತ್ಸಾಹಿಸುತ್ತದೆ. ಕುಟುಂಬಗಳು ಈಗ ತಮ್ಮ ವಿದ್ಯುತ್ ಬಳಕೆಯ ಬಗ್ಗೆ ಹೆಚ್ಚು ಜಾಗೃತವಾಗಿವೆ ಮತ್ತು ಇಂಧನ ಉಳಿತಾಯ ಉಪಕರಣಗಳು ಮತ್ತು ಅಭ್ಯಾಸಗಳನ್ನು ಅಳವಡಿಸಿಕೊಳ್ಳುತ್ತಿವೆ. ಇದು ರಾಜ್ಯದ ಇಂಧನ ಬೇಡಿಕೆಯನ್ನು ಕಡಿಮೆ ಮಾಡುವುದಲ್ಲದೆ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ವಿದ್ಯುತ್ ಉತ್ಪಾದನೆಯ ಮೇಲಿನ ಹೊರೆ ಕಡಿಮೆ ಮಾಡುವ ಮೂಲಕ ಪರಿಸರ ಸುಸ್ಥಿರತೆಗೆ ಕೊಡುಗೆ ನೀಡುತ್ತದೆ.
ಆಡಳಿತದ ದೃಷ್ಟಿಕೋನದಿಂದ, ಗೃಹ ಜ್ಯೋತಿಯು ಕುಟೀರ ಜ್ಯೋತಿ, ಅಮೃತ ಜ್ಯೋತಿ ಮತ್ತು ಭಾಗ್ಯ ಜ್ಯೋತಿಯಂತಹ ಹಳೆಯ ಯೋಜನೆಗಳನ್ನು ಒಂದೇ ಏಕೀಕೃತ ವೇದಿಕೆಯಲ್ಲಿ ವಿಲೀನಗೊಳಿಸುವ ಮೂಲಕ ಅಸ್ತಿತ್ವದಲ್ಲಿರುವ ವಿದ್ಯುತ್ ಪ್ರಯೋಜನ ಕಾರ್ಯಕ್ರಮಗಳನ್ನು ಸುಗಮಗೊಳಿಸುತ್ತದೆ. ಇದು ಆಡಳಿತವನ್ನು ಸರಳಗೊಳಿಸುತ್ತದೆ ಮತ್ತು ಉತ್ತಮ ಪಾರದರ್ಶಕತೆ ಮತ್ತು ಸಂಪರ್ಕವನ್ನು ಖಚಿತಪಡಿಸುತ್ತದೆ.
ಪ್ರಯೋಜನಗಳಿಗೆ ನಿರಂತರ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು, ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ನಲ್ಲಿ ಮೀಸಲಾದ ಡಿ-ಲಿಂಕ್ ಆಯ್ಕೆಯನ್ನು ಬಳಸಿಕೊಂಡು ಅವರು ಸ್ಥಳಾಂತರಗೊಂಡರೆ ತಮ್ಮ ಸ್ಥಿತಿಯನ್ನು ನವೀಕರಿಸಬೇಕು. ಅರ್ಜಿ ರದ್ದತಿಗೆ ಪ್ರಸ್ತುತ ESCOM ಕಚೇರಿಗಳಲ್ಲಿ ಹಸ್ತಚಾಲಿತ ಪ್ರಕ್ರಿಯೆಯ ಅಗತ್ಯವಿದ್ದರೂ, ಆನ್ಲೈನ್ ರದ್ದತಿ ವೈಶಿಷ್ಟ್ಯಗಳ ಕುರಿತು ನವೀಕರಣಗಳನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ.
