ಸುರಪೂರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯಗಳಿಗೆ (P U C, I T I, Diploma,) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2025-26ನೇ ಸಾಲಿನ ಹಿಂದುಳಿದ ವರ್ಗ ಗಳ ಪ್ರವರ್ಗ-1,2ಎ 2ಬಿ 3ಎ 3ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗಳ ಹಾಗೂ ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಸುರಪುರ ತಾಲೂಕು ಹಿಂದುಳಿದ ವರ್ಗದ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ .
ಪ್ರವೇಶ ಪಡೆಯಲು ಇಚ್ಛೆ ಉಳ್ಳ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ವೆಬ್ಸೈಟ್ನಲ್ಲಿ l ಆನ್ ಲೈನ್ ಮೂಲಕ ಅರ್ಜಿ ಕೊನೆಯ ದಿನಾಂಕ:20-06-2025 ಇರುತ್ತದೆ.
ಅರ್ಜಿಯ ಪ್ರತಿ ಹಾಗೂ ಅಪ್ಲೋಡ್ ಮಾಡಲಾದ ದಾಖಲಾತಿಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಸಂಬಂಧ ಪಟ್ಟ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಿ ಸುರಪುರ ತಾಲೂಕು ಹಿಂದುಳಿದ ವರ್ಗದ ಕಲ್ಯಾಣ ಅಧಿಕಾರಿಗಳ ಕಚೇರಿ ಹಾಗೂ ವಸತಿ ನಿಲಯದ ಮೇಲ್ವಿಚಾರಕರಿಗೆ ಸಲ್ಲಿಸಬೇಕು.ಸ್ವೀಕೃತಿಯನ್ನು ಪಡೆಯಬೇಕು,ಹೆಚ್ಚಿನ ಮಾಹಿತಿಗಾಗಿ ಸುರಪುರ ತಾಲೂಕ ಹಿಂದುಳಿದ ವರ್ಗಗಳ ಕಾರ್ಯಾಲಯ ವನ್ನು ಹಾಗೂ(https://bcwd.karnataka.gov.in) ವೆಬ್ಸೈಟ್ ವನ್ನು ಸಂಪರ್ಕಿಸಬೇಕು ಎಂದು ತಿಳಿಸಿರುತ್ತಾರೆ ಒಂದು ವೇಳೆ ಅರ್ಜಿ ಸಲ್ಲಿಸಲು ತಾಂತ್ರಿಕ ದೋಷ ಉಂಟಾದಲ್ಲಿ ತಾಲೂಕ ಹಿಂದುಳಿದ ವರ್ಗಗಳ ಕಾರ್ಯಾಲಯಕ್ಕೆ ಅಗತ್ಯ ದಾಖಲಾತಿಗಳೊಂದಿಗೆ ಸಂಪರ್ಕಿಸ ಬೇಕು ಎಂದು ತಿಳಿಸಿದರು.
ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಸದುಪಯೋಗವನ್ನು ಪಡಿಸಿಕೊಂಡು ತಮ್ಮ ಉನ್ನತ ವಿದ್ಯಾಭಾಸವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ತಿಪ್ಪಾರೆಡ್ಡಿ ಮಾಲಿಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Category: LiveTV
ಕಿಂಡಿ ಅಣೆಕಟ್ಟಿಗೆ ತಹಶಿಲ್ದಾರ್ ಡಾ.ಪ್ರತಿಭಾ ಭೇಟಿ- ನೆರೆ ಮುಂಜಾಗ್ರತಾ ಕ್ರಮಗಳ ಪರಿಶೀಲನೆ
ಉಡುಪಿ:ಕಾಪು ತಾಲ್ಲೂಕು ಪ್ರತಿವರ್ಷ ಮುಂಗಾರು ಮಳೆಯ ಸಂದರ್ಭದಲ್ಲಿ ಉಡುಪಿ ಜಿಲ್ಲೆ ಕಾಪು ತಾಲೂಕು ಫಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಕೂರು ಗ್ರಾಮದ ಪುಂಜಮಾರು ಹಾಗೂ ಪಲಿಮಾರು ಗ್ರಾಮದ ಕಿಂಡಿ ಅಣೆಕಟ್ಟು ಪ್ರದೇಶಕ್ಕೆ ಇಂದು ತಹಶೀಲ್ದಾರ್ ಪ್ರತಿಭಾ ಆರ್ ಭೇಟಿ ನೀಡಿ ಪರಿಶೀಲಿಸಿದರು. ಪ್ಲಾಸ್ಟಿಕ್, ಮರದ ಕೊಬೆ ಮುಂತಾದ ಘನ ತ್ಯಾಜ್ಯಗಳು ಕಿಂಡಿ ಅಣೆಕಟ್ಟು ನೀರು ಹರಿವಿನ ಜಾಗದಲ್ಲಿ ಜಮಾವಣೆಗೊಂಡಿದ್ದು ನೀರಿನ ರಭಸಕ್ಕೆ ತಡೆಯೊಡ್ಡುತ್ತಿವೆ. ಕೂಡಲೇ ಈ ತ್ಯಾಜ್ಯವನ್ನು ಸ್ವಚ್ಚಗೊಳಿಸಿ ನೀರಿನ ಹರಿವಿಗೆ ಅನುವು ಮಾಡಿಕೊಡಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಫಲಿಮಾರು ಪಂಚಾಯತ್ ವ್ಯಾಪ್ತಿಯ ಮೂಡುಪಲಿಮಾರು ಹಾಗೂ ಇನ್ನಿತರ ಪ್ರದೇಶಗಳಲ್ಲಿ ಪ್ರತಿವರ್ಷ ನೆರೆ ಭೀತಿ ಇದ್ದೇ ಇರುತ್ತದೆ. ಅದಕ್ಕೆ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಕಿಂಡಿ ಅಣೆಕಟ್ಟಿನ ಹಲಗೆಗಳನ್ನು ಈಗಾಗಲೇ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ತೆರವುಗೊಳಿಸಿರುತ್ತಾರೆ. ಪ್ರವಾಹ ಭೀತಿ ಇದರಿಂದ ಕೊಂಚ ತಗ್ಗಿದೆ. ತಹಶೀಲ್ದಾರ್ ಪ್ರತಿಭಾ ಆರ್ ರವರು ಸಣ್ಣ ನೀರಾವರಿ ಇಲಾಖೆಯ ಕಾರ್ಯ ನಿರ್ವಾಹಕ ಇಂಜಿನಿಯರ್ ರವರಿಗೆ ಫಲಿಮಾರು ಕಿಂಡಿ ಅಣೆಕಟ್ಟಿನ ಪ್ರದೇಶದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿರುತ್ತಾರೆ. ಫಲಿಮಾರು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಆಸಿಪಾಸಿನ ತೋಡುಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲು ಸಲಹೆ ನೀಡಿರುತ್ತಾರೆ.ಅಲ್ಲಿನ ಆಸುಪಾಸಿನ ಮನೆಗಳಿಗೆ ಭೇಟಿ ನೀಡಿ ಮಾನ್ಯ ತಹಶಿಲ್ದಾರ್ ಪ್ರತಿಭಾ ಪರಿಶೀಲನೆ ನಡೆಸಿ ಅಲ್ಲಿನ ಮನೆಗಳವರಿಗೆ ನೆರೆ ಕುರಿತು ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿದ್ದಾರೆ. “ನಾವಿದ್ದೇವೆ ನಿಮ್ಮ ಜೊತೆಗೆ” ಎಂಬ ಭರವಸೆ ನೀಡಿದ್ದಾರೆ. ತಹಶಿಲ್ದಾರ್ ಪ್ರತಿಭಾ ಆರ್ ರವರು ಕಾಪು ತಾಲ್ಲೂಕನ್ನು ಮುಂಗಾರು ಸುರಕ್ಷತಾ ತಾಲ್ಲೂಕಾಗಿ ಮಾಡಲು ಪಣ ತೊಟ್ಟಿದ್ದಾರೆ. ತಾಲ್ಲೂಕಿನಾದ್ಯಂತ ಸಂಚರಿಸಿ ನೆರೆ ಹಾವಳಿ ಉಂಟಾಗಬಹುದಾದ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುತ್ತಿದ್ದಾರೆ. ಕಡಲ್ಕೊರೆತ, ತೋಡುಗಳ ಸ್ವಚ್ಚತೆ, ಚರಂಡಿಗಳ ಸ್ವಚ್ಚತೆ, ಸೇತುವೆಗಳ ಸುರಕ್ಷತೆ ಇತ್ಯಾದಿಗಳ ಬಗ್ಗೆ ಗಮನಿಸುತ್ತಿದ್ದಾರೆ. ತಾಲ್ಲೂಕಿನ ಜನತೆಗೆ “ನಾವಿದ್ದೇವೆ ನಿಮ್ಮೊಂದಿಗೆ… ನಿರಾತಂಕವಾಗಿರಿ” ಎಂಬ ಸಂದೇಶ ನೀಡುತ್ತಿದ್ದಾರೆ.
