ಸುರಪೂರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯಗಳಿಗೆ (P U C, I T I, Diploma,) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2025-26ನೇ ಸಾಲಿನ ಹಿಂದುಳಿದ ವರ್ಗ ಗಳ ಪ್ರವರ್ಗ-1,2ಎ 2ಬಿ 3ಎ 3ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗಳ ಹಾಗೂ ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಸುರಪುರ ತಾಲೂಕು ಹಿಂದುಳಿದ ವರ್ಗದ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ .
ಪ್ರವೇಶ ಪಡೆಯಲು ಇಚ್ಛೆ ಉಳ್ಳ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ವೆಬ್ಸೈಟ್ನಲ್ಲಿ l ಆನ್ ಲೈನ್ ಮೂಲಕ ಅರ್ಜಿ ಕೊನೆಯ ದಿನಾಂಕ:20-06-2025 ಇರುತ್ತದೆ.
ಅರ್ಜಿಯ ಪ್ರತಿ ಹಾಗೂ ಅಪ್ಲೋಡ್ ಮಾಡಲಾದ ದಾಖಲಾತಿಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಸಂಬಂಧ ಪಟ್ಟ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಿ ಸುರಪುರ ತಾಲೂಕು ಹಿಂದುಳಿದ ವರ್ಗದ ಕಲ್ಯಾಣ ಅಧಿಕಾರಿಗಳ ಕಚೇರಿ ಹಾಗೂ ವಸತಿ ನಿಲಯದ ಮೇಲ್ವಿಚಾರಕರಿಗೆ ಸಲ್ಲಿಸಬೇಕು.ಸ್ವೀಕೃತಿಯನ್ನು ಪಡೆಯಬೇಕು,ಹೆಚ್ಚಿನ ಮಾಹಿತಿಗಾಗಿ ಸುರಪುರ ತಾಲೂಕ ಹಿಂದುಳಿದ ವರ್ಗಗಳ ಕಾರ್ಯಾಲಯ ವನ್ನು ಹಾಗೂ(https://bcwd.karnataka.gov.in) ವೆಬ್ಸೈಟ್ ವನ್ನು ಸಂಪರ್ಕಿಸಬೇಕು ಎಂದು ತಿಳಿಸಿರುತ್ತಾರೆ ಒಂದು ವೇಳೆ ಅರ್ಜಿ ಸಲ್ಲಿಸಲು ತಾಂತ್ರಿಕ ದೋಷ ಉಂಟಾದಲ್ಲಿ ತಾಲೂಕ ಹಿಂದುಳಿದ ವರ್ಗಗಳ ಕಾರ್ಯಾಲಯಕ್ಕೆ ಅಗತ್ಯ ದಾಖಲಾತಿಗಳೊಂದಿಗೆ ಸಂಪರ್ಕಿಸ ಬೇಕು ಎಂದು ತಿಳಿಸಿದರು.
ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಸದುಪಯೋಗವನ್ನು ಪಡಿಸಿಕೊಂಡು ತಮ್ಮ ಉನ್ನತ ವಿದ್ಯಾಭಾಸವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ತಿಪ್ಪಾರೆಡ್ಡಿ ಮಾಲಿಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