ಕೊನೆಯದಾಗಿ ಹೇಳುವುದಾದರೆ, ಗೃಹ ಜ್ಯೋತಿ ಯೋಜನೆಯು ಕೇವಲ ಅದರ ಪ್ರಮಾಣದಲ್ಲಿ ಮಾತ್ರವಲ್ಲದೆ ದೈನಂದಿನ ಜೀವನದ ಮೇಲೆ ಬೀರುವ ಪ್ರಭಾವಕ್ಕೂ ಒಂದು ಹೆಗ್ಗುರುತು ಕಲ್ಯಾಣ ಉಪಕ್ರಮವಾಗಿದೆ. ಆರ್ಥಿಕ ಪರಿಹಾರವನ್ನು ಒದಗಿಸುವ ಮೂಲಕ, ಇಂಧನ ಸಂರಕ್ಷಣೆಯನ್ನು ಉತ್ತೇಜಿಸುವ ಮೂಲಕ ಮತ್ತು ಹೆಚ್ಚು ಸಮಗ್ರ ಅಭಿವೃದ್ಧಿ ಮಾದರಿಯನ್ನು ಬೆಳೆಸುವ ಮೂಲಕ, ಇದು ಹೆಚ್ಚು ಸಮಾನ ಮತ್ತು ಸುಸ್ಥಿರ ಕರ್ನಾಟಕದತ್ತ ಒಂದು ಪ್ರಕಾಶಮಾನವಾದ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ.
ಲಕ್ಷಾಂತರ ಕುಟುಂಬಗಳ ಉನ್ನತಿಗೆ ಮಾತ್ರವಲ್ಲದೆ ಸುಸ್ಥಿರ ಜೀವನವನ್ನು ಉತ್ತೇಜಿಸುವ ಇಂತಹ ದೂರದೃಷ್ಟಿಯ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು. ಇದು ಸಹಾನುಭೂತಿ, ದೂರದೃಷ್ಟಿ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಬದ್ಧತೆಯನ್ನು ಆಧರಿಸಿದ ಆಡಳಿತದ ಒಂದು ಅನುಕರಣೀಯ ಮಾದರಿಯಾಗಿದೆ.
ಡಾ. ರಾಮಕೃಷ್ಣ. ಬಿ ಮತ್ತು ಡಾ. ದಿವ್ಯಾ ಕೆ ವಾಡಿ
ಸಹಾಯಕ ಪ್ರಾಧ್ಯಾಪಕರು
ಅರ್ಥಶಾಸ್ತ್ರ ವಿಭಾಗ ಮತ್ತು ಇತಿಹಾಸ ವಿಭಾಗ.
ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ
ಶ್ರೀಮತಿ. ಚಿನ್ನಮ್ಮ ಬಸಪ್ಪ ಪಾಟೀಲ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಚಿಂಚೊಳಿ, ಕಲಬುರಗಿ.
ವಿಶ್ವ ವಿದ್ಯಾಲಯಕ್ಕೆ 3ನೇ ರಾಂಕ್ ಪಡೆದ ಕು.ನಂದಿತಾ
ಶಿರಸಿ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿನಿ ಕು.ನಂದಿತಾ ಇವರು ಬಿ ಎಸ್ ಸಿ ಹೊಲ್ಟಿಕಲ್ಚರ್ ನಲ್ಲಿ ಬಾಗಲಕೋಟೆ ವಿಶ್ವ ವಿದ್ಯಾಲಯಕ್ಕೆ 3 ನೇ ರ್ಯಾಂಕ್ ಗಳಿಸಿ ಕಾಲೇಜಿಗೆ ಪ್ರಥಮ ರ್ಯಾಂಕ್ ಗಳಿಸಿದ್ದಾಳೆ ಹಾಗೂ 3 ಟಿಚರ್ಸ್ ಬೆಸ್ಟ್ ಬಂಗಾರದ ಪದಕವನ್ನು ಪಡೆದುಕೊಂಡಿದ್ದಾಳೆ.
ಕು.ನಂದಿತಾ ಇವರು ತೋಟಗಾರಿಕೆ ಇಲಾಖೆಯ ನಿವೃತ್ತ ಅದಿಕಾರಿ ಅಣ್ಣಪ್ಪ ಮತ್ತು ಸುಧಾ ನಾಯ್ಕ ದಂಪತಿಗಳ ಪುತ್ರಿಯಾಗಿದ್ದಾಳೆ.
