ಕಾಳಗಿ ಬೆಂಗಳೂರಿನ ಗೃಹ ಕಚೇರಿಯಲ್ಲಿ ಸನ್ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆ ಜಿ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತರಾಜ್ ಹಾಗೂ ಐಟಿ ಬಿಟಿ ಸಚಿವರು ಇವರಿಗೆ ಕಾಳಗಿ ತಾಲೂಕ ನೂತನ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಪ್ರದೀಪ್.ಕೆ ಡೊಣ್ಣೂರ್ ರವರು ಸನ್ಮಾನಿಸಿದರು ಈ ಸಂದರ್ಭದಲ್ಲಿ ಸಚಿವರು ನೂತನ ಅಧ್ಯಕ್ಷರಾದ ಪ್ರದೀಪ್ ಡೊಣ್ಣೂರ್ ಅವರಿಗೇ ಸಚಿವರು ಶುಭಾಶಯ ಕೋರಿದರು ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ಸುಭಾಷ್ ರಾಠೋಡ್ ಹಾಗೂ ಕಾಳಗಿ ತಾಲೂಕ್ ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶರಣು ಮಜ್ಜಗಿ ಮತ್ತು ಅವಿನಾಶ್ ಕೊಡದೂರ್ ಏನ್ ಎಸ್ ಯು ಐ ಅಧ್ಯಕ್ಷರು ಪ್ರವೀಣ್ ನಾಮದಾರ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಯುವ ಕಾಂಗ್ರೆಸ್ ಮುಖಂಡರಾದ ಅಮರ್ ಗಂವಾರ ಭಾಗ್ಯವಂತ್ ಕೊಡ್ಲಿ ಉಮೇಶ್ ಬಾಂಬೆ ಅಮರ ಮಹೇಶ್ ಕಲಗುರ್ತಿ ಇತರರು ಇದ್ದರೂ
Category: LiveTV
ಜಗಲಿ ವಿಚಾರಕ್ಕೆ ಪಕ್ಕದ ಮನೆ ವ್ಯಕ್ತಿಗಳು ಬಡ ಕುಟುಂಬದ ವೃದ್ಧನ ಮೇಲೆ ದಾಳಿ ದೊಣ್ಣೆಯಿಂದ ತಲೆಗೆ ಹಲ್ಲೆ. ಮಗಳು ನ್ಯಾಯ ಕೊಡಿಸುವಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಮನವಿ
ಪಿರಿಯಾಪಟ್ಟಣ ತಾಲೂಕಿನ ನಿಲಂಗಾಲ ಎಂಬ ಗ್ರಾಮದಲ್ಲಿ ಜಗಲಿ ವಿಚಾರಕ್ಕೆ ಸಂಬಂಧಿಸಿದಂತೆ ಬಡ ಕುಟುಂಬದ ಮೇಲೆ ದಾಳಿಯಾಗಿದೆ ದಿನಾಂಕ 4/03/2025 ರ ಮಾದ್ಯನ 2:30 ರ ಸಮಯದಲ್ಲಿ ಮಂಗಳವಾರ ಜಯಣ್ಣ 54 ವರ್ಷದ ವೃದ್ಧ ಮೇಲೆ ಅಲ್ಲೇ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು ಕುಟುಂಬಸ್ಥರು ಭಯದಿಂದ ನಡುಗುವಂತಾಗಿದೆ ಕಾವ್ಯ ಎಂಬ ಜಯಣ್ಣ ರವರ ಮಗಳು ನ್ಯಾಯಕ್ಕಾಗಿ ಸಿದ್ದರಾಮಯ್ಯ ಸರ್ಕಾರಕ್ಕೆ ನ್ಯಾಯ ಕೊಡಿಸುವಲ್ಲಿ ಮನವಿ ಮಾಡಿದ್ದಾರೆ

ನಮ್ಮ ಮನೆ ಮೇಲೆ ದಾಳಿ ಮಾಡಿದ ವ್ಯಕ್ತಿಗಳ ರವಿ . ಸ್ವಾಮಿ.ನಾಗ.ರೇಖಾ.ರಾಧ ನಿಂಗಮ್ಮ ಇವರ ಮೇಲೆ ಕಠಿಣವಾದ ಕ್ರಮ ಜರುಗಿಸಬೇಕು ಎಂದು ಮನವಿ ಗೆ ಮಾಡುತ್ತಾ ನಮಗೆ ಸೂಕ್ತ ನ್ಯಾಯ ದೊರಕಿಸಬೇಕೆಂದು ಮಾನ್ಯ ಸಿದ್ದರಾಮಯ್ಯ ಸರ್ಕಾರಕ್ಕೆ ಕಾವ್ಯ ಒತ್ತಾಯಿಸಿದರೆ ಜಯಣ್ಣ ಎಂಬವರು ಹೊಡೆತದ ರಭಸಕ್ಕೆ ಕೋಮಾ ಸ್ಟೇಜ್ಗೆ ತೆರಳಿದ್ದಾರೆ ನೋವಿಗೆ ಒಳಗಾದ ವ್ಯಕ್ತಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗುತ್ತಿದೆ ನಮ್ಮ ತಂದೆಯ ಜೀವ ಇವತ್ತು ತಪ್ಪಿದ್ರೆ ನಾಳೆ ಸಾವನ್ನಪ ಬಹುದೂ ಎಂದು ಮಗಳು ಕಾವ್ಯ ತಿಳಿಸಿದ್ದಾರೆ
ಶಾಸಕ ಡಿ.ರವಿಶಂಕರ್ ಯೋಗ್ಯತೆ ಬಗ್ಗೆ ಮಾತನಾಡುವ ನೈತಿಕತೆ ಜೆಡಿಎಸ್ ನಾಯಕರಿಗಿಲ್ಲ: ಉದಯ್ ಶಂಕರ್
ಕೆ.ಆರ್.ನಗರ: ಶಾಸಕ ಡಿ.ರವಿಶಂಕರ್ ರವರ ಯೋಗ್ಯತೆ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ನಿಮ್ಮ ಯೋಗ್ಯತೆ ಏನೆಂದು ಮೊದಲು ತಿಳಿದುಕೊಂಡು ನಂತರ ಬೇರೆ ಅವರ ಬಗ್ಗೆ ಮಾತನಾಡುವುದನ್ನು ಕಲಿಯಿರಿ ಎಂದು ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಉದಯ್ ಶಂಕರ್ ಜೆಡಿಎಸ್ ಮುಖಂಡರಿಗೆ ಹೇಳಿದರು.