ತಹಶೀಲ್ದಾರ್ ಪ್ರತಿಭಾ ಆರ್ ಹೇಳಿಕೆ:
“ಫಲಿಮಾರು ವ್ಯಾಪ್ತಿಯ ಕಿಂಡಿ ಅಣೆಕಟ್ಟಿನ ನೀರು ಹರಿಯುವ ಸ್ಥಳಗಳಲ್ಲಿ ಕಸ ಕಡ್ಡಿ ಜಮಾವಣೆಗೊಂಡಿದೆ. ಇದರಿಂದ ನೀರಿನ ಹರಿವಿಗೆ ತಡೆಯೊಡ್ಡಿದಂತಾಗಿದೆ. ಇದರಿಂದ ಪ್ರವಾಹ ಭೀತಿ ಎದುರಾಗಬಹುದು. ಆದರಿಂದ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಮತ್ತು ಅಧಿಕಾರಿಗಳಿಗೆ ಕೂಡಲೇ ಸ್ವಚ್ಛಗೊಳಿಸುವಂತೆ ಸೂಚನೆ ನೀಡಲಾಗಿದೆ. ತಾಲೂಕಿನಾದ್ಯಂತ ನೆರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಾಲ್ಲೂಕು ಆಡಳಿತ ಜನರ ಸುರಕ್ಷತೆಗಾಗಿ ಸದಾ ಸಿದ್ಧವಿದೆ. ತುರ್ತು ಸಂದರ್ಭಗಳಲ್ಲಿ ಜನರು ಕಂಟ್ರೋಲ್ ರೂಂ ಗೆ ಕರೆ ಮಾಡಿ ಸಹಾಯ ಪಡೆಯಬಹುದು “ತಾಲ್ಲೂಕು ಆಡಳಿತ ನೆರೆ ಪರಿಸ್ಥಿತಿ ಎದುರಿಸಲು ಸರ್ವ ಸನ್ನದ್ಧವಾಗಿದೆ. ಬೋಟುಗಳನ್ನು ರೆಡಿ ಇಟ್ಟುಕೊಳ್ಳಲಾಗಿದೆ. ನುರಿತ ಈಜುಗಾರರ ತಂಡ ಸದಾ ಸೇವೆಗೆ ಲಭ್ಯವಿದೆ. ತಹಶಿಲ್ದಾರ್ ಕಚೇರಿ ಕಂಟ್ರೋಲ್ ರೂಮ್ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ (0820-2551444). ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿ ಕರೆ ಮಾಡಿ ಸಹಾಯ ಪಡೆಯಬಹುದು. ಈ ಸಂದರ್ಭದಲ್ಲಿ ರೆವಿನ್ಯೂ ಇನ್ಸ್ಪೆಕ್ಟರ್ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿ ಸುನಿಲ್, ಸ್ಥಳೀಯರಾದ ಇಸ್ಮಾಯಿಲ್ ಹಾಜರಿದ್ದರು.
ಉಡುಪಿ ವರದಿ:ಡಾ.ನಂದುಪೂಜಾರಿ
ಸಮಾಜದ ಪ್ರಗತಿಪರ ಚಿಂತಕರು ಚಲನಚಿತ್ರ ನಟ ಚೇತನ್
ಹಾವೇರಿ ಸಮಾಜದ ಪ್ರಗತಿಪರ ಚಿಂತಕರು ಹಾಗೂ ಈ ಸಭೆಯ ಮುಖ ಅತಿಥಿಯಾದ ಚಲನಚಿತ್ರ ನಟ ಚೇತನ್ ಅವರು ಬಾಗಿವಹಿಸಿ ಸಮಾಜದ ಏಳುಬೀಳುಗಳ ಬಗ್ಗೆ ಹಾಗೂ ಸಂಘಟನೆ ವಿಚಾರ ರಾಜಕೀಯ ಪ್ರಸಂಗ ಸಂವಿಧಾನ ಆಸೆ ಕಾನೂನು ಹೋರಾಟ ಹೀಗೆ ಹತ್ತು ಹಲವಾರು ವಿಚಾರಗಳನ್ನು ಹಂಚಿಕೊಡರು
ಈ ಸಭೆ ಅಧ್ಯಕ್ಷತೇ ವಹಿಸಿದ ಶ್ರೀ ಉಡಚಪ್ಪ ಯಲ್ಲಪ್ಪ ಮಾಳಗಿ
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ರಾಜ್ಯಾಧ್ಯಕ್ಷರು ಎಲ್ಲಾ ಪ್ರಗತಿಪರ ಸಮಾಜದ ಏಳಿಗೆಗಾಗಿ ಶ್ರಮಿಸಬೇಕು ಮತ್ತು ಎಲ್ಲಾ ಸಮುದಾಯದ ಜನರನ್ನು ಒಗ್ಗೂಡಿಸಬೇಕು ಎಂದು ಈ ಸಂದರ್ಭದಲ್ಲಿ ಹಲವಾರು ರೀತಿಯ ಮುಖಂಡರಾದ ಮಂಜಪ್ಪ ನಾಗಪ್ಪ ಮರೋಳ.ಅಶೋಕ್ ಮರಿಯಣ್ಣನವರ್. ಹನುಮಂತಪ್ಪ ಸಿ ಡಿ. ಹೊನ್ನಪ್ಪ ತಗಡಿಮನಿ.ವಿಭೂತಿ ಶೆಟ್ಟಿ. ಹನುಮಂತಪ್ಪ ಹೌಸಿ. ಮಹೇಶಪ್ಪ ಶಾಖರ. ಬಸವಣ್ಣಪ್ಪ ಹಳ್ಳಳ್ಳಿ. ಜಗದೀಶ್ ಹರಿಜನ . ದೇವರಾಜ್ ಮಡಿವಾಳರ್. ರೇಣುಕಾ ಬಡಕಣ್ಣನವರ್.ಇನ್ನೂ ಮುಂತಾದವರು ಭಾಗವಹಿಸಿದ್ದರು
ಎನ್ಸಿಸಿ ವಿದ್ಯಾರ್ಥಿಗಳಿಂದ ಸೈನಿಕರಿಗೆ ಮನೋಸ್ಥೈರ್ಯ ತುಂಬ ವ ಉದ್ದೇಶದಿಂದ ತಿರಂಗ ಯಾತ್ರೆ
ಚಿಕ್ಕಬಳ್ಳಾಪುರದ ನಾಗಾರ್ಜುನ ಕಾಲೇಜಿನ ಎನ್ಸಿಸಿ ವಿದ್ಯಾರ್ಥಿಗಳಿಂದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಬೆಂಬಲಿಸುತ್ತ ಸೈನಿಕರಿಗೆ ಮನೋಸ್ಥೈರ್ಯ ತುಂಬ ವ ಉದ್ದೇಶದಿಂದ ತಿರಂಗ ಯಾತ್ರೆಯನ್ನು ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಿಂದ ಪ್ರಾರಂಭವಾಗಿ. ಚಿಕ್ಕಬಳ್ಳಾಪುರದ ಹೃದಯ ಭಾಗದಲ್ಲಿರುವಂತ ಟೌನ್ ಹಾಲ್ ಸರ್ಕಲ್ ಬಳಿ ಮುಕ್ತಾಯವಾಯಿತು ಈ ಒಂದು ಯಾತ್ರೆಯಲ್ಲಿ ನಾಗಾರ್ಜುನ ಕಾಲೇಜಿನ 80 ಜನ ಎನ್ ಸಿ ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು ಏನ್ ಸಿ ಸಿ ಅಧಿಕಾರಿಗಳಾದಂತಹ ಮಹಮ್ಮದ್ ಸಾಕೀರ್ ಅವರು ಮಾತನಾಡುತ್ತಾ ದೇಶ ಸೇವೆಯಲ್ಲಿ ಯುವಕರನ್ನು ತೊಡಗಿಸಿಕೊಳ್ಳುವಂತಹ ಅವಕಾಶ ಎನ್ ಸಿ ಸಿ ಎಲ್ಲಿದೆ. ದೇಶ ರಕ್ಷಣೆಗೆ ನಾವು ಸದಾ ಸಿದ್ಧರಿರುತ್ತೇವೆ ನಮಗೆ ಅವಕಾಶ ನೀಡಿದರೆ ಭಾರತೀಯ ಸೈನಿಕರ ಜೊತೆ ಸೇರಿ ದೇಶದ ಪರ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ನಾಗಾರ್ಜುನ ಕಾಲೇಜಿನ ಮೊಹಮ್ಮದ್ ಸಾಕೀರ್. ಗೋವರ್ಧನ್. ಶ್ರೀ ರಾಮ್ . ಶ್ರೀಮತಿ ಗೀತಾಂಜಲಿ ಮತ್ತು ಮನ್ಸೂರ್ ಮುಂತಾದ ಸಿಬ್ಬಂದಿ ಹಾಜರಿದ್ದರು
ಸಿರುಗುಪ್ಪ ಜೋಳ ಖರೀದಿ ಕೇಂದ್ರದಲ್ಲಿ ಜೋಳ ಸಂಪೂರ್ಣ ಮೊಳಕೆಹೊಡೆದ ಜೋಳ ಅಸ್ತವ್ಯಸ್ತವಾಗಿದ್ದು ರೈತರಿಗೆ ಅನ್ಯಾಯ.
ಸಿರುಗುಪ್ಪ ನಗರದಲ್ಲಿ ಜೋಳ ಖರೀದಿ ಕೇಂದ್ರದಲ್ಲಿ ಸಂಪೂರ್ಣವಾಗಿ ಹಸ್ತವ್ಯಸ್ತವಾಗಿದ್ದು ರೈತರಿಗೆ ತುಂಬಾ ತೊಂದರೆ ಅನುಭವಿಸಿದ್ದು ಮಾನ್ಯ ಮಾಜಿ ಶಾಸಕರಾದ ಎಂ ಎಸ್ ಸೋಮಲಿಂಗಪ್ಪ ಅವರು ಭೇಟಿ ನೀಡಿ ಅಲ್ಲಿನ ರೈತರಿಗೆ ಅವ್ಯವಸ್ಥೆಗಳನ್ನು ಗಮನಿಸಿ ರೈತರು ತಂದಿರ್ತಕ್ಕಂತ ಜೋಳವನ್ನು ಬೇಗನೆ ಖರೀದಿ ಮಾಡಬೇಕೆಂದು ರಾಜ್ಯ ಹೆದ್ದಾರಿಯನ್ನು ಎರಡು ಗಂಟೆಗಳ ಕಾಲ ತಡೆದು ಪ್ರತಿಭಟನೆ ಮಾಡಲಾಯಿತು ರೈತರು ತಂದಂತಹ ಜೋಳದ ಚೀಲಗಳು ಮಳಿಗೆ ಸಂಪೂರ್ಣವಾಗಿ ಮೊಳಕೆ ಹೊಡೆದಿದ್ದು ರೈತರು ಕಂಗಾಲಾಗಿದ್ದಾರೆ ತಾಲೂಕು ದಂಡಾಧಿಕಾರಿಗಳಾದ ನರಸಪ್ಪ ಅವರು ಮತ್ತು ಬಳ್ಳಾರಿ ಅಡಿಷನಲ್ ಎಸ್ಪಿ ನವೀನ್ ಕುಮಾರ್ ಅವರು ಸ್ಥಳಕ್ಕೆ ಆಗಮಿಸಿ ಇನ್ನು ಎರಡು ದಿನಗಳಲ್ಲಿ ಸಂಪೂರ್ಣವಾಗಿ ರೈತರ ತಂದಂತಹ ಜೋಳವನ್ನು ತೆಗೆದುಕೊಳ್ಳುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ ಒಂದು ವೇಳೆ ಇನ್ನೂ ಎರಡು ದಿನಗಳಲ್ಲಿ ರೈತರ ಜೋಳವನ್ನು ಬೇಗನೆ ಖರೀದಿ ಮಾಡದೆ ಇದ್ದಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಮಾಜಿ ಶಾಸಕರಾದ ಎಂ ಎಸ್ ಸೋಮಲಿಂಗಪ್ಪ ಅವರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ತಾಲೂಕು ಅಧ್ಯಕ್ಷರಾದ ಕುಂಟನಹಳ್ ಮಲ್ಲಿಕಾರ್ಜುನ ಸ್ವಾಮಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಎಂ ಎಸ್ ಸಿದ್ದಪ್ಪ,ಮಹಾದೇವ,ರಾಮಕೃಷ್ಣ ವೈ ಡಿ ವೆಂಕಟೇಶ ಹಾಗೂ ನೂರಾರು ಜನ ರೈತ ಮುಖಂಡರು ಇದ್ದರು.