ಕಾಪು ತಹಶಿಲ್ದಾರ ಡಾ.ಪ್ರತಿಭಾ ಖಡಕ್ ವಾರ್ನಿಂಗ್
“ಜಲದ ನೈಸರ್ಗಿಕ ಹರಿವಿಗೆ ತಡೆಯೊಡ್ಡಿದರೆ ಪ್ರಕೃತಿ ವಿಪತ್ತು ನಿರ್ವಣೆ ಕಾಯ್ದೆಯಡಿ ಕಠಿಣ ಕ್ರಮ”.
ಉಡುಪಿ:ಕಾಪು ತಾಲೂಕ ಪಾಂಗಳ ಗ್ರಾಮದ ಬೀಡು ಪ್ರದೇಶದಲ್ಲಿ ತೋಡನ್ನು ಬಂದ್ ಮಾಡಿ ನೈಸರ್ಗಿಕ ನೀರಿನ ಹರಿವಿಗೆ ತಡೆ ಒಡ್ಡಲಾಗಿತ್ತು. ಇದರಿಂದ ಅಕ್ಕಪಕ್ಕದ ಮನೆಗಳು ಜಲಾವೃತವಾಗಿ ತೊಂದರೆ ಉಂಟಾಗಿತ್ತು.
ತಕ್ಷಣ ಸ್ಪಂದಿಸಿದ ತಾಲ್ಲೂಕ ಆಡಳಿತ:
ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾದ ತಹಶಿಲ್ದಾರ್ ಡಾ.ಪ್ರತಿಭಾ ಆರ್
ಸರ್ಕಲ್ ಇನ್ಸ್ಪೆಕ್ಟರ್ ಜಯಶ್ರೀ, ಕಾಪು ಠಾಣಾಧಿಕಾರಿ ತೇಜಸ್ವಿ ಇವರ ನೆರವಿನಿಂದ ಸ್ಥಳಕ್ಕೆ ಧಾವಿಸಿ ಇನ್ನಂಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲಿನಿ ಶೆಟ್ಟಿಯವರ ಸಹಕಾರದಿಂದ ತಡೆಯೊಡ್ಡಿದ್ದ ಜಾಗವನ್ನು ಹಾರೆ-ಸುತ್ತಿಗೆಯಿಂದ ಒಡೆದು ತೆಗೆದು ನೀರಿನ ಹರಿವಿಗೆ ದಾರಿ ಮಾಡಿಕೊಟ್ಟಿದ್ದಾರೆ. ಇದರಿಂದ ನೆರೆ ಭೀತಿ ತಗ್ಗಿದೆ.
ಶಾಶ್ವತ ಪರಿಹಾರಕ್ಕೆ ಬೇಡಿಕೆ:
ಕಳೆದ ವರ್ಷವೂ ಇದೇ ಸಮಸ್ಯೆ ಉಂಟಾಗಿತ್ತು. ಆಗಲೂ ತಹಶಿಲ್ದಾರ್ ರವರು ಇದೇ ರೀತಿಯ ಮಾಡಿ ಪರಿಹಾರ ಮಾಡಿದ್ದರು. ಇದಕ್ಕೊಂದು ಶಾಶ್ವತ ಪರಿಹಾರ ಆಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶಾಶ್ವತ ತೋಡು ನಿರ್ಮಿಸುವ ಭರವಸೆ
ಗ್ರಾಮ ಪಂಚಾಯತಿಯ PDO ಚಂದ್ರಕಲಾ ರವರು ತಾವು ತೋಡು ನಿರ್ಮಿಸಲು ಸಿದ್ದರಿದ್ದೇವೆ ಆದರೆ ಪಟ್ಟಾ ಜಾಗದ ಮಾಲೀಕರು ಕಾಮಗಾರಿಗೆ ತಡೆ ಒಡ್ಡುತ್ತಿರುವುದರಿಂದ ತೋಡು ನಿರ್ಮಿಸಲು ಅಡ್ಡಿಯಾಗುತ್ತಿದೆ ಎಂದು ತಿಳಿಸಿದ್ದಾರೆ.