ಸಾಲಿಗ್ರಾಮ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕುರಿತು ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೇ ಪಂಚ ಯೋಜನೆಗಳು ಜನರ ಸಮಸ್ಯೆಗೆ ದಾರಿ ದೀಪಗಳಾಗಿವೆ ಅಂತಹ ಒಂದು ಯೋಜನೆಯನ್ನು ನಿಮ್ಮ ಸರ್ಕಾರ ಕೊಡಲಿಲ್ಲ ಆದರೆ ಇಲ್ಲಿಯ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುತ್ತೀರಿ. ಸಾಲಿಗ್ರಾಮ ತಾಲೂಕು ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಯೋಜನೆಗಳು ಹೆಚ್ಚು ಒಂದೊಮ್ಮೆ ಪರಿಶೀಲಿಸಿಕೊಳ್ಳಿ. ಜೊತೆಗೆ ಸಾಲಿಗ್ರಾಮ ಅಭಿವೃದ್ಧಿಗೆ ಯಾವ ಸರ್ಕಾರವಾದರೇನು ಅಭಿವೃದ್ಧಿ ಆಗಬೇಕು ಅದನ್ನು ಬಯಸುವುದು ಮುಖಂಡರ ಕರ್ತವ್ಯ ಕಾಂಗ್ರೆಸ್ ಪಕ್ಷದಿಂದ ಆಗುತ್ತಿರುವ ಅಭಿವೃದ್ಧಿಯನ್ನು ಸಹಿಸದೆ ಜೆಡಿಎಸ್ ಕಾರ್ಯಕರ್ತರು ಆಗಬೇಕಿರುವ ಕೆಲಸಕ್ಕೆ ಅಡ್ಡಿಪಡಿಸುವ ಹೇಳಿಕೆಗಳನ್ನು ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಈಗಾಗಲೇ ನಮ್ಮ ಶಾಸಕರು ಪ್ರತಿ ಮಂಗಳವಾರ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳಲ್ಲಿ ಮನೆ ಬಾಗಿಲಿಗೆ ಬಂತು ಸರ್ಕಾರ ಎಂಬ ಕಾರ್ಯಕ್ರಮದಲ್ಲಿ ಸರ್ಕಾರದ ಸೇವೆಯನ್ನು ಜನರಿಗೆ ನೀಡುವಂತಹ ಕೆಲಸ ಮಾಡುತ್ತಿದ್ದಾರೆ ಇದನ್ನು ಸಹಿತದೇ ಮತ್ತೆ ಟೀಕೆಗಳನ್ನು ಶುರು ಮಾಡಿದ್ದೀರಿ ಹೀಗೆ ಮಾಡುತ್ತಿದ್ದರೆ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಜನರು ಮತ್ತೊಮ್ಮೆ ನಿಮಗೆ ತಕ್ಕಉತ್ತರ ನೀಡುತ್ತಾರೆ ಎಂದು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದರು.
ನಂತರ ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್ ಮಾತನಾಡಿ ಅಗ್ನಿಶಾಮಕದಳ ಠಾಣೆಗೆ ಜೆಡಿಎಸ್ ಪಕ್ಷದಿಂದ ಹಣ ಮಂಜೂರಾಗಿದ್ದು ಆದರೆ ನೀವು ಗುದ್ದಲಿ ಪೂಜೆ ಮಾಡಿದ್ದೀರಿ ಎಂದು ಪತ್ರಿಕೆ ಹೇಳಿಕೆಯಲ್ಲಿ ಬಾಯಿ ಚಪ್ಪಲಕ್ಕೆ ಮಾತನಾಡಿದ್ದೀರಲ್ಲ
ಸ್ವಾಮಿ. ಮೊದಲು ದಾಖಲೆ ಇಟ್ಟುಕೊಂಡು ಮಾತನಾಡಿ ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನ ತಂದು. ನಮ್ಮ ಶಾಸಕರು ಗುದ್ದಲಿ ಪೂಜೆ ಮಾಡಿದ್ದಾರೆ. ನಿಮ್ಮ ರೀತಿ ಸುಳ್ಳು ಹೇಳಿಕೊಂಡು ತಿರುಗುವ ಸಣ್ಣತನದ ಬುದ್ದಿ ನಮಗೆ ಬಂದಿಲ್ಲ.
ಕಳೆದ ಬಾರಿ ನಿಮ್ಮ ಶಾಸಕರು ಮಾಡಿರುವ ಸಾ ರಾ ಸಾಧನೆ ಎಂಬ ಪುಸ್ತಕವನ್ನು ಮೊದಲು ತೆಗೆದು ನೋಡಿ, ಎಷ್ಟು ಸುಳ್ಳುಗಳನ್ನು ಹೇಳಿದ್ದೀರಿ ಎಂದು, ಕಾಮಗಾರಿಯೇ ಆಗದೆ ಪುಸ್ತಕದಲ್ಲಿ ಆಗಿದೆ ಎಂದು ನಮೂದಿಸಿ ಸುಳ್ಳು ಹೇಳಿದ್ದೀರಿ. ಗುದ್ದಲಿ ಪೂಜೆ ಮಾಡಿದ್ದೀರಿ.
ಜನ ಮೆಚ್ಚಿಸಲು ಎಲ್ಲಾ ಕಡೆ ಗುದ್ದಲಿ ಪೂಜೆ ಮಾಡಿದ್ದೀರಲ್ಲ. ಅನುದಾನವೇ ಬರದೇ ಗುದ್ದಲಿ ಪೂಜೆ ಹೇಗೆ ಮಾಡಿದ್ದೀರಿ. ಅದು ಜನಕ್ಕೆ ಎಲ್ಲಿ ಗೊತ್ತಾಗಿ ಬಿಡುತ್ತೋ ಎಂದು ಈಗ ಕಾಂಗ್ರೆಸ್ನವರು ನಮ್ಮ ಅನುದಾನವನ್ನು ವಾಪಸ್ ಪಡೆದುಕೊಂಡಿದ್ದಾರೆ ಎಂದು ಆರೋಪ ಮಾಡುತ್ತಿದ್ದೀರಿ.
ಬಂದಿರುವ ನಮ್ಮ ಅನುದಾನವನ್ನು ಸರ್ಕಾರ ತಾಲೂಕಿನಿಂದ ಯಾವುದನ್ನು ವಾಪಸ್ ಪಡೆದುಕೊಂಡಿಲ್ಲ. ಆದರೆ ನಾವು ನಿಮ್ಮತರ ಕೀಳು ಮಟ್ಟದ ವೈಯಕ್ತಿಕ ಹೇಳಿಕೆಗಳನ್ನು ಕೊಡುವುದಿಲ್ಲ. ಯಾರು ಯೋಗ್ಯತೆ ಬಗ್ಗೆಯೂ ಮಾತನಾಡಲ್ಲ ಅಂತ ಸಂಸ್ಕೃತಿ ನಮ್ಮ ಕಾಂಗ್ರೆಸ್ ಕಾರ್ಯಕರ್ತರದ್ದು ಅಲ್ಲ ಎಂದು ತಿರುಗೇಟು ನೀಡಿದರು.
ಸಭೆಯಲ್ಲಿ ಡಿಸಿಸಿ ಸದಸ್ಯ ಅಶ್ವಥ್ ನಾರಾಯಣ, ಪ್ರಥಮ ದರ್ಜೆ ಕಾಲೇಜು ಸಿಡಿಸಿ ಸದಸ್ಯ ಪರೀಕ್ಷಿತ್. ಎಸ್ ಕೆ ಪ್ರಭಾಕರ್, ಮಾಜಿ ಗ್ರಾಪಂ ಉಪಾಧ್ಯಕ್ಷ ಡಿ.ಮನುಗನಹಳ್ಳಿ ದೇವರಾಜ್, ನವೀನ, ತಂದ್ರೆಅಂಕನಹಳ್ಳಿ ಬಸವರಾಜು ಸೇರಿದಂತೆ ಇತರರು ಹಾಜರಿದ್ದರು.
