ನಂ 19706 ನೇ ನೀರು ಬಳಕೆದಾರರ ಸಹಕಾರ ಸಂಘ ನಿಯಮಿತ ಹೆಬ್ಬಾಲೆ. ಕುಶಾಲನಗರ ತಾಲ್ಲೂಕು, ಕೊಡಗು ಜಿಲ್ಲೆ. 2025ರಿಂದ 2030 ರ ಅವಧಿಗೆ ಆಡಳಿತ ಮಂಡಳಿ ಸದಸ್ಯರ ಆಯ್ಕೆಯ ಚುನಾವಣೆ ದಿನಾಂಕ 08-03-2025 ನೇ ಶನಿವಾರ ಸಂಘದ ಕಛೇರಿಯಲ್ಲಿ ನಡೆಯಲ್ಲಿದೆ.12 ಮಂದಿ ನಿರ್ದೇಶಕರನ್ನುಆಯ್ಕೆ ಮಾಡಬೇಕಾಗಿದ್ದು, ಈಗಾಗಲೇ 6 ಮಂದಿಯನ್ನು ಅವಿರೋಧವಾಗಿ ಆಯ್ಕೆ ಮಾಡಾಗಿದೆ. ಉಳಿದ 6ಮಂದಿ ನಿರ್ದೇಶಕರ ಸ್ಥಾನಕ್ಕೆ 10 ಮಂದಿ ಸ್ಪರ್ಧಿಸಿದ್ದು, ಸುಮಾರು 49 ಮಂದಿ ಸದಸ್ಯರು ಮತದಾನ ನಡೆಸಲಿದ್ದಾರೆ ಎಂದು ಅಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
