ಸಮಾನತೆಯ ಮೌಲ್ಯಗಳನ್ನು ಸಮಾಜಕ್ಕೆ ಮೊದಲು ಕೊಟ್ಟವರೆ ಶ್ರೀ ಜಗದ್ಗುರು ರೇಣುಕಾಚಾರ್ಯರು – ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು
ಯಾದವಾಡ ಗ್ರಾಮದ ಶ್ರೀ ಹೊನ್ನಮ್ಮದೇವಿ ದೇವಸ್ಥಾನದಲ್ಲಿ ನಡೆದ ಶ್ರೀ ರೇಣುಕಾಚಾರ್ಯರ ಜಯಂತಿಯ ಉತ್ಸವವನ್ನು ಜ್ಯೋತಿಬೆಳಗಿಸುವ ಮುಲಕ ಉದ್ಘಾಟಿಸಿ ಮಾತನಾಡಿದ ಸೌದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ವೀರಶೈವ ಧರ್ಮದ ಪರಂಪರೆಯ ಕುರಿತು ಬೆಳಕು ಚೆಲ್ಲಿದರು ವೀರಶೈವ ಧರ್ಮದ ಚಿಂತನೆಗಳು , ಅದರ ಮೌಲ್ಯಗಳ ಕುರಿತು ನೆರೆದಿದ್ದ ಸಭೀಕರಾಗಿ ಆಶಿರ್ವಚನ ಮಾಡಿದರು. ಸಮಾನತೆಯ ಮೌಲ್ಯಗಳನ್ನು ಸಮಾಜಕ್ಕೆ ಕೊಟ್ಟವರು ಶ್ರೀಮದ್ ಜಗದ್ಗುರು ಶ್ರೀ ರೇಣುಕಾಚಾರ್ಯರು ವೀರಶೈವ ಧರ್ಮ ಪರಂಪರೆಗೆ ಬಹಳ ಹೆಸರುಗಳು ಇವೆ ಇದಕ್ಕೆ ಸನಾತನ ಧರ್ಮ ಅಂತಲೂ ಕರೆಯುತ್ತಾರೆ ಸನಾತನ ಧರ್ಮ ಎಂದರೆ ಹಿಂದೆ ಇದ್ದು ಈಗ ಇರುವ ಮುಂದೆನೂ ಇರುವ ಶಾಶ್ವತ ಮಾನವೀಯ ಮೌಲ್ಯಗಳನ್ನು ಯಾವ ಧರ್ಮ ಒಳಗೊಂಡಿರುತ್ತದೆಯೋ ಅದಕ್ಕೆ ಸನಾತನ ಧರ್ಮ ಎನ್ನುತ್ತಾರೆ ಆ ಎಲ್ಲ ಜೀವನದ ಮೌಲ್ಯಗಳನ್ನು ವೀರಶೈವ ಧರ್ಮ ಒಳಗೊಂಡಿದೆ ಎಂದರು.