ವಕೀಲ ‘ವಾಸುದೇವ ಕಾಮತ್’ ಕ್ರೀಡಾಂಗಣದ ಉದ್ಘಾಟನಾ ಕಾರ್ಯಕ್ರಮ
ಶ್ರೀ. ಬಿ. ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರೌಢಶಾಲೆ ದುರ್ಗ ತೆಳ್ಳಾರು ಕಾರ್ಕಳ ತಾಲ್ಲೂಕು ಇಲ್ಲಿ ವಕೀಲ ‘ವಾಸುದೇವ ಕಾಮತ್’ ಕ್ರೀಡಾಂಗಣದ ಉದ್ಘಾಟನಾ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನೆರವೇರಿಸಲಾಯಿತು. ಕ್ರೀಡಾಂಗಣದ ನಿರ್ಮಾಣದ ಸಂಪೂರ್ಣ ದಾನಿಗಳು ಆಗಿರುವ ಶ್ರೀ ಕಮಲಾಕ್ಷ ಕಾಮತ್ ಕಾರ್ಕಳ CA ಇವರು ಕ್ರೀಡಾಂಗಣದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು. ಕ್ರೀಡಾಂಗಣದ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಶ್ರೀ ಕಮಲಾಕ್ಷ ಕಾಮತ್ ಕಾರ್ಕಳ CA ಇವರು ತಮ್ಮ ಉದ್ಘಾಟನಾ ನುಡಿಗಳೊಂದಿಗೆ ವಿದ್ಯಾರ್ಥಿಗಳಿಗೆ ಸಾಧನೆಗೆ ಬೇಕಾದ ಪರಿಶ್ರಮ, ಆಧ್ಯಾತ್ಮಿಕತೆ, ಗುರು ಹಿರಿಯರು ತಂದೆ ತಾಯಿಗಳ ಮೇಲಿನ ಗೌರವದ ಕುರಿತು ತಿಳಿ ಹೇಳಿದರು. ಕಾರ್ಕಳ ಶಿಕ್ಷಣ ಇಲಾಖೆಯ ಸಂಯೋಜಕರಾದ ಶ್ರೀ ಬಾಲಕೃಷ್ಣ ನಾಯಕ್ ಇವರು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ ಹೋಗಲಾಡಿಸುವ ಕುರಿತು ತಿಳಿ ಹೇಳಿದರು. ಜಯಂತಿ ನಗರ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಪ್ರೇಮ ರವರು ಮಕ್ಕಳಿಗೆ ಶಾಲಾ ಪರಿಸರದ ಉತ್ತಮ ಅಂಶಗಳ ಬಗ್ಗೆ ತಿಳಿ ಹೇಳಿದರು.

ಇನ್ನೋರ್ವ ಅತಿಥಿಗಳಾದ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರೂ, ರಾಜ್ಯ ಪ್ರಶಸ್ತಿ ವಿಜೇತರೂ ಆಗಿರುವ ಶ್ರೀಮತಿ ಸಾವಿತ್ರಿ ಮನೋಹರದವರು ಮಕ್ಕಳಿಗೆ ಶುಭ ಹಾರೈಕೆಯನ್ನು ತಿಳಿಸಿದರು. ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಗಣಪಯ್ಯ ರವರು ಹತ್ತನೇ ತರಗತಿಯ ಮಕ್ಕಳಿಗೆ ಪೆನ್ನುಗಳನ್ನು ನೀಡಿ ಹಾರೈಸಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸ್ಮಿತಾ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಅತಿಥಿ ಗಣ್ಯರನ್ನು ಸ್ವಾಗತಿಸುವುದರ ಜೊತೆಗೆ ಕಾರ್ಯಕ್ರಮದ ಕುರಿತು ಪ್ರಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಕ್ರೀಡಾಂಗಣ ನಿರ್ಮಾಣದ ದಾನಿಗಳಾಗಿರುವ ಶ್ರೀ ಕಮಲಾಕ್ಷ ಕಾಮತ್ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ವಿಜ್ಞಾನ ಶಿಕ್ಷಕಿ ಯಾದ ಶ್ರೀಮತಿ ಪ್ರಣಿಲಾರವರು ಅಭಿನಂದನ ಪತ್ರವನ್ನು ವಾಚಿಸಿದರು. ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಆದರ್ಶ ಜೈನರವರು ಅಧ್ಯಕ್ಷೀಯ ಭಾಷಣವನ್ನು ನೆರವೇರಿಸಿದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಶೋಭಾರವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಪೋಷಕರು ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶಾಲೆಯ ಗಣಿತ ಶಿಕ್ಷಕಿಯಾದ ಶ್ರೀಮತಿ ರೇಖಾ ರವರು ಎಲ್ಲರಿಗೂ ಧನ್ಯವಾದಗಳು ತಿಳಿಸಿದರು.
ಸಮಾನತೆಯ ಮೌಲ್ಯಗಳನ್ನು ಸಮಾಜಕ್ಕೆ ಮೊದಲು ಕೊಟ್ಟವರೆ ಶ್ರೀ ಜಗದ್ಗುರು ರೇಣುಕಾಚಾರ್ಯರು – ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು
ಸಮಾನತೆಯ ಮೌಲ್ಯಗಳನ್ನು ಸಮಾಜಕ್ಕೆ ಮೊದಲು ಕೊಟ್ಟವರೆ ಶ್ರೀ ಜಗದ್ಗುರು ರೇಣುಕಾಚಾರ್ಯರು – ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು
ಯಾದವಾಡ ಗ್ರಾಮದ ಶ್ರೀ ಹೊನ್ನಮ್ಮದೇವಿ ದೇವಸ್ಥಾನದಲ್ಲಿ ನಡೆದ ಶ್ರೀ ರೇಣುಕಾಚಾರ್ಯರ ಜಯಂತಿಯ ಉತ್ಸವವನ್ನು ಜ್ಯೋತಿಬೆಳಗಿಸುವ ಮುಲಕ ಉದ್ಘಾಟಿಸಿ ಮಾತನಾಡಿದ ಸೌದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ವೀರಶೈವ ಧರ್ಮದ ಪರಂಪರೆಯ ಕುರಿತು ಬೆಳಕು ಚೆಲ್ಲಿದರು ವೀರಶೈವ ಧರ್ಮದ ಚಿಂತನೆಗಳು , ಅದರ ಮೌಲ್ಯಗಳ ಕುರಿತು ನೆರೆದಿದ್ದ ಸಭೀಕರಾಗಿ ಆಶಿರ್ವಚನ ಮಾಡಿದರು. ಸಮಾನತೆಯ ಮೌಲ್ಯಗಳನ್ನು ಸಮಾಜಕ್ಕೆ ಕೊಟ್ಟವರು ಶ್ರೀಮದ್ ಜಗದ್ಗುರು ಶ್ರೀ ರೇಣುಕಾಚಾರ್ಯರು ವೀರಶೈವ ಧರ್ಮ ಪರಂಪರೆಗೆ ಬಹಳ ಹೆಸರುಗಳು ಇವೆ ಇದಕ್ಕೆ ಸನಾತನ ಧರ್ಮ ಅಂತಲೂ ಕರೆಯುತ್ತಾರೆ ಸನಾತನ ಧರ್ಮ ಎಂದರೆ ಹಿಂದೆ ಇದ್ದು ಈಗ ಇರುವ ಮುಂದೆನೂ ಇರುವ ಶಾಶ್ವತ ಮಾನವೀಯ ಮೌಲ್ಯಗಳನ್ನು ಯಾವ ಧರ್ಮ ಒಳಗೊಂಡಿರುತ್ತದೆಯೋ ಅದಕ್ಕೆ ಸನಾತನ ಧರ್ಮ ಎನ್ನುತ್ತಾರೆ ಆ ಎಲ್ಲ ಜೀವನದ ಮೌಲ್ಯಗಳನ್ನು ವೀರಶೈವ ಧರ್ಮ ಒಳಗೊಂಡಿದೆ ಎಂದರು.