ತಹಶಿಲ್ದಾರ್ ಅಂತವರ ಮೇಲೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶೀಘ್ರದಲ್ಲೇ ಶಾಶ್ವತ ತೋಡು ನಿರ್ಮಿಸುವ ಭರವಸೆಯನ್ನು ತಹಶಿಲ್ದಾರ ನೀಡಿದ್ದಾರೆ.
ಪ್ರಕೃತಿ ವಿಪತ್ತು ನಿರ್ವಹಣಾ ಕಾಯಿದೆಯಡಿಯಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ತಹಶಿಲ್ದಾರ್ ಡಾ.ಪ್ರತಿಭಾ ಎಚ್ಚರಿಕೆ
ನೀರಿನ ನೈಸರ್ಗಿಕ ಹರಿವಿಗೆ ತಡೆಯೊಡ್ಡಿ ಜಲರಾಶಿಯುಂಟಾದರೆ ಅಂತಹವರ ಮೇಲೆ ಪ್ರಕೃತಿ ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಹಶಿಲ್ದಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ತಹಶಿಲ್ದಾರ್ ಡಾ.ಪ್ರತಿಭಾ ಆರ್
“ನೀರಿನ ನೈಸರ್ಗಿಕ ಹರಿವಿಗೆ ತಡೆ ಒಡ್ಡಿ, ಕೃತಕ ಜಲಪ್ರವಾಹಕ್ಕೆ ಕಾರಣವಾಗುವಂತಹವರ ಮೇಲೆ ಪ್ರಕೃತಿ ವಿಪತ್ತು ನಿರ್ವಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಎಲ್ಲರಿಗೂ ಈ ಭೂಮಿಯ ಮೇಲೆ ಬದುಕುವ ಹಕ್ಕು ಇದೆ. ಸ್ವಾರ್ಥಿಗಳಾಗದೆ ಸಮಷ್ಟಿಯ ಹಿತಕ್ಕೂ ಗಮನ ನೀಡಬೇಕು.
ಈ ಸಂದರ್ಭದಲ್ಲಿ ರೆವಿನ್ಯೂ ಇನ್ಸ್ಪೆಕ್ಟರ್ ಇಜ್ಜಾರ್ ಸಾಬಿರ್ ಮತ್ತು ಗ್ರಾಮಾಡಳಿತಾಧಿಕಾರಿ ಅರುಣ್ ಇದ್ದು ಸಮಸ್ಯೆ ಬಗೆಹರಿಸಲು ಸಹಕರಿಸಿದರು.