ವರದಿ ಶೇಖರ್ ಹೆಚ್
ವೈದ್ಯಕೀಯ ವಿದ್ಯಾಭ್ಯಾಸಕ್ಕೆ “ಅರಿವು ವಿದ್ಯಾಭ್ಯಾಸ ಯೋಜನೆಯಡಿ” ಸಾಲ ಸೌಲಭ್ಯ
ಹಾಸನ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 2025-26ನೇ ಸಾಲಿಗೆ ಆಯ್ಕೆಯಾಗುವ, ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಹಾಗೂ ಆಂಗ್ಲೋ ಇಂಡಿಯನ್ ಜನಾಂಗದ ವಿದ್ಯಾರ್ಥಿಗಳಿಗೆ ‘ಅರಿವು’ ವಿದ್ಯಾಭ್ಯಾಸ ಯೋಜನೆಯಡಿಯಲ್ಲಿ ವೈದ್ಯಕೀಯ (ಎಂ.ಬಿ.ಬಿ.ಎಸ್) ಬಿಡಿಎಸ್, ಬಿ.ಇ/ಬಿ.ಟೆಕ್ ಬ್ಯಾಚುರಲ್ ಆಫ್ ಆರ್ಕಿಟೆಕ್ಚರ್, ಬಿ.ಆಯುಷ್, ಫಾರ್ಮಸಿ, ಕೃಷಿ ವಿಜ್ಞಾನ ಮತ್ತು ಪಶುವೈದ್ಯಕೀಯ ಇಂತಹ ಕೋರ್ಸ್ಗಳಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ “ಅರಿವು ವಿದ್ಯಾಭ್ಯಾಸ ಯೋಜನೆಯಡಿ” ಸಾಲ ಸೌಲಭ್ಯ ನೀಡಲಾಗುವುದು. ಸಾಲವನ್ನು ಪಡೆಯಲು ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ, ಆನ್ಲೈನ್ ಅರ್ಜಿಯ ಹಾರ್ಡ್ ಕಾಪಿ ಮತ್ತು ದಾಖಲಾತಿಗಳನ್ನು ಜಿಲ್ಲಾ ಕಚೆÃರಿಗೆ ನೇರವಾಗಿ ಸಲ್ಲಿಸುವುದು, ಅರ್ಜಿ ಸಲ್ಲಿಸಲು ಮೇ.23 ಕೊನೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ (ನಿ) ಮೌಲಾನಾ ಆಜಾದ್ ಭವನ, 1ನೇ ಮಹಡಿ, ಆಕಾಶವಾಣಿ ಕ್ವಾಟ್ರಸ್ ಹಿಂಭಾಗ, ಸಾಲಗಾಮೆ ಮುಖ್ಯ ರಸ್ತೆ, ಶ್ರೀ ವಿದ್ಯಾ ಗಣಪತಿ ದೇವಸ್ಥಾನದ ಅಡ್ಡರಸ್ತೆ, ಮಲ್ನಾಡ್ ಇಂಜಿನಿಯರಿಗ್ ಕಾಲೇಜ್ ಹತ್ತಿರ, ಹಾಸನ-573202 ಇಲ್ಲಿಗೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ. ಅರ್ಜಿಗಳನ್ನು ಆನ್ಲೈನ್ನಲ್ಲಿ ಸಲ್ಲಿಸುವುದು, ಜಿಲ್ಲಾ ಕಚೇರಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಮೇ.23 ಆಗಿರುತ್ತದೆ. ಕಚೇರಿ ದೂರವಾಣಿ ಸಂಖ್ಯೆ:08172-246333 ಆಗಿರುತ್ತದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಕಚೆರಿಗೆ ಸಲ್ಲಿಸಬೆಕಾದ ದಾಖಲಾತಿಗಳು: ಆನ್ಲೈನ್ನಲ್ಲಿ ಸಲ್ಲಿಸಿದ ಮೂಲ ಅರ್ಜಿ, ಆಧಾರ್ ಕಾರ್ಡ್, ಪಡಿತರ ಚೀಟಿಯ ಜೆರಾಕ್ಸ್ ಪ್ರತಿ, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಮಾರ್ಕ್ಸ್ ಕಾರ್ಡ್ ಜೆರಾಕ್ಸ್ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ವಾರ್ಷಿಕ ಆದಾಯ 8,00,000/- ರೂ.ಗಳಒಳಗಿರಬೇಕು) ಪರೀಕ್ಷೆ ಪ್ರವೇಶ ಪತ್ರದ ಪ್ರತಿ, ಕನಿಷ್ಠ 100 ರ ಛಾಪಾಕಾಗದದಲ್ಲಿ ಮುಚ್ಚಳಿಕೆ ಪತ್ರ ವಿದ್ಯಾರ್ಥಿ ಹಾಗೂ ಪೋಷಕರ ಭಾವ ಚಿತ್ರ -2.
ವರದಿ ಪರ್ವಿಜ್ ಅಹಮದ್ ಹಾಸನ
ಡಾ. ಫಾರುಕ್ ಮಣ್ನೂರ ರಾಜಕೀಯಕ್ಕೆ ಬರಬೇಕು : ಕಮಕನೂರ
ಅರ್ಥಪೂರ್ಣವಾಗಿ ಜನ್ಮದಿನ ಆಚರಿಸಿಕೊಂಡ ಡಾ. ಫಾರುಕ್ ಮಣ್ಣೂುರ
ಡಾ. ಫಾರುಕ್ ಮಣ್ನೂರ ಜನ್ಮದಿನ : ಸಮಾಜಿಕ ಕಾರ್ಯಕ್ರಮ ಆಯೋಜನೆ ಡಾ.ಫಾರುಕ್ ಮಣ್ಣೂರ ಹುಟ್ಟುಹಬ್ಬ: ಸೇವಾ ಸಂಕಲ್ಪ ದಿವಸ
ಕಲಬುರಗಿ:ಡಾ.ಸಿ.ಎನ್.ಮಂಜುನಾಥ ಅವರು ಹೃದಯ ತಜ್ಙರಾಗಿ ಅನೇಕ ಬಡ ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡಿ ಜನರ ಪ್ರೀತಿ ವಿಶ್ವಾಸ ಸಂಪಾದಿಸಿ ಜನರ ಆಶಿರ್ವಾದದಿಂದ ಲೋಕಸಭೇಗೆ ಆಯ್ಕೆ ಆದರು ಅದೆ ಮಾದರಿಯಲ್ಲಿ ಡಾ. ಫಾರುಕ್ ಮಣ್ಷೂರ ಅವರು ನೀವು ಕೂಡ ರಾಜಕೀಯಕ್ಕೆ ಬಂದು ಬಡ ಜನರ ಸೇವೆ ಮಾಡಬೇಕು ನಮ್ಮ ಬೆಂಬಲ ಸಹಾಕಾರ ಸದಾ ಇರುತ್ತೇ ಎಂದು ಡಾ.ಫಾರುಕ್ ಮಣ್ಣೂರ ಅವರಿಗೆ ವಿಧಾನ ಪರಿಷತ ಸದಸ್ಯ ತಿಪ್ಪಣಪ್ಪ ಕಮಕನೂರ ರಾಜಕೀಯಕ್ಕೆ ಅಹ್ವಾನಿಸಿದ್ದರು.
ಕಲಬುರಗಿ ನಗರದ ಸೇಡಂ ರಸ್ತೆಯಲ್ಲಿರುವ ಕೇತಕಿ ಗಾರ್ಡನನಲ್ಲಿ ಡಾ. ಫಾರುಕ ಮಣ್ಣೂರ ಅಭಿಮಾನಿ ಬಳಗದಿಂದ ಡಾ.ಫಾರುಕ ಮಣ್ಣೂರ ಅವರ 38ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಸಂಕಲ್ಪ ದೀವಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಿಮ್ಮಂತವರು ಜನಪರ, ಬಡವರ ಪರ , ಹಿಂದೂಳಿದವರ ಪರ ಕಾಳಜಿವುಳ್ಳವರು ರಾಜಕೀಯಕ್ಕೆ ಬಂದರೆ ಜನರಿಗೆ ಸಾಮಜಿಕ ನ್ಯಾಯ ನೀಡಲು ಸಾಧ್ಯ ರಾಜಕೀಯ ಯಾರಪ್ಪನ ಆಸ್ತಿಇಲ್ಲ ಎಂದು ಹೇಳಿದ್ದರು.