ಮಂಗಳವಾರ ಮುಂಜಾನೆ ಶರಣ ಮಾತೆಯರಿಂದ ಪವಿತ್ರ ಉದಕ ಕುಂಭ ಮತ್ತು ಮುತೈದೆಯರ ಆರತಿಗಳೊಂದಿಗೆ ಶ್ರೀಮದ್ ಜಗದ್ಗುರು ರೇಣುಕಾಚಾರ್ಯರ ದಿವ್ಯಮುರ್ತಿಯ ಮೆರವಣಿಗೆಯು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಗ್ರಾಮದೇವತೆ ಶ್ರೀ ಹೊನ್ನಮ್ಮದೇವಿ ದೇವಸ್ಥಾನದವರೆಗೆ ವಿವಿದ ವಾದ್ಯಮೇಳಗಳೊಂದಿಗೆ ನಡೆಯಿತು . ಬಾಗೋಜಿಕೊಪ್ಪದ ಶಿವಲಿಂಗ ಶಿವಾಚಾರ್ಯರ ಸ್ವಾಮಿಜಿಗಳು ಮಾತನಾಡಿ ಜಂಗಮರು ಧರ್ಮದ ಪ್ರಚಾರ ಮಾಡಬೇಕು ಜನರನ್ನು ಧರ್ಮದ ಹಾದಿಯಲ್ಲಿ ನಡೆಯುವಂತೆ ಮಾಡಬೇಕು. ಧರ್ಮದ ಪ್ರಚಾರಕೆ ನಮ್ಮ ಅಲ್ಪ ಸಮಯವನ್ನು ಮಿಸಿಲಿಡಬೇಕು ಜಂಗಮರ ಮನೆಯಲ್ಲಿ ಜೋಳಿಗೆ , ಬೆತ್ತ ಮತು ಜಂಗ ಜಗಲಿ ಮೇಲೆ ಇರಲೇಬೇಕು ಎಂದರು ಜಂಗಮರು ದುಶ್ಚಟಗಳನ್ನು ಮಾಡಬಾರದು ಎಂದು ಹೇಳಿದರು ಜಗತ್ತಿಗೆ ಮೊಟ್ಟಮೊದಲು ಧರ್ಮ ಬೋದಿಸಿದವರು ಜಂಗಮರು ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಹೇಳಿದವರು ವೀರಶೈವ ಧರ್ಮದವರು ಶಿದ್ದಾಂಥ ಶೀಖಾಮಣಿ ಗ್ರಂಥ ಎಲ್ಲರೂ ಅಧ್ಯಯನ ಮಾಡಬೇಕು ನಮ್ಮ ಮಕ್ಕಳಿಗೆ ಮುಸ್ಲಿಮ್ರ ಧರ್ಮಗಂಥ ಕುರಾನ ಅಂತಾ ಗೊತ್ತು ಕ್ರಿಶ್ಚೈನರ ಧರ್ಮಗ್ರಂಥ ಬೈಬಲ ಅಂತ ಗೊತ್ತು ಆದರೆ ನಮ್ಮ ವೀರಶೈವ ಧರ್ಮಗ್ರಂಥ ಸಿದ್ದಾಂತ ಶಿಖಾಮನಿ ಅಂತ ಗೊತ್ತಿಲ್ಲ ಇದನ್ನು ಹೇಳುವ ಕೆಲಸ ನಮ್ಮ ತಾಯಂದಿರು ಮಾಡಬೇಕು ಧರ್ಮದ ಬಗ್ಗೆ ನಮ್ಮ ತಾಯಂದಿರು ತಿಳ್ಕೋಬೇಕು ಮತ್ತು ಮಕ್ಖಳಿಗೂ ತಿಳಿಸಿ ಹೇಳಬೇಕು ಎಂದರು.
ಯಾದವಾಡ ಗ್ರಾಮದ ಜಂಗಮ ಸಮಾಜದ ಸಂಘಟನೆಯವರಿಂದ ಜಯಂತಿ ಉತ್ಸವಕ್ಕೆ ಬಂದ ಎಲ್ಲ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು . ಈ ಸಂದರ್ಭದಲ್ಲಿ ಡಾ || ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಶ್ರೀಗಳು , ಶ್ರೀ ಬಸವಲಿಂಗ ಶ್ರೀಗಳು ,ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು, ,ಚೌಕಿಮಠದ ಶ್ರೀಗಳು , ಯಾದವಾಡ ಗ್ರಾಮದ ಜಂಗಮಸಮಾಜದ ಎಲ್ಲ ಕುಟುಂಬದವರು, ಗುರುಮಾತೆಯರು ಗ್ರಾಮದ ಅನ್ಯ ಸಮಾಜದ ಪ್ರಮುಖರು ಮತ್ತು ಗುರುಹಿರಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾಸ್ತಾವಿಕ ಬಾಷಣವನ್ನು ಲಿಂಗಬಸಯ್ಯ ಹಿರೇಮಠ ಮಾಡಿದರು ನಿರೂಪಣೆಯನ್ನು ಸಂಗಯ್ಯ ವಿಭೂತಿ ಮಾಡಿದರು.
“ಕರ್ನಾಟಕದ 2025-26ಸಾಲಿನ ಬಜೆಟ್: ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣದ ಮೇಲೆ ಗಮನ”ಹರಸಿದ್ದು ವಿಶೇಷವಾಗಿದೆ.ಡಾ ರಾಮಕೃಷ್ಣ ಬಿ ಹರ್ಷ….