ವರದಿ:ಡಾ.ನಂದುಪೂಜಾರಿ
ರೈತರ ಸಂಧ್ಯಾ ಶಿಬಿರ ಉದ್ಘಾಟಿಸಿದ : ಕೃಷ್ಣಯ್ಯ
ಇಂಡಿ: ಭಾರತೀಯ ಸ್ಟೇಟ್ ಬ್ಯಾಂಕ್ ವಿಜಯಪೂರ ಹಾಗೂ ಇಂಡಿ ಶಾಖೆಯ ಸಹಯೋಗದಲ್ಲಿ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ (ಜೋಡಿಗುಡಿಯ ಶ್ರೀ ಮರುಳಸಿದ್ದಶ್ವರ ದೇವಾಲಯ ಆವರಣದಲ್ಲಿ) ರೈತರ ಸಂಧ್ಯಾ ಶಿಬಿರ ಕಾರ್ಯಕ್ರಮ ಜರುಗಿತು.ಈ ಕಾರ್ಯಕ್ರಮವನ್ನು ವಿಜಯಪೂರ ಭಾರತೀಯ ಸ್ಟೇಟ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಕೃಷ್ಣಯ್ಯ ಅವರು ಉದ್ಘಾಟಿಸಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು ಬ್ಯಾಂಕ್ ಗಳು ಜನ ಸ್ನೇಹಿ,ರೈತ ಸ್ನೇಹಿ ಉದ್ದೇಶಗಳಿಂದ ಕೃಷಿ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡುತ್ತಿವೆ ಹಾಗಾಗಿ ನಮ್ಮ ದೇಶದ ಕೃಷಿ ಅಭಿವೃದ್ಧಿಗೆ ಎಸ್ ಬಿ ಐ ಬ್ಯಾಂಕ್ ಅನೇಕ ರೈತಪರ ಯೋಜನೆಗಳನ್ನು ಹಮ್ಮಿಕೊಂಡು ಜನರ ವಿಶ್ವಾಸ ಗಳಿಸಿದೆ, ಕೃಷಿ ಸಾಲಗಳ ಬಗ್ಗೆ ಮಾತನಾಡಿದ ಅವರು ಕೃಷಿಡೈರಿ,ಕುರಿ ಸಾಕಾಣಿಕೆ,ಟ್ರಾಕ್ಟರ್ ಸಾಲ,ಬೆಳೆಸಾಲ ಮತ್ತು ದೈನಂದಿನ ವ್ಯವಹಾರಗಳ ಮೆಲೆ ಸಾಲ ಸೌಲಭ್ಯ ನೀಡುತ್ತಿದ್ದೇವೆ ಎಂದು ರೈತರಿಗೆ ಮಾಹಿತಿ ನೀಡಿವುದರ ಮೂಲಕ ಅದರ ಸದುಪಯೋಗ ಪ್ರತಿಯೊಬ್ಬರು ಪಡೆದು ತಮ್ಮ ಆಧಾಯವನ್ನ ದ್ವೀಗುಣ ಮಾಡಿಕೊಳ್ಳಬೇಕೆಂದು ಎಂದು ಹೇಳಿದರು.ವಿಜಯಪೂರ ಎಸ್ ಬಿ ಐ ಶಾಖೆಯ ಉಪ ಪ್ರಬಂಧಕರಾದ ಶ್ರೀಮತಿ ಸವಿತಾ ಪಾಟೀಲ ಅವರು ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ತಮ್ಮ ಜವಬ್ದಾರಿಯನ್ನು ನಿಬಾಯಿಸಲು ಹಾಗೂ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಹೆಚ್ಚಿನ ವಿದ್ಯಾಬ್ಯಾಸಕ್ಕಾಗಿ ನಾಲ್ಕು ಲಕ್ಷದಿಂದ ಇಪ್ಪತ್ತು ಲಕ್ಷದ ವರೆಗೆ ಸಾಲ ಸೌಲಭ್ಯ ಇದೆ.ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ರೈತರು ಬ್ಯಾಂಕ್ ನಿಂದ ಸಾಲ ಪಡೆದು ಸಹಕಾಲದಲ್ಲಿ ತುಂಬಿ ಮತ್ತೆ ಸಾಲ ಪಡೆಯಬಹುದು ಇದರಿಂದ ರೈತರು ತಮ್ಮ ಆದಾಯವನ್ನು ದ್ವೀಗುಣ ಮಾಡಿಕೊಂಡು ಸ್ವಾವಲಂಬಿ ಜೀವನ ಮಾಡಬಹುದು ಹಾಗೂ