ಜನ್ಮದಿನದ ಪ್ರಯುಕ್ತ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ 160 ಹೆಣ್ಣು ಮಕ್ಕಳ 18 ವರ್ಷಗಳವರೆಗೆ ಅವರ ಕಂತನ್ನು ಪಾವತಿಸುತ್ತಿದ್ದಿರಿ, 2025 ನೆ ಸಾಲಿನಲ್ಲಿ ಉತ್ತಮವಾಗಿ ತೇರ್ಗಡೆಯಾದ 10 ಅನಾಥ ಹೆಣ್ಣು ಮಕ್ಕಳಿಗೆ ತಲಾ ರೂ.10000- ವಿದ್ಯಾರ್ಥಿವೇತನ ನೀಡುರಿವುದು, IAS/ KAS ವಿದ್ಯಾರ್ಥಿಗಳಿಗೆ ಪುಸ್ತಕಗಳ ವಿತರಣೆ ಮಾಡಿರುವುದು, ಕಲಬುರಗಿ ಜಿಲ್ಲೆಯ 10 ಜನ ವಿಧವೆಯರಿಗಾಗಿ ಬಟ್ಟೆ ಹೊಲಿಯುವ ಯತ್ರ ವಿತರಣೆ , ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 07 ಜನ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸೇರಿದಂತೆ ಅನೇಕ ಬಡವರ ಪರ ಕಾಳಜಿ ವುಳ್ಳಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.
ಮಣ್ಣೂರ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಮಣ್ಣೂರ ಮಾತನಾಡಿ ಇಂದು ಪ್ರತಿಯೊಬ್ಬ ಪೋಷಕರು ಹೇಣ್ಣು ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾವಂತರಾಗಿ ಮಾಡಿದಾರೆಆ ಹೇಣ್ಣು ಮಗು ಇಡಿ ಕುಟುಂಬಕ್ಕೆ ವಿದ್ಯಾವಂತರನ್ನಾಗಿ ಮಾಡುತ್ತದೆ , ಆದಕರಣ ಹೇಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರತಿಯೊಬ್ಬರು ಪ್ರೊಸ್ತಹಿಸಬೇಕು , ಇಂದು ನಾನು ಹೇಣ್ಣುನ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡುತ್ತಿದ್ದೆನೆ ಸುಮಾರು 15 ವರ್ಷದ ಹಿಂದೆ ನಾನು ಕೂಡ ಆನ್ ಲೈನ್ ಸೆಂಟರ್ ನಲ್ಲಿ ನನ್ನ ವಿದ್ಯಾಭ್ಯಾಸಕ್ಕೆ ಸ್ಕಾಲರ್ ಶಿಪ್ ಗಾಗಿ ನೊಂದಾಯಿಸಿಕೊಂಡಿದೆ ಆದಕಾರಣ ಸಾಧನೆ ಛಲ ಎಲ್ಲಾ ವಿದ್ಯಾರ್ಥಿಗಳ ಬಳಿ ಇರಬೇಕು ಇಂದು ನೀವು ಕೂಡ ಮುಂದೆ ಬೆರೆ ವೊದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಬೇಕು , ಜನ್ಮದಿನವನ್ನು ಬಡವರಿಗೆ ಸಹಾಯ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದು ತೃಪ್ತಿ ತಂದಿದೆ ಎಂದರು. ಮಣ್ಣುರ ಆಸ್ಪತ್ರೆ ಪ್ರಾರಂಭವಾದಗಿನಿಂದ ನಾನು ಕಲಬುರಗಿ ಜಿಲ್ಲೆಯ 750 ಕ್ಷಯ ರೋಗಿಗಳಿಗೆ ದತ್ತು ಪಡೆದು ಪೌಷ್ಠಿಕ ಆಹರ ವಿತರಣೆ ಮಾಡಲಾಗುತ್ತಿದೆ, ಕಲಬುರಗಿ ಜಿಲ್ಲಾದ್ಯಂತ ಉಚಿತವಾಗಿ ಕುಡಿಯುವ ನೀರು ಪೂರೈಸಲಾಗುತ್ತಿದೆ, ಮಧುಮೇಹ ಮುಕ್ತ ಕಲಬುರಗಿ ಉದ್ದೇಶದಿಂದ ಉಚಿತವಾಗಿ ಮಧೂಮೇಹ ತಪಾಸಣೆ ಅಭೀಯಾನ ಹಮ್ಮಿಕೋಳ್ಳಲಾಗಿದೆ , ಕಲಬುರಗಿ ಜಿಲ್ಲೆಯ ಸುಮಾರು 360 ಬಡ ಹೇಣ್ಣುಿ ಮಕ್ಕಳಿಗೆ ಸುಕನ್ಯ ಸಮೃದ್ದಿ ಯೋಜನೆ ಅಡಿಯಲ್ಲಿ ದತ್ತು ಪಡೆದು 18 ವರ್ಷಗಳ ವರೆಗೆ ಅವರ ಹಣದ ಕಂತ್ತನ್ನು ಆಸ್ಪತ್ರೆಯಿಂದ ಪಾವತಿಸಲಾಗುತ್ತಿದೆ ಎಂದು ತಿಳಿಸಿದ್ದರು. ಈ ಸಂದರ್ಭದಲ್ಲಿ ಜನಾಬ ಮೌಲಾನಾ ಅಲ್ತಾಫ ಪಟೇಲ್ ಸಾಹೆಬ್ , ಸೆಟ್ ಮೇತಿ ಚರ್ಚನ ಫಾಧರ ಸ್ಟೇನಿ ಲೊಬೊ, ಬೆಳಮಗಿಯ ಜ್ಞಾನ ಭೂಮಿ ಬುದ್ಧ ವಿಹಾರದ ಭೋದಿ ಭಂತೆ ಅಮರ ಜ್ಯೋತಿ, ಶ್ರೀ ಮೌನೇಶ್ವರ ಮಠ ಗಂಜಲ ಖೇಡದ ಪೂಜ್ಯ ಶ್ರೀ ನಾಗೇಶ ಮಾಣಿಕ ಅಪ್ಪಾಜಿ, ಪಾಳಾ ಸಂಸ್ಥಾನ ಮಠದ ಪ.ಪೂಜ್ಯ ಶ್ರೀ ಗುರುಮೂರ್ತಿ ಶಿವಾಚರ್ಯರು, ಶಾಸಕಿ ಖನಿಜ್ ಫಾತಿಮಾ, ಮಾಜಿ ಜಿ.ಪಂ ಅಧ್ಯಕ್ಷರಾದ ನೀತಿನ ಗುತ್ತೇದಾರ, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ,ಬಾಬುಮಿಯ್ಯಾ ಮಣ್ಣೂರ, ನಿಲಂಕಠರಾವ ಮೂಲಗೆ, ಪತ್ರಕರ್ತರಾದ ಬಾಬುರಾವ ಯಡ್ರಾಮಿ. ಡಿ.ಹೆಚ್.ಓ ಆರಣಬಸಪ್ಪ ಖ್ಯಾತನಾಳ, ಶರಣಬಸಪ್ಪ ಖೇಣಿ, ಉದಯ ಪಾಟೀಲ್, ಧರ್ಮರಾಜ ಕಲ್ಲಹಿಪಪ್ರಗಾ, ಅಲ್ಲಮಪ್ರಭು ದೇಶಮುಖ, ಹರ್ಷ, ಅಮೀರ ನಿಂಭಾಳಕರ್.ಸಂಜು ಪಾಟೀಲ್, ಮತೀನ ಅಲಿ, ಇಸ್ಮಾಯಿಲ್, ರಾಜು ಕಂಬಳಿಮಠ, ಮಂಜುನಾಥ ಕಂಬಳಿಮಠ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ. ಫಾರುಕ್ ಮಣ್ಣೂರ ಅವರ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿ ಬಳಗದ ವತಿಯಿಂಧ ಕಲಬುರಗಿ ನಗರದಲ್ಲಿರುವ 4 ವೃದ್ದಾಶ್ರಮದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಹಾಗೂ ಆರೋಗ್ಯ ತಪಾಸಣೆ ಮಾಡಲಾಯಿತು, ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ 160 ಹೆಣ್ಣು ಮಕ್ಕಳ 18 ವರ್ಷಗಳವರೆಗೆ ಅವರ ಕಂತನ್ನು ಪಾವತಿಸಲು ನಿರ್ದರಿಸಿದ್ದು ಅವರ ಖಾತೆಯ ಪಾಸ್ಬುಕ್ ವಿತರಣೆ, 2025 ನೆ ಸಾಲಿನಲ್ಲಿ ಉತ್ತಮವಾಗಿ ತೇರ್ಗಡೆಯಾದ 10 ಅನಾಥ ಹೆಣ್ಣು ಮಕ್ಕಳಿಗೆ ತಲಾ ರೂ.10000- ವಿದ್ಯಾರ್ಥಿವೇತನ ವಿತರಣೆ, IAS/ KAS ವಿದ್ಯಾರ್ಥಿಗಳಿಗೆ ಪುಸ್ತಕಗಳ ವಿತರಣೆ, ಕಲಬುರಗಿ ಜಿಲ್ಲೆಯ 10 ಜನ ವಿಧವೆಯರಿಗಾಗಿ ಬಟ್ಟೆ ಹೊಲಿಯುವ ಉಪಕರಣ ವಿತರಣೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 07 ಜನ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸೇರಿದಂತೆ ಅನೇಕ ಸಮಾಜಿಕ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಡಾ. ಫಾರುಕ್ ಮಣ್ಣೂ್ರ ಅವರ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿ ಬಳಗದಿಂದ ಡಾ. ಫಾರುಕ್ ಅವರ ಬಾರಾಹಿಲ್ಸ್ ನಿವಾಸಿದಂದ ಕಾರ್ಯಕ್ರಮ ನಡೆಯುವ ಕೇತಕಿ ಗಾರ್ಡನ ವರೆಗೆ 200 ಕ್ಕೂ ಬೈಕ ಗಳ ಮೂಲಕ ಬೃಹತ ಬೈಕ ರ್ಯಾಲಿ ಮಾಡಿದ್ದರು.
ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಂದ ಪ್ರತಿಭಾಸನ್ಮಾನಕ್ಕೆ ಆಹ್ವಾನ :-ಅಂಗಡಿ
ಅಖಿಲ ಭಾರತ ವೀರಶೈವ ಮಹಾಸಭಾ ಸುರಪುರ ತಾಲೂಕ ಘಟಕದ ವತಿಯಿಂದ 2024-25 ನೇ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 90% ಕ್ಕಿಂತ ಹೆಚ್ಚು ಅಂಕಗಳಿಸಿದ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಶೇ 85%ಕ್ಕಿಂತ ಹೆಚ್ಚು ಅಂಕಗಳಿಸಿದ ಸುರಪುರ ಮತ್ತು ಹುಣಸಗಿ ತಾಲೂಕಿನ ವ್ಯಾಪ್ತಿಯ ವೀರಶೈವ ಲಿಂಗಾಯತ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕ ಅಧ್ಯಕ್ಷರಾದ ಪ್ರಕಾಶ ಅಂಗಡಿ ಕನ್ನೆಳ್ಳಿ ಕೊರಿದ್ದಾರೆ
ಕಾರಣ ಪ್ರತಿಶತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಮೇ 25 ರ ಒಳಗಾಗಿ ತಮ್ಮ ಅಂಕಪಟ್ಟಿ ಶಾಲಾ ಮುಖ್ಯಸ್ಥರಿಂದ ದೃಡೀಕರಿಸಿ, ಜಾತಿ ಪ್ರಮಾಣಪತ್ರ ಹಾಗೂ ಪಾಸ್ಪೊರ್ಟ್ ಅಳತೆಯ ೨ ಭಾವಚಿತ್ರವನ್ನು {ವಿಳಾಸ} :- ಮಹಾಸಭಾ ಕಾರ್ಯಲಯ, ಬಸವೇಶ್ವರ ಪತ್ತಿನ ಸಹಕಾರ ಸಂಘ ಸುರಪುರ ಈ ವಿಳಾಸಕ್ಕೆ
ದಾಖಲೆಗಳನ್ನು ಸಲ್ಲಿಸಲು ಕೋರಲಾಗಿದೆ. ಅಥವಾ 9900863333 ನಂಬರಗೆ ವಾಟ್ಸಪ್ ಮೂಲಕ ಕೂಡ ಕಳುಹಿಸಬಹುದು ಎಂದು ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಕಟಣೆಯಲ್ಲಿ ಕೊರಿದ್ದಾರೆ
ಬುದ್ಧ ಪೂರ್ಣಿಮೆಯ ಬೆಳಕಿನಲ್ಲಿ,ಯುದ್ಧ ಕಾಶ್ಮೀರದ ಕತ್ತಲಿನಲ್ಲಿ
ಶಾಂತಿ, ಅಹಿಂಸೆ, ಜ್ಞಾನ, ನೆಮ್ಮದಿಯನ್ನು ಹುಡುಕುತ್ತಾ Gv ಸಿಗ್ಮಂಡ್ ಫ್ರಾಯ್ಡ್ ಎಂಬುವವನನ್ನು ಪ್ರಖ್ಯಾತ ಮನಶಾಸ್ತ್ರಜ್ಞ ಎಂದು ಕರೆಯಲಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಹಿನ್ನಲೆಯ ಆತನ ವಿಚಾರಗಳು ವಿಶ್ವವ್ಯಾಪಿ ಮನ್ನಣೆ ಪಡೆದಿವೆ. ಆದರೆ, ಭಾರತದ ಸಂಸ್ಕೃತಿಯ ಹಿನ್ನೆಲೆಯಲ್ಲಿ ಖ್ಯಾತ ಮನಃಶಾಸ್ತ್ರಜ್ಞ ಯಾರಿರಬಹುದು ?ನನ್ನ ದೃಷ್ಟಿಯಲ್ಲಿ ಅದು ಸಿದ್ದಾರ್ಥನೆಂಬ ಗೌತಮ ಬುದ್ಧ. ಜನಸಂಖ್ಯೆಯೇ ಅತಿ ವಿರಳವಾಗಿದ್ದ, ಸಂಪರ್ಕ ಸಂವಹನಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದ, ಆಧುನಿಕ ತಂತ್ರಜ್ಞಾನದ ಯಾವ ಲಕ್ಷಣಗಳೂ ಗೋಚರಿಸದ, ಬದುಕಿನ್ನು ಸಂಕೀರ್ಣತೆಯಿಂದ ದೂರವಿದ್ದ, ಆ ಕಾಲದಲ್ಲಿಯೇ ಮನುಷ್ಯನ ಮನಸ್ಸುಗಳ ಜಾಡು ಹಿಡಿದು ಅಲ್ಲಿನ ತವಕ ತಲ್ಲಣಗಳಿಗೆ ಉತ್ತರ ಹುಡುಕಲು ಪ್ರಯತ್ನಿಸಿದ ಗೌತಮ ಅಸಾಮಾನ್ಯನೇ ಹೌದು. ನಿಜಕ್ಕೂ ಈಗ ನಾವೆಲ್ಲರೂ ಚಿತ್ರಪಟ, ಶಿಲ್ಪ ಕಲೆಗಳಲ್ಲಿ ನೋಡುತ್ತಿರುವ ಆ ಸೌಮ್ಯ ಮೂರ್ತಿ ಬುದ್ಧ ಅಷ್ಟೊಂದು ಸೌಮ್ಯನೇ ? ಅಷ್ಟೊಂದು ಶಾಂತ ಸ್ವಭಾವದವನೇ ? ಅಥವಾ ಎಲ್ಲರೂ ಭಾವಿಸಿರುವಂತೆ ಆತನ ಜ್ಞಾನೋದಯದ ನಂತರ ಮೂಡಿದ ಭಾವ ಈ ಪ್ರಶಾಂತತೆಯೇ ? ಅಥವಾ ಯಾರೋ ಕಲಾವಿದರ ಕಲ್ಪನೆಯಲ್ಲಿ ಮೂಡಿದ ಚಿತ್ರವೇ ? ಏಕೆಂದರೆ,
ಬದುಕಿನ ಅನುಭವದಲ್ಲಿ ಬುದ್ದನೆಂಬ ವ್ಯಕ್ತಿ ಹೇಳಿರುವ ಸಂದೇಶಗಳು ನಿಜಕ್ಕೂ ಅತ್ಯಂತ ಪರಿಣಾಮಕಾರಿ ಅದ್ಭುತ, ಆಶ್ಚರ್ಯ ಮತ್ತು ವಾಸ್ತವಕ್ಕೆ ತೀರಾ ಹತ್ತಿರವಿದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡುವ , ತೀಕ್ಷ್ಣ ಏರಿಳಿತಗಳಿಗೆ ಕಾರಣವಾಗುವ, ಸುಲಭವಾಗಿ ಪರಿಹಾರ ಕಾಣದೆ ಕಾಡುವ ದ್ವಂಧ್ವಗಳು, ಅಸಹಾಯಕ ಮನಸ್ಥಿತಿಯ, ಒಳ್ಳೆಯ, ಕೆಟ್ಟ, ವಿಕೃತ ಭಾವನೆಗಳನ್ನು ಅನುಭವಿಸಿದರೆ ಮಾತ್ರ ಸಿಗಬಹುದಾದ ಜ್ಞಾನ ಪಡೆದಿದ್ದವನು ಗೌತಮ. ಆತನ ಚಿಂತನೆಗಳು ಮನುಷ್ಯನ ಮೆದುಳು, ಮನಸ್ಸುಗಳನ್ನು ಅತ್ಯಂತ ಹತ್ತಿರದಿಂದ ಗ್ರಹಿಸಿರುವಂತೆ ಭಾಸವಾಗುತ್ತದೆ. ಆ ಕಾರಣದಿಂದಾಗಿಯೇ ಬುದ್ಧ ಭಾರತೀಯ ಮನಸ್ಸುಗಳ ಅತ್ಯಂತ ಮಹತ್ವದ ಮನಶಾಸ್ತ್ರಜ್ಞ ಎಂದು ಹೇಳಿರುವುದು. ಬುದ್ದನ ಜ್ಞಾನ, ಕೇವಲ ಓದು, ಅಧ್ಯಯನ, ಚಿಂತನೆಗಳಿಂದ ಮಾತ್ರ ರೂಪಗೊಳ್ಳದೆ ಅನುಭವಗಳ ಕುಲುಮೆಯಲ್ಲಿ ಮೂಡಿದ ಅನುಭಾವದ ಅರಿವು. ಅದೇ ಕಾರಣಕ್ಕಾಗಿ ಹಲವಾರು ಶತಮಾನಗಳ ನಂತರವೂ ಬುದ್ಧ ಮುಖ್ಯವಾಗುತ್ತಿರುವುದು. ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ,