ಮಾರ್ಚ್ 7, 2025 ರಂದು, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 16 ನೇ ಬಜೆಟ್ ಅನ್ನು ಮಂಡಿಸಿದರು, ಅದರಲ್ಲಿ ರಾಜ್ಯಾದ್ಯಂತ ಕೃಷಿ ಮತ್ತು ರೈತರ ಕಲ್ಯಾಣವನ್ನು ಉತ್ತೇಜಿಸುವತ್ತ ಸ್ಪಷ್ಟ ಒತ್ತು ನೀಡಿದರು. ಒಟ್ಟು ₹4,09,549 ಕೋಟಿ ವೆಚ್ಚ ಮತ್ತು ₹2,92,477 ಕೋಟಿ ಆದಾಯ ಹೊಂದಿರುವ ಈ ಬಜೆಟ್ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆಗೆ ಅಡಿಪಾಯ ಹಾಕುತ್ತದೆ. ಗ್ರಾಮೀಣಾಭಿವೃದ್ಧಿ, ನೀರಾವರಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಮೇಲೆ ಮುಖ್ಯಮಂತ್ರಿಗಳು ನಿರಂತರವಾಗಿ ಗಮನಹರಿಸುತ್ತಿರುವುದು ಕರ್ನಾಟಕದ ರೈತ ಸಮುದಾಯಕ್ಕೆ ಭರವಸೆಯ ಭವಿಷ್ಯವನ್ನು ನೀಡುತ್ತದೆ.
ಪ್ರಮುಖ ಕೃಷಿ ಹಂಚಿಕೆಗಳು ಮತ್ತು ಉಪಕ್ರಮಗಳು:
ಈ ವರ್ಷದ ಬಜೆಟ್ನ ಒಂದು ಗಮನಾರ್ಹ ವೈಶಿಷ್ಟ್ಯವೆಂದರೆ ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಉತ್ತೇಜಿಸಲು ₹88 ಕೋಟಿ ಹಂಚಿಕೆ. ರೈತ ಸಮೃದ್ಧಿ ಯೋಜನೆಯಡಿಯಲ್ಲಿ, ಸರ್ಕಾರವು ಕರ್ನಾಟಕದಾದ್ಯಂತ 10 ಹವಾಮಾನ ವಲಯಗಳಲ್ಲಿ ಕೃಷಿ ಮಾದರಿ ಪ್ರದರ್ಶನ ತೋಟಗಳನ್ನು ಅಭಿವೃದ್ಧಿಪಡಿಸಲಿದೆ. ಈ ಉಪಕ್ರಮವು ರೈತರು ಹವಾಮಾನ-ನಿರೋಧಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮತ್ತು ಪರಿಸರ ತಂದೊಡ್ಡುವ ಸವಾಲುಗಳಿಗೆ ಅನುಗುಣವಾಗಿ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಹೆಚ್ಚುವರಿಯಾಗಿ, ಕೃಷಿ ಯಾಂತ್ರೀಕರಣಕ್ಕಾಗಿ ₹428 ಕೋಟಿ ಹಂಚಿಕೆ ಮಾಡಲಾಗಿದ್ದು, ಸುಮಾರು 50,000 ರೈತರು ತಮ್ಮ ಹೊಲಗಳನ್ನು ಆಧುನೀಕರಿಸಲು ಅಗತ್ಯ ಸಾಧನಗಳನ್ನು ಒದಗಿಸುವ ಮೂಲಕ ಪ್ರಯೋಜನ ಪಡೆಯುತ್ತಾರೆ.
ರಾಜ್ಯವು ನೀರಿನ ಬಳಕೆಯ ದಕ್ಷತೆಯನ್ನು ಸುಧಾರಿಸುವತ್ತ ಗಮನಹರಿಸಲಿದೆ, ಹನಿ ನೀರಾವರಿ ಮತ್ತು ಸ್ಪ್ರಿಂಕ್ಲರ್ ವ್ಯವಸ್ಥೆಗಳಿಗೆ ₹440 ಕೋಟಿ ಹಂಚಿಕೆ ಮಾಡಲಾಗಿದ್ದು, 1.81 ಲಕ್ಷ ರೈತರಿಗೆ ಪ್ರಯೋಜನವಾಗುತ್ತದೆ. ಈ ಕ್ರಮವು ನೀರಿನ ಕೊರತೆಯ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಒಣಭೂಮಿ ಕೃಷಿಯ ಉತ್ಪಾದಕತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಡಿಜಿಟಲ್ ಕೃಷಿ ಸೇವಾ ಕೇಂದ್ರದ ಪರಿಚಯವು ರೈತರಿಗೆ ತಮ್ಮ ಬೆಳೆ ಆಯ್ಕೆಗಳನ್ನು ಅತ್ಯುತ್ತಮವಾಗಿಸಲು ಮತ್ತು ಇಳುವರಿಯನ್ನು ಸುಧಾರಿಸಲು ನಿಖರವಾದ, ಡೇಟಾ-ಚಾಲಿತ ನಿರ್ಧಾರಗಳನ್ನು ಒದಗಿಸುತ್ತದೆ.
ರೈತರಿಗೆ ಮೂಲಸೌಕರ್ಯ ಬಲಪಡಿಸುವಿಕೆ:
ಕೃಷಿ ಮೂಲಸೌಕರ್ಯವನ್ನು ಮತ್ತಷ್ಟು ಹೆಚ್ಚಿಸಲು, ಕರ್ನಾಟಕ ಸರ್ಕಾರ ಆಹಾರ ಸಂಸ್ಕರಣೆ ಮತ್ತು ನೀರಾವರಿಯಲ್ಲಿ ಹೂಡಿಕೆ ಮಾಡುತ್ತಿದೆ. ಬಜೆಟ್ನ ಗಮನಾರ್ಹ ಭಾಗ – ₹88 ಕೋಟಿ – ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಬೆಂಬಲಿಸಲು ಮೀಸಲಿಡಲಾಗುವುದು, ಆದರೆ ರಾಜ್ಯವು ವ್ಯರ್ಥವನ್ನು ಕಡಿಮೆ ಮಾಡಲು ಮತ್ತು ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಲು 6,000 ಸಣ್ಣ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುತ್ತದೆ. ಇದರ ಜೊತೆಗೆ, ಮಳೆನೀರು ಕೊಯ್ಲು ಮತ್ತು ನೀರಾವರಿಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಕೃಷಿ ಭಾಗ್ಯ ಯೋಜನೆಯಡಿಯಲ್ಲಿ 12,000 ಕೃಷಿ ಹೊಂಡಗಳನ್ನು ನಿರ್ಮಿಸಲಾಗುವುದು.
ಇದಲ್ಲದೆ, ಸಾವಯವ ಮತ್ತು ಸಿರಿಧಾನ್ಯ ಕೇಂದ್ರಗಳ ಸ್ಥಾಪನೆಗೆ ₹20 ಕೋಟಿ ಹಂಚಿಕೆ ಮಾಡುವ ಮೂಲಕ ರಾಜ್ಯವು ತನ್ನ ಕೃಷಿ ಸಂಶೋಧನಾ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ. ಗಮನಾರ್ಹವಾಗಿ, ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕನ್ನು ಸಾವಯವ ವಲಯವನ್ನಾಗಿ ಪರಿವರ್ತಿಸುವ ಗುರಿಯನ್ನು ರಾಜ್ಯ ಹೊಂದಿದೆ.
