ಆಲಮೇಲ ತಾಲೂಕಿನ ಕಬ್ಬು ಕಟಾವ ಹಾಗೂ ಸಾಗಾಣಿಕೆ ದಾರರು ಸಂಘದ ಪದಾಧಿಕಾರಿಗಳಿಂದ ನಾವು ಕಳೆದ ವರ್ಷ ದಿನಾಂಕ. 28. 09. 2024 ರಂದು ಹಮ್ಮಿಕೊಂಡಿದ್ದ ಅನಿರ್ದಿಷ್ಟ ಅವಧಿ ಸತ್ಯಾಗ್ರದಲ್ಲಿ ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ಬಾಲಾಜಿ ಕಾರ್ಖಾನೆ ಯರಗಲ್ ತಾಲೂಕಿನ ಮುದ್ದೇಬಿಹಾಳ ಇವರ ನೀಡಿರುವಂತಹ ಹಣ ನೀಡಲು ನಿರ್ಧರಿಸಿರುವುದು. ಇರುತ್ತದೆ ಅದರಂತ ಅವರು 57 ರೂಪಾಯಿ ಗಳಂತೆ ಎರಡು (2)ಕಂತುಗಳಲ್ಲಿ ನೀಡಿದ್ದು ಇರುತ್ತದೆ. ಆದರೆ ಕೆಪಿಆರ್ ಕಾರ್ಖಾನೆಯವರು 57 ಮತ್ತು 28. 5 ರೂಪಾಯಿಗಳನ್ನು ಮಾತ್ರ ನೀಡುತ್ತಾರೆ ಮತ್ತು 28.5 ಇನ್ನುವರೆಗೂ ನೀಡಿರುವುದಿಲ್ಲ ಈ ವರ್ಷ ಕರಾರು ಬಾಂಡಗಳಲ್ಲಿ ಅನೇಕ ರೀತಿಯ ಷರತುಗಳನ್ನು ಹಾಕಿದ್ದು ಈ ಎಲ್ಲಾ ಷರತ್ತುಗಳಿಗೆ ವಾಹನ ಮಾಲೀಕರು ಒಪ್ಪಿಗೆ ಇರುವುದಿಲ್ಲ. ಈ ಕರಾರುಗಳಿಗೆ ಒಪ್ಪಿದರೆ ಮಾತ್ರ ಅಗ್ರಿಮೆಂಟ್ ಮಾಡಿಕೊಳ್ಳುತ್ತೇವೆ ಅಂಥಾ ಕಟಾವು ಹಾಗೂ ಸಾಗಾಣಿಕೆ ದಾರರಿಗೆ ಸತಾಯಿಸುತ್ತಿದ್ದಾರೆ.
ಆದ ಕಾರಣ ಎಲ್ಲಾ ಗಾಡಿಯ ಮಾಲೀಕರು ಸೇರಿ ದಿನಾಂಕ 16/6/2025 ರಂದು ಬೆಳಗ್ಗೆ 11 ಗಂಟೆಗೆ ಕಾರ್ಖಾನೆ ಅಧಿಕಾರಿಗಳಿಗೆ ನಮ್ಮ ಬೇಡಿಕೆಗಳ ಮನವಿಯನ್ನು ಸಲ್ಲಿಸಿ. ಮೂರು ದಿನಗಳವಾದರೂ ಯಾವುದೇ ಉತ್ತರ ಬಂದಿರುವುದಿಲ್ಲ.ಆದ ಕಾರಣ ದಿನಾಂಕ.23.6.2025 ರಂದು ಕಾರ್ಖಾನೆ ಆವರಣದ ಮುಂದುಗಡೆ ಆನಿರ್ದಿಷ್ಟವಧಿ ಧರಣಿ ಸತ್ಯಾಗ್ರ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಶ್ರೀ ಶಶಿಧರ್ ನಾಯ್ಕೋಡಿ ಅಧ್ಯಕ್ಷರು ಮಾಂತೇಶ್ ಕತ್ತಿ ಉಪಾಧ್ಯಕ್ಷರು ಮಹೇಶ್ ಹುನಳ್ಳಿ .ಕಾರ್ಯದರ್ಶಿ. ಕರಿಯಪ್ಪ ಹಿರೇ ಪೂಜಾರಿ ಬಸಪ್ಪ ಹಂಜಗಿ ರಾಜು ಮೇತ್ರಿ ನಬಿರರಸೂಲ ಸುಂಠಣ. ರಾಜಶೇಖರ.ಬಿರಾದರ.ಯಲ್ಲಪ್ಪ ಪೂಜಾರಿ.ಜಗದೇವಪ್ಪ ಹಲಕಟ್ಟಿ ಕನಸಿನ ಭಾರತ ಪತ್ರಿಕೆಗೆ ತಿಳಿಸಿದರು
ವರದಿ. ಉಮೇಶ ಕಟಬರ.
