ಕರ್ನಾಟಕ ರಾಜ್ಯ ರೈತ ಸಂಘ ಪಟ್ಟಣ್ಣಯ್ಯ ಬಣ ವತಿಯಿಂದ ಇಂದು ಚಿಕ್ಬಳ್ಳಾಪುರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಸಮ್ಮೇಳನವನ್ನು ಆಯೋಜಿಸಲಾಗಿತ್ತು ಈ ಸಮ್ಮೇಳನದಲ್ಲಿ ರಾಜ್ಯ ಪದಾಧಿಕಾರಿಗಳು ಭಾಗವಹಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಘಟನೆಯ ಹೋರಾಟದ ರೂಪರೇಷೆಗಳನ್ನು ನಿರ್ಣಯ ಮಾಡಲಾಯಿತು. ದೇವನಹಳ್ಳಿ ತಾಲೂಕಿನ ಚನರಾಯಪಟ್ಟಣ ಹೋಬಳಿಯಲ್ಲಿ ನಿರಂತರವಾಗಿ ರೈತರು ಕಳೆದ ಎರಡುವರೆ ವರ್ಷಗಳಿಂದ ಹೋರಾಟ ನಡೆಸುತ್ತಿದ್ದು ಸುಮಾರು 1800 ಎಕರೆ ಜಮೀನನ್ನ ಕೆಡಿಬಿಐ ವಶಪಡಿಸಿಕೊಂಡಿದ್ದು ಇದು ನ್ಯಾಯಸಮ್ಮೇತವಲ್ಲ ಎಂದು ರೈತ ಸಂಘಟನೆಗಳು ಹೋರಾಟ ನಡೆಸುತ್ತಿದ್ದರು ಕಣ್ಮುಚ್ಚಿ ಕುಳಿತಿರುವಂತಹ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಉದ್ದೇಶದಿಂದ ದೇವನಹಳ್ಳಿ ಚಲೋ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು ಈ ಹೋರಾಟದಲ್ಲಿ ನಮ್ಮ ಸಂಘಟನೆಯು ಸಹ ಭಾಗವಹಿಸಿ ರೈತರಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ ಮತ್ತು ಜುಲೈ 2ನೇ ತಾರೀಕು ನಂದಿ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟದಲ್ಲಿ ರೈತರ ಪರವಾದ ತೀರ್ಮಾನಗಳು ಜಾರಿ ಮಾಡಬಹುದು ಎಂಬ ನಂಬಿಕೆ ನಮಗಿದೆ ಎಂದು ನೂತನವಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರಾಗಿರುವಂತಹ ಟಿಜಿ ಅರುಣ್ ಕುಮಾರ್ ಅವರು ತಿಳಿಸಿದರು. ಹಾಗೂ ಇನ್ನು ಮುಂದೆ ನಮ್ಮ ಸಂಘಟನೆಯಲ್ಲಿ ಅಡ್ಜಸ್ಟ್ಮೆಂಟ್ ರಾಜಕಾರಣ ನಡೆಯುವುದಿಲ್ಲ ಪ್ರಾಮಾಣಿಕವಾಗಿ ರೈತರ ಸಮಸ್ಯೆಗಳಿಗೆ ನ್ಯಾಯ ದೊರಕಿಸಿ ಕೊಡುವುದೇ ನಮ್ಮ ಗುರಿ. ನಿರಂತರವಾಗಿ ರೈತರನ್ನು ಶೋಷಿಸುತ್ತಿರುವ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಮ್ಮ ಜಿಲ್ಲೆಯಲ್ಲಿರುವ ಶಾಸಕರು ಮತ್ತು ಸಂಸದರು ರೈತರನ್ನ ನಿರ್ಲಕ್ಷಿಸುತ್ತಿದ್ದಾರೆ ಎಂದು ತಿಳಿಸಿದರು