ತೋಟಗಾರಿಕೆ ಮತ್ತು ರೇಷ್ಮೆ ಕೃಷಿಗೆ ಬೆಂಬಲ:
ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ-2 ಕ್ಕೆ ₹95 ಕೋಟಿ ಹಂಚಿಕೆ ಮಾಡುವುದರೊಂದಿಗೆ ತೋಟಗಾರಿಕೆ ವಲಯವು ಗಮನಾರ್ಹ ಉತ್ತೇಜನವನ್ನು ಪಡೆಯಲಿದೆ. ಈ ಉಪಕ್ರಮವು 52,000 ರೈತರಿಗೆ ತೋಟಗಾರಿಕಾ ಬೆಳೆಗಳಿಗೆ ಹನಿ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ ಮತ್ತು ರಾಜ್ಯದ ಪ್ರಮುಖ ಪ್ರದೇಶಗಳಲ್ಲಿ ತೋಟಗಾರಿಕಾ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಹೆಚ್ಚುವರಿಯಾಗಿ, ಬ್ಯಾಡಗಿ ಮೆಣಸಿನಕಾಯಿಯಂತಹ ಹೆಚ್ಚಿನ ಮೌಲ್ಯದ ಬೆಳೆಗಳನ್ನು ರೋಗಗಳಿಂದ ರಕ್ಷಿಸುವತ್ತ ಸಂಶೋಧನಾ ಪ್ರಯತ್ನಗಳು ಗಮನಹರಿಸುತ್ತವೆ, ಕರ್ನಾಟಕದ ತೋಟಗಾರಿಕಾ ಉತ್ಪನ್ನಗಳು ಸ್ಪರ್ಧಾತ್ಮಕ ಮತ್ತು ಸ್ಥಿತಿಸ್ಥಾಪಕತ್ವವನ್ನು ಉಳಿಸಿಕೊಳ್ಳುವುದನ್ನು ಖಚಿತಪಡಿಸುತ್ತವೆ.
ರೇಷ್ಮೆ ಕೃಷಿ ವಲಯದಲ್ಲಿ, ₹55 ಕೋಟಿ ಅನುದಾನವು ರೇಷ್ಮೆ ಕಾರ್ಮಿಕರಿಗಾಗಿ 120 ಸ್ವಯಂಚಾಲಿತ ರೀಲಿಂಗ್ ಘಟಕಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ, ಇದು ಉತ್ಪಾದಕತೆ ಮತ್ತು ಉತ್ಪಾದಿಸುವ ರೇಷ್ಮೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ರಾಮನಗರ ಮತ್ತು ಶಿಡ್ಲಘಟ್ಟದಲ್ಲಿ ಎರಡನೇ ಹಂತದ ಹೈಟೆಕ್ ರೇಷ್ಮೆ ಕೃಷಿ ಮಾರುಕಟ್ಟೆಗಳಿಗೆ ₹250 ಕೋಟಿ ಮೀಸಲಿಡಲಾಗಿದೆ, ಇದು ರೇಷ್ಮೆ ಉದ್ಯಮದ ಮೂಲಸೌಕರ್ಯವನ್ನು ಬಲಪಡಿಸುತ್ತದೆ.
ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ ಬೆಂಬಲ:
ಜಾನುವಾರುಗಳ ಕಲ್ಯಾಣವನ್ನು ಸುಧಾರಿಸುವ ಪ್ರಯತ್ನದಲ್ಲಿ, ಬಜೆಟ್, 50 ಹೊಸ ಪಶುವೈದ್ಯಕೀಯ ಚಿಕಿತ್ಸಾಲಯಗಳ ಸ್ಥಾಪನೆ ಮತ್ತು ಸ್ಥಳೀಯ ದನ ಮತ್ತು ಕುರಿ ತಳಿಗಳ ಸಂರಕ್ಷಣೆಗಾಗಿ ₹2 ಕೋಟಿಯನ್ನು ಒಳಗೊಂಡಿದೆ. ಅನುಗ್ರಹ ಯೋಜನೆಯಡಿಯಲ್ಲಿ, ಜಾನುವಾರು ನಷ್ಟಕ್ಕೆ ಪರಿಹಾರವನ್ನು ಹೆಚ್ಚಿಸಲಾಗಿದೆ, ಇದು ಹಸುಗಳು, ಎಮ್ಮೆಗಳು ಮತ್ತು ಮೇಕೆಗಳ ನಷ್ಟವನ್ನು ಎದುರಿಸುತ್ತಿರುವ ರೈತರಿಗೆ ಪ್ರಯೋಜನವನ್ನು ನೀಡುತ್ತದೆ.
ಮೀನುಗಾರಿಕೆ ವಲಯವು ಸಹ ಒಂದು, ಗಮನದಲ್ಲಿದೆ. ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರಿಕೆ ರಸ್ತೆಗಳನ್ನು ಸುಧಾರಿಸಲು ₹30 ಕೋಟಿ ಹಂಚಿಕೆ ಮಾಡಲಾಗಿದೆ. ಇದಲ್ಲದೆ, ಹೊಸ ಮೀನುಗಾರಿಕೆ ನೀತಿಯು ಸುಸ್ಥಿರ ಮೀನುಗಾರಿಕೆ ಪದ್ಧತಿಗಳನ್ನು ಉತ್ತೇಜಿಸುತ್ತದೆ ಮತ್ತು ಪರಿಶಿಷ್ಟ ಸಮುದಾಯಗಳ ಮೀನು ಮಾರಾಟಗಾರರಿಗೆ ಆರ್ಥಿಕ ನೆರವು ನೀಡುತ್ತದೆ.
ಜಲ ಸಂಪನ್ಮೂಲ ಮತ್ತು ನೀರಿನ ನಿರ್ವಹಣೆ:
ಜಲ ಸಂಪನ್ಮೂಲ ನಿರ್ವಹಣೆಯು ನಿರ್ಣಾಯಕ ಆದ್ಯತೆಯಾಗಿದ್ದು, ಭದ್ರಾ ಮೇಲ್ದಂಡೆ ಯೋಜನೆಗೆ ₹2,611 ಕೋಟಿ ಹಂಚಿಕೆ ಮಾಡಲಾಗಿದೆ, ಇದು 1.77 ಲಕ್ಷ ಎಕರೆಗಳಿಗೆ ನೀರಾವರಿ ಸಾಮರ್ಥ್ಯವನ್ನು ಸೃಷ್ಟಿಸುತ್ತದೆ. ಕೃಷ್ಣ ಮೇಲ್ದಂಡೆ ಯೋಜನೆಯ ಹಂತ 3 ರ ಅಡಿ ಮುಳುಗಡೆಯಾಗುವ ಜಮೀನುಗಳನ್ನು ಒಪ್ಪಂದ ತೀರ್ಪಿನ ಮುಖಾಂತರ ಒಂದೇ ಹಂತದಲ್ಲಿ ಭೂಸ್ವಾಧೀನ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಮೇಕೆದಾಟು ಸಮತೋಲಿತ ಜಲಾಶಯ ಯೋಜನೆಯಲ್ಲಿ ಮುಳುಗಿರುವ ಭೂಮಿಗೆ ಸಂಪೂರ್ಣ ಸಮೀಕ್ಷೆಗಳನ್ನು ನಡೆಸಲು ಸರ್ಕಾರ ಯೋಜಿಸಿದೆ. ಈ ಪ್ರಯತ್ನಗಳು ನೀರಾವರಿ ಸೌಲಭ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ, ಕರ್ನಾಟಕದಾದ್ಯಂತ ರೈತರಿಗೆ ನೀರಿನ ಪ್ರವೇಶವನ್ನು ಸುಧಾರಿಸುತ್ತವೆ.