ಸ್ಟಾಂಪ್ ಇಂಡಿಯಾ ಯೋಜನೆ 10 ಲಕ್ಷದಿಂದ ಒಂದು ಕೋಟಿಯವರೆಗೆ ಎಸ್ ಸಿ,ಎಸ್ಟಿ, ಮತ್ತು ಮಹಿಳೆಯರು ಉಧ್ಯಮಿಗಳಾಗಬಹುದು ಎಂದು ತಿಳಿಸಿದರು.ನಂತರ ಮಾತನಾಡಿದ ಭರತೇಶ ಉಪಾಧ್ಯೆ ಅವರು ಪ್ರಧಾನ ಮಂತ್ರಿಗಳ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಖಾತೆ ಪ್ರಾರಂಭಿಸಿ ಅದರ ಸದುಪಯೋಗ ಪಡೆದುಕೊಂಡ ಮತ್ತು (ಪಿಎಂಜೆಜೆಬಿವೈ/ಎಸ್ ಬಿ ವೈ) ಅಪಘಾತದಲ್ಲಿ ಮರಣ ಹೊಂದಿದರು.ಈ ಸಂದರ್ಭದಲ್ಲಿ ಖಾತೆಯ ವಾರಸುದಾರರಿಗೆ ನಾಲ್ಕು ಲಕ್ಷ ರುಪಾಯಿ ವಿಮಾ ಸೌಲಭ್ಯವನ್ನು ಅವರಿಗೆ ದೊರಕಿಸಲಾಯಿತು.
ಸಾಮಾಜಿಕ ಭದ್ರತಾ ಯೋಜನೆಗಳಾದ PMJJBY,PMSBY ಅಟಲ್ ಪೆನ್ಷನ್ ಯೋಜನೆ ಹಾಗೂ ಅಫಘಾತ ಮತ್ತು ಸಾಮಾನ್ಯ ಮರಣ ಹೊಂದಿದಲ್ಲಿ ಕಡಿಮೆ ವಿಮೆಯಲ್ಲಿ ಹೆಚ್ಚಿನ ಭದ್ರತೆಯೊಂದಿರುವ ಭಾರತೀಯ ಸ್ಟೇಟ ಬ್ಯಾಂಕ್ ನೀಡುತ್ತಿರುವ ಸೋಸಿಯಲ್ ಸೆಕ್ಯೂರಿಟಿ ಸ್ಕೀಮ್ ಗಳ ಬಗ್ಗೆ ಪ್ರದಾನ ಮಂತ್ರಿ ಜೀವನ ಜ್ಯೋತಿ,ಪ್ರಧಾನ ಮಂತ್ರಿ ಜೀವನ ಸುರಕ್ಷ ಹಾಗೂ ಅಟಲ್ ಪೆನ್ಷನ್ ಯೋಜನೆಗಳ ಬಗ್ಗೆ ಮನ ಮುಟ್ಟುವಂತೆ ರೈತಬಾಂಧವರಿಗೆ ಹಾಗೂ ಗ್ರಾಮದ ಸಾರ್ವಜನಿಕರಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಇಂಡಿ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯ ಮುಖ್ಯ ವ್ಯವಸ್ಥಾಪಕರಾದ ಸುನೀಲ ಪರಿಮಳ,ವಿಜಯಪೂರ ಶಾಖೆ ವ್ಯವಸ್ಥಾಪಕರಾದ ಪಿ ಎಸ್ ಲಮಾಣಿ, ಇಂಡಿ ಶಾಖೆಯ ಕಿರಿಯ ವ್ಯವಸ್ಥಾಪಕರಾದ ಪ್ರಕಾಶ್ ಗುಜ್ಜಲಕರ, ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುನಂದಾ ವಾಲಿಕಾರ,ರೈತ ಮುಖಂಡರಾದ ಭೀಮರಾಯ ಹಿರಾಪೂರೆ, ಸಿದ್ದು ಸಾಹುಕಾರ ಮೇತ್ರಿ, ಗಂಗಪ್ಪ ಅಹಿರಸಂಗ, ಹಾಗೂ ರೈತರು ಮತ್ತು ಬ್ಯಾಂಕ್ ಸಿಬ್ಬಂದಿ ವರ್ಗ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
