ಅಖಿಲ ಭಾರತ ವೀರಶೈವ ಮಹಾಸಭಾ ಸುರಪುರ ತಾಲೂಕ ಘಟಕದ ವತಿಯಿಂದ 2024-25 ನೇ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 90% ಕ್ಕಿಂತ ಹೆಚ್ಚು ಅಂಕಗಳಿಸಿದ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಶೇ 85%ಕ್ಕಿಂತ ಹೆಚ್ಚು ಅಂಕಗಳಿಸಿದ ಸುರಪುರ ಮತ್ತು ಹುಣಸಗಿ ತಾಲೂಕಿನ ವ್ಯಾಪ್ತಿಯ ವೀರಶೈವ ಲಿಂಗಾಯತ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕ ಅಧ್ಯಕ್ಷರಾದ ಪ್ರಕಾಶ ಅಂಗಡಿ ಕನ್ನೆಳ್ಳಿ ಕೊರಿದ್ದಾರೆ
ಕಾರಣ ಪ್ರತಿಶತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಮೇ 25 ರ ಒಳಗಾಗಿ ತಮ್ಮ ಅಂಕಪಟ್ಟಿ ಶಾಲಾ ಮುಖ್ಯಸ್ಥರಿಂದ ದೃಡೀಕರಿಸಿ, ಜಾತಿ ಪ್ರಮಾಣಪತ್ರ ಹಾಗೂ ಪಾಸ್ಪೊರ್ಟ್ ಅಳತೆಯ ೨ ಭಾವಚಿತ್ರವನ್ನು {ವಿಳಾಸ} :- ಮಹಾಸಭಾ ಕಾರ್ಯಲಯ, ಬಸವೇಶ್ವರ ಪತ್ತಿನ ಸಹಕಾರ ಸಂಘ ಸುರಪುರ ಈ ವಿಳಾಸಕ್ಕೆ
ದಾಖಲೆಗಳನ್ನು ಸಲ್ಲಿಸಲು ಕೋರಲಾಗಿದೆ. ಅಥವಾ 9900863333 ನಂಬರಗೆ ವಾಟ್ಸಪ್ ಮೂಲಕ ಕೂಡ ಕಳುಹಿಸಬಹುದು ಎಂದು ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಕಟಣೆಯಲ್ಲಿ ಕೊರಿದ್ದಾರೆ