ಮಂಗಳವಾರ ಮುಂಜಾನೆ ಶರಣ ಮಾತೆಯರಿಂದ ಪವಿತ್ರ ಉದಕ ಕುಂಭ ಮತ್ತು ಮುತೈದೆಯರ ಆರತಿಗಳೊಂದಿಗೆ ಶ್ರೀಮದ್ ಜಗದ್ಗುರು ರೇಣುಕಾಚಾರ್ಯರ ದಿವ್ಯಮುರ್ತಿಯ ಮೆರವಣಿಗೆಯು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಗ್ರಾಮದೇವತೆ ಶ್ರೀ ಹೊನ್ನಮ್ಮದೇವಿ ದೇವಸ್ಥಾನದವರೆಗೆ ವಿವಿದ ವಾದ್ಯಮೇಳಗಳೊಂದಿಗೆ ನಡೆಯಿತು . ಬಾಗೋಜಿಕೊಪ್ಪದ ಶಿವಲಿಂಗ ಶಿವಾಚಾರ್ಯರ ಸ್ವಾಮಿಜಿಗಳು ಮಾತನಾಡಿ ಜಂಗಮರು ಧರ್ಮದ ಪ್ರಚಾರ ಮಾಡಬೇಕು ಜನರನ್ನು ಧರ್ಮದ ಹಾದಿಯಲ್ಲಿ ನಡೆಯುವಂತೆ ಮಾಡಬೇಕು. ಧರ್ಮದ ಪ್ರಚಾರಕೆ ನಮ್ಮ ಅಲ್ಪ ಸಮಯವನ್ನು ಮಿಸಿಲಿಡಬೇಕು ಜಂಗಮರ ಮನೆಯಲ್ಲಿ ಜೋಳಿಗೆ , ಬೆತ್ತ ಮತು ಜಂಗ ಜಗಲಿ ಮೇಲೆ ಇರಲೇಬೇಕು ಎಂದರು ಜಂಗಮರು ದುಶ್ಚಟಗಳನ್ನು ಮಾಡಬಾರದು ಎಂದು ಹೇಳಿದರು ಜಗತ್ತಿಗೆ ಮೊಟ್ಟಮೊದಲು ಧರ್ಮ ಬೋದಿಸಿದವರು ಜಂಗಮರು ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಹೇಳಿದವರು ವೀರಶೈವ ಧರ್ಮದವರು ಶಿದ್ದಾಂಥ ಶೀಖಾಮಣಿ ಗ್ರಂಥ ಎಲ್ಲರೂ ಅಧ್ಯಯನ ಮಾಡಬೇಕು ನಮ್ಮ ಮಕ್ಕಳಿಗೆ ಮುಸ್ಲಿಮ್ರ ಧರ್ಮಗಂಥ ಕುರಾನ ಅಂತಾ ಗೊತ್ತು ಕ್ರಿಶ್ಚೈನರ ಧರ್ಮಗ್ರಂಥ ಬೈಬಲ ಅಂತ ಗೊತ್ತು ಆದರೆ ನಮ್ಮ ವೀರಶೈವ ಧರ್ಮಗ್ರಂಥ ಸಿದ್ದಾಂತ ಶಿಖಾಮನಿ ಅಂತ ಗೊತ್ತಿಲ್ಲ ಇದನ್ನು ಹೇಳುವ ಕೆಲಸ ನಮ್ಮ ತಾಯಂದಿರು ಮಾಡಬೇಕು ಧರ್ಮದ ಬಗ್ಗೆ ನಮ್ಮ ತಾಯಂದಿರು ತಿಳ್ಕೋಬೇಕು ಮತ್ತು ಮಕ್ಖಳಿಗೂ ತಿಳಿಸಿ ಹೇಳಬೇಕು ಎಂದರು.
ಯಾದವಾಡ ಗ್ರಾಮದ ಜಂಗಮ ಸಮಾಜದ ಸಂಘಟನೆಯವರಿಂದ ಜಯಂತಿ ಉತ್ಸವಕ್ಕೆ ಬಂದ ಎಲ್ಲ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು . ಈ ಸಂದರ್ಭದಲ್ಲಿ ಡಾ || ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಶ್ರೀಗಳು , ಶ್ರೀ ಬಸವಲಿಂಗ ಶ್ರೀಗಳು ,ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು, ,ಚೌಕಿಮಠದ ಶ್ರೀಗಳು , ಯಾದವಾಡ ಗ್ರಾಮದ ಜಂಗಮಸಮಾಜದ ಎಲ್ಲ ಕುಟುಂಬದವರು, ಗುರುಮಾತೆಯರು ಗ್ರಾಮದ ಅನ್ಯ ಸಮಾಜದ ಪ್ರಮುಖರು ಮತ್ತು ಗುರುಹಿರಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾಸ್ತಾವಿಕ ಬಾಷಣವನ್ನು ಲಿಂಗಬಸಯ್ಯ ಹಿರೇಮಠ ಮಾಡಿದರು ನಿರೂಪಣೆಯನ್ನು ಸಂಗಯ್ಯ ವಿಭೂತಿ ಮಾಡಿದರು.
