ಸುರಪುರ: ಶ್ರೀ ಬಸವೇಶ್ವರ ಪತ್ತಿನ ಸಹಕಾರ ಬ್ಯಾಂಕ್ ಕೇಂದ್ರ ಶಾಖೆ ಸುರಪುರ ಇದಕ್ಕೆ ನೂತನವಾಗಿ ಸಂಘಟನಾ ಸಮಿತಿ ಸದಸ್ಯರನ್ನು ಬ್ಯಾಂಕಿನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ನೇಮಕ ಮಾಡಿದರು.
. ಇತ್ತೀಚಿಗೆ ನಡೆದ ಬಸವೇಶ್ವರ ಬ್ಯಾಂಕಿನ ಕಾರ್ಯಕಾರಿ ಸಭೆಯಲ್ಲಿ ಬ್ಯಾಂಕಿನ ಸಂಘಟನಾ ಸಮಿತಿಯ ಸದಸ್ಯರನ್ನಾಗಿ ವಿಜಯಕುಮಾರ ತಂದೆ ಸoಗನಬಸಪ್ಪ ಮದರಿ ಇವರನ್ನು ಅಧ್ಯಕ್ಷರು ಹಾಗೂ ಸದಸ್ಯರ ಸರ್ವಾನುಮತದಿಂದ ನೇಮಕ ಮಾಡಲಾಯಿತು.
ಇವರ ಆದೇಶ ಪ್ರತಿಯನ್ನು ಬಸವೇಶ್ವರ ಪತ್ತಿನ ಸಹಕಾರ ಶಾಖೆ ಕೊಡೆಕಲದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಎಚ್ ಸಿ ಪಾಟೀಲ್ ಹಾಗೂ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಸುರೇಶ್ ಸಜ್ಜನ್ , ಉಪಾಧ್ಯಕ್ಷರಾದ ವೀರೇಶ್ ದೇಶಮುಕ, ನಿರ್ದೇಶಕರಾದ ರವೀಂದ್ರ ಅಂಗಡಿ,ಪ್ರಕಾಶ್ ಅಂಗಡಿ ಕನ್ನಳ್ಳಿ, ಹಾಗೂ ಶಂಕರ್ ಗೌಡ ಜೇವರ್ಗಿ ಇವರ ಸಮ್ಮುಖದಲ್ಲಿ ಆದೇಶ ಪತ್ರವನ್ನು ನೀಡಿ ಸನ್ಮಾನ ಮಾಡಿದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷರು ಮಾತನಾಡಿ ಬ್ಯಾಂಕಿನ ಅಭಿವೃದ್ಧಿಯ ಸಲುವಾಗಿ ತಾವು ಸಂಘಟನಾತ್ಮಕವಾಗಿ ಕಾರ್ಯವನ್ನು ನಿರ್ವಹಿಸಿ ಬ್ಯಾಂಕಿನ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ಈ ಜವಾಬ್ದಾರಿಯನ್ನು ನೀಡಿರುವುದಕ್ಕಾಗಿ ನಾನು ಬ್ಯಾಂಕಿನ ಅಧ್ಯಕ್ಷರಿಗೆ ಹಾಗೂ ಸರ್ವ ಸದಸ್ಯರಿಗೂ ಸಮಾಜದ ಹಿರಿಯರಿಗೂ ವೀರಶೈವ ಸಮಾಜದ ಬಾಂಧವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ನನ್ನ ಜವಾಬ್ದಾರಿಯನ್ನು ನಾನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ವಿಜಯಕುಮಾರ್ ಮದರಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮುಖಂಡರು ಬ್ಯಾಂಕಿನ ಸಿಬ್ಬಂದಿ ವರ್ಗದವರು ಅನೇಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