ಬುದ್ದನ ಧ್ಯಾನದಲ್ಲಿ, ಬುದ್ಧನ ಸಂದೇಶಗಳನ್ನು ಮನಃಶಾಸ್ತ್ರೀಯ ದೃಷ್ಟಿಕೋನದಿಂದ ನೋಡಿದರೆ ನಮಗೆ ನಾವು ಹೆಚ್ಚು ಸ್ಪಷ್ಟವಾಗಬಹುದು. ಅದಕ್ಕಿಂತ ಮುಖ್ಯವಾಗಿ ನಮ್ಮ ಮಾನಸಿಕ ನೋವುಗಳನ್ನು ಕಡಿಮೆ ಮಾಡಿಕೊಂಡು ಸಂತೋಷ ನೆಮ್ಮದಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಬಹುದು ಎಂಬ ಆಶಯದಿಂದ ಬುದ್ಧತ್ವದೆಡೆಗೆ ಹೆಜ್ಜೆ ಹಾಕುತ್ತಾ….ಬುದ್ದ ಪೂರ್ಣಿಮೆಯ ಬೆಳದಿಂಗಳಲ್ಲಿ ಬುದ್ದನನ್ನೇ ಹುಡುಕುತ್ತಾ, ಈ ನೆಲದ ನಿಜವಾದ ಮಣ್ಣಿನ ಮಗ ಬುದ್ದ, ಈ ಮಣ್ಣಿನ ವಾಸ್ತವದ ಸಾಂಸ್ಕೃತಿಕ ವಕ್ತಾರ ಬುದ್ಧ, ಬುದ್ದನಂತ ಕೆಲವು ಚಿಂತಕರು ಈ ಜಗತ್ತಿನಲ್ಲಿ ಆಗಿಹೋಗಿದ್ದಾರೆ. ಆದರೆ ಬುದ್ದನ ಹೆಚ್ಚುಗಾರಿಗೆ ಆತನ ಪ್ರಜ್ಞೆ ಟಿಸಿಲೊಡೆಯುವುದು ಸ್ವತಃ ತನ್ನ ದೇಹ ಮತ್ತು ಮನಸ್ಸುಗಳ ದಂಡನೆಯಿಂದ, ಅಂದರೆ ಅದು ಎರವಲು ಜ್ಞಾನವಲ್ಲ, ಆಂತರ್ಯದ ಸೃಷ್ಟಿ. ಬಹುಶಃ ಆ ಕಾರಣದಿಂದಲೇ ಬುದ್ದ ಈಗಲೂ ಸಾಕಷ್ಟು ಜನರ ಬೆಳಗಿನ ಶುಭೋದಯದ ಮೊದಲ ಬೆಳಕು, ಬುದ್ದ ಬದುಕನ್ನು ಹುಡುಕಿದರೆ ನಾವು ಬುದ್ದನನ್ನು ಹುಡುಕುತ್ತಿದ್ದೇವೆ. ಬುದ್ದನಿಗ ಬದುಕಿನ ಜ್ಞಾನೋದಯವಾದರೆ ನಮಗೆ ಬುದ್ಧ ಸಿಗುತ್ತಲೇ ಇಲ್ಲ. ಕಾರಣ ಬುದ್ದ ನಮ್ಮೊಳಗೆ ಇಳಿಯಲು ಸ್ಥಳಾವಕಾಶವೇ ಇಲ್ಲದಂತಾಗಿದೆ. ಕ್ರಿಸ್ತ ಪೂರ್ವದ ಬುದ್ದ – 21 ನೆಯ ಶತಮಾನದ ನಾವು ಈ ಬೆಳದಿಂಗಳಲ್ಲಿ ಮುಖಾಮುಖಿಯಾದಾಗ, ಧ್ಯಾನಸ್ಥ ಬುದ್ದ ಟ್ರಾಫಿಕ್ ನಲ್ಲಿ ಕಳೆದುಹೋದ, ನಿಸ್ವಾರ್ಥ ಬುದ್ದ ಭ್ರಷ್ಟಾಚಾರದಲ್ಲಿ ಮುಳುಗಿಹೋದ, ಅಹಿಂಸೆಯ ಬುದ್ದ ಪರಮಾಣು ಬಾಂಬುಗಳಲ್ಲಿ ಅಡಗಿಹೋದ, ಜ್ಞಾನದ ಬದ್ದ ಅಂಕಗಳಲ್ಲಿ ಮರೆಯಾಗಿ ಹೋದ, ನಿರ್ಲಿಪ್ತ ಬುದ್ದ ಹಣ ಆಸ್ತಿ ಜಮೀನುಗಳಲ್ಲಿ ಹುದುಗಿ ಹೋದ, ಎಲ್ಲಿಯಾದರೂ ಸಿಕ್ಕಾನೆಯೇ ಬುದ್ದ, ಸುಖ ಭೋಗಗಳನ್ನು ತ್ಯಜಿಸಿ ಇನ್ನೇನೋ ಹುಡುಕುತ್ತಾ ಸಿದ್ದಾರ್ಥ ಎಂಬ ಮನುಷ್ಯ ಬುದ್ಧನಾದ. ಬುದ್ದನನ್ನು ಹುಡುಕುತ್ತಾ ಮತ್ತೊಬ್ಬ ಸುಖ ಭೋಗಗಳ ದಾಸನಾದ, ಸಿದ್ದಾರ್ಥನನ್ನು ಹುಡುಕಬಹುದು, ಆತ ಸಿಗುತ್ತಾನೆ, ಆದರೆ ಬುದ್ದನನ್ನು ಹುಡುಕುವುದೆಲ್ಲಿ, ಒಳಗೋ ಹೊರಗೋ, ಕ್ರಿಸ್ತ ಪೂರ್ವದ ಬುದ್ಧನೆಲ್ಲಿ,
2025 ರ ಬುದ್ದು ( ದಡ್ಡ ) ಎಲ್ಲಿ, ಸ್ವಂತ ಮನೆಯಲ್ಲಿ ಕುಳಿತು ಆಹಾರ ಸೇವಿಸುತ್ತಾ, ಟಿವಿ ನೋಡುತ್ತಾ ಬುದ್ದನನ್ನು ಹುಡುಕಿದನೊಬ್ಬ, ಲೈಬ್ರರಿಯಲ್ಲಿ ಕುಳಿತು ಪುಸ್ತಕ ಓದುತ್ತಾ, ಬರೆಯುತ್ತಾ ಹುಡುಕಿದ ಬುದ್ದನನ್ನು ಇನ್ನೊಬ್ಬ…, ಅಧ್ಯಯನ ಮಾಡುತ್ತಾ, ಚಿಂತಿಸುತ್ತಾ ಉಪನ್ಯಾಸ ನೀಡುತ್ತಾ ಬುದ್ದನನ್ನು ಹುಡುಕಿದ ಮಗದೊಬ್ಬ, ಪ್ರಶಸ್ತಿಗಾಗಿ, ಪ್ರಚಾರಕ್ಕಾಗಿ, ಪ್ರಖ್ಯಾತಿಗಾಗಿ, ಬುದ್ದಿಯ ಪ್ರದರ್ಶನಕ್ಕಾಗಿ ಹುಡುಕುತ್ತಲೇ ಇದ್ದಾರೆ ಅನೇಕ ಸಿದ್ದಾರ್ಥರು ಬುದ್ದನನ್ನು, ಸಿಕ್ಕಾನೆಯೇ ಬುದ್ದ, ಕಾಡು ಮೇಡುಗಳಲ್ಲಿ ಅಲೆದು, ದೇಹ ಮನಸ್ಸುಗಳನ್ನು ದಂಡಿಸಿ, ಚರ್ಚೆ ಸಂವಾದ ಮಂಥನಗಳನ್ನು ಮಾಡಿ, ಧ್ಯಾನದ ಉತ್ತುಂಗ ತಲುಪಿ ಬುದ್ದನಾದವನನ್ನು ಹುಡುಕುವುದು ಸುಲಭವೇ, ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ಸಂಜೆಯ ಉಪಹಾರ, ರಾತ್ರಿಯ ಭೋಜನ ಮಾಡಿ, ಬೆಚ್ಚಗಿನ ಮನೆಯಲ್ಲಿ, ಕುಟುಂಬದೊಂದಿಗೆ, ನಾಳಿನ ಯೋಚನೆಗಳೊಂದಿಗೆ, ಸ್ನಾನ ಶೌಚಗಳ ಅನುಕೂಲದೊಂದಿಗೆ, ಮೈಥುನದ ಸುಖದೊಳಗೆ, ಮೊಬೈಲ್ ಮಾಯೆಯೊಳಗೆ ಸಿಕ್ಕಾನೆಯೇ ಬುದ್ದ.
