ಹೆಬ್ಬಾಲೆ: ಶಿರಂಗಾಲ ಸರಕಾರಿ ಸಮುದಾಯ ಅಸ್ಪತ್ರೆ ವೈದ್ಯರ ವಸತಿ ಗೃಹ ಮುಚ್ಚಿದ್ದು, ಸರಕಾರ ಲಕ್ಷಾಂತರ ರೂಪಾಯಿ ಹಣ ಖರ್ಚ್ಚು ಮಾಡಿ ನಿರ್ಮಾಣ ಮಾಡಿರುವುರು ಉಪಯೋಗ ಇಲ್ಲದಂತೆ ಆಗಿದೆ. ಈ ವಸತಿ ಗೃಹ ಹಲವಾರು ವರ್ಷಗಳಿಂದ ವೈದ್ಯ ಅಧಿಕಾರಿಗಳು ವಾಸವಿಲ್ಲದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮವು ಸುಮಾರು 10 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ್ದು, ತುರ್ತು ಚಿಕಿತ್ಸೆಗೆ ರೋಗಿಗಳು ಪರದಾಡುವಂತೆ ಆಗಿದ್ದು, ಹಲವರು ಜೀವವನ್ನು ಕಳೆದುಕೊಂಡ ನಿರ್ದಶನಗಳನ್ನು ಕಾಣಬಹುದಾಗಿದೆ. ಇನ್ನಾದರು ವೈದ್ಯರು ಹಾಗೂ ಸಿಬ್ಬಂದಿ ವರ್ಗ ಗ್ರಾಮದಲ್ಲಿ ವಾಸವಿದ್ದು ರೋಗಿಗಳನ್ನು ಹಾಗೂ ಜನರ ಆರೋಗ್ಯವನ್ನು ಕಾಪಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ವರದಿ: ಸತ್ಯನಾರಾಯಣ ಪ್ರಸಾದ್