ಇದರ ಜೊತೆಗೆ, ವಿವಿಧ ತಾಲ್ಲೂಕುಗಳಲ್ಲಿನ ಕೆರೆಗಳನ್ನು ತುಂಬಿಸುವುದು ಸೇರಿದಂತೆ 2025-26 ರಲ್ಲಿ ಹೊಸ ಸಣ್ಣ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ₹2,000 ಕೋಟಿ ಹಂಚಿಕೆ ಮಾಡಲಾಗಿದೆ. ಈ ಪ್ರಯತ್ನಗಳು ಒಣಭೂಮಿ ರೈತರಿಗೆ ಸುಸ್ಥಿರ ನೀರಿನ ಪರಿಹಾರಗಳನ್ನು ಒದಗಿಸುವ ಮತ್ತು ರಾಜ್ಯಾದ್ಯಂತ ಕೃಷಿ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 2025-26ರ ಬಜೆಟ್ ಕೃಷಿ ಅಭಿವೃದ್ಧಿಗೆ ಸಮಗ್ರ ವಿಧಾನವನ್ನು ಪ್ರದರ್ಶಿಸುತ್ತದೆ, ರೈತರ ಕಲ್ಯಾಣ, ಮೂಲಸೌಕರ್ಯ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಮೇಲೆ ಬಲವಾದ ಗಮನವನ್ನು ಹೊಂದಿದೆ. ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸುವುದರಿಂದ ಹಿಡಿದು ಮೌಲ್ಯವರ್ಧಿತ ಕೃಷಿ ಕೈಗಾರಿಕೆಗಳನ್ನು ಉತ್ತೇಜಿಸುವವರೆಗೆ, ಈ ಬಜೆಟ್ ಕರ್ನಾಟಕದ ಕೃಷಿ ಭೂದೃಶ್ಯವನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯತಂತ್ರವು ಹೂಡಿಕೆಗಳೊಂದಿಗೆ, ಕರ್ನಾಟಕವು ಭಾರತದಲ್ಲಿ ಕೃಷಿ ಅಭಿವೃದ್ಧಿಗೆ ಮಾದರಿಯಾಗಲಿದೆ, ತನ್ನ ರೈತರನ್ನು ಸಬಲೀಕರಣಗೊಳಿಸುತ್ತದೆ ಮತ್ತು ಗ್ರಾಮೀಣ ಆರ್ಥಿಕತೆಗೆ ದೀರ್ಘಕಾಲೀನ ಬೆಳವಣಿಗೆಯನ್ನು ಖಚಿತಪಡಿಸುತ್ತದೆ.ಎಂದು ಡಾ ರಾಮಕೃಷ್ಣ ಬಿ ಅವ್ರು ಪತ್ರಿಕಾ ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ
ವರದಿ ಜೆಟ್ಟಪ್ಪ ಎಸ್ ಪೂಜಾರಿ
ನಾಗರಾಜ್ ತಳವಾರ್ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘಕ್ಕೆ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ನೇಮಕ
ಸಿರುಗುಪ್ಪ ತಾಲೂಕಿನ ಹಚ್ಚೋಳ್ಳಿ ಗ್ರಾಮದ ಯುವಕರಾದ ನಾಗರಾಜ್ ತಳವಾರ್ ಅವರನ್ನು ಬಳ್ಳಾರಿಯಲ್ಲಿ 28-2-2025 ರಂದು ನಡೆದ ರಾಜ್ಯ ಅಧ್ಯಕ್ಷರ ಸಮ್ಮುಖದಲ್ಲಿ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ಮಾಸಿಕ ಸಭೆಯಲ್ಲಿ ಎಲ್ಲಾ ನಿರ್ದೇಶಕರು ಹಾಜರಾಗಿ ಸಂಘದ ಸಂಸ್ಥಾಪಕರ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ವರದಿ ಶೇಖರ್ ಹೆಚ್
ಜಿಲ್ಲಾ ಮಟ್ಟದ ಉದ್ಯೋಗ ಮೇಳ.
ಕುಶಾಲನಗರ: ಸಂಜೀವಿನಿ ಕೆಎಸ್ ಆರ್ ಎಲ್ ಪಿ ಎಸ್ ನ ಡಿಡಿ ಯುಜಿಕೆವೈ ಯೋಜನೆಯಡಿ ಉದ್ಯೋಗ ಮೇಳ ಮಡಿಕೇರಿಯಲ್ಲಿ ನಡೆಯಲಿದೆ. ಜಿಲ್ಲೆಯ ಕನಿಷ್ಠ 800 ಅಭ್ಯರ್ಥಿಗಳಿಗೆ ಉದ್ಯೋಗದಾತ ಸಂಸ್ಥೆಗಳ ಮೂಲಕ ಉದ್ಯೋಗವಕಾಶ ಕಟ್ಟಿಸುವ ಮೂಲಕ ಕೊಡಗು ಜಿಲ್ಲಾ ಪಂಚಾಯ್ತಿ ವತಿಯಿಂದ ಮಾ. 8 ರಂದು ಬೆಳಿಗ್ಗೆ 10 ಗಂಟೆಯಿಂದ ನಗರದ ಜಿಲ್ಲಾ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ(ಐಟಿಐ)ಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ನಡೆಯಲ್ಲಿದೆ. ಈ ಉದ್ಯೋಗ ಮೇಳದಲ್ಲಿ ಹಲವಾರು ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿದ್ದು ಸ್ಥಳದಲ್ಲಿಯೇ ಉದ್ಯೋಗವಕಾಶ ಕಲ್ಪಿಸಿ ತರಬೇತಿ ಆಯ್ಕೆ ಮಾಡಿಕೊಳ್ಳಲಾಗುವುದು. ಆದ್ದರಿಂದ ಜಿಲ್ಲೆಯ 18 ರಿಂದ 35 ವರ್ಷದೊಳಗಿನ ನಿರುದ್ಯೋಗಿ ಯುವಕ/ಯುವತಿಯರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಸಿಇ ಒ ಅನಂದ್ ಪ್ರಕಾಶ್ ಮೀನ ಕನಸಿನ ಭಾರತ ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.