ದೇಹದಲ್ಲಿ ಅಡಗಿದ್ದಾನೆಯೇ ಬುದ್ದ,
ಮನಸ್ಸಿನಲ್ಲಿ ಅಡಗಿದ್ದಾನೆಯೇ ಬುದ್ದ,
ಹೃದಯದಲ್ಲಿ ಅಡಗಿದ್ದಾನೆಯೇ ಬುದ್ದ,…
ಜ್ಞಾನದಿಂದ ಸಿಗುವನೇ ಬುದ್ದ,
ಭಕ್ತಿಯಿಂದ ಸಿಗುವನೇ ಬುದ್ದ,
ಕರ್ಮದಿಂದ ಸಿಗುವನೇ ಬುದ್ದ,
ಯೋಗ ಧ್ಯಾನಗಳಿಂದ ಸಿಗುವನೇ ಬುದ್ದ
ಇವುಗಳಿಂದ ದೇವರನ್ನು ಹುಡುಕಬಹುದು,
ಆದರೆ ಬುದ್ದನನ್ನು ಹುಡುಕಬಹುದೇ
ಹೌದು, ಬುದ್ದನನ್ನು ಹುಡುಕಬಹುದು, ಎಲ್ಲಿ ? ಹೇಗೆ ?ಮಾನವೀಯ ಮೌಲ್ಯಗಳಲ್ಲಿ ಬುದ್ದನನ್ನು ಹುಡುಕಬಹುದು, ಪ್ರೀತಿಯಲ್ಲಿ,ತ್ಯಾಗದಲ್ಲಿ, ಕರುಣೆಯಲ್ಲಿ, ವಿನಯದಲ್ಲಿ, ಸಭ್ಯತೆಯಲ್ಲಿ, ಕ್ಷಮಾಗುಣದಲ್ಲಿ, ಸ್ನೇಹದಲ್ಲಿ, ಸಂಬಂಧಗಳಲ್ಲಿ, ತಾಳ್ಮೆಯಲ್ಲಿ,ಸಂಯಮದಲ್ಲಿ,ಧೈರ್ಯದಲ್ಲಿ,ನಿರಂತರ ಪ್ರಯತ್ನದಲ್ಲಿ,ಬುದ್ದ ಸಿಕ್ಕರೂ ಸಿಗಬಹುದು, ಯುದ್ದದ ಉನ್ಮಾದದಲ್ಲಿ, ಸಾವಿನ ಆತಂಕದಲ್ಲಿ, ಸೋಲುವ ಭೀತಿಯಲ್ಲಿ, ಕುಟುಂಬದ ಮೋಹದಲ್ಲಿ, ಹಣದ ದಾಹದಲ್ಲಿ, ಅಧಿಕಾರದ ಗುಂಗಿನಲ್ಲಿ, ಪ್ರಚಾರದ ಅಮಲಿನಲ್ಲಿ, ಸಾಧನೆಯ ಅಹಂಕಾರದಲ್ಲಿ, ಬುದ್ದನನ್ನು ಹುಡುಕುವ ನಾಟಕವೇಕೆ ನಾನು ಸಹ ಹುಡುಕುತ್ತಲೇ ಇದ್ದೇನೆ ಬುದ್ದನನ್ನು,
ನನ್ನೊಳಗಿನ ಬೆಳಕನ್ನು ಬೆಳಗಿಸುವಾ ಬುದ್ದನನ್ನು, ಸಿಕ್ಕಿಲ್ಲ ಆತ ಇನ್ನೂ……
ಯಾರೋ ನೀನು ಸಿದ್ಧಾರ್ಥ, ಒಂದು ರಾಜ್ಯದ ರಾಜಕುಮಾರನಂತೆ, ಕಷ್ಟ, ನೋವು, ಬೇಸರ ಏನೂ ಗೊತ್ತಿಲ್ಲದೆ ಬೆಳೆದ ಯುವರಾಜನಂತೆ,ಹೆಂಡತಿ – ಮಕ್ಕಳೊಂದಿಗೆ ಹಾಯಾಗಿದ್ದ ಸುಖಪುರುಷನಂತೆ, ಆದರೆ ಅದೇನಾಯಿತೋ ಸಿದ್ಧಾರ್ಥ ನಿನಗೆ,ಒಮ್ಮೆ ರಾಜ್ಯವನ್ನೆಲ್ಲಾ ಸುತ್ತಾಡುವಾಗ ಜನರ ಬದುಕು ನೋಡಿ ಗಾಬರಿಯಾದೆಯಂತೆ, ಕಷ್ಟ, ನೋವು, ರೋಗ, ಸಾವುಗಳು ನಿನ್ನನ್ನು ಕಾಡಲಾರಂಬಿಸಿದವಂತೆ, ಅದಕ್ಕೆ ಕಾರಣಗಳೇನು, ಪರಿಹಾರಗಳೇನು ಎಂದು ಮನಸ್ಸು ನಿನ್ನನ್ನು ಗಲಿಬಿಲಿಗೊಳಿಸಿತಂತೆ,ಆಗ ಒಂದು ದಿನ ಇದ್ದಕ್ಕಿದ್ದಂತೆ ರಾಜ್ಯ, ಸಂಸಾರ, ಸುಖ ಭೋಗ ಎಲ್ಲಾ ತೊರೆದು ರಾತ್ರೋರಾತ್ರಿ ಹೊರಟೆಯಂತೆ,ಬೀದಿಬೀದಿಗಳನ್ನು, ರಾಜ್ಯ ಪ್ರದೇಶಗಳನ್ನು, ಅಲೆಮಾರಿಯಂತೆ ಸುತ್ತಾಡಿದೆಯಂತೆ, ಮಹಾನ್ ಪಂಡಿತ, ಪಾಮರ, ಜ್ಞಾನಿಗಳನ್ನು ಭೇಟಿ ಮಾಡಿ ಚರ್ಚಿಸಿದೆಯಂತೆ, ಭಿಕ್ಷುಕನಂತೆ ಭಿಕ್ಷೆ ಬೇಡಿ ತಿಂದು ಬದುಕಿದೆಯಂತೆ, ಉಪವಾಸವಿದ್ದು ತಿಂಗಳುಗಟ್ಟಲೆ ದೇಹ ದಂಡಿಸಿದೆಯಂತೆ, ವರ್ಷಾನುಗಟ್ಟಲೆ ಕಾಡು ಮೇಡುಗಳಲ್ಲಿ ಅಲೆದು ಧ್ಯಾನ, ತಪಸ್ಸು ಮಾಡಿದೆಯಂತೆ, ಒಂದು ದಿನ ನಿನಗೆ ಭೋದಿವೃಕ್ಷದ ಕೆಳಗೆ ಜ್ಞಾನೋದಯವಾಯಿತಂತೆ. ಅಬ್ಬಾ, ಅದೇನು ಜ್ಞಾನೋದಯವಾಯಿತೋ ಅಥವಾ ನೀನೇ ಜ್ಞಾನವಾದೆಯೋ,
ಅಲ್ಲಿಂದ ಆದೆ ನೋಡು ನೀನು ಗೌತಮ ಬುದ್ದ,ಯಪ್ಪಾ, ಅದೇನು ಚಿಂತನೆ, ಅದೇನು ಜ್ಞಾನ, ಅದೇನು ಅರಿವು,ಯಾವ ಡಾಕ್ಟರುಗಳು, ಯಾವ ಮನಶಾಸ್ತ್ರಜ್ಞರು, ಯಾವ ಜೀವ ವಿಜ್ಞಾನಿಗಳಿಗೂ,
ಸಾಧ್ಯವಾಗದ ಮನುಷ್ಯನ ಆತ್ಮ, ಮೆದುಳು, ಮನಸ್ಸು, ಭಾವನೆ, ಜೀವನಕ್ರಮವನ್ನು ಅರೆದು ಕುಡಿದು ಅದರ ಎಲ್ಲವನ್ನೂ ತೆರೆದಿಟ್ಟ ಮಹಾನ್ ವ್ಯಕ್ತಿಯಾದೆ, ಜನರ ಬದುಕು ಇಷ್ಟೊಂದು ಸಂಕೀರ್ಣವಾಗಿರದ, ನಾಗರಿಕತೆಯ ಮೊದಲ ಮೆಟ್ಟಿಲು ಏರುತ್ತಿದ್ದ, ಆ ದಿನಗಳಲ್ಲೇ ಮನುಷ್ಯ ಜನಾಂಗದ ಇಡೀ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ ಅದ್ಭುತ ವ್ಯಕ್ತಿಯಾದೆ,ನಿನ್ನ ಒಂದೊಂದು ಮಾತುಗಳು ಅರಗಿಸಿಕೊಳ್ಳುವುದೇ ಕಷ್ಟ, ಕಲ್ಲಿನ ಕೆತ್ತನೆಯಿಂದ ಹಿಡಿದು ಫೇಸ್ ಬುಕ್ – ವಾಟ್ಸ್ ಆ್ಯಪ್ – ಎಕ್ಸ್ ತನಕ ಎಲ್ಲಾ ಸ್ಥಳಗಳಲ್ಲಿ ನಿನ್ನ ಮಾತುಗಳಿಗೇ ಪ್ರಥಮ ಸ್ಥಾನ. ಅಷ್ಟೇ ಏಕೆ, ಪಾಶ್ಚಾತ್ಯ, ಪೌರಾತ್ಯ ಸಂಸ್ಕೃತಿಗಳನ್ನು, ವಿಶ್ವದ ಬಹುತೇಕ ಧರ್ಮಗಳನ್ನು, ಅಸಾಮಾನ್ಯ ಗ್ರಂಥಗಳನ್ನು, ಅನೇಕ ದೇಶಗಳ ಸಂವಿಧಾನಗಳನ್ನು, ಓದಿ ಅರ್ಥ್ಯೆಸಿಕೊಂಡಿದ್ದ ಬಾಬಾ ಅಂಬೇಡ್ಕರ್ ಅವರೇ ನಿನಗೆ ಶರಣಾದರೆಂದರೆ ನೀನೇನು ಮನುಷ್ಯನೇ,ಪ್ರಕೃತಿಯ ಅದ್ಭುತ, ಆಶ್ಚರ್ಯಕರ, ಸೃಷ್ಟಿಯಾದ ಗೌತಮ ಬುದ್ದನೇ,
ನಿನ್ನನ್ನು ಒಂದೇ ಒಂದು ಬಾರಿ ನೋಡಬೇಕೆನಿಸಿದೆ, ಮಾತನಾಡಬೇಕಿನಿಸಿದೆ, ಈ ಹುಚ್ಚರ ಸಂತೆಯಲ್ಲಿ ನಿನ್ನನ್ನು ನಿಲ್ಲಿಸಿ ಎಲ್ಲರಿಗೂ ಹೇಳಬೇಕಿದೆ, ಮನುಷ್ಯರೆಂದರೆ ಏನೆಂದು ಈ ಅನಾಗರಿಕರಿಗೆ, ಬಾರೋ ಗೌತಮ ಬುದ್ದನಾದ ಸಿದ್ಧಾರ್ಥನೇ, ಮತ್ತೊಮ್ಮೆ ಹುಟ್ಟಿ ಬಾ,
ಡಾ. ದಿವ್ಯಾ ಕೆ ವಾಡಿ ಮತ್ತು ಡಾ. ರಾಮಕೃಷ್ಣ ಬಿ ಸಹಾಯಕ ಪ್ರಾಧ್ಯಾಪಕರು ಇತಿಹಾಸ ವಿಭಾಗ ಮತ್ತು ಅರ್ಥಶಾಸ್ತ್ರ ವಿಭಾಗ,
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ
ಶ್ರೀಮತಿ. ಚಿನ್ನಮ್ಮ ಬಸಪ್ಪ ಪಾಟೀಲ್ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಚಿಂಚೋಳಿ. ತಾ. ಚಿಂಚೋಳಿ,
ಜಿ. ಕಲ್ಬುರ್ಗಿ.
ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರುಗಳಿಂದ ಜಮಖಂಡಿ ಅರ್ಬನ್ ಕೋ-ಆಪ್ ಬ್ಯಾಂಕ 13ನೇ ಶಾಖೆ ಯಾದವಾಡದಲ್ಲಿ ಉದ್ಘಾಟನೆ.
