“ಜಲದ ನೈಸರ್ಗಿಕ ಹರಿವಿಗೆ ತಡೆಯೊಡ್ಡಿದರೆ ಪ್ರಕೃತಿ ವಿಪತ್ತು ನಿರ್ವಣೆ ಕಾಯ್ದೆಯಡಿ ಕಠಿಣ ಕ್ರಮ”.
ಉಡುಪಿ:ಕಾಪು ತಾಲೂಕ ಪಾಂಗಳ ಗ್ರಾಮದ ಬೀಡು ಪ್ರದೇಶದಲ್ಲಿ ತೋಡನ್ನು ಬಂದ್ ಮಾಡಿ ನೈಸರ್ಗಿಕ ನೀರಿನ ಹರಿವಿಗೆ ತಡೆ ಒಡ್ಡಲಾಗಿತ್ತು. ಇದರಿಂದ ಅಕ್ಕಪಕ್ಕದ ಮನೆಗಳು ಜಲಾವೃತವಾಗಿ ತೊಂದರೆ ಉಂಟಾಗಿತ್ತು.
ತಕ್ಷಣ ಸ್ಪಂದಿಸಿದ ತಾಲ್ಲೂಕ ಆಡಳಿತ:
ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾದ ತಹಶಿಲ್ದಾರ್ ಡಾ.ಪ್ರತಿಭಾ ಆರ್
ಸರ್ಕಲ್ ಇನ್ಸ್ಪೆಕ್ಟರ್ ಜಯಶ್ರೀ, ಕಾಪು ಠಾಣಾಧಿಕಾರಿ ತೇಜಸ್ವಿ ಇವರ ನೆರವಿನಿಂದ ಸ್ಥಳಕ್ಕೆ ಧಾವಿಸಿ ಇನ್ನಂಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲಿನಿ ಶೆಟ್ಟಿಯವರ ಸಹಕಾರದಿಂದ ತಡೆಯೊಡ್ಡಿದ್ದ ಜಾಗವನ್ನು ಹಾರೆ-ಸುತ್ತಿಗೆಯಿಂದ ಒಡೆದು ತೆಗೆದು ನೀರಿನ ಹರಿವಿಗೆ ದಾರಿ ಮಾಡಿಕೊಟ್ಟಿದ್ದಾರೆ. ಇದರಿಂದ ನೆರೆ ಭೀತಿ ತಗ್ಗಿದೆ.
ಶಾಶ್ವತ ಪರಿಹಾರಕ್ಕೆ ಬೇಡಿಕೆ:
ಕಳೆದ ವರ್ಷವೂ ಇದೇ ಸಮಸ್ಯೆ ಉಂಟಾಗಿತ್ತು. ಆಗಲೂ ತಹಶಿಲ್ದಾರ್ ರವರು ಇದೇ ರೀತಿಯ ಮಾಡಿ ಪರಿಹಾರ ಮಾಡಿದ್ದರು. ಇದಕ್ಕೊಂದು ಶಾಶ್ವತ ಪರಿಹಾರ ಆಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶಾಶ್ವತ ತೋಡು ನಿರ್ಮಿಸುವ ಭರವಸೆ
ಗ್ರಾಮ ಪಂಚಾಯತಿಯ PDO ಚಂದ್ರಕಲಾ ರವರು ತಾವು ತೋಡು ನಿರ್ಮಿಸಲು ಸಿದ್ದರಿದ್ದೇವೆ ಆದರೆ ಪಟ್ಟಾ ಜಾಗದ ಮಾಲೀಕರು ಕಾಮಗಾರಿಗೆ ತಡೆ ಒಡ್ಡುತ್ತಿರುವುದರಿಂದ ತೋಡು ನಿರ್ಮಿಸಲು ಅಡ್ಡಿಯಾಗುತ್ತಿದೆ ಎಂದು ತಿಳಿಸಿದ್ದಾರೆ.
ತಹಶಿಲ್ದಾರ್ ಅಂತವರ ಮೇಲೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶೀಘ್ರದಲ್ಲೇ ಶಾಶ್ವತ ತೋಡು ನಿರ್ಮಿಸುವ ಭರವಸೆಯನ್ನು ತಹಶಿಲ್ದಾರ ನೀಡಿದ್ದಾರೆ.
ಪ್ರಕೃತಿ ವಿಪತ್ತು ನಿರ್ವಹಣಾ ಕಾಯಿದೆಯಡಿಯಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ತಹಶಿಲ್ದಾರ್ ಡಾ.ಪ್ರತಿಭಾ ಎಚ್ಚರಿಕೆ
ನೀರಿನ ನೈಸರ್ಗಿಕ ಹರಿವಿಗೆ ತಡೆಯೊಡ್ಡಿ ಜಲರಾಶಿಯುಂಟಾದರೆ ಅಂತಹವರ ಮೇಲೆ ಪ್ರಕೃತಿ ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಹಶಿಲ್ದಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ತಹಶಿಲ್ದಾರ್ ಡಾ.ಪ್ರತಿಭಾ ಆರ್
“ನೀರಿನ ನೈಸರ್ಗಿಕ ಹರಿವಿಗೆ ತಡೆ ಒಡ್ಡಿ, ಕೃತಕ ಜಲಪ್ರವಾಹಕ್ಕೆ ಕಾರಣವಾಗುವಂತಹವರ ಮೇಲೆ ಪ್ರಕೃತಿ ವಿಪತ್ತು ನಿರ್ವಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಎಲ್ಲರಿಗೂ ಈ ಭೂಮಿಯ ಮೇಲೆ ಬದುಕುವ ಹಕ್ಕು ಇದೆ. ಸ್ವಾರ್ಥಿಗಳಾಗದೆ ಸಮಷ್ಟಿಯ ಹಿತಕ್ಕೂ ಗಮನ ನೀಡಬೇಕು.
ಈ ಸಂದರ್ಭದಲ್ಲಿ ರೆವಿನ್ಯೂ ಇನ್ಸ್ಪೆಕ್ಟರ್ ಇಜ್ಜಾರ್ ಸಾಬಿರ್ ಮತ್ತು ಗ್ರಾಮಾಡಳಿತಾಧಿಕಾರಿ ಅರುಣ್ ಇದ್ದು ಸಮಸ್ಯೆ ಬಗೆಹರಿಸಲು ಸಹಕರಿಸಿದರು.
ವರದಿ:ಡಾ.ನಂದುಪೂಜಾರಿ