ನೀರು ಬಳಕೆದಾರರ ಸಹಕಾರ ಸಂಘ ನಿಯಮಿತ ಆಡಳಿತ ಮಂಡಳಿ ಸದಸ್ಯರ ಆಯ್ಕೆ
ನಂ 19706 ನೇ ನೀರು ಬಳಕೆದಾರರ ಸಹಕಾರ ಸಂಘ ನಿಯಮಿತ ಹೆಬ್ಬಾಲೆ. ಕುಶಾಲನಗರ ತಾಲ್ಲೂಕು, ಕೊಡಗು ಜಿಲ್ಲೆ. 2025ರಿಂದ 2030 ರ ಅವಧಿಗೆ ಆಡಳಿತ ಮಂಡಳಿ ಸದಸ್ಯರ ಆಯ್ಕೆಯ ಚುನಾವಣೆ ದಿನಾಂಕ 08-03-2025 ನೇ ಶನಿವಾರ ಸಂಘದ ಕಛೇರಿಯಲ್ಲಿ ನಡೆಯಲ್ಲಿದೆ.12 ಮಂದಿ ನಿರ್ದೇಶಕರನ್ನುಆಯ್ಕೆ ಮಾಡಬೇಕಾಗಿದ್ದು, ಈಗಾಗಲೇ 6 ಮಂದಿಯನ್ನು ಅವಿರೋಧವಾಗಿ ಆಯ್ಕೆ ಮಾಡಾಗಿದೆ. ಉಳಿದ 6ಮಂದಿ ನಿರ್ದೇಶಕರ ಸ್ಥಾನಕ್ಕೆ 10 ಮಂದಿ ಸ್ಪರ್ಧಿಸಿದ್ದು, ಸುಮಾರು 49 ಮಂದಿ ಸದಸ್ಯರು ಮತದಾನ ನಡೆಸಲಿದ್ದಾರೆ ಎಂದು ಅಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿಗಳು ಅನ್ವೇಷಣೆ ಹಾಗೂ ವೈಜ್ಞಾನಿಕ ಮನೋಭಾವ ಅಳವಡಿಸಿಕೊಳ್ಳಲು ಕರೆ
ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ವಿಜ್ಞಾನ ಶಿಕ್ಷಕರಾದ ಶ್ರೀ ಚಿದಂಬರ ಎಸ್ ಕೆ ರವರು ಉದ್ಘಾಟಿಸಿ ಮಾತನಾಡುತ್ತಾ ಸರ್ ಸಿವಿ ರಾಮನ್ ರವರ ರಾಮನ್ ಎಫೆಕ್ಟ್ ಸಂಶೋಧನೆಯ ಜ್ಞಾಪಕಾರ್ಥವಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಸರ್ ಸಿವಿ ರಾಮನ್ ರವರು ವಿಜ್ಞಾನ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಹಾಗೂ ಏಷ್ಯಾದ ಮೊದಲಿಗರಾಗಿದ್ದಾರೆ ಎಂದರು. ಥಾಮಸ್ ಅಲ್ವಾ ಎಡಿಸನ್ ಮತ್ತು ಆಲ್ಬರ್ಟ್ ಐನ್ಸ್ಟೀನ್ ರವರ ಬಾಲ್ಯದ ಸವಾಲುಗಳ ಬಗ್ಗೆ ವಿವರಿಸಿ ಎಲ್ಲ ಸವಾಲುಗಳನ್ನು ಮೀರಿ ಜಗತ್ತಿನ ಪ್ರಸಿದ್ಧ ವಿಜ್ಞಾನಿಗಳಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಪ್ರಕಾಶ್ ಕೆ ರವರು ಮಾತನಾಡಿ ವಿಜ್ಞಾನ ಕ್ಷೇತ್ರಕ್ಕೆ ಭಾರತವು ಪ್ರಾಚೀನ ಕಾಲದಲ್ಲೇ ಅಮೋಘ ಕೊಡುಗೆ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಭಾರತೀಯ ವಿಜ್ಞಾನಿಗಳು ವಿಶ್ವಮಾನ್ಯರಾಗಿದ್ದಾರೆ, ವಿಜ್ಞಾನ ಕ್ಷೇತ್ರಕ್ಕೆ ಸರ್ ಸಿ ವಿ ರಾಮನ್ ರವರ ಕೊಡುಗೆ ತುಂಬಾ ಮಹತ್ವಪೂರ್ಣದ್ದಾಗಿದೆ ಎಂದರು. ವಿಜ್ಞಾನ ಸತ್ಯದ ತಳಹದಿಯ ಮೇಲೆ ನಿಂತಿದ್ದು ಪ್ರತಿಯೊಂದನ್ನು ವೈಜ್ಞಾನಿಕವಾಗಿ ವಿಮರ್ಶಿಸಿ, ವಿಶ್ಲೇಷಿಸಿ ಒಪ್ಪಿಕೊಳ್ಳುತ್ತದೆ. ವಿಜ್ಞಾನದಲ್ಲಿ ಊಹೆಗೆ ಅವಕಾಶವಿಲ್ಲ. ವಿಜ್ಞಾನ ಮತ್ತು ಸತ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದರು. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುವಂತೆ ಕರೆ ನೀಡುತ್ತಾ ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳುವ ಗುಣ ಇರುವವರು ವಿಜ್ಞಾನಿಗಳಾಗುತ್ತಾರೆ ಎಂದರು. ಜಗತ್ಪ್ರಸಿದ್ಧ ವಿಜ್ಞಾನಿಗಳಾದ ಐಸಾಕ್ ನ್ಯೂಟನ್, ಮೇರಿ ಕ್ಯೂರಿ, ಗ್ರಹಾಂಬೆಲ್, ಮಾರ್ಕೊನಿ, ಆರ್ಕಿಮಿಡೀಸ್ ಮುಂತಾದವರು ಶ್ರೇಷ್ಠ ವಿಜ್ಞಾನಿಗಳಾಗಲು ಕಾರಣ ಅವರಲ್ಲಿದ್ದ ಅತೀವ ಅನ್ವೇಷಣಾ ಮನೋಭಾವವೇ ಆಗಿದೆ, ತಮ್ಮ ಅನ್ವೇಷಣೆಗಳ ಮೂಲಕ ವಿಜ್ಞಾನಿಗಳು ಇಡೀ ಜಗತ್ತಿಗೆ ಬೆಳಕಾಗಿದ್ದಾರೆ ಎಂದರು. ವಿಜ್ಞಾನ ಮತ್ತು ತಂತ್ರಜ್ಞಾನಗಳು ಜನರ ಜೀವನವನ್ನು ಸರಳ ಹಾಗೂ ಸುಂದರಗೊಳಿಸಿವೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ವಿಜ್ಞಾನ ನಾಟಕ ಪ್ರದರ್ಶಿಸಿದರು. ವಿದ್ಯಾರ್ಥಿಗಳು ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವೀಕ್ಷಿಸಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಶ್ರಾವ್ಯ ಯು ವಿ ನಿರೂಪಿಸಿ, …. ವಂದಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಆಸಿಫ್, ಮಂಜು, ನಾಗೇಂದ್ರ , ದಿನೇಶ್ ಆಚಾರಿ, ದೊಡ್ಡಯ್ಯ, ತ್ರಿವೇಣಿ, ಹರಿಣಾಕ್ಷಿ, ಗಾನವಿ, ಮೀನಾ, ಕವಿತಾ ಹಾಜರಿದ್ದರು.