ಯಾದವಾಡ ಗ್ರಾಮದಲ್ಲಿ ಜಮಖಂಡಿ ಅರ್ಬನ ಕೋ-ಆಪ್ ಬ್ಯಾಂಕನ 13ನೇ ಶಾಖೆ ಉದ್ಘಾಟನೆ ಮಾಡಿ ಉಜ್ಜಯಿನಿ ಸಿಂಹಾಸನಾಧೀಶ್ವರ ಜಗದ್ಗುರುಗಳು ಆಶೀರ್ವಚನ ನೀಡಿದರು . ಸಹಕಾರ ಸಂಸ್ಥೆಗಳನ್ನು ಭಾರತದಲ್ಲಿ ಪ್ರಥಮಬಾರಿಗೆ ಆರಂಭಮಾಡಿದ್ದು ಗದಗ ಜಿಲ್ಲೆಯ ಕಡಗಿನಹಾಳ ಗ್ರಾಮದ ಎಸ್ ಎಸ್.ಪಾಟೀಲರು. ಇಂದು ಭಾರತದಲ್ಲಿ ಸುಮಾರು ಎರಡುವರೆ ಲಕ್ಷಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳು ಕಾರ್ಯವನ್ನು ನಿರ್ವಹಿಸುತ್ತಿವೆ. ಸಹಕಾರ ಸಂಸ್ಥೆಗಳು ವಿಷಿಷ್ಟವಾದ ನಿಯಮಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಹಿಂದಿನ ಕಾಲದಲ್ಲಿ ಇಲ್ಲದವರಿಗೆ ಇದ್ದವರು ಬಾಯಿಮಾತಿನ ಮೇಲೆ ಹಣವನ್ನು ಸಾಲದ ರೂಪದಲ್ಲಿ ಕೊಡುತ್ತಿದ್ದರು ಆಗಿನ ಜನ ಮಾತು ತಪ್ಪದೆ ಹಣವನ್ನು ಸರಿಯಾದ ಸಮಯದಲ್ಲಿ ಮರಳಿ ಕೊಡುತ್ತಿದ್ದರು ಜೀವಕೊಟ್ಟಾದರೂ ಮಾತನ್ನು ಉಳಿಸಿಕೊಳ್ಳುತ್ತಿದ್ದರು ಆದರೆ ಇಗಿನ ಜನ ಹಾಗಿಲ್ಲ ಮಾತಿಗೆ ತಕ್ಕ ರಿತಿಯಲ್ಲಿ ನಡೆದುಕೊಳ್ಳುತ್ತಿಲ್ಲ . ಆದ್ದರಿಂದ ಆಳುವ ಸರ್ಕಾರಗಳು ಕೆಲವು ನೀತಿ ನಿಯಮ ಮತ್ತು ನಿಬಂಧನೆಗಳನ್ನು ಮಾಡಿ ಬ್ಯಾಂಕಿಂಗ ವ್ಯವಸ್ಥೆಯನ್ನು ಬಲಗೊಳಿಸಿದವು. ಹಣ ಇದ್ದವರು ಬ್ಯಾಂಕಗಳಲ್ಲಿ ಠೇವಣಿ ಇಡುವದು. ಹಣದ ಅವಶ್ಯಕತೆ ಇರುವವರು ಸಾಲದ ರೂಪದಲ್ಲಿ ಹಣವನ್ನು ಪಡೆಯುವುದು ಮಾಡತೊಡಗಿದರು ಇ ವ್ಯವಸ್ಥೆಯನ್ನು ನಾವು ಬ್ಯಾಂಕ ಎಂದು ಕರೆಯುತ್ತೇವೆ. ಸಹಕಾರ ಎನ್ನುವ ತತ್ವದ ಅಡಿಯಲ್ಲಿ ಈ ಬ್ಯಾಂಕಗಳು ಕೆಲಸ ನಿರ್ವಹಿಸುತ್ತವೆ ಯಾದವಾಡ ಗ್ರಾಮದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಚನ್ನಬಸಪ್ಪ ಹುಬ್ಬಳ್ಳಿ ಅಧ್ಯಕ್ಷರಾದ ರಾಹುಲ ಕಲೂತಿ ,ಎಕ್ಸ ಎಮ್ ಎಲ್ ಸಿ . ಜಿ.ಎಸ್.ನ್ಯಾಮಗೌಡರ , ವಿ.ಆಯ್ . ಕಂಬಿ, ಡಿ.ಆರ್.ತೇಲಿ, ಎನ್.ಬಿ.ತಳವಾರ ,ಬಿ.ಎಸ್.ಕಲೂತಿ, ಬಿ.ಜಿ.ಮಠಪತಿ, ಕಿರಣ ಸುರೇಶ ಪ್ರಸಾದ, ವಿರೇಶ ಕಲ್ಯಾಣಿ, ಸೋಮಶೇಖರ ಗುಡಿ,ಚನ್ನಪ್ಪ ಬ ಇಜೇರಿ, ಹಣಮಂತ ಅಮಲಜೇರಿ, ಹಾಗೂ ನಿರ್ವಹಣಾ ಮಂಡಳಿ ಸದಸ್ಯರು , ಸಲಹಾ ಸಮಿತಿ ಸದಸ್ಯರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರುಗಳಿಂದ ಜಮಖಂಡಿ ಅರ್ಬನ್ ಕೋ-ಆಪ್ ಬ್ಯಾಂಕ 13ನೇ ಶಾಖೆ ಯಾದವಾಡದಲ್ಲಿ ಉದ್ಘಾಟನೆ.
ಯಾದವಾಡ ಗ್ರಾಮದಲ್ಲಿ ಜಮಖಂಡಿ ಅರ್ಬನ ಕೋ-ಆಪ್ ಬ್ಯಾಂಕನ 13ನೇ ಶಾಖೆ ಉದ್ಘಾಟನೆ ಮಾಡಿ ಉಜ್ಜಯಿನಿ ಸಿಂಹಾಸನಾಧೀಶ್ವರ ಜಗದ್ಗುರುಗಳು ಆಶೀರ್ವಚನ ನೀಡಿದರು . ಸಹಕಾರ ಸಂಸ್ಥೆಗಳನ್ನು ಭಾರತದಲ್ಲಿ ಪ್ರಥಮಬಾರಿಗೆ ಆರಂಭಮಾಡಿದ್ದು ಗದಗ ಜಿಲ್ಲೆಯ ಕಡಗಿನಹಾಳ ಗ್ರಾಮದ ಎಸ್ ಎಸ್.ಪಾಟೀಲರು. ಇಂದು ಭಾರತದಲ್ಲಿ ಸುಮಾರು ಎರಡುವರೆ ಲಕ್ಷಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳು ಕಾರ್ಯವನ್ನು ನಿರ್ವಹಿಸುತ್ತಿವೆ. ಸಹಕಾರ ಸಂಸ್ಥೆಗಳು ವಿಷಿಷ್ಟವಾದ ನಿಯಮಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಹಿಂದಿನ ಕಾಲದಲ್ಲಿ ಇಲ್ಲದವರಿಗೆ ಇದ್ದವರು ಬಾಯಿಮಾತಿನ ಮೇಲೆ ಹಣವನ್ನು ಸಾಲದ ರೂಪದಲ್ಲಿ ಕೊಡುತ್ತಿದ್ದರು ಆಗಿನ ಜನ ಮಾತು ತಪ್ಪದೆ ಹಣವನ್ನು ಸರಿಯಾದ ಸಮಯದಲ್ಲಿ ಮರಳಿ ಕೊಡುತ್ತಿದ್ದರು ಜೀವಕೊಟ್ಟಾದರೂ ಮಾತನ್ನು ಉಳಿಸಿಕೊಳ್ಳುತ್ತಿದ್ದರು ಆದರೆ ಇಗಿನ ಜನ ಹಾಗಿಲ್ಲ ಮಾತಿಗೆ ತಕ್ಕ ರಿತಿಯಲ್ಲಿ ನಡೆದುಕೊಳ್ಳುತ್ತಿಲ್ಲ . ಆದ್ದರಿಂದ ಆಳುವ ಸರ್ಕಾರಗಳು ಕೆಲವು ನೀತಿ ನಿಯಮ ಮತ್ತು ನಿಬಂಧನೆಗಳನ್ನು ಮಾಡಿ ಬ್ಯಾಂಕಿಂಗ ವ್ಯವಸ್ಥೆಯನ್ನು ಬಲಗೊಳಿಸಿದವು. ಹಣ ಇದ್ದವರು ಬ್ಯಾಂಕಗಳಲ್ಲಿ ಠೇವಣಿ ಇಡುವದು. ಹಣದ ಅವಶ್ಯಕತೆ ಇರುವವರು ಸಾಲದ ರೂಪದಲ್ಲಿ ಹಣವನ್ನು ಪಡೆಯುವುದು ಮಾಡತೊಡಗಿದರು ಇ ವ್ಯವಸ್ಥೆಯನ್ನು ನಾವು ಬ್ಯಾಂಕ ಎಂದು ಕರೆಯುತ್ತೇವೆ. ಸಹಕಾರ ಎನ್ನುವ ತತ್ವದ ಅಡಿಯಲ್ಲಿ ಈ ಬ್ಯಾಂಕಗಳು ಕೆಲಸ ನಿರ್ವಹಿಸುತ್ತವೆ ಯಾದವಾಡ ಗ್ರಾಮದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಚನ್ನಬಸಪ್ಪ ಹುಬ್ಬಳ್ಳಿ ಅಧ್ಯಕ್ಷರಾದ ರಾಹುಲ ಕಲೂತಿ ,ಎಕ್ಸ ಎಮ್ ಎಲ್ ಸಿ . ಜಿ.ಎಸ್.ನ್ಯಾಮಗೌಡರ , ವಿ.ಆಯ್ . ಕಂಬಿ, ಡಿ.ಆರ್.ತೇಲಿ, ಎನ್.ಬಿ.ತಳವಾರ ,ಬಿ.ಎಸ್.ಕಲೂತಿ, ಬಿ.ಜಿ.ಮಠಪತಿ, ಕಿರಣ ಸುರೇಶ ಪ್ರಸಾದ, ವಿರೇಶ ಕಲ್ಯಾಣಿ, ಸೋಮಶೇಖರ ಗುಡಿ,ಚನ್ನಪ್ಪ ಬ ಇಜೇರಿ, ಹಣಮಂತ ಅಮಲಜೇರಿ, ಹಾಗೂ ನಿರ್ವಹಣಾ ಮಂಡಳಿ ಸದಸ್ಯರು , ಸಲಹಾ ಸಮಿತಿ ಸದಸ್ಯರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
